ಪಿಎಂ ಅವಾಸ್ ಯೋಜನೆ(PM Awas Yojana) ಅಡಿಯಲ್ಲಿ ಮೋದಿ ಸರ್ಕಾರವು ಮಧ್ಯಮ ಮತ್ತು ಬಡ ಕುಟುಂಬಗಳಿಗೆ ಗೃಹ ಸಾಲವನ್ನು ಪಡೆದುಕೊಳ್ಳಲು ಶೇ 4% ರಷ್ಟು ಸಬ್ಸಿಡಿಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಸ್ವಂತ ಮನೆ ಕಟ್ಟುವ ಆಸೆ ಇದ್ದೇ ಇರುತ್ತದೆ ಈ ಕನಸನ್ನು ನನಸಾಗಿಸುವ ಯೋಚನೆ ಪಿಎಂ ಆವಾಸ್ ಯೋಜನೆ. ಇದು 2015 ರಲ್ಲಿ ಆರಂಭವಾಗಿದ್ದು ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ತಮ್ಮದೇ ಸ್ವಂತ ಮನೆಯನ್ನು ಒದಗಿಸುವುದಾಗಿದೆ ಇದರ ಜೊತೆಗೆ ಆರ್ಥಿಕತೆಯನ್ನು(economy) ಹೆಚ್ಚಿಸಲು ಗೃಹ ಉದ್ಯಮವನ್ನು(Home industry) ಉತ್ತೇಜಿಸಲು ಸಹಾಯಕಾರಿಯಾಗಿದೆ.
ಇದನ್ನೂ ಓದಿ: PM Kisan Yojana- ಕಿಸಾನ್ ಸಮ್ಮಾನ್ 19ನೇ ಕಂತಿನ ಅರ್ಥಿಕ ನೆರವು ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!
ಪಿಎಂ ಅವಾಸ್ ಯೋಜನೆಯ ಅಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ(For poor and middle class families)ಆರ್ಥಿಕ ಬೆಂಬಲ ನೀಡಲು ಮತ್ತು ಬಡ್ಡಿದರ ಸಬ್ಸಿಡಿಯ ಮೂಲಕ ಗೃಹ ಸಾಲದ ಭಾರವನ್ನು ಕಡಿಮೆ ಮಾಡಲು ಅರ್ಜಿ ಆಹ್ವಾನಿಸಿದ್ದು, ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
Who can apply for a home loan-ಗೃಹ ಸಾಲವನ್ನು ಪಡೆದುಕೊಳ್ಳಲು ಯಾರು ಅರ್ಜಿಯನ್ನು ಸಲ್ಲಿಸಬಹುದು?
- ಬಡ ಕುಟುಂಬದ ವಾರ್ಷಿಕ ಆದಾಯವು ₹3 ಲಕ್ಷದ ಒಳಗಿರಬೇಕು.
- ಮಧ್ಯಮ ವರ್ಗದ ಕುಟುಂಬದ ವಾರ್ಷಿಕ ಆದಾಯವು ₹6 ಲಕ್ಷದಿಂದ ₹12 ಲಕ್ಷದ ಒಳಗಿರಬೇಕು.
- ಮನೆ ವಾಸ್ತವಿಕವಾಗಿ ಕುಟುಂಬ ಮಾಲಿಕತ್ವ/ ಕುಟುಂಬ ಸದಸ್ಯರ ಸ್ವತ್ತಾಗಿರಬೇಕು.
- ಅರ್ಜಿದಾರರು/ ಅರ್ಜಿದಾರರ ಕುಟುಂಬದ ಸದಸ್ಯರು ಅಂದರೆ ಅವರ ಪತಿ, ಪತ್ನಿ, ಇವರು ಯಾವುದೇ ಬೇರೆ ಗೃಹದ ಮಾಲೀಕರಾಗಿದ್ದರೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: Crop Insurance- ಫಸಲ್ ಭೀಮಾ ಯೋಜನೆಯಡಿ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಬಿಡುಗಡೆ!
Where to apply for home loan-ಗೃಹ ಸಾಲವನ್ನು ಪಡೆದುಕೊಳ್ಳಲು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು?
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ಪೋರ್ಟಲ್(https://pmaymis.gov.in/) ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದಲ್ಲಿರುವ ಬ್ಯಾಂಕ್/ಗೃಹಸಾಲ ಶಾಖೆಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Ration Card Correction: ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!
What are the required documents for availing a home loan-ಗೃಹ ಸಾಲವನ್ನು ಪಡೆದುಕೊಳ್ಳಲು ಬೇಕಾದ ಅಗತ್ಯ ದಾಖಲೆಗಳೇನು?
- ಅರ್ಜಿದಾರರ ಆದಾಯ ಪ್ರಮಾಣಪತ್ರ/Basic certificate
- ಅರ್ಜಿದಾರರ ಆಧಾರ್ ಕಾರ್ಡ್/Aadhar Card
- ಅರ್ಜಿದಾರರ ಪಾನ್ ಕಾರ್ಡ್/pan Card
- ಅರ್ಜಿದಾರರ ಬ್ಯಾಂಕ್ ಖಾತೆಯ ವಿವರ/Bank passbook
- ಅರ್ಜಿದಾರರ ವಾಸ್ತವಿಕ ವಿಳಾಸದ ಪುರಾವೆ/Actual address proof
- ಅರ್ಜಿದಾರರ ಪ್ರಸ್ತುತ ಮನೆ/ವಸತಿ ಮಾಹಿತಿ/Current house information
ಇದನ್ನೂ ಓದಿ: Power Tiller Subsidy- ಶೇ.90% ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ ಆಹ್ವಾನ!
How to Apply for Home Loan-ಗೃಹ ಸಾಲವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ವಿಧಾನ:
ಹಂತ-1: ಮೊದಲು ಇಲ್ಲಿಕಾಣುವ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿದ ನಂತರ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.
ಹಂತ-2: ಜಾಲತಾಣವನ್ನು ಭೇಟಿ ಮಾಡಿದ ನಂತರ PMAY-U Dashboard ಎಂದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ನಂತರ “Sign In” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Kashi Yatra Trip- ಸರಕಾರದಿಂದ ಕಾಶಿ ಯಾತ್ರೆಗೆ ₹5,000/- ಸಹಾಯಧನ ಪಡೆಯಲು ಅರ್ಜಿ!
ಹಂತ-3: ತದನಂತರ ಅಲ್ಲಿ ಕಾಣುವ Username ಮತ್ತು Password ಅನ್ನು ನಮೂದಿಸಿದ ನಂತರ ಮೇಲೆ ನೀಡಿರುವ “captcha code ನ್ನು ನಮೂದಿಸ ಬೇಕು. ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ಅನ್ನು ರಿಜಿಸ್ಷ್ರೆಷನ್ ಮಾಡದೆ ಇದ್ದಲ್ಲಿ ಸೈನ್ ಇನ್ ಆಗಲು ಸಾಧ್ಯವಾಗುವುದಿಲ್ಲ ಆದ್ದರಿಂದ ಅಲ್ಲಿ ತೋರಿಸುವ “Sign up” ಬಟನ್ ಮೇಲೆ ಕ್ಲಿಕ್ ಮಾಡಿದಾಗ “Registration Form” ಎಂದು ತೋರಿಸುತ್ತದೆ ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು.
ಹಂತ-4: ನಂತರ “Citizen Assessment” ಎಂಬ ವಿಭಾಗದಲ್ಲಿ ನಿಮ್ಮ ವರ್ಗವನ್ನು (EWS, LIG, MIG) ಆಯ್ಕೆ ಮಾಡಬೇಕು. ನಂತರ ನಿಮ್ಮ ವೈಯಕ್ತಿಕ ವಿವಿರಗಳನ್ನು ಭರ್ತಿ ಮಾಡಿ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ನಂತರ ಅರ್ಜಿಯ ಸಂಖ್ಯೆ (Application Reference number) ಸಿಗುತ್ತದೆ.
For more information visit the official website-ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ-https://pmaymis.gov.in/