Saturday, July 12, 2025
No menu items!
HomeNewsMobile Canteen Scheme-₹5 ಲಕ್ಷ ಸಬ್ಸಿಡಿಯಲ್ಲಿ ಮೊಬೈಲ್ ಕ್ಯಾಂಟಿನ್ ತೆರೆಯಲು ಅರ್ಜಿ!

Mobile Canteen Scheme-₹5 ಲಕ್ಷ ಸಬ್ಸಿಡಿಯಲ್ಲಿ ಮೊಬೈಲ್ ಕ್ಯಾಂಟಿನ್ ತೆರೆಯಲು ಅರ್ಜಿ!

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶವನ್ನು(Apply for Mobile Canteen)ಕಲ್ಪಿಸಿ ಮತ್ತು ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು ₹5 ಲಕ್ಷ ಸಬ್ಸಿಡಿಯಲ್ಲಿ ಮೊಬೈಲ್ ಕ್ಯಾಂಟಿನ್ ತೆರೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಸಬ್ಸಿಡಿ ಯೋಜನೆಯನ್ನು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯದ ಯುವಕರು (Mobile Canteen Subsidy)ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು ಆಹಾರ ಉದ್ಯಮದಲ್ಲಿ ತಮ್ಮ ಗುರಿಯನ್ನು ಸೇರಲು ಸಹಾಯಕಾರಿಯಾಗಿದೆ.

ಇದನ್ನೂ ಓದಿ: Girl child scheme-18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ₹1.50 ಲಕ್ಷ ಸಹಾಯಧನ!

ಈ ಪ್ರಯೋಜನವನ್ನು ಪಡೆದುಕೊಳ್ಳಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಸಲ್ಲಿಸುವ ವಿಧಾನ? ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Subsidy Amount- ಈ ಯೋಜನೆಯಡಿ ಎಷ್ಟು ಸಬ್ಸಿಡಿ ನೀಡಲಾಗುತ್ತದೆ:

ಪ್ರವಾಸೋದ್ಯಮ ಇಲಾಖೆಯಿಂದ ಈ ಯೋಜನೆಯ ಅಡಿಯಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಸಬ್ಸಿಡಿಯಲ್ಲಿ ಮೊಬೈಲ್ ಕ್ಯಾಂಟಿನ್ ಅನ್ನು ಆರಂಭ ಮಾಡಲು ವೆಚ್ಚಕ್ಕೆ ಶೇ 70% ರಷ್ಟು ಅಂದರೆ ಗರಿಷ್ಥ 5 ಲಕ್ಷದ ವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Fasal Bhima Yojane-ಬೆಳೆ ವಿಮೆ ನೊಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ!

Mobile Canteen Subsidy Scheme- ಈ ಯೋಜನೆಯ ವಿವರ ಈ ಕೆಳಗಿನಂತಿದೆ:

ಜಿಲ್ಲೆಗಳಲ್ಲಿ ಅನುದಾನ ಲಭ್ಯತೆಯ ಆಧಾರದ ಮೇಲೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್ಸಿಎಸ್ಪಿ (SCSP) ಮತ್ತು ಟಿಎಸ್ಪಿ (TSP) ಯೋಜನೆಗಳಡಿಯಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯ ಸಣ್ಣ ಉದ್ಯಮಿಗಳ ಉದ್ಯಮಶೀಲೆಗೆ ಉತ್ತೇಜನೆ ನೀಡಲು ವಿಶೇಷ ಸಹಾಯ ನೀಡಲಾಗುತ್ತಿದೆ.

ಈ ಯೋಜನೆಯಡಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ಕಾಲ ಉದ್ಯಮಶೀಲತೆ ಮತ್ತು ಕೌಶಲ್ಯ ತರಬೇತಿಯನ್ನು ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ಉದ್ಯಮ ಆರಂಭಿಸಲು ಅನುದಾನ (subsidy) ರೂಪದಲ್ಲಿ ಹಣಕಾಸು ಸಹಾಯ ಒದಗಿಸಲಾಗುತ್ತದೆ.

ಇದನ್ನೂ ಓದಿ: E-Khata-ಆಸ್ತಿ ಮಾಲಿಕರಿಗೆ ಮಹತ್ವದ ಮಾಹಿತಿ! ಜುಲೈ 1 ರಿಂದ ಇ-ಖಾತಾ ಕಡ್ಡಾಯ

mobile canteen subsidy app

ಇದನ್ನೂ ಓದಿ: Student Scholorship-NMMSS ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

Who Can Apply- ಈ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಯಾರೆಲ್ಲ ಅರ್ಹರು:

1) ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

2) ಅರ್ಜಿದಾರರು ಕನಿಷ್ಥ SSLC ಉತ್ತೀರ್ಣರಾಗಿರಬೇಕು.

3) ಅರ್ಜಿದಾರರು ವಯಸ್ಸು 20 ರಿಂದ 45 ವರ್ಷ ಮೀರಿರಬಾರದು.

4) ಅರ್ಜಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರಾಗಿರಬೇಕು.

ಇದನ್ನೂ ಓದಿ: Study Loan-ಉನ್ನತ ವಿದ್ಯಾಭ್ಯಾಸಕ್ಕೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ ಆಹ್ವಾನ!

5) ಅರ್ಜಿದಾರರು ನಗರ ಪ್ರದೇಶದವರಾಗಿದ್ದರೆ ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷ ಮಿತಿಯೊಳಗಿರಬೇಕು.

6) ಗ್ರಾಮಾಂತರ ಪ್ರದೇಶದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯಯು ₹1.50 ಲಕ್ಷದ ಮಿತಿಯೊಳಗಿರಬೇಕು.

7) ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿ ಪಡೆದಿರಬೇಕು.

8) ಅರ್ಜಿದಾರರು ಅಥವಾ ಕುಟುಂಬದವರು ಸರ್ಕಾರಿ ಖಾಯಂ ನೌಕರಿಯಲ್ಲಿರಬಾರದು.

ಇದನ್ನೂ ಓದಿ: Gruhalakshmi Yojana-ಗೃಹಲಕ್ಷ್ಮಿ 20ನೇ ಕಂತಿನ ಹಣ ಬಿಡುಗಡೆ!ಮೊಬೈಲ್ ನಲ್ಲೇ ಜಮಾ ವಿವರ ತಿಳಿಯಿರಿ!

Required Documents-ಅರ್ಜಿ ಸಲ್ಲಿಸಲು ದಾಖಲೆಗಳು?

A) ಆಧಾರ್ ಕಾರ್ಡ/Aadhar card

B) ಅರ್ಜಿ ನಮೂನೆ(ಇಲಾಖೆಯ ಕಚೇರಿಯಲ್ಲಿ ಪಡೆಯಬೇಕು)/Application Form

C) ಆದಾಯ ಪ್ರಮಾಣ ಪತ್ರ/Income Certificate

D) ಜಾತಿ ಪ್ರಮಾಣ ಪತ್ರ/Cast Certificate

E) SSLC ಅಂಕಪಟ್ಟಿ /Marks card

F) ಲಘುವಾಹನ ಚಾಲನಾ ಪರವಾನಗಿ ಪತ್ರ/Driving licence

G) ಪೋಟೋ/Photocopy

ಇದನ್ನೂ ಓದಿ: Borewell Subsidy-₹4.25 ಲಕ್ಷ ಸಬ್ಸಿಡಿಯಲ್ಲಿ ಲಿಂಗಾಯತ ನಿಗಮದಿಂದ ಬೋರ್ವೆಲ್ ಕೊರೆಸಲು ಅರ್ಜಿ!

How to Apply- ಈ ಯೋಜನೆಯಡಿ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಫಲಾನುಭವಿಗಳು ಅಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಜಿಲ್ಲೆಯ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ-Read Now

RELATED ARTICLES
- Advertisment -

Most Popular

Recent Comments