ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತಿಗಳು ಮತ್ತು ನಗರ ಪ್ರದೇಶಗಳಲ್ಲಿ ನಗರ ಸಭೆ/ಮಹಾನಗರ ಪಾಲಿಕೆಗಳಲ್ಲಿ ಸಾರ್ವಜನಿಕರು ತಮ್ಮ ಆಸ್ತಿಯನ್ನು ನೋಂದಣಿಗೊಳಿಸಲು ಸಂಬಂಧಿತ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನು ಇ-ಖಾತೆ ಅರ್ಜಿ ವ್ಯವಸ್ಥೆ(E-Khata Application) ಕಲ್ಪಿಸಿದ್ದು, ಈ ಪ್ರಕ್ರಿಯೆಗೆ ಸಂಬಂಧಿಸಿದ ಕೆಲ ಪ್ರಮುಖ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಆಸ್ತಿ ನೋಂದಣಿ ವ್ಯವಸ್ಥೆಯು ದೇಶದ ಆರ್ಥಿಕ ಮತ್ತು ಆಡಳಿತಿಕ ವ್ಯವಸ್ಥೆಗೆ ಮುಖ್ಯವಾದ ಭಾಗವಾಗಿದೆ. ಭಾರತದಲ್ಲಿ, ಆಸ್ತಿ ಖಾತೆಗಳನ್ನು ನಿರ್ವಹಿಸುವ ಪ್ರಕ್ರಿಯೆಯು ಸಮಯೋಚಿತ ಹಾಗೂ ಸರಳವಾಗದಿದ್ದರೆ, ಇದು ಮಾಲಿಕತ್ವದ ವಿವಾದಗಳು(Ownership disputes),ಹಕ್ಕು ಪರಿಷ್ಕರಣೆ(Revision of claim) ಮತ್ತು ಕಾನೂನು ತೊಂದರೆಯನ್ನುಂಟುಮಾಡುತ್ತದೆ.
ಇದನ್ನೂ ಓದಿ: Podi Mahiti- ಜಮೀನಿನ ಪೋಡಿ ಎಂದರೇನು? ಇಲ್ಲಿದೆ ಪೋಡಿ ಕುರಿತು ಮಹತ್ವದ ಮಾಹಿತಿ!
ಇತ್ತೀಚಿನ ದಿನಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಡಿಜಿಟಲ್ ಪ್ರಕ್ರಿಯೆಯಲ್ಲಿ “ಇ-ಖಾತೆ” ಎಂಬ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ. ಇ-ಖಾತೆ ವ್ಯವಸ್ಥೆ ಆಸ್ತಿ ನೋಂದಣಿ ಮತ್ತು ಜಮೀನು ಮಾಹಿತಿಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುವ ಸಾಧನವಾಗಿದ್ದು, ಇದು ಆಸ್ತಿ ಸಂಬಂಧಿತ ಎಲ್ಲಾ ಕಾರ್ಯಗಳನ್ನು ಸುರಕ್ಷಿತವಾಗಿಡಲು ಸಹಕಾರಿಯಾಗಿದೆ.
ಇ-ಖಾತಾ ಮಾಡಿಕೊಳ್ಳಲು ಇ-ಖಾತಾ ಮಾಡಿಸುವುದರ ಪ್ರಯೋಜನಗಳೇನು? ಅಗತ್ಯ ದಾಖಲೆಗಳೇನು? ಇ-ಖಾತಾ ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ? ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Togari MSP-ಕೃಷಿ ಮಾರಾಟ ಮಂಡಳಿಯಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ!
How to get property registered in Grama Panchayat-ಗ್ರಾಮ ಪಂಚಾಯತಿ ಅಲ್ಲಿ ಆಸ್ತಿ ನೋಂದಣಿ ಹೇಗೆ ಮಾಡಿಕೊಳ್ಳಬಹುದು:
ಮೂಲ ಖಾತೆ ತಮ್ಮ ಕುಟುಂಬದವರ ಹೆಸರಿನಲ್ಲಿ ಇರುವವರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಹಳ್ಳಿ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿ ಅಲ್ಲಿ, ಬೆಂಗಳೂರು ವ್ಯಾಪ್ತಿಯಲ್ಲಿರುವವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(BBMP) ನೇರವಾಗಿ ಭೇಟಿ ಮಾಡಿ ಇ-ಖಾತಾವನ್ನು ಮಾಡಿಕೊಳ್ಳಬಹುದಾಗಿದೆ.
Documents to apply for property registration-ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಲು ದಾಖಲೆಗಳು:
(1) ಅರ್ಜಿದಾರರ ಆಧಾರ್ ಕಾರ್ಡ/Aadhar card
(2) ಅರ್ಜಿದಾರರ ವಂಶವೃಕ್ಷ/family tree
(3) ಅರ್ಜಿದಾರರ ಮನೆ ವಿದ್ಯುತ್ ಬಿಲ್/Current bill
(4) ಅರ್ಜಿದಾರರ ಕಂದಾಯ ರಶೀದಿ/Revenue Receipt
(5) ಅರ್ಜಿದಾರರನ್ನು ಮನೆ ಮುಂಭಾಗ ಮತ್ತು ಹಿಂಭಾಗದಲ್ಲಿನ ಪೋಟೋ/Photo copy
(6) ಅರ್ಜಿದಾರರ ಲಿಖಿತ ಅರ್ಜಿ/Written application
ಇದನ್ನೂ ಓದಿ: Home Loan Subsidy- ಶೇ 4% ರಷ್ಟು ಸಬ್ಸಿಡಿಯಲ್ಲಿ ಗೃಹ ಸಾಲ ಪಡೆಯಲು ಅರ್ಜಿ ಆಹ್ವಾನ!

Why create an e-account-ಇ-ಖಾತಾವನ್ನು ಏಕೆ ಮಾಡಿಸಬೇಕು?
ಭೂಮಿ ಮತ್ತು ಜಾಗದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ನಿಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡು ಇಡಬೇಕಾಗುತ್ತದೆ. ಇ-ಖಾತೆ ಹೊಂದದಿದ್ದರೆ, ಮುಂದಿನ ದಿನಗಳಲ್ಲಿ ಮೂಲ ಖಾತೆದಾರರಿಂದ ಯಾವುದೇ ತಕರಾರು ಉಂಟಾದಲ್ಲಿ ನೀವು ಸಮಸ್ಯೆಗೆ ಸಿಲುಕಬಹುದು. ಹಾಗಾಗಿ, ಇ-ಖಾತೆ ವ್ಯವಸ್ಥೆಯ ಮೂಲಕ ನಿಮ್ಮ ಆಸ್ತಿಯನ್ನು ನೋಂದಣಿ ಮಾಡಿಸಿಕೊಳ್ಳುವುದು ಅತ್ಯುತ್ತಮವಾಗಿದೆ.
(A) ಬ್ಯಾಂಕ್ ಮೂಲಕ ಆಸ್ತಿಯ ಮೇಲೆ ಸಾಲವನ್ನು ಪಡೆದುಕೊಳ್ಳಲು ಇ-ಖಾತೆ ದಾಖಲೆ ಹೊಂದಿರುವುದು ಅಗತ್ಯವಿದೆ.
(B) ನಿಖರವಾಗಿ ಆಸ್ತಿಯ ಮಾಲೀಕರನ್ನು ಗುರುತಿಸುವಲ್ಲಿ ಇ-ಖಾತೆ ಮಹತ್ವ ಪಾತ್ರ ವಹಿಸುತ್ತದೆ.
(C) ನಿಮ್ಮ ಆಸ್ತಿಯ ಮಾಲೀಕತ್ವವನ್ನು ಸಾಬೀತುಪಡಿಸಲು ಇ-ಖಾತೆ ಹೊಂದುವುದು ಅವಶ್ಯಕವಾಗಿದೆ.
(D) ಆಸ್ತಿಯನ್ನು ಮಾರಾಟ ಮಾಡಲು ಸಹ ಇ-ಖಾತಾ ಅತ್ಯಗತ್ಯವಾಗಿ ಹೊಂದಿರಬೇಕು.
ಇದನ್ನೂ ಓದಿ: PM Kisan Yojana- ಕಿಸಾನ್ ಸಮ್ಮಾನ್ 19ನೇ ಕಂತಿನ ಅರ್ಥಿಕ ನೆರವು ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!
Process of verification of applications-ಅರ್ಜಿಗಳ ಪರಿಶೀಲನೆ ಕ್ರಮ:
ಅರ್ಜಿ ವಿಲೇವಾರಿ ಪ್ರಕ್ರಿಯೆವು ವಿವಿಧ ಇಲಾಖೆಗಳ ಮೂಲಕ ಸಲ್ಲಿಸಲಾದ ಅರ್ಜಿಗಳ ಪರಿಶೀಲನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕ್ರಮವಾಗಿದೆ. ಇ-ಖಾತೆಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ, ಸರ್ಕಾರವು ವಿವರವಾದ ಹಂತಗಳನ್ನು ನಿರ್ವಹಿಸುತ್ತದೆ. ಈ ಪ್ರಕ್ರಿಯೆಯು ವಿವಿಧ ಹಂತಗಳಲ್ಲಿ ನಡೆಯುತ್ತದೆ, ಅವುಗಳ ಮೂಲಕ ಅರ್ಜಿ ಸಲ್ಲಿಸುವುದರಿಂದ ಪ್ರಕ್ರಿಯೆಯ ವೇಗವನ್ನು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.
ಇದನ್ನೂ ಓದಿ: Crop Insurance- ಫಸಲ್ ಭೀಮಾ ಯೋಜನೆಯಡಿ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಬಿಡುಗಡೆ!
ಈ ಹಿಂದೆ ಆಸ್ತಿ ನೋಂದಣಿ ಕಾಗದ ದಾಖಲೆಗಳ ಮೂಲಕ ಮಾಡಲಾಗುತ್ತಿತ್ತು, ಆದರೆ ಆ ಪ್ರಕ್ರಿಯೆಯಲ್ಲಿ ಅನೇಕ ಅಕ್ರಮಗಳು ನಡೆದಿದ್ದವು. ಈ ಸಮಸ್ಯೆಯನ್ನು ಪರಿಹರಿಸಲು, ಇದೀಗ ಸರ್ಕಾರವು ಆನ್ಲೈನ್ ಮೂಲಕ ಅರ್ಜಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಈ ವ್ಯವಸ್ಥೆಯಡಿ, ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ, ಇದರಿಂದ ಅರ್ಜಿದಾರರು ಅರ್ಜಿಯನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು.
ಅರ್ಜಿದಾರರು ಅರ್ಜಿ ಸಲ್ಲಿಸಿದ ನಂತರ, ಅವರು ತಮ್ಮ ವೈಯಕ್ತಿಕ ವಿವರಗಳನ್ನು ಹಾಗೂ ಆಸ್ತಿಯ ಆಳತೆ, ಅಕ್ಕ-ಪಕ್ಕದ ಆಸ್ತಿಯ ಮಾಲೀಕರ ಹೆಸರುಗಳನ್ನು ಆನ್ಲೈನ್ ನಲ್ಲಿ ನಮೂದಿಸಬೇಕಾಗುತ್ತದೆ. ನಂತರ, ಸಂಬಂಧಿತ ಇಲಾಖೆ ಸಿಬ್ಬಂದಿಗಳು ಆ ಆಸ್ತಿಯ ಸ್ಥಳವನ್ನು ಭೇಟಿ ಮಾಡಿ, ಜಿಪಿಎಲ್ (GPS) ಪೋಟೋ ತೆಗೆದು ಅಪ್ಲೋಡ್ ಮಾಡುತ್ತಾರೆ. ಸ್ಥಳ ಪರಿಶೀಲನೆ ನಂತರ, ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ, ಡಿಜಿಟಲ್ ಸಂಖ್ಯೆಯೊಂದಿಗೆ ಇ-ಖಾತೆ ಅನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತದೆ.
ಇದನ್ನೂ ಓದಿ: Ration Card Correction: ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!
ಈ ಪ್ರಕ್ರಿಯೆಯು ಆಸ್ತಿ ನೋಂದಣಿಯನ್ನು ಸುಗಮ, ಪಾರದರ್ಶಕ ಮತ್ತು ಕಾನೂನಿಗೆ ತಕ್ಕಂತೆ ಮಾಡಲು ಸಹಾಯಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ನ್ನು ಭೇಟಿ ಮಾಡಿ-https://eaasthi.karnataka.gov.in