Thursday, February 6, 2025
No menu items!
HomeNewsAnganwadi Centre Job-ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಸೇರಿ ಒಟ್ಟು 1,143 ಹುದ್ದೆಗಳ ಭರ್ತಿಗೆ ಅರ್ಜಿ...

Anganwadi Centre Job-ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಸೇರಿ ಒಟ್ಟು 1,143 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!

ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ(Women and Child Development Department) ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಭಾಗದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಆರಂಭಿಕ ಹಂತದಲ್ಲಿ ಶಿಕ್ಷಣವನ್ನು ನೀಡಲು ರಾಜ್ಯ ಸರಕಾರದಿಂದ ಪ್ರತಿ ಹಳ್ಳಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆದು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಂಗನವಾಡಿ ಕೇಂದ್ರ ಇದು 1975ರಲ್ಲಿ ಸಂಯೋಜಿತ ಮಕ್ಕಳ ಅಭಿವೃದ್ಧಿ ಸೇವೆಗಳು (Integrated Child Development Services)ಯೋಜನೆಯ ಅಂಗವಾಗಿ ಈ ಅಂಗನವಾಡಿಯನ್ನು ಪ್ರಾರಂಭಿಸಿದ್ದು ಮಕ್ಕಳ ಮತ್ತು ಮಹಿಳೆಯರ ಸಮಗ್ರ ಅಭಿವೃದ್ಧಿಯ ಉದ್ದೇಶವಾಗಿದೆ.

ಇದನ್ನೂ ಓದಿ: Revenue Map-ಉಚಿವಾಗಿ ಮೊಬೈಲ್ ನಲ್ಲೇ ನಿಮ್ಮ ಹಳ್ಳಿಯ ಕಂದಾಯ ನಕ್ಷೆ ಡೌನ್ಲೋಡ್ ಮಾಡಿ!

ಅಂಗನವಾಡಿ ಹುದ್ದೆಗಳು ಮಹಿಳಾ ಸಬಲೀಕರಣಕ್ಕೆ(For women empowerment) ಮಾದರಿಯಾಗಿ ಪ್ರವೃತ್ತಿಯಲ್ಲಿರುವ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಸ್ವಂತ ನಿರ್ವಹಣೆಗೆ ಅವಕಾಶ ಒದಗಿಸುತ್ತದೆ. ಈ ಹುದ್ದೆಗಳು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಪೋಷಣೆ ಹಾಗೂ ಮಹಿಳಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಈ ಹುದ್ದೆಗಳಿಗೆ ವಿಶೇಷವಾಗಿ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಆಸಕ್ತಿ ಇರುವ ಆರ್ಹ ಮಹಿಳೆಯರು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳೇನು? ಮಾಸಿಕ ವೇತನವೆಷ್ಟು? ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: DAP Subsidy-ರೈತರಿಗೆ ಭರ್ಜರಿ ಗುಡ್ ನ್ಯೂಸ್! DAP ಗೊಬ್ಬರದ ಸಬ್ಸಿಡಿ ಮುಂದುರೆಸಿದ ಕೇಂದ್ರ ಸರಕಾರ!

Total Vacancies-ಒಟ್ಟು ಹುದ್ದೆಗಳು-1,143

Place of employment-ಉದ್ಯೋಗ ಸ್ಥಳ : ಚಿಕ್ಕಮಗಳೂರು ಜಿಲ್ಲೆ ಕಲಬುರಗಿ, ಬಾಗಲಕೋಟೆ.

Applicatiuon Fee-ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

anganawadi jobs

Information about anganawadi center-ಖಾಲಿ ಇರುವ ಅಂಗನವಾಡಿ ಹುದ್ದೆಗಳ ವಿವರಗಳು:

Anganwadi worker-ಅಂಗನವಾಡಿ ಕಾರ್ಯಕರ್ತೆ:

  • ಅಂಗನವಾಡಿ ಕಾರ್ಯಕರ್ತೆಯೂ ಅಂಗನವಾಡಿ ಕೇಂದ್ರದ ನಾಯಕಿ ಅಥವಾ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.
  • ಅಂಗನವಾಡಿ ಕಾರ್ಯಕರ್ತೆಯು ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ವಿಚಾರದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ.
  • ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.10,000/- ಮಾಸಿಕ ವೇತನವಿರುತ್ತದೆ.

ಇದನ್ನೂ ಓದಿ: DCC Bank Jobs-ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ನೇಮಕಾತಿ!ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

Anganwadi helper-ಅಂಗನವಾಡಿ ಸಹಾಯಕಿ:

  • ಅಂಗನವಾಡಿ ಸಹಾಯಕಿಯು ಅಂಗನವಾಡಿ ಕಾರ್ಯಕರ್ತೆಗೆ ಸಹಾಯ ಮಾಡುತ್ತಾರೆ.
  • ಅಂಗನವಾಡಿ ಸಹಾಯಕಿಯು ಮಕ್ಕಳ ಆರೈಕೆ, ಆಹಾರ ವಿತರಣೆ ಮತ್ತು ದಿನನಿತ್ಯದ ದಿನಚರಿ ಕೆಲಸಗಳಲ್ಲಿ ಕೆಲಸ ನಿರ್ವಹಿಸುತ್ತಾರೆ.
  • ಅಂಗನವಾಡಿ ಸಹಾಯಕಿಯರಿಗೆ ರೂ.5,000/- ಮಾಸಿಕ ವೇತನವಿರುತ್ತದೆ.

Who can apply for Anganwadi job-ಅಂಗನವಾಡಿ ಕೆಲಸಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

Worker-ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಯಾರು ಅರ್ಜಿ ಸಲ್ಲಿಸಬೇಕು?

  • ಕಡ್ಡಾಯವಾಗಿ PUC ಯಲ್ಲಿ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.
  • ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಅಭ್ಯರ್ಥಿಯು ಅರ್ಜಿ ಸಲ್ಲಿಸಲು 18 ವರ್ಷ ತುಂಬಿರಬೇಕು ಮತ್ತು 35 ವರ್ಷದ ಒಳಗಿರಬೇಕು.
  • SSLC ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು.

Anganwadi helper-ಅಂಗನವಾಡಿ ಸಹಾಯಕಿ ಹುದ್ದೆಗೆ:

  • ಅಂಗನವಾಡಿ ಸಹಾಯಕಿಯಾಗಿ ಕಾರ್ಯನಿರ್ವಹಿಸಲು ಕನಿಷ್ಠ10ನೇ ತರಗತಿ ಅಥವಾ ನಾಲ್ಕನೇ ತರಗತಿಯಲ್ಲಿ ತೇರ್ಗಡೆ ಆಗಿರಬೇಕು.
  • ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಅಭ್ಯರ್ಥಿಯು ಅರ್ಜಿ ಸಲ್ಲಿಸಲು 18 ವರ್ಷ ತುಂಬಿರಬೇಕು ಮತ್ತು 35 ವರ್ಷದ ಒಳಗಿರಬೇಕು.

ಇದನ್ನೂ ಓದಿ: Solar Pumpset scheme- ಕುಸುಮ್ ಬಿ ಯೋಜನೆಯಡಿ ಶೇ 80 ರಷ್ಟು ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

what are the Documents-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳೇನು?

  • ಅಭ್ಯರ್ಥಿಯು ಉತ್ತೀರ್ಣರಾಗಿರುವ ಪ್ರಮಾಣ ಪತ್ರ/Marks card
  • ಅಭ್ಯರ್ಥಿಯ ಜನ್ಮ ದಿನ ಪ್ರಮಾಣ ಪತ್ರ/Birth Certificate
  • ಅಭ್ಯರ್ಥಿಯ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್/APL or BPL card
  • ಅಭ್ಯರ್ಥಿಯ ಆಧಾರ್ ಕಾರ್ಡ್/Aadhar card
  • ಅಭ್ಯರ್ಥಿಯ ಫೋಟೋ/Photocopy

Job application link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತಿ ಇರುವ ಅಭ್ಯರ್ಥಿಯು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಮೊದಲು ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ನಂತರ ಇಲ್ಲಿ ಜಿಲ್ಲೆ ಮತ್ತು ತಾಲ್ಲೂಕನ್ನು ಹಾಗೂ “Notification Number/ಅಧಿಸೂಚನೆ ಸಂಖ್ಯೆ”, category ಅನ್ನು ಆಯ್ಕೆ ಮಾಡಿಕೊಂಡು “Submit” ಬಟನ್ ಮೇಲೆ ಕ್ಲಿಕ್ ಮಾಡಿ “Please select the vacancy as per your choice” ನಲ್ಲಿ ಅಯ್ಕೆ ಮಾಡಿಕೊಂಡು ಅಭ್ಯರ್ಥಿಯ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕು.

ಇದನ್ನೂ ಓದಿ: Free sewing machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

Step-3: ಇಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ “Preview” ಬಟನ್ ಮೇಲೆ ಕ್ಲಿಕ್ ಮಾಡಿ ಭರ್ತಿ ಮಾಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದಿಯಾ ಎಂದು ಒಮ್ಮೆ ಚೆಕ್ ಮಾಡಿಕೊಂಡು ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ನಂತರ ಇಲ್ಲಿ ಕ್ಲಿಕ್ ಮಾಡಿ “Upload Your Photo,Signature ಅಪ್ಲೋಡ್ ಮಾಡಲು” ಮತ್ತು “Documents ಗಳನ್ನು ಅಪ್ಲೋಡ್ ಮಾಡಿ” ಈ ಎರಡು ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ ನಿಮ್ಮ Application Id* ಅನ್ನು ಭರ್ತಿ ಮಾಡಿ ನಿಮ್ಮ ಪೋಟೋ ಮತ್ತು ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು.

Step-5: ಕೊನೆಗೆ ಹಿಂದಿನ ಪುಟಕ್ಕೆ ಬಂದು “Print Application/ಅರ್ಜಿ ಮುದ್ರಿಸಲು” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಬೇಕು.

ಇದನ್ನೂ ಓದಿ: Yashswini Yojana-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆ ಪಡೆಯಬಹುದು?ಇಲ್ಲಿದೆ ಸಂಪೂರ್ಣ ಮಾಹಿತಿ!

Selection method-ಅಂಗನವಾಡಿ ಕೆಲಸಕ್ಕೆ ಅರ್ಜಿದಾರರನ್ನು ಆಯ್ಕೆ ಮಾಡುವ ವಿಧಾನ :

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಖಾಲಿಯಿರುವ/ಹೊಸ ಕೇಂದ್ರ ಆರಂಭಿಸುತ್ತಿರುವವರು ಹಾಗೂ ಗ್ರಾಮದಲ್ಲಿ ವಾಸಿಸುತ್ತಿರುವ ಸಹಾಯಕಿಯರ ಇರಬೇಕು. ಅವರು ಕನಿಷ್ಠ 3 ವರ್ಷ ಸೇವೆ ಸಲ್ಲಿಸರಬೇಕು. ಆ ಅಂಗನವಾಡಿ ಕೇಂದ್ರದಿಂದ 3 ಕಿ.ಮೀ. ವ್ಯಾಪ್ತಿಯೊಳಗೆ ವಾಸಿಸುತ್ತಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05/01/2025.

RELATED ARTICLES
- Advertisment -

Most Popular

Recent Comments