ಅನ್ನ ಭಾಗ್ಯ ಯೋಜನೆ, ಗೃಹಲಕ್ಷ್ಮಿ, ಸಂಧ್ಯಾಸುರಕ್ಷ ಸೇರಿದಂತೆ ಎಲ್ಲಾ ಯೋಜನೆಯ ನೇರ ನಗದು ವರ್ಗಾವಣೆಯ ಮೂಲಕ ಹಣ(DBT Status check) ನಿಮ್ಮ ಖಾತೆಗೆ ಜಮಾ ಆಗಿದೆಯೇ ?ಎಷ್ಟು ಹಣ ಜಮಾ ಆಗಿದೆ? ಯಾವ ದಿನಾಂಕದಂದು ಜಮಾ ಆಗಿದೆ? ಈ ಕುರಿತು ಸ್ಟೇಟಸ್ ಚೆಕ್ ಅನ್ನು ಈ ಒಂದು ಅಪ್ಲಿಕೇಶನ್ ಮೂಲಕ ಮಾಡಬಹುದು.
ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅನ್ನ ಭಾಗ್ಯ ಯೋಜನೆ(Annabhagya DBT Status) ಅಡಿಯಲ್ಲಿ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದರು. ಇದರಂತೆಯೇ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದು 5kg ಮತ್ತು ಹೆಚ್ಚುವರಿ 5kg ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34 ರೂಗಳಂತೆ ಪ್ರತಿ ಸದಸ್ಯರಿಗೆ 170 ರೂ. ನೀಡಲಾಗುತ್ತಿದೆ.
ಇದನ್ನೂ ಓದಿ: Anganwadi Centre Job-ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಸೇರಿ ಒಟ್ಟು 1,143 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!
ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ 10 ಕೆಜಿ ಅಕ್ಕಿ ವಿತರಿಸುವ ಭರವಸೆಯನ್ನು ನೀಡಿತ್ತು. ಆದರೆ ಅದಕ್ಕೆ ಪೂರಕವಾದಷ್ಟು ಅಕ್ಕಿ ಲಭ್ಯವಾಗದ ಕಾರಣ ಹೆಚ್ಚುವರಿ 5 kg ಅಕ್ಕಿ ಬದಲಿಗೆ ಅನ್ನಭಾಗ್ಯ ಆಳ ನೀಡುವ ಯೋಜನೆ ರೂಪಿಸಿದೆ.
ಅದರಂತೆ ಬಿಪಿಎಲ್ ಕಾರ್ಡ್ (BPL card)ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 170 ರೂ ಗಳನ್ನು ನೇರ ನಗದು ವರ್ಗಾವಣೆ ಮೂಲಕ DBT ಹಣ ಜಮ ಮಾಡಲಾಗುತ್ತಿದ್ದು. ಈ ಯೋಜನೆಯ ಹಣ ಇಲ್ಲಿಯವರೆಗೂ ಎಷ್ಟು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ? ಹಾಗೂ ಯಾವ ಯಾವ ತಿಂಗಳು ಎಷ್ಟು ಹಣ ಜಮಾ ಆಗಿದೆ ?ಮತ್ತು ಯಾವ ದಿನಾಂಕದಂದು ಹಣ ಜಮಾ ಆಗಿದೆ? ಎನ್ನುವ ಸಂಪೂರ್ಣವಾದ ವಿವರವನ್ನು ಹೇಗೆ ತಿಳಿಯುವುದು ಎಂದು ಈ ಲೇಖನದಲ್ಲಿ ತಿಳಿಸಿದ್ದೇವೆ.
ಇದನ್ನೂ ಓದಿ: Revenue Map-ಉಚಿವಾಗಿ ಮೊಬೈಲ್ ನಲ್ಲೇ ನಿಮ್ಮ ಹಳ್ಳಿಯ ಕಂದಾಯ ನಕ್ಷೆ ಡೌನ್ಲೋಡ್ ಮಾಡಿ!
DBT Karnataka Mobile App- ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಎಷ್ಟು ಹಣ ಜಮಾ ಆಗಿದೆ? ಎನ್ನುವ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ತಿಳಿಯಿರಿ:
ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ಅರ್ಹ BPL card ಹೊಂದಿರುವವರಿಗೆ ನೇರ ನಗದು ವರ್ಗಾವಣೆ ಮೂಲಕ ಅನ್ನ ಭಾಗ್ಯ ಯೋಜನೆಯ ಹಣದ ಜಮಾ ವಿವರವನ್ನು, ಗೃಹಲಕ್ಷ್ಮಿ, ಸಂದ್ಯಸುರಕ್ಷಾ ಸೇರಿದಂತೆ ಇತರೆ ಯೋಜನೆಗಳ ಹಣ ಜಮಾ ವಿವರವನ್ನು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದು.
Step-1: ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಡಿ ಬಿ ಟಿ ಕರ್ನಾಟಕ ಮೊಬೈಲ್ (Link- DBT karnataka mobile application)ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: DBT Status-ನಿಮ್ಮ ಮೊಬೈಲ್ ನಲ್ಲಿ ಈ ಒಂದು ಅಪ್ಲಿಕೇಶನ್ ಇದ್ದರೆ ಸಾಕು! ಎಲ್ಲಾ ಯೋಜನೆಯ ಹಣ ಜಮಾ ವಿವರ ಪಡೆಯಬಹುದು!

Step-2: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸುವ ಮೂಲಕ ಓಟಿಪಿ otp ಯನ್ನು ಪಡೆಯಬೇಕು. ಓಟಿಪಿಯನ್ನು ಪಡೆಯಲು ಓಟಿಪಿ ಪಡೆಯಿರಿ buttom ಮೇಲಿ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಗೆ ಬಂದಂತಹ 4 ಅಂಕಿಯ ಒಟಿಪಿಯನ್ನು ನಮೂದಿಸಬೇಕು.
ಇದನ್ನೂ ಓದಿ: DAP Subsidy-ರೈತರಿಗೆ ಭರ್ಜರಿ ಗುಡ್ ನ್ಯೂಸ್! DAP ಗೊಬ್ಬರದ ಸಬ್ಸಿಡಿ ಮುಂದುರೆಸಿದ ಕೇಂದ್ರ ಸರಕಾರ!

Step-3: ನಂತರ ನಿಮ್ಮ ಹೆಸರು. ನಿಮ್ಮ ವಿಳಾಸ. ಮತ್ತು ಇತರೆ ವೈಯಕ್ತಿಕ ಮಾಹಿತಿಯನ್ನು ಕೇಳುತ್ತದೆ
ಅವಶ್ಯಕವಾದ ಎಲ್ಲ ಮಾಹಿತಿಗಳನ್ನು fill ಮಾಡಿದ ನಂತರ ಇದೇ ಪೇಜ್ ನ ಕೊನೆಯಲ್ಲಿ ನಿಮ್ಮ ಮೊಬೈಲ್ ನಂಬರನ್ನು ಹಾಕಿ ಕೊನೆಯಲ್ಲಿ ಕಾಣುವ ಸರಿ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಮಾಡುವುದಕ್ಕೆ ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: DCC Bank Jobs-ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ನೇಮಕಾತಿ!ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
Step-4: ಪಾಸ್ವರ್ಡ್ ನ ರಚನೆ ಮಾಡಿಕೊಂಡ ನಂತರ ಅದನ್ನು ಬಳಸಿಕೊಂಡು ಲಾಗಿನ್ ಆಗಬೇಕು.

Step-5: ಅಪ್ಲಿಕೇಶನ್ ಗೆ ಲಾಗಿನ್ ಆದ ನಂತರ ಮುಖಪುಟದಲ್ಲಿ ಲೆಫ್ಟ್ ಸೈಡ್ ನಲ್ಲಿ ಕಾಣುವ “ಪಾವತಿ ಸ್ಥಿತಿ “ಬಟನ್ ಮೇಲೆ ಕ್ಲಿಕ್ ಮಾಡಿ. ಅನ್ನಭಾಗ್ಯ ಯೋಜನೆ ಆಪ್ಷನ್ (option)ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ? ಯಾವ ಯಾವ ತಿಂಗಳಿನಲ್ಲಿ ಹಣ ಜಮಾ ಆಗಿದೆ? ಮತ್ತು ಹಣ ಜಮಾದ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆಯನ್ನು ತೋರಿಸುತ್ತದೆ.

Bank Account Adhar link-ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ನ ಮತ್ತೊಂದು ಉಪಯೋಗ?
ಇದೇ ಅಪ್ಲಿಕೇಶನ್ ನ ಸಹಾಯದಿಂದ ಆಧಾರ್ ಲಿಂಕ್ ಮಾಹಿತಿಯನ್ನು ಪಡೆದುಕೊಳ್ಳಬಹುದು ನೀವು ರಚಿಸಿರುವ ನಾಲ್ಕು ಅಂಕಿಯ ಪಾಸ್ವರ್ಡ್ ಅನ್ನು ಬಳಸಿಕೊಂಡು DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಆಗಬೇಕು. ಲಾಗಿನ್ ಆದ ಬಳಿಕ ಅಪ್ಲಿಕೇಶನ್ ನಲ್ಲಿ “seeding status of other in bank account” option ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ವಿವರನ್ನು ತೋರಿಸುತ್ತದೆ.
ಇದನ್ನೂ ಓದಿ: Solar Pumpset scheme- ಕುಸುಮ್ ಬಿ ಯೋಜನೆಯಡಿ ಶೇ 80 ರಷ್ಟು ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
“seeding status:” Active” ಎಂದು ತೋರಿಸುತ್ತದೆ. ಆಧಾರ್ ಲಿಂಕ್ ಆಗದಿದ್ದರೆ “inactive” ಎಂದು ತೋರಿಸುತ್ತದೆ ಮತ್ತು ಯಾವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎನ್ನುವ ಮಾಹಿತಿಯನ್ನು ಸಹ ತೋರಿಸುತ್ತದೆ.