ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ಹಕ್ಕುಗಳ ನಿರ್ವಹಣೆ(Management of property rights) ಮತ್ತು ಜಮೀನಿನ ವ್ಯವಸ್ಥೆಯಲ್ಲಿ“ಜಮೀನಿನ ಪೋಡಿ” ಅಥವಾ “ಜಮೀನಿನ ಹಕ್ಕು ವಿಭಜನೆ”(Division of land rights ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ ಹಾಗಾದರೆ ಜಮೀನಿನ ಪೋಡಿ ಮಾಡಿಸುವುದರ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಜಮೀನಿನ ಪೋಡಿ ಕೇವಲ ಮಾಲೀಕತ್ವದ ವಿವರಣೆಗೆ ಮಾತ್ರವಲ್ಲ ಕುಟುಂಬ ಸದಸ್ಯರ ನಡುವೆ ಜಮೀನು ಹಂಚಿಕೆಯಲ್ಲಿ(, Property segmentation) ನ್ಯಾಯವಾಗಿಸಲು ಸರ್ಕಾರದ ದಾಖಲೆಗಳಲ್ಲಿ ನಿಖರತೆ ಮತ್ತು ಯಾವುದೇ ಹಕ್ಕು ಬಂದಿ ತಕರಾರು ಗಳಿಂದ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ ಹಕ್ಕು ವಿವರಣೆ ಜಮೀನು ವಿವಾದಗಳ ಪರಿಹಾರ ಮತ್ತು ತೆರಿಗೆ ನಿರ್ವಹಣೆ ಸರಿಪಡಿಸಿಕೊಳ್ಳಲು ಪೋಡಿ ಮಾಡುವುದು ಅತಿ ಮುಖ್ಯವಾಗಿದೆ.
ಇದನ್ನೂ ಓದಿ: Togari MSP-ಕೃಷಿ ಮಾರಾಟ ಮಂಡಳಿಯಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ!
ಪ್ರತಿಯೊಬ್ಬ ಹಕ್ಕುದಾರಣೆಗೂ ತಮ್ಮ ಪಾಲಿನ ಆಸ್ತಿಯ ಮೇಲೆ ಸಂಪೂರ್ಣ ಹಕ್ಕಿರುತ್ತದೆ ಮತ್ತು ಕಾನೂನಿನ ದೃಷ್ಟಿಯಿಂದ ಮಾಲೀಕತ್ವ ದೃಢಪಡಿಸಲು ಜಮೀನಿನ ಪುಡಿ ಹೇಗೆ ಮಾಡಿಸಬೇಕು? ಪೋಡಿ ಎಂದರೇನು? ಪೋಡಿಯನ್ನು ಏಕೆ ಮಾಡಿಸಬೇಕು? ಯಾರು ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಹೆಚ್ಚಿನ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.
What is podi-ಪೋಡಿ ಎಂದರೇನು?
ಏನೀದು ಪೋಡಿ ಎಂದರೆ? ಒಂದು ವ್ಯಾಪಕ ಜಮೀನಿನ ಹಕ್ಕನ್ನು ವಿಭಜಿಸುವ ಮತ್ತು ಪ್ರತ್ಯೇಕ ಖಾತೆಗಳನ್ನು ರಚಿಸುವ ಕಾರ್ಯ ಇದಾಗಿದೆ. ಇದು ಸಾಮಾನ್ಯವಾಗಿ ಕುಟುಂಬದ ಪಾಲುದಾರರು, ಸದಸ್ಯರು ಅಥವಾ ಹಕ್ಕುದಾರರ ನಡುವೆ ಜಮೀನು ಹಂಚಿದಾಗ ನಡೆಯುವ ಪ್ರಕ್ರಿಯೆ.
ಉದಾಹರಣೆಗೆ ಹೇಳುವುದಾದರೆ ಒಂದು ಹಳ್ಳಿಯ ಜಮೀನನ್ನು ತಂದೆಯು ತನ್ನ ಮೂವರು ಜನ ಮಕ್ಕಳಿಗೆ ಸಮಪಾಲಾಗಿ ಹಂಚಿದಾಗ, ಪ್ರತಿ ಮಕ್ಕಳ ಹೆಸರಿನಲ್ಲಿ ಪ್ರತ್ಯೇಕ ಜಮೀನಿನ ದಾಖಲೆ (RTC ಖಾತೆ) ರಚಿಸಲಾಗುತ್ತದೆ.
ಇದನ್ನೂ ಓದಿ: Home Loan Subsidy- ಶೇ 4% ರಷ್ಟು ಸಬ್ಸಿಡಿಯಲ್ಲಿ ಗೃಹ ಸಾಲ ಪಡೆಯಲು ಅರ್ಜಿ ಆಹ್ವಾನ!
Types of Podi-ಪೋಡಿಯಲ್ಲಿ ಬರುವ ನಾಲ್ಕು ವಿಧಗಳಾವುವು?
ಮ್ಯೂಟೇಷನ್ ಪೋಡಿ/Lose the mutation
ಅಲಿನೇಷನ್ ಪೋಡಿ/Lose the alignment
ದರ್ಖಾಸ ಪೋಡಿ/Darkhasa podi
ತತ್ಕಾಲ ಪೋಡಿ/tatkal podi
ಪೋಡಿಯನ್ನು ಏಕೆ ಮಾಡಿಸಬೇಕು?
ಒಂದು ಸರ್ವೆ ನಂಬರ್‍ನಲ್ಲಿ ಹಲವಾರು ಹಿಸ್ಸಾ ಸಂಖ್ಯೆಗಳು ಇರಬಹುದು, ಆದರೆ ಭೂ ಮಾಲಿಕತ್ವದ ಹೆಸರು ಒಂದೇ ಪಹಣಿಯಲ್ಲಿ ಮಾತ್ರ ಕಂಡುಬರುತ್ತದೆ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತದೆ ಮತ್ತು ಸರ್ಕಾರದ ಸೌಲಭ್ಯಗಳು ದೊರೆಯುವುದಿಲ್ಲ. ಆದ್ದರಿಂದ, ಜಮೀನಿನ ಮಾಲೀಕರು ಪೂಡಿ ಮಾಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಜಮೀನನ್ನು ಕಾಯ್ದೆ ಪ್ರಕಾರ ವಿಭಜಿಸಿ ಪ್ರತ್ಯೇಕ ಹಿಸ್ಸಾ ಸಂಖ್ಯೆ ಮತ್ತು ತಾತ್ಕಾಲಿಕ ಪೋಡಿ ನಂಬರ್‍ಗಳನ್ನು ನೀಡಲಾಗುತ್ತದೆ. ಹೀಗಾಗಿ, ಪೋಡಿ ಮಾಡಿದ ಭೂಮಿಗೆ ಆದಾಯ ದಾಖಲಾತಿಗಳನ್ನು ತಯಾರಿಸಿ, ಏಕ ಮಾಲೀಕತ್ವದ ಪಹಣಿ ಪಡೆಯಲಾಗುತ್ತದೆ.
ಇದನ್ನೂ ಓದಿ: PM Kisan Yojana- ಕಿಸಾನ್ ಸಮ್ಮಾನ್ 19ನೇ ಕಂತಿನ ಅರ್ಥಿಕ ನೆರವು ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!
ಉದಾಹರಣೆ: ಒಂದು ಸರ್ವೆ ನಂಬರ್ ನಲ್ಲಿ 5 ಹಿಸ್ಸಾಗಳು ಇರುತ್ತವೆ, ಪ್ರತ್ಯೇಕ ಪಹಣಿ ಲಭ್ಯವಿರುವುದಿಲ್ಲ. ಈ 5 ಹಿಸ್ಸಾ ಸಂಖ್ಯೆಗಳನ್ನು ಜಮೀನಿನ ವಿವರವನ್ನು ಒಂದೇ ಪಹಣಿಯಲ್ಲಿ ಸೂಚಿಸಲಾಗುತ್ತದೆ. ಈ ಸ್ಥಿತಿಯಲ್ಲಿ, ಸರ್ವೆ ನಂಬರ್ ನಲ್ಲಿರುವ ಹೆಸರುಗಳನ್ನು ಪ್ರತ್ಯೇಕವಾಗಿ ದಾಖಲಿಸಲು ತಾತ್ಕಾಲಿಕ ಪೋಡಿ ಮಾಡಿಸಬೇಕು.
The main purpose of podi processing is-ಪೋಡಿ ಪ್ರಕ್ರಿಯೆ ಮಾಡುವುದರ ಮುಖ್ಯ ಉದ್ದೇಶ:
- ಸ್ವಾಮ್ಯದ ಸ್ಪಷ್ಟತೆ(Proprietary Clarity): ಪ್ರತಿಯೊಬ್ಬ ಹಕ್ಕುದಾರನೂ ತಮ್ಮ ಪಾಲಿನ ಹಕ್ಕಿನ ಜಮೀನಿಗೆ ಸ್ವತಂತ್ರತೆ ಸೃಷ್ಟಿಸಲು.
- ಕಾನೂನು ಸಮಸ್ಯೆಗಳ ಪರಿಹಾರ(Resolution of legal issues): ಜಮೀನು ಸಂಬಂಧಿ ಸಂಘರ್ಷಗಳು ಮತ್ತು ಕಾನೂನು ವ್ಯಾಜ್ಯಗಳನ್ನು ತಡೆಯಲು.
- ನೋಂದಣಿ ಮತ್ತು ತೆರಿಗೆ ಸೌಲಭ್ಯ(Registration and taxation facility): ಅಭ್ಯರ್ಥಿಯು ಪ್ರತ್ಯೇಕ ಖಾತೆಗಳನ್ನು ಹೊಂದಿದರೆ ನವೀಕರಿಸಿದ ದಾಖಲಾತಿಗಳನ್ನು ಪಡೆಯಲು ಸಹಾಯವಾಗುತ್ತದೆ.
- ಆಧಿಕೃತ ಸಾಲ ಮತ್ತು ಸೌಲಭ್ಯ(Official Loan and Facility): ಬ್ಯಾಂಕ್ ಸಾಲವನ್ನು ಪಡೆಯಲು ಪ್ರತ್ಯೇಕ ದಾಖಲೆಗಳನ್ನು ಹೊಂದುವುದು ಮುಖ್ಯವಾಗಿದೆ.
ಇದನ್ನೂ ಓದಿ: Crop Insurance- ಫಸಲ್ ಭೀಮಾ ಯೋಜನೆಯಡಿ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಬಿಡುಗಡೆ!
Who can apply for land-ಜಮೀನಿನ ಪೋಡಿ ಮಾಡಿಸಲು ಯಾರು ಅರ್ಜಿಯನ್ನು ಸಲ್ಲಿಸಬಹುದು?
- ಹಕ್ಕುದಾರರು(Rights holders)- ಜಮೀನಿನ ಹಕ್ಕು ಹೊಂದಿದವರು ಅಥವಾ ಭೂಮಿಯ ಸ್ವಾಮ್ಯಕ್ಕೆ ಸಂಬಂಧಿಸಿದ ಅಧಿಕಾರವನ್ನು ಹೊಂದಿದವರು.
- ಕುಟುಂಬ ಸದಸ್ಯರು(Family members)- ಹಕ್ಕುಸ್ವಾಮ್ಯದ ಒಪ್ಪಂದದಡಿಯಲ್ಲಿ, ಕುಟುಂಬದ ಸದಸ್ಯರು ಜಮೀನನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಲು ಅರ್ಜಿ ನೀಡಬಹುದು.
- ಪಾಲುದಾರರು(partners)- ಜಮೀನಿನ ಒಟ್ಟು ಹಕ್ಕುದಾರರು ತಮ್ಮ ಹಕ್ಕನ್ನು ಪ್ರತ್ಯೇಕವಾಗಿ ನೋಂದಾಯಿಸಲು ಅರ್ಜಿ ಸಲ್ಲಿಸಬಹುದು.
Where to submit an application for encroachment of land-ಜಮೀನಿನ ಪೋಡಿ ಮಾಡಿಸಲು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು?
ಪೋಡಿ ಪ್ರಕ್ರಿಯೆಯನ್ನು ಪ್ರಾರಂಭಿಸಲು, ಅರ್ಜಿಯನ್ನು ಸ್ಥಳೀಯ ತಹಸೀಲ್ದಾರ ಕಚೇರಿಗೆ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ(Village Accountant) ಅಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಗ್ರಾಮ ಪಂಚಾಯಿತಿಯಲ್ಲಿಯೂ ಸಹ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಆನ್‌ಲೈನ್ ಮೂಲಕ “ಭೂಮಿ” ಪೋರ್ಟಲ್ ನಲ್ಲಿಯೂ ಸಹ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
ಇದನ್ನೂ ಓದಿ: Ration Card Correction: ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!
What are the documents required to register land?ಜಮೀನಿನ ಪೋಡಿ ಮಾಡಿಸಲು ಬೇಕಾಗಿರುವ ಅಗತ್ಯ ದಾಖಲೆಗಳೇನು?
- ಆರ್.ಟಿ.ಸಿ. (Records of Rights, Tenancy, and Crops)
- ಪುರಾತನ ದಾಖಲೆಗಳು ಅಂದರೆ ಗುತ್ತಿಗೆ ಪತ್ರ ಅಥವಾ ಇತರೆ ಹಕ್ಕು ದಾಖಲೆಗಳು.
- ಕುಟುಂಬದ ಹಕ್ಕುಸ್ವಾಮ್ಯದಾಖಲೆಗಳು
- ಹಕ್ಕುದಾರರ ಗುರುತಿನ ಪತ್ರಗಳು(Aadhar card, Identity card, pan card)
- ಜಮೀನಿನ ಸ್ಥಳದ ನಕ್ಷೆ
- ಸರ್ಕಾರದಿಂದ ನೀಡಿರುವ ಅಧಿಕೃತ ಅರ್ಜಿ ಪ್ರತಿ
ಇದನ್ನೂ ಓದಿ: Power Tiller Subsidy- ಶೇ.90% ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ ಆಹ್ವಾನ!
Details of charges related to land:ಜಮೀನಿನ ಪೋಡಿ ಮಾಡಿಸಲು ಸಂಬಂಧಿಸಿದ ಶುಲ್ಕ ವಿವರಗಳು:
ಸರ್ಕಾರದಿಂದ ನಿಗದಿತ ಪಡಿಸಿರುವ ಪೋಡಿ ಶುಲ್ಕವನ್ನು ಪಾವತಿಸಬೇಕು.
ಕೆಲವೊಮ್ಮೆ Mapping, examination charges and document charge ಸೇರಬಹುದು.
How long does it take to harvest land-ಜಮೀನಿನ ಪೋಡಿ ಮಾಡಿಸಲು ಏಷ್ಟು ಸಮಯಾವಧಿ ಬೇಕಾಗುತ್ತದೆ?
ಸರಿಯಾದ ದಾಖಲೆಗಳನ್ನು ನೀಡಿದ್ದರೆ ಸಾಮಾನ್ಯವಾಗಿ 30-60 ದಿನಗಳ ಒಳಗೆ ಸಂಪೂರ್ಣಗೊಳ್ಳುತ್ತದೆ.