2026-2027 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನವೋದಯ ವಿದ್ಯಾಲಯದ(Navodaya Vidyalaya)ಸಮಿತಿ ವತಿಯಿಂದ 6 ನೇ ತರಗತಿಯ ನವೋದಯ ಶಾಲಾ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದ್ದು, ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಕೋರಿದೆ.
ಉತ್ತಮವಾದ ಶಿಕ್ಷಣವನ್ನು ನೀಡಲು ಜವಾಹರ್ ನವೋದಯ ವಿದ್ಯಾಲಯ ಸಮಿತಿ (NVS) ದೇಶದ ವಿವಿಧ ಜಿಲ್ಲೆಗಳಲ್ಲಿರುವ ನವೋದಯ ಶಾಲೆಗಳಲ್ಲಿ(Navodaya Vidyalaya)ಉಚಿತವಾಗಿ ಉತ್ತಮ ಗುಣಮಟ್ಟದ ಶಿಕ್ಷಣ, ವಸತಿ, ಆಹಾರ, ಪಠ್ಯಪುಸ್ತಕಗಳು ಸೇರಿದಂತೆ ಸಮಗ್ರ ಅಭಿವೃದ್ಧಿಯ ವ್ಯವಸ್ಥೆಗಳನ್ನು ಒದಗಿಸಿಕೊಡುತ್ತದೆ.
ಇದನ್ನೂ ಓದಿ: Ganga Kalyana-ಜಲಶಕ್ತಿ ಯೋಜನೆಯಡಿ ಬೋರ್ವೆಲ್ ಕೊರೆಸಲು ₹2.75 ಲಕ್ಷ ಸಹಾಯಧನಕ್ಕೆ ಅರ್ಜಿ!
ಪ್ರಸ್ತುತ ಈ ಅಂಕಣದಲ್ಲಿ ನವೋದಯ ಶಾಲೆಯ ಪ್ರವೇಶಾತಿಗೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳಾವುವು? ಅರ್ಜಿಯನ್ನು ಸಲ್ಲಿಸುವ ವಿಧಾನ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಹೆಚ್ಚಿನ ಅಗತ್ಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Last Date-ಅರ್ಜಿಯನ್ನು ಸಲ್ಲಿಸಲು ಪ್ರಮುಖ ದಿನಾಂಕಗಳು
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ- 27-07- 2025
ನವೋದಯ ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ- 13-12-2025
ಇದನ್ನೂ ಓದಿ: Health Insurance-ಇನ್ಮುಂದೆ ಈ ಯೋಜನೆಯಡಿ ಸಿಗಲಿದೆ ₹5 ಲಕ್ಷ ಉಚಿತ ಚಿಕಿತ್ಸಾ ಸೌಲಭ್ಯ!
Navodaya School Facilities-ನವೋದಯ ಶಾಲೆಗಳಲ್ಲಿ ಒದಗಿಸುವ ಸೌಲಭ್ಯಗಳು:
A) ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನವೋದಯ ಶಾಲೆಗಳಲ್ಲಿಯೆ ನೀಡಲಾಗುತ್ತದೆ.
B) ಎಲ್ಲಾ ನವೋದಯ ಶಾಲೆಗಳಲ್ಲಿ ಶಿಕ್ಷಣ, ವಸತಿ, ಸಮವಸ್ತ್ರ ಮತ್ತು ಪಠ್ಯಪುಸ್ತಕಗಳು ಉಚಿತವಾಗಿ ನೀಡುತ್ತಿದ್ದು, 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಂದ ಮಾತ್ರ ವಿದ್ಯಾಲಯ ವಿಕಾಸ ನಿಧಿಗೆ ತಿಂಗಳಿಗೆ 600 ರೂ. ಸಂಗ್ರಹಿಸಲಾಗುತ್ತದೆ. SC/ST ವರ್ಗ, ದಿವ್ಯಾಂಗ ವಿದ್ಯಾರ್ಥಿಗಳು, ಎಲ್ಲಾ ಬಾಲಕಿಯರು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ(BPL Card) ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
C) ನವೋದಯ ವಿದ್ಯಾಲಯದ ಕ್ಯಾಂಪಸ್ ನಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವಿರುತ್ತದೆ.
D) ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದರ ಜೊತೆಗೆ ಇತರೆ ಕೌಶಲ್ಯ ಅಭಿವೃದ್ದಿಗೂ ಸಹ ವಿದ್ಯಾರ್ಥಿಗಳಿಗೆ ಅವಕಾಶವನ್ನ್ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ: Cow Mat Subsidy-ಪಶುಪಾಲನೆ ಇಲಾಖೆಯಿಂದ 90% ಸಬ್ಸಿಡಿಯಲ್ಲಿ ಕೌ ಮ್ಯಾಟ್!
Navodaya Exam Details-ಪರೀಕ್ಷೆಯು ಯಾವ ಯಾವ ಭಾಷೆಯಲ್ಲಿ ಲಭ್ಯವಿರುತ್ತದೆ:
ಅರ್ಹ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಮಾರಾಠಿ ಇತರೆ 3 ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶವಿರುತ್ತದೆ.
Who Can Apply For Navodaya School- ಅರ್ಜಿಯನ್ನು ಸಲ್ಲಿಸಲು ಯಾರೆಲ್ಲ ಅರ್ಹರು:
1) ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 2024-25 ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯ 5ನೇ ತರಗತಿಯಲ್ಲಿ ಓದುತ್ತಿರಬೇಕು.
2) ಶಿಕ್ಷಣವು ಯಾವುದೇ ಬೋರ್ಡ್ ಅಥವಾ ರಾಜ್ಯ ಸರ್ಕಾರ/ಖಾಸಗಿ/ಮಾನ್ಯತೆ ಪಡೆದ ಶಾಲೆಯಲ್ಲಿ ನಡೆದಿರಬಹುದು.
3) ವಿದ್ಯಾರ್ಥಿಯು 01 ಮೇ 2014 ರಿಂದ 30 ಏಪ್ರಿಲ್ 2016 ರ ಮಧ್ಯೆ ಹುಟ್ಟಿದವರಾಗಿರಬೇಕು.
4) ನಗರ ಪ್ರದೇಶದಲ್ಲಿ ಹೆಚ್ಚು ಕಾಲ ಓದಿದ ವಿದ್ಯಾರ್ಥಿಗಳಿಗೆ ಅರ್ಹತೆ ಇರುವುದಿಲ್ಲ.
5) ಒಬ್ಬ ವಿದ್ಯಾರ್ಥಿಯು ನವೋದಯ ಶಾಲೆಯ ಪ್ರವೇಶ ಪರೀಕ್ಷೆಗೆ ಒಂದೇ ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
6) ಈ ಹಿಂದೆ ಪರೀಕ್ಷೆ ಬರೆದಿದ್ದರೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
ಇದನ್ನೂ ಓದಿ: PM Kisan Farmer List-ಪಿಎಂ ಕಿಸಾನ್ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

ಇದನ್ನೂ ಓದಿ: Education Loan-ಶೇ. 2ರ ಬಡ್ಡಿದರಲ್ಲಿ 1.0 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ ಆಹ್ವಾನ!
Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳಾವುವು:
ಆಧಾರ್ ಕಾರ್ಡ/Aadhar Card
ವಿದ್ಯಾರ್ಥಿಯ ಸಿಹಿ ಪ್ರತಿ/Signature of the student
ಪೋಷಕರ ಸಹಿ ಪ್ರತಿ/Parent Signature
ವ್ಯಾಸಂಗ ಪ್ರಮಾಣ ಪತ್ರ/Study certificate
ನಿವಾಸಿ ದೃಡೀಕರಣ ಪ್ರಮಾಣ ಪತ್ರ/Residential certificate
ವಿದ್ಯಾರ್ಥಿಯ ಪೋಟೋ/Student Photo
ಇದನ್ನೂ ಓದಿ: Nursing scholarship-ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅವಕಾಶ!
How To Apply For Navodaya Exam- ಅರ್ಜಿಯನ್ನು ಸಲ್ಲಿಸುವ ವಿಧಾನ:
ಪರೀಕ್ಷೆ ಬರೆಯಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಕೆಳೆಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
Step-1: ಮೊದಲಿಗೆ ಈ ಲಿಂಕ್ Navodaya Application ಮೇಲೆ ಕ್ಲಿಕ್ ಮಾಡಿ ಅಧಿಕೃತ ನವೋದಯ ವಿದ್ಯಾಲಯದ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
ಇದನ್ನೂ ಓದಿ: IDFC Bank Scholarship-ಐಡಿಎಫ್‌ಸಿ ಬ್ಯಾಂಕ್ ನಿಂದ ₹2 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ!
Step-2: ನಂತರ ಅಲ್ಲಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ತದನಂತರ ಅಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಬೇಕು.
Step-3: ಕೊನೆಯಲ್ಲಿ ಅಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸುವ ಹಂತವು ಮುಕ್ತಾಯಗೊಳ್ಳುತ್ತದೆ.
For More Information-ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ:
ಇದನ್ನೂ ಓದಿ: Mobile Canteen Scheme-₹5 ಲಕ್ಷ ಸಬ್ಸಿಡಿಯಲ್ಲಿ ಮೊಬೈಲ್ ಕ್ಯಾಂಟಿನ್ ತೆರೆಯಲು ಅರ್ಜಿ!
ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಲು- Click Here
ಅರ್ಜಿಯನ್ನು ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ- Apply Now