Sunday, February 9, 2025
No menu items!
HomeAgricultureCrop Insurance- ಫಸಲ್ ಭೀಮಾ ಯೋಜನೆಯಡಿ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಬಿಡುಗಡೆ!

Crop Insurance- ಫಸಲ್ ಭೀಮಾ ಯೋಜನೆಯಡಿ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಬಿಡುಗಡೆ!

ಪ್ರಧಾನ ಮಂತ್ರಿಯ ಫಸಲ ಭೀಮಾ ಯೋಜನೆಯಡಿ(Fasal Bhima Yojana)) 2023-24ನೇ ಸಾಲಿನಲ್ಲಿ ಮುಂಗಾರು ಬೆಳೆ ವಿಮೆಗೆ ಅರ್ಹವಾಗಿರುವ ರೈತರ ಖಾತೆಗೆ ₹2,333 ಲಕ್ಷ ಬೆಳೆ ವಿಮೆ ಪರಿಹಾರವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ.

2023-24ನೇ ವರ್ಷದ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 3584 ರೈತರ ಬ್ಯಾಂಕ್ ಖಾತೆಗೆ ₹2,333 ಲಕ್ಷ ಬೆಳೆ ವಿಮೆ(bele vime) ಪರಿಹಾರವನ್ನು ನೇರವಾಗಿ ಜಮಾ ಮಾಡಲಾಗಿದೆ.

ಇದನ್ನೂ ಓದಿ: Ration Card Correction: ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದಂತೆ, ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ, ಮಾವು ಮತ್ತು ದಾಳಿಂಬೆ ತೋಟಗಾರಿಕೆ ಬೆಳೆಗಳಿಗೆ ಸೇರಿದ 3648 ರೈತರಿಗೆ ₹226.99 ಲಕ್ಷ ಬೆಳೆ ವಿಮೆ ಪರಿಹಾರವನ್ನು ಅವರ ಖಾತೆಗೆ ಪಾವತಿಸಲಾಗಿದೆ.

Crop Survey details-ಬೆಳೆ ವಿಮೆ ಪರಿಹಾರವನ್ನು ಪಡೆದುಕೊಳ್ಳಲು ತಪ್ಪದೇ ಬೆಳೆ ಸಮೀಕ್ಷೆಯನ್ನು ಮಾಡಿಸಿಕೊಳ್ಳಲು ಸೂಚನೆ ನೀಡಿದೆ.

ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಬೆಳೆ ವಿಮೆ ಪರಿಹಾರದ ಕುರಿತು ರೈತರಿಗೆ ಸೂಚನೆ ನೀಡಿದ್ದು, ಎಲ್ಲ ರೈತರೂ ಫಸಲ್ ಭೀಮಾ ಯೋಜನೆಯಡಿ ಅರ್ಜಿ ಸಲ್ಲಿಸಿ ಬೆಳೆ ವಿಮೆ ಪರಿಹಾರವನ್ನು ಪಡೆಯಲು ಕೃಷಿ ಇಲಾಖೆ ನಡೆಸುವ ಬೆಳೆ ಸಮೀಕ್ಷೆಯನ್ನು ಸೂಕ್ತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Power Tiller Subsidy- ಶೇ.90% ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ ಆಹ್ವಾನ!

crop loan

ಬೆಳೆ ವಿಮೆ ಯೋಜನೆಯಡಿ ಬೆಳೆ ಪರಿಹಾರ ಪಡೆಯಲು ಬೆಳೆ ಮಾಹಿತಿ ಮತ್ತು ಬೆಳೆ ಸಮೀಕ್ಷೆಯ ಮಾಹಿತಿ ಸಿದ್ಧವಾಗಿದೆಯೇ ಎಂಬುದೇ ಮುಖ್ಯ, ಆದ್ದರಿಂದ ಎಲ್ಲಾ ರೈತರು ತಮ್ಮ ಬೆಳೆ ಮಾಹಿತಿ ಸರಿಯಾಗಿ ಮತ್ತು ಸೂಕ್ತವಾಗಿ ಬೆಳೆ ಸಮೀಕ್ಷೆಯಲ್ಲಿ ದಾಖಲಿಸಿಕೊಳ್ಳಬೇಕೆಂದು ಸಲಹೆ ನೀಡಲಾಗಿದೆ.

Crop Insurance Status check-ಬೆಳೆ ವಿಮೆ ಹಣ ಜಮಾ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ನೋಡುವುದು ಹೇಗೆ?

ರಾಜ್ಯ ಸರಕಾರವು ಬೆಳೆ ವಿಮೆ ಯೋಜನೆಯ ಅರ್ಜಿ ವಿಲೇವಾರಿಯಲ್ಲಿ ಪಾರದರ್ಶಕತೆ ಸಾಧಿಸಲು ಸಂರಕ್ಷಣೆ ತಂತ್ರಾಂಶವನ್ನು ಜಾರಿಗೆ ತರಿದ್ದು, ರೈತರು ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.

ಇದನ್ನೂ ಓದಿ: Railway jobs-2024: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ! ರೈಲ್ವೆ ಇಲಾಖೆಯಿಂದ 32,438 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ!

Step-1: ಮೊದಲು ಈ ಲಿಂಕ್ Check Crop Insurance Status in Mobile ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಅಧಿಕೃತ Crop Insurance Scheme ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ತದನಂತರದಲ್ಲಿ ಈ ಪೇಜ್ ನಲ್ಲಿ ವರ್ಷ(Year) “2023-24” ಎಂದು ಹಾಗೂ ಋತು(Select Insurance Season), ಮುಂಗಾರು(Kharif) ಎಂದು ಸೆಲೆಕ್ಟ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Ration card list-ಆಹಾರ ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿ ಬಿಡುಗಡೆ!ನಿಮ್ಮ ಹೆಸರು ಇದಿಯಾ ಚೆಕ್ ಮಾಡಿಕೊಳ್ಳಿ!

bele vime

Step-3: ನಂತರ ಈ ಪೇಜ್ ನಲ್ಲಿ ಕೆಳಗೆ ಕಾಣುವ “Farmers” ಕಾಲಂನಲ್ಲಿ “Crop Insurance Details On Survey no” ಎಂಬ ಆಯ್ಕೆಯ ಮೇಲೆ ಒತ್ತಿ ಮುಂದುವರೆಯಬೇಕು.

Step-4: ನಂತರ ಈ ಪುಟದಲ್ಲಿ ನಿಮ್ಮ ಜಿಲ್ಲೆ(District), ತಾಲ್ಲೂಕು(Taluk), ಹೋಬಳಿ(Hobli), ಹಳ್ಳಿ(Village), ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ವೆ ಸಂಬರ್ ನಲ್ಲಿ ಲಭ್ಯವಿರುವ Hissa ನಂಬರ್ ಗಳು ಕಾಣಿಸುತ್ತವೆ. ಇಲ್ಲಿ ಒಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದಾಗ ಆ ಸರ್ವೆ ನಂಬರ್ ನ ಬೆಳೆ ವಿಮೆ ಅರ್ಜಿ ನಂಬರ್ ತೋರಿಸುತ್ತದೆ ಅದನ್ನು ಒಂದು ಕಡೆ ನಮೂದಿಸಿಟ್ಟುಕೊಳ್ಳಿ.

ಇದನ್ನೂ ಓದಿ: Kashi Yatra Trip- ಸರಕಾರದಿಂದ ಕಾಶಿ ಯಾತ್ರೆಗೆ ₹5,000/- ಸಹಾಯಧನ ಪಡೆಯಲು ಅರ್ಜಿ!

Crop insurance amount (2)

Step-5: ಅರ್ಜಿ ನಂಬರ್ ಅನ್ನು ತೆಗೆದುಕೊಂಡ ನಂತರ ಅದೆ ಪುಟದ ಬಲಬದಿಯ ಮೇಲೆ ತೋರಿಸುವ “Home” ಆಯ್ಕೆಯನ್ನು ಕ್ಲಿಕ್ ಮಾಡಿ ಇಲ್ಲಿ “Farmers” ಕಾಲಂನಲ್ಲಿ “check status” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-6: ನಂತರ ಅರ್ಜಿ ಸಂಖ್ಯೆ(Application no) ಹಾಗೂ ಕ್ಯಾಪ್ಚರ್ ಕೋಡ್(Capture code) ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಕೆಳಗೆ ಅರ್ಜಿಯ ವಿವರ ಮತ್ತು ಬೆಳೆ ವಿಮೆ ಜಮಾ ವಿವರ ತೋರಿಸುತ್ತದೆ. ಎಷ್ಟು ಹಣ ಜಮಾ ಅಗಿದೆ? ಯಾವ ದಿನಾಂಕ? ಬ್ಯಾಂಕ್ ಖಾತೆ ವಿವರ ತೋರಿಸುತ್ತದೆ.

ಇದನ್ನೂ ಓದಿ: Anganwadi Centre Job-ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಸೇರಿ ಒಟ್ಟು 1,143 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!

RELATED ARTICLES
- Advertisment -

Most Popular

Recent Comments