Saturday, February 15, 2025
No menu items!
HomeNewsShri Kshetra Dharmasthala- ಧರ್ಮಸ್ಥಳದಲ್ಲಿ 52 ನೇ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ!

Shri Kshetra Dharmasthala- ಧರ್ಮಸ್ಥಳದಲ್ಲಿ 52 ನೇ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ!

ಕರ್ನಾಟಕದ ಪ್ರಖ್ಯಾತ ಧಾರ್ಮಿಕ ಕೇಂದ್ರ “ಶ್ರೀ ಕ್ಷೇತ್ರ ಧರ್ಮಸ್ಥಳ” ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ(economically backward families) ತಮ್ಮ ಮಕ್ಕಳ ವಿವಾಹವನ್ನು ನೆರವೇರಿಸಲು “ಡಾ. ವೀರೇಂದ್ರ ಹೆಗ್ಗಡೆ” ಅವರು ಆಯೋಜಿಸಿರುವ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಇದು ದಕ್ಷಿಣ ಭಾರತದ ಪ್ರಖ್ಯಾತ ಧಾರ್ಮಿಕ ಮತ್ತು ಸಂಸ್ಕೃತಿಕ ಕೇಂದ್ರ(religious and cultural center) ಇದಾಗಿದ್ದು, ಬಡ ಕುಟುಂಬಗಳಿಗೆ ಆಶಾಕಿರಣವಾಗಿದೆ. ಈ ವಿಶೇಷ ಕಾರ್ಯಕ್ರಮವು ದಂಪತಿಗಳ ಜೀವನವನ್ನು ಹೊಸ ಅಧ್ಯಾಯಕ್ಕೆ ತೆಗೆದುಕೊಂಡು ಹೋಗಲು ಪ್ರೀತಿ ಶ್ರದ್ಧೆ ಮಾನವೀಯತೆಗಳ ಸಾಂಸ್ಕೃತಿಕ ಉತ್ಸವ ಇದಾಗಿದೆ.

ಇದನ್ನೂ ಓದಿ: Gruhalakshmi amount- ಈ ಪಟ್ಟಿಯಲ್ಲಿ ಹೆಸರಿರುವವರಿಗಿಲ್ಲ ಗೃಹಲಕ್ಷ್ಮಿ ಹಣ! ನಿಮ್ಮ ಹೆಸರಿದಿಯಾ ಚೆಕ್ ಮಾಡಿಕೊಳ್ಳಿ!

2025 may 01 ರಂದು ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ(Free mass wedding ceremony) ಆಯೋಜಿಸಲಾಗಿದ್ದು, ಈ ಸಹಾಯವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು? ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

dharmastala

Who is eligible to apply for free mass marriage-ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು?

೧) ವಧುವಿನ ವಯಸ್ಸು ಕನಿಷ್ಠ 18 ವರ್ಷ ಆಗಿರಬೇಕು.
೨) ವರನ ವಯಸ್ಸು ಕನಿಷ್ಠ 21 ವರ್ಷ ಆಗಿರಬೇಕು.
೩) ಯಾವುದೇ ಜಾತಿ, ಮತದವರು ಅರ್ಜಿಯನ್ನು ಸಲ್ಲಿಸಬಹುದು.
೪) ಬಡ ಮತ್ತು ಮಧ್ಯಮ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
೫) ವಧು ಮತ್ತು ವರ ಇಬ್ಬರೂ ತಮ್ಮ ವೈವಾಹಿಕ ಸಂಬಂಧಕ್ಕೆ ಪರಸ್ಪರ ಒಪ್ಪಿಗೆ ಇರಬೇಕು.

ಇದನ್ನೂ ಓದಿ: Monthly Scholarship- ತಿಂಗಳಿಗೆ ₹10,000 ರೂ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!

Where to apply for free mass marriage-ಉಚಿತ ಸಾಮೂಹಿಕ ವಿವಾಹಕ್ಕೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು?

ನೇರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕಚೇರಿಗೆ ಭೇಟಿ ನೀಡಿ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳದ ಅಧಿಕೃತ ವೆಬ್‌ಸೈಟ್ ಗೆ ಪ್ರವೇಶ ಮಾಡಿ ಆನ್ಲೈನ್ ಮೂಲಕ ಸಲ್ಲಿಸಬಹುದು. ಸ್ಥಳೀಯ ಪ್ರತಿನಿಧಿಗಳಾಗಿದ್ದರೆ ಧರ್ಮಸ್ಥಳದ ಪ್ರಾದೇಶಿಕ ಕೇಂದ್ರಗಳಲ್ಲಿ ಸಹ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಪರಿಶೀಲನೆಯ ನಂತರ ಆಯ್ಕೆಯಾದ ದಂಪತಿಗಳಿಗೆ ಸ್ಥಳೀಯ ಕೇಂದ್ರದಿಂದ ಮಾಹಿತಿ ನೀಡಲಾಗುತ್ತದೆ.

ಇದನ್ನೂ ಓದಿ: E-Khata Registration- ಆಸ್ತಿ ನೋಂದಣಿ ಕುರಿತಂತೆ ಇಲ್ಲಿದೆ ಪ್ರಮುಖ ಮಾಹಿತಿ!

What are the required documents for free mass marriage-ಉಚಿತ ಸಾಮೂಹಿಕ ವಿವಾಹಕ್ಕೆ ಬೇಕಾದ ಅಗತ್ಯ ದಾಖಲೆಗಳೇನು?

  1. ಆಧಾರ್ ಕಾರ್ಡ್/Aadhar card
  2. ಜಾತಿ ಪ್ರಮಾಣಪತ್ರ/cast certificate
  3. ಆದಾಯ ಪ್ರಮಾಣಪತ್ರ/Income certificate
  4. ಜನ್ಮ ಪ್ರಮಾಣಪತ್ರ/Birth Certificate
  5. ವಧು-ವರರ ಒಪ್ಪಿಗೆ ಪತ್ರ/Consent letter of bride and groom
  6. ಪಾಸ್‌ಪೋರ್ಟ್ (ವಧು ಮತ್ತು ವರ)/Photocopy
  7. ಆಪ್ತ ಸಂಬಂಧಿಕರ ಬೆಂಬಲ & ಸಹಿ

ಇದನ್ನೂ ಓದಿ: Podi Mahiti- ಜಮೀನಿನ ಪೋಡಿ ಎಂದರೇನು? ಇಲ್ಲಿದೆ ಪೋಡಿ ಕುರಿತು ಮಹತ್ವದ ಮಾಹಿತಿ!

How to apply for Free Mass Marriage-ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಾಮಾನ್ಯವಾಗಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ನಡೆಯುತ್ತದೆ. ಈ ಪ್ರಕ್ರಿಯೆ ರಾಜ್ಯದಿಂದ ರಾಜ್ಯಕ್ಕೆ ಮತ್ತು ಪ್ರಾದೇಶಿಕವಾಗಿ ಬದಲಾಗುತ್ತದೆ, ಆದರೆ, ಸಾಮಾನ್ಯವಾಗಿ ಅನುಸರಿಸುವ ಹಂತಗಳು ಈ ಕೆಳಗೆ ತಿಳಿಸಲಾಗಿದೆ.

ಹಂತ-೧: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Click here ಅಧಿಕೃತ ವೆಬ್‌ಸೈಟ್ ಗೆ ಭೇಟಿ ಮಾಡಬೇಕು. ಅಥವಾ ಸಮುದಾಯ ಕಲ್ಯಾಣ ಇಲಾಖೆಯಿಂದ ಉಚಿತ ಸಾಮೂಹಿಕ ವಿವಾಹದ ಅರ್ಜಿಯ ಪ್ರಕ್ರಿಯೆಯ ಮಾಹಿತಿಯನ್ನು ಪಡೆದುಕೊಂಡು ಬಹುತೇಕ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಭೇಟಿ ಮಾಡಿ ಅರ್ಜಿಯ ಪ್ರತಿಯನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ: Togari MSP-ಕೃಷಿ ಮಾರಾಟ ಮಂಡಳಿಯಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ!

ಹಂತ-೨: ನಂತರ ಅರ್ಜಿ ಫಾರ್ಮ್‌ನಲ್ಲಿ ಕೇಳಿದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಗುರುತಿನ ದಾಖಲೆಗಳು, ಪ್ರಸ್ತುತ ವಿಳಾಸ, ಕುಟುಂಬದ ಹಿತಾಸಕ್ತಿ ಅಥವಾ ಆದಾಯ ಪ್ರಮಾಣ ಪತ್ರ ಅಲ್ಲಿ ಕೇಳಿದ ಎಲ್ಲಾ ವಿವರವನ್ನು ಭರ್ತಿ ಮಾಡಬೇಕು.

ಹಂತ-೩: ಅರ್ಜಿಯನ್ನು ಭರ್ತಿ ಮಾಡಿದ ನಂತರ ಅರ್ಜಿಯನ್ನು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಸ್ಥಳೀಯ ಕಲ್ಯಾಣ ಇಲಾಖೆಗೆ ಅಥವಾ ನಗರ ಪಂಚಾಯಿತಿಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Home Loan Subsidy- ಶೇ 4% ರಷ್ಟು ಸಬ್ಸಿಡಿಯಲ್ಲಿ ಗೃಹ ಸಾಲ ಪಡೆಯಲು ಅರ್ಜಿ ಆಹ್ವಾನ!

For More Information-ಹೆಚ್ಚಿನ ಮಾಹಿತಿಗಾಗಿ:

ಧರ್ಮಸ್ಥಳದ ಕಚೇರಿಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ಮಾಡಿ: Click here

ಧರ್ಮಸ್ಥಳದ ಕಚೇರಿಯ ಸಂಪರ್ಕ ಸಂಖ್ಯೆ : (+91) 8256-277121

E-mail ID-info@shridharmasthala.org

RELATED ARTICLES
- Advertisment -

Most Popular

Recent Comments