ತೋಟಗಾರಿಕೆ ಮತ್ತು ಕೃಷಿ ಇಲಾಖೆಯ(Department of Horticulture and Agriculture) ವತಿಯಿಂದ ಸರ್ಕಾರವು ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಶೇ 90% ರಷ್ಟು ಸಬ್ಸಿಡಿಯಲ್ಲಿ ವಿವಿಧ ಯಂತ್ರೋಪಕರಣಗಳನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಧುನಿಕ ಕೃಷಿ ಉಪಕರಣಗಳಲ್ಲಿ ಮಿನಿ ಪವರ್ ಟಿಲ್ಲರ್ ಒಂದಾಗಿದ್ದು, ಸಣ್ಣ ಮತ್ತು ಮಧ್ಯಮ ಕುಟುಂಬದ ರೈತರ ಕೃಷಿ ಚಟುವಟಿಕೆಗಳು, ಸಮಯ, ಮತ್ತು ಶ್ರಮ ಉಳಿತಾಯ ಮಾಡಲು ಈ ಉಪಕರಣಗಳು ಅನುಕೂಲವಾಗಿದ್ದು, ಕಡಿಮೆ ಇಂಧನ ಬಳಕೆ(Fuel consumption) ಮತ್ತು ನಿರ್ವಹಣಾ ವೆಚ್ಚದೊಂದಿಗೆ ಈ ಯಂತ್ರವು ರೈತರ ಆರ್ಥಿಕ ಪರಿಸ್ಥಿತಿಗೆ ಲಾಭದಾಯಕವಾಗಿದೆ.
ಭಾರತೀಯ ಆರ್ಥಿಕತೆಯಲ್ಲಿ ಕೃಷಿಯು ಮುಖ್ಯ ಪಾತ್ರ ವಹಿಸುತ್ತದೆ. ಹೆಚ್ಚಿನ ಜನರು ಕೃಷಿಯ ಮೇಲೆಯೇ ಅವಲಂಬಿತ ವಾದ್ದರಿಂದ ಈ ಸಹಾಯವನ್ನು ಪಡೆದುಕೊಳ್ಳಲು ಯಾರು ಅರ್ಜಿಯನ್ನು ಸಲ್ಲಿಸಬೇಕು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಬೇಕಾದ ಅಗತ್ಯ ದಾಖಲೆಗಳೇನು? ಇನ್ನು ಹೆಚ್ಚಿನ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
Details of machinery being given in subsidy are as follows-ಸಬ್ಸಿಡಿಯಲ್ಲಿ ನೀಡುತ್ತಿರುವ ಯಂತ್ರೋಪಕರಣಗಳ ವಿವರ ಇಂತಿದೆ:
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ ಶೇ50% ರಿಂದ ಶೇ.90% ರಷ್ಟು ಸಹಾಯಧನ ಅಡಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ರೈತರು ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು,
ಇದನ್ನೂ ಓದಿ: Kashi Yatra Trip- ಸರಕಾರದಿಂದ ಕಾಶಿ ಯಾತ್ರೆಗೆ ₹5,000/- ಸಹಾಯಧನ ಪಡೆಯಲು ಅರ್ಜಿ!

ಮಿನಿ ಟ್ರ್ಯಾಕ್ಟರ್(Mini Tractor), ಟ್ರ್ಯಾಕ್ಟರ್ ಚಾಲಿತ ಎಂ.ಬಿ.ಪ್ಲೋ(Tractor mb plough subsidy), ಪವರ್ ಟಿಲ್ಲರ್(Power tiller), ರೋಟೋವೇಟರ್(rotavator),ಡಿಸ್ಕ್ ಹ್ಯಾರೋ(Disc harrow), ಡಿಸ್ಕ್ ಫ್ಲೋ(Disc plough),ಸೇರಿದಂತೆ ಇನ್ನಿತರ ಕೃಷಿ ಯಂತ್ರಗಳನ್ನು ಪಡೆಯಲು ಅವಕಾಶವಿರುತ್ತದೆ.
Machine Tool wise Subsidy Information-ಯಂತ್ರ ಉಪಕರಣವಾರು ಸಹಾಯಧನ ಮಾಹಿತಿ:
1) ಮಿನಿ ಟ್ರ್ಯಾಕ್ಟರ್(Mini Tractor):
ಮಿನಿ ಟ್ರ್ಯಾಕ್ಟರ್ ಅನ್ನು ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗರಿಷ್ಠ 3 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲಾಗುತ್ತದೆ. ಸಾಮಾನ್ಯ ವರ್ಗದ ರೈತರಿಗೆ 75,000/- ರೂ ಸಹಾಯಧನವನ್ನು ಪಡೆಯಬಹುದು. ಈ ಉಪಕರಣವು ಮಣ್ಣನ್ನು ಹದಗೊಳಿಸಲು ಹಾಗೂ ಭೂಮಿಯನ್ನು ಸಮತಟ್ಟಾಗಿ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Ration card list-ಆಹಾರ ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿ ಬಿಡುಗಡೆ!ನಿಮ್ಮ ಹೆಸರು ಇದಿಯಾ ಚೆಕ್ ಮಾಡಿಕೊಳ್ಳಿ!
2) ಪವರ್ ಟಿಲ್ಲರ್(Power tiller) :
ಪವರ್ ಟಿಲ್ಲರ್ ಪಡೆಯಲು ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಹಾಗೂ ಗರಿಷ್ಠ 72,500/- ರೂಪಾಯಿ ವರೆಗೆ ಸಹಾಯಧನ ಪಡೆಯಬಹುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 90ರಷ್ಟು ಸಹಾಯಧನ, ಗರಿಷ್ಠ 1 ಲಕ್ಷ ರೂ ಸಬ್ಸಿಡಿ ದೊರೆಯುತ್ತದೆ.
3) ಟ್ರ್ಯಾಕ್ಟರ್ ಚಾಲಿತ ಎಂ.ಬಿ. ಫ್ಲೋ ಫಿಕ್ಸ್ಡ್(Tractor mb plough):
ಸಾಮಾನ್ಯ ವರ್ಗದವರಿಗೆ 14,100/- ರೂ, ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 25,800/- ರೂ ಸಬ್ಸಿಡಿ ದೊರೆಯುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಂ.ಬಿ. ಫ್ಲೋ 25,830 ರೂ ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 51,300/- ರೂ ಅರ್ಥಿಕ ನೆರವು ಪಡೆಯಬಹುದು.
4) ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಹ್ಯಾರೋ(Disc harrow):
ಸಾಮಾನ್ಯ ವರ್ಗದವರಿಗೆ 29,000-35,000 ರೂಪಾಯಿಯವರೆಗೆ ದೊರೆಯುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52,200/- ದಿಂದ 63,000/- ರೂ ಸಬ್ಸಿಡಿಯಲ್ಲಿ ದೊರೆಯುತ್ತದೆ.
ಇದನ್ನೂ ಓದಿ: Anganwadi Centre Job-ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಸೇರಿ ಒಟ್ಟು 1,143 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!
5) ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಫ್ಲೋ(Disc plough):
ಈ ಉಪಕರಣ ಪಡೆಯಲು ಸಾಮಾನ್ಯ ವರ್ಗದವರಿಗೆ 29,000/- ರಿಂದ 36,500/- ರೂಪಾಯಿ ಗಳವರೆಗೆ ಪಡೆಯಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52,200/- ರೂಪಾಯಿಯಿಂದ 65,700/- ರೂಪಾಯಿಯವರೆಗೆ ಸಬ್ಸಿಡಿಯನ್ನು ಪಡೆಯಬಹುದು.
ಇದನ್ನೂ ಓದಿ: Solar Pumpset scheme- ಕುಸುಮ್ ಬಿ ಯೋಜನೆಯಡಿ ಶೇ 80 ರಷ್ಟು ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
Where to apply for mini power tiller-ಮಿನಿ ಪವರ್ ಟಿಲ್ಲರ್ ಪಡೆಯಲು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು?
ಅರ್ಹ ರೈತರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: DBT Status-ನಿಮ್ಮ ಮೊಬೈಲ್ ನಲ್ಲಿ ಈ ಒಂದು ಅಪ್ಲಿಕೇಶನ್ ಇದ್ದರೆ ಸಾಕು! ಎಲ್ಲಾ ಯೋಜನೆಯ ಹಣ ಜಮಾ ವಿವರ ಪಡೆಯಬಹುದು!
What are the documents required to get mini power tiller-ಮಿನಿ ಪವರ್ ಟಿಲ್ಲರ್ ಪಡೆಯಲು ಅಗತ್ಯ ದಾಖಲೆಗಳೇನು?
1) ಅರ್ಜಿದಾರರ ಆಧಾರ್ ಕಾರ್ಡ/Aadhar Card
2) ಪೋಟೋ/Photocopy
3) ಬ್ಯಾಂಕ್ ಪಾಸ್ ಬುಕ್/bank Passbook
4) ರೇಶನ್ ಕಾರ್ಡ/Ration card
5) ಪಹಣಿ/RTC
6) ಹಿಡುವಳಿ ಪ್ರಮಾಣ ಪತ್ರ/Tenancy Certificate
7) ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Cast and Income card
ಇದನ್ನೂ ಓದಿ: DAP Subsidy-ರೈತರಿಗೆ ಭರ್ಜರಿ ಗುಡ್ ನ್ಯೂಸ್! DAP ಗೊಬ್ಬರದ ಸಬ್ಸಿಡಿ ಮುಂದುರೆಸಿದ ಕೇಂದ್ರ ಸರಕಾರ!
Online application link-ಇಲ್ಲಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್: Apply Now