Saturday, July 12, 2025
No menu items!
HomeAgricultureCow Mat Subsidy-ಪಶುಪಾಲನೆ ಇಲಾಖೆಯಿಂದ 90% ಸಬ್ಸಿಡಿಯಲ್ಲಿ ಕೌ ಮ್ಯಾಟ್!

Cow Mat Subsidy-ಪಶುಪಾಲನೆ ಇಲಾಖೆಯಿಂದ 90% ಸಬ್ಸಿಡಿಯಲ್ಲಿ ಕೌ ಮ್ಯಾಟ್!

ಹೈನುಗಾರಿಕೆಯಲ್ಲಿ(Dairy farming) ತೊಡಗಿರುವ ರೈತರಿಗೆ ಕೊಟ್ಟಿಗೆಯಲ್ಲಿ ಹಸುಗಳಿಗೆ ಆರಾಮದಾಯಕ ನೆಲವನ್ನು ಒದಗಿಸಲು ಕೌ ಮ್ಯಾಟ್‌ಗಳನ್ನು(Cow Mat Subsidy ) ಶೇ 50% ರಿಂದ ಶೇ 90% ಸಬ್ಸಿಡಿಯಲ್ಲಿ ಪಡೆಯಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕದಲ್ಲಿ ಹೈನುಗಾರಿಕೆಯು(Veterinary Department) ರೈತರಿಗೆ ಪ್ರಮುಖ ಉಪ-ಆದಾಯದ ಮೂಲವಾಗಿದ್ದು, ದೊಡ್ಡ ಸಂಖ್ಯೆಯ ರೈತರು ಹಸು-ಎಮ್ಮೆ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಟ್ಟಿಗೆಯಲ್ಲಿ ಜಾನುವಾರುಗಳಿಗೆ ಆರಾಮದಾಯಕ ಮತ್ತು ಸ್ವಚ್ಛ ವಾತಾವರಣ ಒದಗಿಸಲು ಕೌ ಮ್ಯಾಟ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಕರ್ನಾಟಕ ಹಾಲು ಒಕ್ಕೂಟ (KMF) ಮತ್ತು ಪಶುಪಾಲನಾ ಇಲಾಖೆಯಿಂದ ಈ ಕೌ ಮ್ಯಾಟ್‌ಗಳನ್ನು ಸಬ್ಸಿಡಿಯಲ್ಲಿ ಖರೀದಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: PM Kisan Farmer List-ಪಿಎಂ ಕಿಸಾನ್ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

ಪ್ರಸ್ತುತ ಈ ಲೇಖನದಲ್ಲಿ ರೈತರು ಹಸುವಿನ(Cow Mat Subsidy) ಕೊಟ್ಟಿಗೆಯಲ್ಲಿ ನೆಲಕ್ಕೆ ಹಾಕಲು ಕೌ ಮ್ಯಾಟ್ ಅನ್ನು ಸಬ್ಸಿಡಿಯಲ್ಲಿ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಎಷ್ಟು ಸಬ್ಸಿಡಿ ನೀಡಲಾಗುತ್ತದೆ? ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಕೌ ಮ್ಯಾಟ್‌ನ ಪ್ರಯೋಜನಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Cow Mat Subsidy Eligibility-ಕೌ ಮ್ಯಾಟ್ ಗೆ ಸಬ್ಸಿಡಿ ಪಡೆಯಲು ನಿಗದಿಪಡಿಸಿರುವ ಅರ್ಹತೆಗಳು:

ಅರ್ಜಿದಾರ ರೈತರು ಕನಿಷ್ಠ 2 ಜಾನುವಾರುಗಳನ್ನು (ಹಸು/ಎಮ್ಮೆ) ಹೊಂದಿರಬೇಕು.

ಈ ಹಿಂದೆ ಕೌ ಮ್ಯಾಟ್ ಸಬ್ಸಿಡಿ ಪಡೆದಿರಬಾರದು.

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಇದನ್ನೂ ಓದಿ: Education Loan-ಶೇ. 2ರ ಬಡ್ಡಿದರಲ್ಲಿ 1.0 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ ಆಹ್ವಾನ!

ಸಬ್ಸಿಡಿಯಲ್ಲಿ ಕೌ ಮ್ಯಾಟ್ ಪಡೆಯಲು ಎಲ್ಲಿ ಸಲ್ಲಿಸಬೇಕು?

ರೈತರು KMF ಮತ್ತು ಪಶುಪಾಲನಾ ಇಲಾಖೆಯಿಂದ ಗುಣಮಟ್ಟದ ಕೌ ಮ್ಯಾಟ್‌ಗಳನ್ನು ಕಡಿಮೆ ಬೆಲೆಯಲ್ಲಿ ಸಹಾಯಧನದಲ್ಲಿ ಖರೀದಿ ಮಾಡಲು ಅವಕಾಶವಿರುತ್ತದೆ.ಯಬಹುದು.

1) KMF ಮೂಲಕ: ನಿಮ್ಮ ಸಮೀಪದ ಹಾಲಿನ ಡೈರಿಯನ್ನು ಸಂಪರ್ಕಿಸಿ, ಅರ್ಜಿ ಸಲ್ಲಿಸಿ ಕೌ ಮ್ಯಾಟ್ ಖರೀದಿಸಬಹುದು.
2) ಪಶುಪಾಲನಾ ಇಲಾಖೆ ಮೂಲಕ: ತಾಲೂಕಿನ ಪಶು ಆಸ್ಪತ್ರೆಗೆ ಭೇಟಿ ನೀಡಿ, ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಸಬ್ಸಿಡಿಯಲ್ಲಿ ಕೌ ಮ್ಯಾಟ್ ಪಡೆಯಬಹುದು.

Cow Mat Subsidy Application-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ರೈತರು ಸಬ್ಸಿಡಿಯಲ್ಲಿ KMF ಮತ್ತು ಪಶುಪಾಲನಾ ಇಲಾಖೆಯಿಂದ ಕೌ ಮ್ಯಾಟ್ ಅನ್ನು ಪಡೆಯಲು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವುದು ಅವಶ್ಯವಾಗಿದೆ.

  • ಆಧಾರ್ ಕಾರ್ಡ್
  • ಜಮೀನಿನ ಪಹಣಿ/ಊತಾರ್/RTC
  • ಬ್ಯಾಂಕ್ ಪಾಸ್‌ಬುಕ್
  • ಫೋಟೋ
  • ಹಸು ಸಾಕಾಣಿಕೆಯ ದೃಡೀಕರಣ ಪತ್ರ

ಇದನ್ನೂ ಓದಿ: Nursing scholarship-ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅವಕಾಶ!

Cow Mat Subsidy

Cow Mat Subsidy Amount-ಕೌ ಮ್ಯಾಟ್ ಗೆ ಎಷ್ಟು ಸಹಾಯಧನ ನೀಡಲಾಗುತ್ತದೆ?

ಸಾಮಾನ್ಯ ವರ್ಗದ ರೈತರಿಗೆ- 50% ಸಬ್ಸಿಡಿ.

SC/ST ವರ್ಗದ ರೈತರಿಗೆ- 90% ಸಬ್ಸಿಡಿ.

Cow Mat Benefits- ಕೌ ಮ್ಯಾಟ್‌ ಅನ್ನು ಕೊಟ್ಟಿಗೆಯಲ್ಲಿ ಬಳಸುವುದರಿಂದ ಪ್ರಯೋಜನಗಳು:

ಆರಾಮದಾಯಕ ವಾತಾವರಣ: ಜಾನುವಾರುಗಳಿಗೆ ಮೃದುವಾದ, ಆರಾಮದಾಯಕ ಮೇಲ್ಮೈ ಒದಗಿಸುತ್ತದೆ, ಕಾಲುಗಳು ಮತ್ತು ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಗಾಯ ತಡೆಗಟ್ಟುವಿಕೆ: ಗಟ್ಟಿಯಾದ ನೆಲದಿಂದ ಉಂಟಾಗುವ ಗಾಯಗಳು, ಒತ್ತಡದ ಗುರುತುಗಳು ಮತ್ತು ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: IDFC Bank Scholarship-ಐಡಿಎಫ್‌ಸಿ ಬ್ಯಾಂಕ್ ನಿಂದ ₹2 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ!

ಹಾಲಿನ ಉತ್ಪಾದನೆ ಹೆಚ್ಚಳ: ಒತ್ತಡ ಕಡಿಮೆಯಾದಾಗ ಜಾನುವಾರುಗಳು ಹೆಚ್ಚು ಹಾಲು ಉತ್ಪಾದಿಸುತ್ತವೆ.

ಸ್ವಚ್ಛತೆ ಮತ್ತು ಆರೋಗ್ಯ: ಸುಲಭವಾಗಿ ಸ್ವಚ್ಛಗೊಳಿಸಬಹುದಾದ ಕೌ ಮ್ಯಾಟ್ ಕೊಟ್ಟಿಗೆಯ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ ರೋಗಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಜಾರುವಿಕೆ ತಡೆಗಟ್ಟುವಿಕೆ: ಜಾರು-ನಿರೋಧಕ ಮೇಲ್ಮೈಯಿಂದ ಜಾನುವಾರುಗಳ ಬೀಳುವಿಕೆ ಮತ್ತು ಗಾಯಗಳನ್ನು ತಡೆಯುತ್ತದೆ.

ಉಷ್ಣತೆ ನಿಯಂತ್ರಣ: ಚಳಿಗಾಲದಲ್ಲಿ ಬೆಚ್ಚಗಿನ ಮೇಲ್ಮೈ ಒದಗಿಸುತ್ತದೆ.

ದೀರ್ಘಾವಧಿಯ ಬಾಳಿಕೆ: ಗುಣಮಟ್ಟದ ಕೌ ಮ್ಯಾಟ್‌ಗಳು ದೀರ್ಘಕಾಲ ಬಾಳಿಕೆ ಬರುವುದರಿಂದ ವೆಚ್ಚ ಉಳಿತಾಯವಾಗುತ್ತದೆ.

RELATED ARTICLES
- Advertisment -

Most Popular

Recent Comments