Thursday, February 13, 2025
No menu items!
HomeNewsPM Kisan Yojana- ಕಿಸಾನ್ ಸಮ್ಮಾನ್ 19ನೇ ಕಂತಿನ ಅರ್ಥಿಕ ನೆರವು ಪಡೆಯಲು ಅರ್ಹರಿರುವ ರೈತರ...

PM Kisan Yojana- ಕಿಸಾನ್ ಸಮ್ಮಾನ್ 19ನೇ ಕಂತಿನ ಅರ್ಥಿಕ ನೆರವು ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(Pradhan Mantri Kisan Samman Nidhi Yojana) ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 19ನೇ ಕಂತಿನ ಹಣವನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ ಈ ರೈತರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಲು ಕೆಳಗೆ ನೀಡಿರುವ ಕ್ರಮಗಳನ್ನು ಅನುಸರಿಸಬೇಕು.

ಭಾರತ ಸರ್ಕಾರದ ಕೃಷಿ ಆಧಾರಿತ ಜೀವನವನ್ನು ಬೆಂಬಲಿಸಿರುವ ಮಹತ್ವದ ಯೋಜನೆಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ (PM Kisan)ನಿಧಿ ಯೋಜನೆ ಒಂದಾಗಿದೆ ಈ ಅರ್ಹ ರೈತರ ಪಟ್ಟಿಯು ವಿವಿಧ ದಾಖಲೆಗಳನ್ನು ಪರಿಶೀಲಿಸಿ ತಯಾರು ಮಾಡಿದ್ದು ರೈತರು ತ ಅಧಿಕೃತ ವೆಬ್ಸೈಟ್ ನಲ್ಲಿ ಪಟ್ಟಿಯನ್ನು ನೋಡಬಹುದು.

ಇದನ್ನೂ ಓದಿ: Crop Insurance- ಫಸಲ್ ಭೀಮಾ ಯೋಜನೆಯಡಿ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಬಿಡುಗಡೆ!

ಈ ಯೋಜನೆಯ ಅಡಿಯಲ್ಲಿ(PM Kisan scheme) ದೇಶದಲ್ಲಿರುವ ರೈತರಿಗೆ ಪ್ರತಿ ವರ್ಷ 6,000 ಹಣವನ್ನು ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮ ಮಾಡಲಾಗುತ್ತದೆ ಅದೇ ರೀತಿ 2025 ರಲ್ಲಿ 19ನೇ ಕಂತಿನ ಹಣ ಪಾವತಿಯ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ರೈತರ ಹೊಸ ಪಟ್ಟಿ ಬಿಡುಗಡೆ ಕುರಿತು ತಮ್ಮ ಮೊಬೈಲ್ನಲ್ಲೇ 19 ನೇ ಕಂತಿನ ಹಣ ಪಡೆಯಲು(PM Kisan 19th payment status) ಅರ್ಹರಿರುವ ರೈತರ ಪಟ್ಟಿ ಚೆಕ್ ಮಾಡುವುದು ಹೇಗೆ? ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Ration Card Correction: ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

list of farmers eligible for PM Kisan 19th installment-ಪಿಎಂ ಕಿಸಾನ್ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ನೋಡುವ ವಿಧಾನವನ್ನು ಕೆಳಗೆ ತಿಳಿಸಲಾಗಿದೆ:

ಕೇಂದ್ರ ಸರಕಾರದ ಅಧಿಕೃತ ಪಿ ಎಂ ಕಿಸಾನ್ ತಂತ್ರಾಂಶವನ್ನು ಭೇಟಿ ಮಾಡಿ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ 19ನೇ ಕಂತಿನ ಹಣ ಪಡೆಯಲು ಬಿಡುಗಡೆ ಮಾಡಿರುವ ಪರಿಷ್ಕೃತ ರೈತರ ಪಟ್ಟಿ ಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ಒಮ್ಮೆ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Power Tiller Subsidy- ಶೇ.90% ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ ಆಹ್ವಾನ!

ವಿಧಾನ-1: ಮೊದಲು ಈ ಲಿಂಕ್ ಮೇಲೆ PM-Kisan farmers List ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

kisan samman

ಇದನ್ನೂ ಓದಿ: Kashi Yatra Trip- ಸರಕಾರದಿಂದ ಕಾಶಿ ಯಾತ್ರೆಗೆ ₹5,000/- ಸಹಾಯಧನ ಪಡೆಯಲು ಅರ್ಜಿ!

ವಿಧಾನ-2: ನಂತರ ಇಲ್ಲಿ ಕಾಣುವ ಬಲ ಬದಿಯ ಮುಖಪುಟದ ಕೊನೆಯಲ್ಲಿ ಕಾಣುವ “Beneficiary List” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-3: ತದನಂತರ “Beneficiary List” ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ಈ ಪೇಜ್ ನಲ್ಲಿ ರಾಜ್ಯ(State), ಕರ್ನಾಟಕ(Karnataka) ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ನಿಮ್ಮ ಹಳ್ಳಿಯ ಹೆಸರನ್ನು ಸೆಲೆಕ್ಟ್ ಮಾಡಿ “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಹ ರೈತರ ಪಟ್ಟಿ open ಆಗುತ್ತದೆ. ಒಮ್ಮೆ ಸಂಪೂರ್ಣ ಪಟ್ಟಿಯನ್ನು ನೋಡಿ ನಿಮ್ಮ ಹೆಸರು ಪಟ್ಟಿಯಲ್ಲಿ ಇದಿಯಾ? ಎಂದು ಚೆಕ್ ಮಾಡಿಕೊಳ್ಳಿ.

ಇದನ್ನೂ ಓದಿ: Railway jobs-2024: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ! ರೈಲ್ವೆ ಇಲಾಖೆಯಿಂದ 32,438 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ!

PM Kisan 19th installment-19ನೇ ಕಂತಿನ ಹಣ ಪಡೆಯಲು ತಪ್ಪದೇ ಈ ಕೆಲಸ ಮಾಡಿ:

ಪಿಎಂ ಕಿಸಾನ್ ಯೋಜನೆಯಲ್ಲಿ 19ನೇ ಕಂತಿನ ಹಣವನ್ನು ಪಡೆಯಲು, ರೈತರು ತಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಿ, ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಳ್ಳಬೇಕು ಹಾಗೂ ಅವರ ಹೆಸರು ಮತ್ತು ಜಮೀನಿನ ವಿವರಗಳು ಸಮನ್ವಯ ಹೊಂದಿರಬೇಕು.

ಈ ಯೋಜನೆಯಲ್ಲಿ ಹಣ ಪಡೆಯಲು ಅರ್ಹರಾಗಿರುವವರು, ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಲು ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿ, ಹಾಗೂ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: Ration card list-ಆಹಾರ ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿ ಬಿಡುಗಡೆ!ನಿಮ್ಮ ಹೆಸರು ಇದಿಯಾ ಚೆಕ್ ಮಾಡಿಕೊಳ್ಳಿ!

ಅರ್ಜಿ ಸಲ್ಲಿಸಿದ ಬಳಿಕ, ನಿಮ್ಮ ಜಮೀನಿನ ಪಹಣಿಯಲ್ಲಿ ಹೆಸರು ಬದಲಿಸಿದರೆ, ಜಮೀನಿನ ದಾಖಲೆಗಳೊಂದಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿಯಾಗಿ ನಿಮ್ಮ ಪಿಎಂ ಕಿಸಾನ್ ಅರ್ಜಿಯಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಿ.

In which month the 19th installment deposit- ಈ ತಿಂಗಳಲ್ಲಿ 19ನೇ ಕಂತಿನ ಹಣ ರೈತರ ಖಾತೆಗೆ ಜಮಾ!

ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಮಧ್ಯದಲ್ಲಿ, ಕೇಂದ್ರ ಸರಕಾರ ಅರ್ಹ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮಾಡುವ ಮೂಲಕ ಪ್ರತಿ ವರ್ಷ ಕೊನೆಯ ಕಂತಿನ ಹಣವನ್ನು ಜಮಾ ಮಾಡುತ್ತದೆ. 19ನೇ ಕಂತಿನ ಹಣವೂ ಇದೇ ಅವಧಿಯಲ್ಲಿ ರೈತರ ಖಾತೆಗೆ ಜಮಾ ಮಾಡುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.

RELATED ARTICLES
- Advertisment -

Most Popular

Recent Comments