Sunday, May 18, 2025
No menu items!
HomeSchemesUdyogini Yojana-ಉದ್ಯೋಗಿನಿ ಯೋಜನೆಯಡಿ ₹3.0 ಲಕ್ಷ ರೂ ಬಡ್ಡಿ ರಹಿತ ಸಾಲ!

Udyogini Yojana-ಉದ್ಯೋಗಿನಿ ಯೋಜನೆಯಡಿ ₹3.0 ಲಕ್ಷ ರೂ ಬಡ್ಡಿ ರಹಿತ ಸಾಲ!

ಭದ್ರತಾ ಮತ್ತು ಆರ್ಥಿಕ ದೃಷ್ಟಿಯಿಂದ(security and financial) ಮಹಿಳೆಯರ ಸಬಲೀಕರಣದ ದೃಷ್ಟಿಕೋನವನ್ನು ಮುಂದುವರಿಸಲು ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದ್ದು, ಇವುಗಳಲ್ಲಿ “ಉದ್ಯೋಗಿನಿ ಯೋಜನೆ”(Women Development Scheme) ಪ್ರಮುಖ ಸ್ಥಾನವನ್ನು ಪಡೆದಿದ್ದು ಈ ಯೋಜನೆಯ ಪ್ರಯೋಜನ ಪಡೆಯುವುದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಈ ಯೋಜನೆ ಉದ್ದೇಶವು ಮಹಿಳೆಯರಿಗೆ ತಮ್ಮ ಸ್ವಂತ ಉದ್ಯಮವನ್ನು(Own business) ಆರಂಭಿಸಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಲು(financially self-sufficient) ಹಾಗೂ ತಮ್ಮ ಸಮುದಾಯದಲ್ಲಿ ಸದೃಢ ಸ್ಥಾನವನ್ನು ಪಡೆಯಲು ನೆರವಾಗಲು ಹೆಚ್ಚಿನ ಮಹತ್ವ ವಹಿಸುತ್ತದೆ. ಉದ್ಯೋಗಿನಿ ಯೋಜನೆಯು ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ. ಇದರಿಂದ ಮಹಿಳೆಯರಿಗೆ ತಮ್ಮ ವ್ಯವಹಾರವನ್ನು ಆರಂಭಿಸಲು ಅಗತ್ಯವಿರುವ ಹಣವನ್ನು ಸುಲಭವಾಗಿ ಪಡೆಯುತ್ತಾರೆ.

ಇದನ್ನೂ ಓದಿ: Shri Kshetra Dharmasthala- ಧರ್ಮಸ್ಥಳದಲ್ಲಿ 52 ನೇ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ!

ಭಾರತದಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಪ್ರಸ್ತಾಪಿತ “ಉದ್ಯೋಗಿನಿ ಯೋಜನೆ” ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು ಈ ಪ್ರಯೋಜನ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

ಇದನ್ನೂ ಓದಿ: Gruhalakshmi amount- ಈ ಪಟ್ಟಿಯಲ್ಲಿ ಹೆಸರಿರುವವರಿಗಿಲ್ಲ ಗೃಹಲಕ್ಷ್ಮಿ ಹಣ! ನಿಮ್ಮ ಹೆಸರಿದಿಯಾ ಚೆಕ್ ಮಾಡಿಕೊಳ್ಳಿ!

Who should apply for this scheme-ಅರ್ಜಿ ಸಲ್ಲಿಸಲು ಅರ್ಹರು:

  • ಅರ್ಜಿ ಸಲ್ಲಿಸುವ ಮಹಿಳೆಯರಿಗೆ 18 ರಿಂದ 45 ವರ್ಷದ ಮಧ್ಯದ ವಯಸ್ಸಿನವರಾಗಿರಬೇಕು.
  • ಅಭ್ಯರ್ಥಿಯು ಸ್ವಸಹಾಯ ಗುಂಪು ಅಥವಾ ಸಾಮೂಹಿಕ ಯೋಜನೆಯ ಸದಸ್ಯರಾಗಿರಬೇಕು.
  • ಅಭ್ಯರ್ಥಿಯು ಸಮುದಾಯದಲ್ಲಿ ವಾಸಿಸುವ ಸ್ಥಳೀಯ ನಿವಾಸಿಯಾಗಿರಬೇಕು.
  • ಅಭ್ಯರ್ಥಿಗೆ ತನ್ನ ಉದ್ಯಮ ಪ್ರಾರಂಭಿಸಲು ಸ್ಪಷ್ಟವಾದ ಯೋಜನೆ ಇರಬೇಕು.
  • ಅಭ್ಯರ್ಥಿಯ ಆರ್ಥಿಕ ಸ್ಥಿತಿ ಮತ್ತು ಸ್ವತಂತ್ರವಾಗಿ ಉದ್ಯಮ ಮಾಡಲು ಸಹಾಯದ ಅಗತ್ಯವಿದ್ದರೆ ಮಾತ್ರ ಈ ಯೋಜನೆಯಲ್ಲಿ ಅವರಿಗೆ ಸಹಾಯ ನೀಡಲಾಗುವುದು.

Where to submit the application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಈ ಯೋಜನೆಯಡಿ ಪ್ರಯೋಜನ ಪಡೆದುಕೊಳ್ಳಲು ಪ್ರತಿ ವರ್ಷ ನಿಗದಿತ ಸಮಯದಲ್ಲಿ ಅರ್ಹ ಅರ್ಜಿದಾರರಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ ಆ ಸಮಯದಲ್ಲಿ ನಿಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್ ಅಥವಾ ಸ್ವಂತ ನೀವೆ ನೇರವಾಗಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Monthly Scholarship- ತಿಂಗಳಿಗೆ ₹10,000 ರೂ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!

What are the documents required to submit the application-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳೇನು?

ಉದ್ಯೋಗಿನಿ ಯೋಜನೆಯಡಿ ಬಡ್ಡಿ ರಹಿತ ಸಾಲವನ್ನು ಪಡೆಯಲು ಕೆಳಕಂಡ ಕೆಲವು ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

1) ಆಧಾರ ಕಾರ್ಡ್(Aadhar Card)
2)ಪೋಟೋ (Passport Size Photo)
3)ನಿವಾಸಿ ಪ್ರಮಾಣಪತ್ರ (Residence Proof)
4)ಬ್ಯಾಂಕ್ ಖಾತೆ ವಿವರಗಳು (Bank Account Details)
5)ಉದ್ಯಮ ಯೋಜನೆ (Business Plan)
6)ಸ್ವಸಹಾಯ ಗುಂಪಿನ ಸದಸ್ಯತ್ವವನ್ನು ಪ್ರಮಾಣಪತ್ರ (Self Help Group Certificate)
7)ಬಿಪಿಎಲ್ ಕಾರ್ಡ್/BPL Card
8)ಮೊಬೈಲ್ ನಂಬರ್/Mobile number

ಇದನ್ನೂ ಓದಿ: E-Khata Registration- ಆಸ್ತಿ ನೋಂದಣಿ ಕುರಿತಂತೆ ಇಲ್ಲಿದೆ ಪ್ರಮುಖ ಮಾಹಿತಿ!

How to apply under this scheme-ಈ ಯೋಜನೆಯಡಿ ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಹಂತ-೧: ಮೊದಲು ಈ ಲಿಂಕ್ ಮೇಲೆ Seva sindhu portal ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.

udyogini yojana (2)

ಇದನ್ನೂ ಓದಿ: Podi Mahiti- ಜಮೀನಿನ ಪೋಡಿ ಎಂದರೇನು? ಇಲ್ಲಿದೆ ಪೋಡಿ ಕುರಿತು ಮಹತ್ವದ ಮಾಹಿತಿ!

ಹಂತ-೨: ಅಧಿಕೃತ ವೆಬ್ಸೈಟ್ ಗೆ ಭೇಟಿ ನಂತರ log in ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ “E-mail ID” ಮತ್ತು “Password” ನ್ನು ಭರ್ತಿ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಹಂತ-೩: ತದನಂತರ ಅಲ್ಲಿ ಕೇಳಿರುವ ಎಲ್ಲಾ ದಾಖಲೆಗಳ ವಿವರಗಳನ್ನು ಸ್ಕ್ಯಾನ್ ಮಾಡಿ ಆಪ್ಲೊಡ್ ಮಾಡಬೇಕು.

ಸೂಚನೆ- ಪ್ರಸ್ತುತ ಈ ಯೋಜನೆಯಡಿ ಅರ್ಜಿಯನ್ನು ಆಹ್ವಾನಿಸಿಲ್ಲ, ನಿಗಮದಲ್ಲಿ ಅನುದಾನ ಲಭ್ಯತೆ ಆಧಾರದ ಮೇಲೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ, ಅರ್ಹ ಆಸಕ್ತ ಫಲಾನುಭವಿಗಳು ಕಾಲ ಕಾಲಕ್ಕೆ ಇಲಾಖೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅರ್ಜಿ ಆಹ್ವಾನದ ಬಗ್ಗೆ ಮಾಹಿತಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ: Click here

RELATED ARTICLES
- Advertisment -

Most Popular

Recent Comments