Friday, February 7, 2025
No menu items!
HomeSchemesKashi Yatra Trip- ಸರಕಾರದಿಂದ ಕಾಶಿ ಯಾತ್ರೆಗೆ ₹5,000/- ಸಹಾಯಧನ ಪಡೆಯಲು ಅರ್ಜಿ!

Kashi Yatra Trip- ಸರಕಾರದಿಂದ ಕಾಶಿ ಯಾತ್ರೆಗೆ ₹5,000/- ಸಹಾಯಧನ ಪಡೆಯಲು ಅರ್ಜಿ!

ರಾಜ್ಯ ಸರಕಾರದಿಂದ ಕಾಶಿ ಯಾತ್ರೆಯನ್ನು(Kashi Temples) ಕೈಗೊಳ್ಳಲು ಆಸಕ್ತಿಯಿರುವ ಸಾರ್ವಜನಿಕರಿಗೆ ಅರ್ಥಿಕವಾಗಿ ನೆರವು ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಹಿಂದೂ ಧಾರ್ಮಿಕ ಸಂಸ್ಥೆಗಳು(Hindu religious institutions)ಮತ್ತು ಧರ್ಮಾದಯ ದತ್ತಿಗಳ ಇಲಾಖೆಯಿಂದ ಪ್ರತಿ ವರ್ಷ ಕಾಶಿ ಯಾತ್ರೆಗೆ ಹೋಗುವ ನಾಗರಿಕರಿಗೆ ಅರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ ಇದೆ ಮಾದರಿಯಲ್ಲಿ ಪ್ರಸ್ತುತ ಸಾಲಿನಲ್ಲಿ ಅರ್ಹ ನಾಗರಿಕರನ್ನು ಆಯ್ಕೆ ಮಾಡಲು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Ration card list-ಆಹಾರ ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿ ಬಿಡುಗಡೆ!ನಿಮ್ಮ ಹೆಸರು ಇದಿಯಾ ಚೆಕ್ ಮಾಡಿಕೊಳ್ಳಿ!

ಸಾರ್ವಜನಿಕರು ಅಂತಿಮ ದಿನಾಂಕ ಮುಗಿಯುವುದರ ಒಳಗಾಗಿ ಈ ಅಂಕಣದಲ್ಲಿ ವಿವರಿಸುರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಅಗತ್ಯ ದಾಖಲಾತಿಗಳ ಸಮೇತ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯ ಪ್ರಯೊಜನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಷ್ಟು ಸಹಾಯಧನ ನೀಡಲಾಗುತ್ತದೆ? ಎಲ್ಲಿ ಅರ್ಜಿ ಸಲ್ಲಿಬೇಕು? ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Anganwadi Centre Job-ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಸೇರಿ ಒಟ್ಟು 1,143 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!

kashi yatre

ಯಾರೆಲ್ಲಾ ಅರ್ಜಿ ಸಲ್ಲಿಬಹುದು?

  • ಯಾತ್ರಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳಾಗಿರತಕ್ಕದ್ದು.
  • 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
  • ಯಾತ್ರಾರ್ಥಿಗಳು ತಮ್ಮ ಆಧಾರ್ ಕಾರ್ಡನ ಎರಡೂ ಕಡೆ (both sides) ತಪ್ಪದೇ ಅಪ್ ಲೋಡ್ ಮಾಡತಕ್ಕದ್ದು.
  • ಚುನಾವಣಾ ಗುರುತಿನ ಚೀಟಿ/ರೇಷನ್ ಕಾರ್ಡ್
  • ಯಾತ್ರಾರ್ಥಿಗಳು ಕಾಶಿಗೆ ಪ್ರಯಾಣಿಸಿದ ಕುರಿತು ಟಿಕೆಟ್ ಅಪ್ಲೋಡ್ ಮಾಡತಕ್ಕದ್ದು.
  • ಅರ್ಹ ಯಾತ್ರಾರ್ಥಿಗಳು ತಮ್ಮ ಅರ್ಜಿಯನ್ನು ಆನ್‌ಲೈನ್ ಮೂಲಕ ಸೇವಾ (https://sevasindhuservices. karnataka.gov.in) ನಲ್ಲಿ ದಿನಾಂಕ : 15.01.2025 ಸಂಜೆ 04:00 ಗಂಟೆಯೊಳಗೆ ಸಲ್ಲಿಸಬಹುದಾಗಿರುತ್ತದೆ.
  • ದಿನಾಂಕ: 15.02.2024ರಿಂದ ಕಾಕಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ಕಾಶಿ ಕ್ಷೇತ್ರಕ್ಕೆ ಭೇಟಿ ನೀಡಿದ ಬಗ್ಗೆ ದೇವಾಲಯದ ಮುಂಬದಿಯಲ್ಲಿ ಯಾತ್ರಾರ್ಥಿಗಳ ಛಾಯಾಚಿತ್ರ, ಪೂಜಾ ರಸೀದಿ ಇತ್ಯಾದಿ ದಾಖಲಾತಿಗಳನ್ನು ಅಪ್‌ ಲೋಡ್ ಮಾಡತಕ್ಕದ್ದು.

ಇದನ್ನೂ ಓದಿ: DBT Status-ನಿಮ್ಮ ಮೊಬೈಲ್ ನಲ್ಲಿ ಈ ಒಂದು ಅಪ್ಲಿಕೇಶನ್ ಇದ್ದರೆ ಸಾಕು! ಎಲ್ಲಾ ಯೋಜನೆಯ ಹಣ ಜಮಾ ವಿವರ ಪಡೆಯಬಹುದು!

  • ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಮತ್ತೊಮ್ಮೆ ಅನುದಾನ ನೀಡಲಾಗುವುದಿಲ್ಲ. ಈ ಬಗ್ಗೆ ಯಾತ್ರಾರ್ಥಿಗಳು 50/- ಗಳ ಛಾಪಾ ಕಾಗದ (E-Stamp Paper)ಈ ಹಿಂದೆ ಸಹಾಯಧನವನ್ನು ಪಡೆದಿಲ್ಲವೆಂದು ಸ್ವದೃಢೀಕರಿಸಿ ನೋಟರಿ ಮೊಹರು ಮತ್ತು ಸಹಿಯೊಂದಿಗೆ ದೃಢೀಕರಣವನ್ನು ಅಪ್‌ ಲೋಡ್ ಮಾಡತಕ್ಕದ್ದು.
  • ಕಾಶಿಯಾತ್ರ ಕೈಗೊಂಡಿರುವುದನ್ನು ದೃಢೀಕರಿಸುವ ಸಲುವಾಗಿ ಕಾಕಿ ವಿಶ್ವನಾಥಸ್ವಾಮಿ ದೇವಾಲಯದ ಮುಂಬದಿಯಲ್ಲಿ ಯಾತ್ರಾರ್ಥಿಗಳ ಛಾಯಚಿತ್ರ (Photo)/GPS location ತೆಗೆದು ಆಪ್‌ ಲೋಡ್ ಮಾಡತಕ್ಕದ್ದು.
  • ಯಾತ್ರಾರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಅವರ ಬ್ಯಾಂಕ್ ಖಾತೆಯು ಚಾಲ್ತಿಯಲ್ಲಿರಬೇಕು. ಸದರಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ತಪ್ಪದೇ Seed NPCI Active (ಸರ್ಕಾರದ ಮಾರ್ಗಸೂಚಿಯನ್ವಯ ಆಯಾಯಾ ವರ್ಷದ ಅನುದಾನವನ್ನು ಆಯಾಯಾ ವರ್ಷ ಪಾವತಿಸಲು ಅವಕಾಶವಿರುವುದರಿಂದ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ Seed NPCI Active ಅನ್ನು ನಿಗದಿತ ದಿನಾಂಕದೊಳಗೆ ಮಾಡಿಸಿದ್ದಲ್ಲಿ ತಾವೇ ನೇರ ಜವಾಬ್ದಾರರು) ಅವಧಿ ಮುಗಿದ ನಂತರ ಸಹಾಯಧನ ಕೋರಿ ಬರುವ ಅರ್ಹರನ್ನು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ: DAP Subsidy-ರೈತರಿಗೆ ಭರ್ಜರಿ ಗುಡ್ ನ್ಯೂಸ್! DAP ಗೊಬ್ಬರದ ಸಬ್ಸಿಡಿ ಮುಂದುರೆಸಿದ ಕೇಂದ್ರ ಸರಕಾರ!

ಎಷ್ಟು ಸಹಾಯಧನ ನೀಡಲಾಗುತ್ತದೆ?

ಈ ಯೋಜನೆಯಡಿ ಕಾಶಿ ಯಾತ್ರೆ ಕೈಗೊಳ್ಳುವ ಅರ್ಹ ನಾಗರಿಕರಿಗೆ ₹5,000/-ರೂ ಸಹಾಯಧನ ನೀಡಲಾಗುತ್ತದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಸಾರ್ವಜನಿಕರು ಎರಡು ವಿಧಾನವನ್ನು ಅನುಸರಿಸಿ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು ಒಂದು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Solar Pumpset scheme- ಕುಸುಮ್ ಬಿ ಯೋಜನೆಯಡಿ ಶೇ 80 ರಷ್ಟು ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

ಎರಡನೇಯದು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಈ ಅಂಕಣದಲ್ಲಿ ತಿಳಿಸಿರುವ ಹಂತಗಳನ್ನು ಅನುಸರಿಸಿ ನೇರವಾಗಿ ನಿಮ್ಮ ಮೊಬೈಲ್ ನಲ್ಲೇ ಸೇವಾ ಸಿಂಧು ಪೋಟಲ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

kashi trip

ಅರ್ಜಿ ಸಲ್ಲಿಸಲು ದಾಖಲಾತಿಗಳು:

ಗುರುತಿನ ಚೀಟಿ/Identity card
ವಿಳಾಸದ ಪುರಾವೆ/Address proof
ಬ್ಯಾಂಕ್ ಪಾಸ್ ಪುಸ್ತಕ/Bank pass book
ಛಾಪಾ ಕಾಗದ/bond paper
ಪೋಟೋ/Photo

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

Step-1: ಮೊದಲು ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

Step-2: ನಂತರ ಇಲ್ಲಿ “ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾ ದಾಯದತ್ತಿಗಳ ಇಲಾಖೆ” ಬಟನ್ ಮೇಲೆ ಕ್ಲಿಕ್ ಮಾಡಿ “ಕಾಶಿ ಯಾತ್ರೆ” ಎಂದು ಆಯ್ಕೆ ಮಾಡಿ ಲಾಗಿನ್ ಅಗಿ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Free sewing machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ವೆಬ್ಸೈಟ್ ಲಿಂಕ್-

https://itms.kar.nic.in/hrcehome/index.php

RELATED ARTICLES
- Advertisment -

Most Popular

Recent Comments