ನಮ್ಮ ಭಾರತ ದೇಶದಲ್ಲಿ ಗ್ರಾಮೀಣ ಭಾಗದ ರೈತರಿಗೆ ಎದುರಾಗಿರುವ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದಾದ ಸಮಸ್ಯೆ ಎಂದರೆ ತಮ್ಮ ಜಮೀನಿಗೆ ಹೋಗುವ ದಾರಿ. ರೈತರು ತಮ್ಮ ಮೊಬೈಲ್ ನಲ್ಲಿ ತಮ್ಮ ಗ್ರಾಮದ ಕಂದಾಯ ನಕ್ಷೆಯನ್ನು(Village Revenue Map Download) ಡೌನ್ಲೋಡ್ ಮಾಡಿಕೊಂಡು ಜಮೀನಿಗೆ ಹೋಗಲು ದಾರಿ ಎಲ್ಲಿ ಗುರುತಿಸಲಾಗಿದೆ ಎಂದು ಹೇಗೆ ತಿಳಿದುಕೊಳ್ಳುವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.
ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ಇರುವ ಕಾರಣದಿಂದಾಗಿ ಅನೇಕರು ಸರಿಯಾದ ಸಮಯಕ್ಕೆ ಬಿತ್ತನೆಗಳನ್ನು ಮಾಡದೆ ಮತ್ತು ಸಮಯಕ್ಕೆ ತಕ್ಕಂತೆ ವಾತಾವರಣಕ್ಕೆ ತಕ್ಕಂತೆ ಸರಿಯಾದ ಸಮಯದಲ್ಲಿ ಅತಿ ಹೆಚ್ಚು ಬೆಳೆಗಳನ್ನು ಬೆಳೆದು ರೈತರು ಆರ್ಥಿಕವಾಗಿ ಮುಂದುವರೆಯಲು ಈ ದಾರಿ ಸಮಸ್ಯೆ ಕಾರಣವಾಗುತ್ತಿದ್ದು.
ಇದನ್ನೂ ಓದಿ: DAP Subsidy-ರೈತರಿಗೆ ಭರ್ಜರಿ ಗುಡ್ ನ್ಯೂಸ್! DAP ಗೊಬ್ಬರದ ಸಬ್ಸಿಡಿ ಮುಂದುರೆಸಿದ ಕೇಂದ್ರ ಸರಕಾರ!
ಅಕ್ಕ ಪಕ್ಕದ ಜಮೀನಿನವರು ಹೊಂದಾಣಿಕೆ ಮಾಡಿಕೊಂಡು ಹೋದರೆ ಜಮೀನಿಗೆ ಹೋಗಲು ದಾರಿ ಸಮಸ್ಯೆ ಇರುವುದಿಲ್ಲ. ಹೊಂದಾಣಿಕೆ ಆಗದೆ ಇದ್ದಂತಹ ಸಮಯದಲ್ಲಿ ಈ ಸಮಸ್ಯೆಗಳು ದೊಡ್ಡದಾಗಿ ರೂಪುಗೊಂಡು ಇಂತಹ ಸಮಯದಲ್ಲಿ ರೈತರು ಕಾನೂನು ಹೋರಾಟದ ಮೂಲಕ ಪ್ರತಿಯೊಬ್ಬ ರೈತ ತನ್ನ ಜಮೀನಿಗೆ ಹೋಗಲು ಆಗು ಕೃಷಿ ಯಂತ್ರ ಉಪಕರಣಗಳನ್ನು ಸಾಗಾಣಿಕೆ ಮಾಡಲು ದಾರಿಯನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ.
ರೈತರು ತಮ್ಮ ಮೊಬೈಲ್ ಅನ್ನು ಬಳಸಿಕೊಂಡು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಲ್ಯಾಂಡ್ ರೆಕಾರ್ಡ್ (Land records)ಜಾಲತಾಣವನ್ನು ಭೇಟಿ ಮಾಡಿ. ಕಂದಾಯ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಮತ್ತು ಬಂಡಿ ದಾರಿಯನ್ನು ಯಾವ ಭಾಗದಲ್ಲಿ ಗುರುತಿಸಲಾಗಿದೆ ಎಂದು ಮಾಹಿತಿಯನ್ನು ತಿಳಿಯಬಹುದು.
ಇದನ್ನೂ ಓದಿ: DCC Bank Jobs-ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ನೇಮಕಾತಿ!ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಇದನ್ನೂ ಓದಿ: Today Gold Market-ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ! ದಿನಾಂಕ: 01-01-2025
Village Revenue Map-ರೈತರು ತಮ್ಮ ಜಮೀನಿಗೆ ಹೋಗುವ ದಾರಿಯನ್ನು ತೋರಿಸುವ ನಕ್ಷೆಯನ್ನು ಡೌನ್ಲೋಡ್ ಮಾಡುವ ವಿಧಾನ:
ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಲ್ಯಾಂಡ್ ರೆಕಾರ್ಡ್ಸ್ ಅನ್ನು ಭೇಟಿ ಮಾಡಿ ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಮತ್ತು ಬಂಡಿದಾರಿಯನ್ನು ಯಾವ ಭಾಗದಲ್ಲಿ ಗುರುತಿಸಲಾಗಿದೆ ಎಂದು ಯಾವುದೇ ಸರ್ಕಾರಿ ಕಚೇರಿಗೆ ಭೇಟಿ ನೀಡದೆ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.
Step-1: ಇಲ್ಲಿ ಕ್ಲಿಕ್ village map download ಮಾಡಿ ಕಂದ ಇಲಾಖೆ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ.
Step-2: ನಂತರ ಈ ಪೇಜ್ ನಲ್ಲಿ ಕೆಳಗೆ ಕಾಣುವ “ಸರ್ವೆ (S S L R ) ಸಂಬಂಧಿತ ಸೇವೆಗಳು” ಆಪ್ಷನ್ ಸೆಲೆಕ್ಟ್ ಮಾಡಿಕೊಂಡು ಇದೇ ವಿಭಾಗದಲ್ಲಿ ತೋರಿಸವ “ಕಂದಾಯ ನಕ್ಷೆಗಳು” ಎನ್ನುವ ಆಪ್ಷನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Solar Pumpset scheme- ಕುಸುಮ್ ಬಿ ಯೋಜನೆಯಡಿ ಶೇ 80 ರಷ್ಟು ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
Step-3: ಕಂದಾಯ ನಕ್ಷೆಗಳು ಆಪ್ಷನ್ ಸೆಲೆಕ್ಟ್ ಮಾಡಿಕೊಂಡ ನಂತರ” revenue maps online” page open ಆಗುತ್ತದೆ .ಇಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಸೆಲೆಕ್ಟ್ ಮಾಡಿಕೊಳ್ಳಬೇಕು. ಹಾಗೆ ಕೊನೆಯಲ್ಲಿ map types ಕಾಲಂ ನಲ್ಲಿ ladastral maps ಎನ್ನುವ ಆಪ್ಷನ್ ಆಯ್ಕೆ ಮಾಡಿಕೊಂಡರೆ. ನಿಮ್ಮ ಹೋಬಳಿಯಲ್ಲಿ ಇರುವ ಹಳ್ಳಿಗಳ ಪಟ್ಟಿಯನ್ನು ತೋರಿಸುತ್ತದೆ,

ಇದರಲ್ಲಿ ನಿಮ್ಮ ಹಳ್ಳಿಯ ಹೆಸರನ್ನು ಹಾಕಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ನಕ್ಷೆಯನ್ನು ಪಡೆಯಬಹುದು ಅಥವಾ ಈ ಪಟ್ಟಿಯಲ್ಲಿ ನಿಮ್ಮ ಹಳ್ಳಿಯ ಹೆಸರನ್ನು ಹುಡುಕಿ ಕೊನೆಯ ಕಾಲಂನಲ್ಲಿ ಕಾಣುವ PDF File ನ ಐಕಾನ್ ಮೇಲೆ ಕ್ಲಿಕ್ ಮಾಡಿ ಕಾಲುದಾರಿ ಹಾಗೂ ಬಂದಿದಾರಿ ಗುರುತಿಸಿರುವ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
Step-4: ಡೌನ್ಲೋಡ್ ಮಾಡಿಕೊಂಡು ನಕ್ಷೆಯನ್ನು open ಮಾಡಿದರೆ ಬಂಡಿದಾರಿ ಮತ್ತು ಕಾಲುದಾರಿಯನ್ನು ಗುರುತಿಸಲಾಗಿರುತ್ತದೆ ಹಳದಿ ಸಣ್ಣ ಗೆರೆಗಳಿಂದ ಕಾಲು ದಾರಿಯನ್ನು ಗುರುತಿಸಲಾಗಿದ್ದು ಇದೇ ಮಾದರಿಯಲ್ಲಿ ತೆಳು ಗುಲಾಬಿ ಬಣ್ಣದಿಂದ ಬಂಡಿ ದಾರಿಯನ್ನು ಗುರುತು ಮಾಡಲಾಗಿರುತ್ತದೆ ನಿಮ್ಮ ಜಮೀನಿನ ಸರ್ವೆ ನಂಬರ್ ಬರುವ ಜಾಗದಲ್ಲಿ ಈ ದಾರಿಯ ಸೂಚಕ ಗೆರೆಗಳನ್ನು ಈ ನಕ್ಷೆಯಲ್ಲಿ ಹಾಕಲಾಗಿರುತ್ತದೆ ಈ ಜಾಗದಿಂದ ನಿಮ್ಮ ಜಮೀನುಗಳಿಗೆ ದಾರಿಯನ್ನು ನೀಡಲಾಗಿರುತ್ತದೆ.