ಗೃಹಲಕ್ಷ್ಮಿ ಯೋಜನೆಯಡಿ(Gruhalakshmi) ಅರ್ಥಿಕ ನೆರವನ್ನು ಪಡೆಯಲು ಅನರ್ಹ ಪಟ್ಟಿಯನ್ನು ಆಹಾರ ಇಲಾಖೆಯ ಅಧಿಕೃತ ತಂತ್ರಾಂಶದಲ್ಲಿ ಬಿಡುಗಡೆ ಮಾಡಲಾಗಿದ್ದು ಈ ಪಟ್ಟಿಯಲ್ಲಿ ಯಾವೆಲ್ಲ ಹೆಸರುಗಳು ಇವೆ? ನಿಮ್ಮ ಹೆಸರು ಇದ್ದಲ್ಲಿ ಯಾವ ಕ್ರಮ ಅನುಸರಿಸಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯು ಪಡಿತರ ಚೀಟಿ ಮುಖ್ಯಸ್ಥ ಮಹಿಳಾ ಫಲಾನುಭವಿಗಳಿಗೆ(women heads of Karnataka Govt) ಆರ್ಥಿಕ ಸಹಾಯ ಒದಗಿಸುವ ಮಹತ್ವದ ಯೋಜನೆಯಲ್ಲಿ ಒಂದಾಗಿದ್ದು, ಈಗಾಗಲೇ ಈ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದ್ದು, ಆಹಾರ ಇಲಾಖೆಯ ಈ ಪಟ್ಟಿಯಲ್ಲಿರುವವರಿಗೆ ಈ ಯೋಜನೆಯ ಸಹಾಯಧನ ದೊರೆಯುವುದಿಲ್ಲ! ನಿಮ್ಮ ಮೊಬೈಲ್ ನಲ್ಲೇ ಗೃಹಲಕ್ಷ್ಮಿ ಯೋಜನೆಯ ಅನರ್ಹ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಈ ಯೋಜನೆಯ ರಾಜ್ಯಾದ್ಯಂತ ಮಧ್ಯಮ ಮತ್ತು ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವುದರ ಜೊತೆಗೆ ಮಹಿಳೆಯರು ಸ್ವಾವಲಂಬಿಗಳಾಗಿ(as self-sufficient) ಇರಲು ಅನುಕೂಲವಾಗಿದೆ.
ಇದನ್ನೂ ಓದಿ: Monthly Scholarship- ತಿಂಗಳಿಗೆ ₹10,000 ರೂ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!
ಸರ್ಕಾರವು ಜಾರಿಗೊಳಿಸಿದ ಈ ನಿಯಮದಲ್ಲಿ ಅರ್ಹರಲ್ಲದ ವ್ಯಕ್ತಿಗಳು ಈ ಯೋಜನೆಯಿಂದ ಹೊರಗಿರುತ್ತಾರೆ. ಅಂತಹ ವ್ಯಕ್ತಿಗಳ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗುತ್ತದೆ ಈ ಲೇಖನದಲ್ಲಿ ಈ ಯೋಜನೆಗೆ ಯಾರು ಅನರ್ಹರು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
Named in this list will not get the facility of Grilahakshmi Yojana-ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಸಿಗುವುದಿಲ್ಲ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ:
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ahara.kar.nic.in ತಂತ್ರಾಂಶವನ್ನು ಭೇಟಿ ಮಾಡಿಬೇಕು. ನಂತರ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಪಟ್ಟಿಯಿಂದ ತೆಗೆದುಹಾಕಿದ ತಾಲ್ಲೂಕುವಾರು ಫಲಾನುಭವಿಗಳ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ನೋಡಬಹುದಾಗಿದೆ.
ಇದನ್ನೂ ಓದಿ: E-Khata Registration- ಆಸ್ತಿ ನೋಂದಣಿ ಕುರಿತಂತೆ ಇಲ್ಲಿದೆ ಪ್ರಮುಖ ಮಾಹಿತಿ!

ಹಂತ-೧: ಮೊದಲು ಈ ಲಿಂಕ್ click here ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆಯ ತಂತ್ರಾಂಶವನ್ನು ಭೇಟಿ ಮಾಡಬೇಕು. ನಂತರ “e-Ration Card” ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.
ಹಂತ-೨: ಕ್ಲಿಕ್ ಮಾಡಿ ನಂತರ “Show Cancelled / Suspended list” ಎಂದು ಆಯ್ಕೆಯನ್ನು ತೋರಿಸುತ್ತದೆ. ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಜಿಲ್ಲೆ(District), ತಾಲ್ಲೂಕು(Taluk), ತಿಂಗಳು(Month), ವರ್ಷ(Year) ಆಯ್ಕೆ ಮಾಡಿಕೊಂಡು GO ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ತಾಲ್ಲೂಕಿನಲ್ಲಿರುವ ರದ್ದಾದ ರೇಶನ್ ಕಾರ್ಡ ಗ್ರಾಹಕರ ಪಟ್ಟಿಯನ್ನು ತೋರಿಸುತ್ತದೆ. ಆಗ ನಿಮ್ಮ ಹೆಸರು ಇದಿಯಾ ಇಲ್ಲ ಎಂದು ಖಚಿತಪಡಿಸಿಕೊಳ್ಳಬಹುದು.
ಇದನ್ನೂ ಓದಿ: Podi Mahiti- ಜಮೀನಿನ ಪೋಡಿ ಎಂದರೇನು? ಇಲ್ಲಿದೆ ಪೋಡಿ ಕುರಿತು ಮಹತ್ವದ ಮಾಹಿತಿ!
What to do if your name is on that released list-ಬಿಡುಗಡೆಯಾದ ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಏನು ಮಾಡಬೇಕು?
ಈ ಮೇಲೆ ತಿಳಿಸಿರುವ ವಿಧಾನವನ್ನು ಪಾಲನೆ ಮಾಡಿ ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ನೋಡಿದಾಗ ಅದರಲ್ಲಿ ಒಂದು ವೇಳೆ ನೀವು ಆಹಾರ ಇಲಾಖೆಯ ಮಾರ್ಗಸೂಚಿ ಪ್ರಕಾರ ರೇಷನ್ ಕಾರ್ಡ ಪಡೆಯಲು ಅರ್ಹರಿದ್ದರು ನಿಮ್ಮ ಹೆಸರು ಅದರಲ್ಲಿ ಕಂಡು ಬಂದರೆ ನೀವು ಏನು ಮಾಡಬೇಕು? ಎಂದು ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: Togari MSP-ಕೃಷಿ ಮಾರಾಟ ಮಂಡಳಿಯಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ!
ಅಗತ್ಯ ದಾಖಲಾತಿಗಲಾದ ಅರ್ಜಿದಾರರ ಆಧಾರ್ ಕಾರ್ಡ ಪ್ರತಿ ಮತ್ತು ಒಂದು ಲಿಖಿತ ಅರ್ಜಿಯನ್ನು ತೆಗೆದುಕೊಂಡು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ(Department of Food) ಕಚೇರಿಯನ್ನು ಭೇಟಿ ಮಾಡಿ ನಾವು ಅರ್ಹರಿದ್ದರು, ನಮ್ಮ ರೇಷನ್ ಕಾರ್ಡ ರದ್ದಾಗಿರುತ್ತದೆ. ಇದನ್ನು ಸರಿಪಡಿಸಿಕೊಡುವಂತೆ ಮನವಿ ಸಲ್ಲಿಸಿಬೇಕು.
ಈ ರೀತಿ ಅರ್ಜಿ ಸಲ್ಲಿಸಿದ ನಂತರ ಪುನಃ ಇಲಾಖೆಯಿಂದ ನಿಮ್ಮ ರೇಶನ್ ಕಾರ್ಡ ಅರ್ಜಿಯನ್ನು ಮರುಪರಿಶೀಲನೆ ಮಾಡಿದಾಗ ರದ್ದಾದ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆಯಲಾಗುತ್ತದೆ.
ಇದನ್ನೂ ಓದಿ: Home Loan Subsidy- ಶೇ 4% ರಷ್ಟು ಸಬ್ಸಿಡಿಯಲ್ಲಿ ಗೃಹ ಸಾಲ ಪಡೆಯಲು ಅರ್ಜಿ ಆಹ್ವಾನ!
Related website links for more information-ಹೆಚ್ಚಿನ ಮಾಹಿತಿಗಾಗಿ ಸಂಬದಿಸಿದ ವೆಬ್ಸೈಟ್ ಲಿಂಕ್ ಗಳು:
ನಿಮ್ಮ ತಾಲ್ಲೂಕಿನ ಆಹಾರ ಇಲಾಖೆ(Department of Food)ವಿವರ ಪಡೆಯಲು ಇಲ್ಲಿ ಕ್ಲಿಕ್ : Click here