ಪಿಎಚ್.ಡಿ ಪ್ರವೇಶ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅರ್ಥಿಕವಾಗಿ ನೆರವು ನೀಡಲು ಪ್ರತಿ ತಿಂಗಳು ರೂ ₹10,000 ವ್ಯಾಸಂಗ ವೇತನವನ್ನು(PhD Scholarship)ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪಿಎಚ್.ಡಿ ವ್ಯಾಸಂಗದಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳಿಗೆ ಮಾಸಿಕ ₹10,000 ರೂ ಫೆಲೋಶಿಪ್ ಪಡೆಯಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಾಲಾತಿಗಳೇನು? ಇಲಾಖೆಯಿಂದ ನಿಗದಿಪಡಿಸಿರುವ ಮಾರ್ಗಸೂಚಿ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: E-Khata Registration- ಆಸ್ತಿ ನೋಂದಣಿ ಕುರಿತಂತೆ ಇಲ್ಲಿದೆ ಪ್ರಮುಖ ಮಾಹಿತಿ!
Last Date For Application-ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ:
ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳನ್ನು ತಯಾರಿ ಮಾಡಿಕೊಂಡು ಆನ್ಲೈನ್ ಮೂಲಕ 20 ಜನವರಿ 2025 ರ ಸಂಜೆ 5.30 ಗಂಟೆ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
PhD Scholarship-ಇಲಾಖೆಯಿಂದ ನಿಗದಿಪಡಿಸಿರುವ ವ್ಯಾಸಂಗ ವೇತನ/ಫೆಲೋಶಿಪ್:
ಒಟ್ಟು 3 ವರ್ಷಗಳ ಅವಧಿಗೆ ಪ್ರತಿ ತಿಂಗಳು ರೂ.10,000 ಫೆಲೋಶಿಪ್ ಅನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಡೆಯಬಹುದಾಗಿದೆ.
ಇದನ್ನೂ ಓದಿ: Podi Mahiti- ಜಮೀನಿನ ಪೋಡಿ ಎಂದರೇನು? ಇಲ್ಲಿದೆ ಪೋಡಿ ಕುರಿತು ಮಹತ್ವದ ಮಾಹಿತಿ!

Phd fellowship eligibility-ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನಿಗದಿಪಡಿಸಿರುವ ಮಾರ್ಗಸೂಚಿ:
1) ಕರ್ನಾಟಕ ಸರ್ಕಾರ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪ್ರವರ್ಗ- I, II(ಎ), III(ಎ) ಅಥವಾ III(ಬಿ) ಗೆ ಸೇರಿರಬೇಕು.
2) ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ಅಧೀನಕ್ಕೆ ಒಳಪಡುವ ಹಾಗೂ ಕರ್ನಾಟಕದಲ್ಲಿರುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪೂರ್ಣಾವಧಿ (Full Time) ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರಬೇಕು.
3) ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರಬೇಕು.
ಇದನ್ನೂ ಓದಿ: Togari MSP-ಕೃಷಿ ಮಾರಾಟ ಮಂಡಳಿಯಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ!
4) ಅಭ್ಯರ್ಥಿಗಳು ಪೂರ್ಣಾವಧಿ ಪಿಹೆಚ್.ಡಿ ಅಧ್ಯಯನಕ್ಕಾಗಿ ಮಾಡಿಸಿರುವ ನೋಂದಾಣಿ ದಿನಾಂಕವು, ಹಿಂದುಳಿದ ವರ್ಗಗಳ ಕಲಾಣ ಇಲಾಖೆಯಿಂದ ನೀಡುವ ವ್ಯಾಸಂಗ ವೇತನ/ಫೆಲೋಶಿಪ್ ಗಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸುವ ಕೊನೆಯ ದಿನಾಂಕಕ್ಕೆ ಹಿಂದಿನ 2 ವರ್ಷದೊಳಗಿರಬೇಕು.
Age Limit-ವಯೋಮಿತಿ:
ಅಭ್ಯರ್ಥಿಯ ಗರಿಷ್ಠ ವಯೋಮಿತಿ 35 ವರ್ಷಗಳು(ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ವ್ಯಾಸಂಗ ವೇತನ/ಫೆಲೋಶಿಪ್ ಗಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸುವ ಕೊನೆಯ ದಿನಾಂಕಕ್ಕೆ ಅನ್ವಯಿಸುವಂತೆ).
ಇದನ್ನೂ ಓದಿ: Home Loan Subsidy- ಶೇ 4% ರಷ್ಟು ಸಬ್ಸಿಡಿಯಲ್ಲಿ ಗೃಹ ಸಾಲ ಪಡೆಯಲು ಅರ್ಜಿ ಆಹ್ವಾನ!
How to Apply-ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಆಫ್-ಲೈನ್ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸುವುದು. ಅಭ್ಯರ್ಥಿಗಳು ತಾವು ಪಿಎಚ್.ಡಿ ಅಧಯನ ಮಾಡುತ್ತಿರುವ ವಿಶ್ವವಿದ್ಯಾಲಯ/ಸಂಸ್ಥೆ ಇರುವಂತಹ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಇದನ್ನು ಸಲ್ಲಿಸುವುದು. ಅರ್ಜಿ ನಮೂನೆ ಡೌನ್ಲೋಡ್ ಲಿಂಕ್ ಈ ಅಂಕಣದ ಕೊನೆಯಲ್ಲಿ ಹಾಕಲಾಗಿದೆ.
Documents-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು:
1) SSLC ಅಂಕಪಟ್ಟಿ
2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
3) ವಾಸಸ್ಥಳ ಪ್ರಮಾಣ ಪತ್ರ
4) ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು
5) ಪಿಹೆಚ್.ಡಿ ಅಧ್ಯಯನಕ್ಕಾಗಿ ನೋಂದಣಿ ಮಾಡಿರುವ
6) ಬಗ್ಗೆ ವಿಶ್ವವಿಧ್ಯಾಲಯ/ಆಧಿಕೃತ ಸಂಸ್ಥೆಯಿಂದ ಪ್ರಮಾಣ ಪತ್ರ
7) ಬ್ಯಾಂಕ್ ಖಾತೆ ವಿವರ
8) ಆಧಾರ್ ಕಾರ್ಡ ಪ್ರತಿ
9) ಪೋಟೋ-2
10) 100 ರೂ ಛಾಪಾ ಕಾಗದ
ಇದನ್ನೂ ಓದಿ: PM Kisan Yojana- ಕಿಸಾನ್ ಸಮ್ಮಾನ್ 19ನೇ ಕಂತಿನ ಅರ್ಥಿಕ ನೆರವು ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!
Selection Procces-ಅಭ್ಯರ್ಥಿ ಆಯ್ಕೆ ವಿಧಾನ:
ಸ್ನಾತಕೋತ್ತರ ಪದವಿಯಲ್ಲಿ ಪಡೆದಿರುವ ಅಂಕಗಳು, ಪ್ರವರ್ಗವಾರು ಮೀಸಲಾತಿ ಹಾಗೂ ಅನುದಾನ ಲಭ್ಯತೆಗೆ ಅನುಗುಣವಾಗಿ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
Application Download link-ಅರ್ಜಿ ನಮೂನೆಯನ್ನು – Download Now
ಮುಚ್ಚಳಕೆ ಪತ್ರ – Download Now
Helpline-ಸಹಾಯವಾಣಿ: 8050770004 (ಕಛೇರಿ ಕಾರ್ಯನಿರ್ವಹಿಸುವ ಸಮಯ ಬೆಳಗ್ಗೆ 10.00 ರಿಂದ ಸಂಜೆ 05.30 ರವರೆಗೆ)