ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ನೌಕರರು, ಗುತ್ತಿಗೆ, ಹೊರಹುತ್ತಿಗೆ ನೌಕರರಿಗೆ ₹5 ಲಕ್ಷಗಳವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಮಾಡಲು ಸರ್ಕಾರವು ಆದೇಶವನ್ನು ಹೊರಡಿಸಿದೆ.
ಮುಂಬರುವ ದಿನಗಳಲ್ಲಿ ಎಲ್ಲಾ ಸರ್ಕಾರಿ ನೌಕರರು ಆರೋಗ್ಯದ ಬಗ್ಗೆ ಆತಂಕ ಪಡಬೇಕಾಗಿಲ್ಲ, ರಾಜ್ಯ ಸರ್ಕಾರವು ತನ್ನ ಎಲ್ಲಾ ಸರ್ಕಾರಿ ನೌಕರರಿಗೆ ವಾರ್ಷಿಕವಾಗಿ ₹5 ಲಕ್ಷದವರೆಗೆ(₹5L Health Cover) ಉಚಿತ ಚಿಕಿತ್ಸೆ ಸೌಲಭ್ಯ ಒದಗಿಸಲು ಮುಂದಾಗಿದೆ. ಈ ಯೋಜನೆಯಡಿ ನೌಕರರು ಸರಕಾರದೊಂದಿಗೆ ಸಂಬಂಧಿತ ಆಸ್ಪತ್ರೆಗಳು ಹಾಗೂ ನಿಗದಿತ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ (Cashless) ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Cow Mat Subsidy-ಪಶುಪಾಲನೆ ಇಲಾಖೆಯಿಂದ 90% ಸಬ್ಸಿಡಿಯಲ್ಲಿ ಕೌ ಮ್ಯಾಟ್!
ಸರ್ಕಾರವು ಜಾರಿಗೊಳಿಸಿದ ಈ ಯೋಜನೆಯು ಆರೋಗ್ಯವೇ ಜೀವನದ ಆಧಾರ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಸೇವೆಯಲ್ಲಿ ದುಡಿಯುವ ಲಕ್ಷಾಂತರ ನೌಕರರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ರಕ್ಷಣೆಯ ಭದ್ರತೆ ಹಾಗೂ ಆರ್ಥಿಕವಾಗಿ ಸಹಾಯವನ್ನು ಮಾಡುವ ಗುರಿಯನ್ನು ಈ ಯೋಜನೆಯು ಹೊಂದಿದೆ.
Health Insurance- ಚಿಕಿತ್ಸೆಯನ್ನು ಪಡೆಯಲು ಯಾರೆಲ್ಲ ಅರ್ಹರು:
ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸುಮಾರು 3 ಲಕ್ಷ ಸಿಬ್ಬಂದಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಅವಕಾಶವಿರುತ್ತದೆ.
Special features-ಈ ಯೋಜನೆಯ ವಿಶೇಷತೆಗಳು:
ಈ ಚಿಕಿತ್ಸಾ ಸೌಲಭ್ಯ ಯೋಜನೆಯು ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ ಅದರ ಕೆಲವು ಪ್ರಮುಖ ಅಂಶಗಳು ಈ ಕೆಳಗೆ ತಿಳಿಸಲಾಗಿದೆ:
ಇದನ್ನೂ ಓದಿ: PM Kisan Farmer List-ಪಿಎಂ ಕಿಸಾನ್ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!
ವಾರ್ಷಿಕ ₹5 ಲಕ್ಷವರೆಗೆ ಉಚಿತ ಚಿಕಿತ್ಸಾ ಕವರೇಜ್: ಈ ಆರೋಗ್ಯ ಯೋಜನೆಯಡಿ, ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರಿಗೆ ಪ್ರತಿವರ್ಷದವರೆಗೆ ₹5 ಲಕ್ಷದಷ್ಟು ವೈದ್ಯಕೀಯ ವೆಚ್ಚಗಳಿಗೆ ಉಚಿತ ಚಿಕಿತ್ಸೆ ಪಡೆಯಲು ಅವಕಾಶವನ್ನು ಒಸಗಿಸಲಾಗಿದೆ. ಈ ಯೋಜನೆಯಲ್ಲಿ ಶಸ್ತ್ರಚಿಕಿತ್ಸೆಗಳು, ಔಷಧೋಪಚಾರ ಮತ್ತು ಇತರ ಅಗತ್ಯ ವೈದ್ಯಕೀಯ ಸೇವೆಗಳ ವೆಚ್ಚವನ್ನೂ ಸಹ ಸರ್ಕಾರವೇ ನೋಡಿಕೊಳ್ಳುತ್ತದೆ.
ರಾಜ್ಯಾದ್ಯಂತ ಆಸ್ಪತ್ರೆಗಳ ನೆಟ್ವರ್ಕ್: ಈ ಯೋಜನೆಯು ರಾಜ್ಯದಾದ್ಯಂತ ಹಲವಾರು ಖಾಸಗಿ ಹಾಗೂ ಸರ್ಕಾರವು ಗುರುತಿಸಲಾದ ಆಸ್ಪತ್ರೆಗಳನ್ನು ಒಳಗೊಂಡಿದ್ದು, ನೌಕರರು ತಮ್ಮ ಅಗತ್ಯಕ್ಕೆ ತಕ್ಕ ಆಸ್ಪತ್ರೆಯಲ್ಲಿ ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.
ವಿವಿಧ ರೋಗಗಳಿಗೆ ಸಮಗ್ರ ರಕ್ಷಣಾ ವ್ಯವಸ್ಥೆ: ಈ ಯೋಜನೆಯ ಅಡಿಯಲ್ಲಿ ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆಗಳು, ಮೂತ್ರಪಿಂಡದ ವೈಫಲ್ಯ ಸೇರಿದಂತೆ ಅನೇಕ ಗಂಭೀರ ಹಾಗೂ ದೀರ್ಘಕಾಲಿಕ ಕಾಯಿಲೆಗಳಿಗೂ ಸಹ ಈ ಯೋಜನೆಯ ಚಿಕಿತ್ಸಾ ಸೌಲಭ್ಯ ಇರುತ್ತದೆ. ಜೊತೆಗೆ ಸಾಮಾನ್ಯ ಚಿಕಿತ್ಸೆಗಳಿಗೂ ಸಹ ಈ ಯೋಜನೆಯಡಿ ಅವಕಾಶವಿರುತ್ತದೆ.
ಇದನ್ನೂ ಓದಿ: Education Loan-ಶೇ. 2ರ ಬಡ್ಡಿದರಲ್ಲಿ 1.0 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ ಆಹ್ವಾನ!
ಪೂರ್ಣ ಕುಟುಂಬಕ್ಕೂ ಲಾಭ: ಈ ಸೌಲಭ್ಯವು ನೌಕರರ ಪತ್ನಿ/ಪತಿ, ಮಕ್ಕಳೊಂದಿಗೆ ಹೆತ್ತವರಿಗೂ ಅನ್ವಯವಾಗುತ್ತಿದ್ದು, ಸಂಪೂರ್ಣ ಕುಟುಂಬದ ಆರೋಗ್ಯ ರಕ್ಷಣೆಯ ಉದ್ದೇಶವನ್ನು ಈ ಯೋಜನೆ ಒಳಗೊಂಡಿರುತ್ತದೆ.
ಮರುಪಾವತಿ ಪ್ರಕ್ರಿಯೆ ಸುಲಭ ಮತ್ತು ಆನ್‌ಲೈನ್: ಚಿಕಿತ್ಸೆಯಾದ ನಂತರ ನೌಕರರು ಖರ್ಚಿನ ಹಣವನ್ನು ಮರುಪಾವತಿ ಮಾಡಿಕೊಳ್ಳಲು ಆನ್‌ಲೈನ್ ಮೂಲಕವೇ ಅತಿ ಕಡಿಮೆ ಅವಧಿಯಲ್ಲಿ ಪರಿಹಾರವನ್ನು ಪಡೆಯಬಹುದಾಗಿದೆ. ಇದು ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಿದ್ದು, ನೌಕರರಿಗೆ ಸಮಯ ಹಾಗೂ ಶ್ರಮದ ಉಳಿತಾಯವಾಗುತ್ತದೆ.
ಇದನ್ನೂ ಓದಿ: Nursing scholarship-ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅವಕಾಶ!

ಇದನ್ನೂ ಓದಿ: IDFC Bank Scholarship-ಐಡಿಎಫ್‌ಸಿ ಬ್ಯಾಂಕ್ ನಿಂದ ₹2 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ!
What are the benefits of this project-ಈ ಯೋಜನೆಯ ಪ್ರಯೋಜನಗಳೇನು?
ಆರ್ಥಿಕ ಭದ್ರತೆ: ಈ ಯೋಜನೆಯಡಿ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುವ ಆತಂಕವಿಲ್ಲದೆ, ನೌಕರರು ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಬಹುದು.
ಆರೋಗ್ಯ ಕಾಳಜಿ ಸುಧಾರಣೆ: ಈ ಯೋಜನೆಯಿಂದ ಸರ್ಕಾರಿ ನೌಕರರ ಆರೋಗ್ಯ ಮತ್ತು ಜೀವನದ ಗುಣಮಟ್ಟ ಸುಧಾರಿಸಲಿದೆ.
ಇದನ್ನೂ ಓದಿ: Mobile Canteen Scheme-₹5 ಲಕ್ಷ ಸಬ್ಸಿಡಿಯಲ್ಲಿ ಮೊಬೈಲ್ ಕ್ಯಾಂಟಿನ್ ತೆರೆಯಲು ಅರ್ಜಿ!
Chief Minister’s implement this project-ಆರೋಗ್ಯ ಯೋಜನೆಯು ಸಾರ್ವಜನಿಕ ಉದ್ಯೋಗಿಗಳಿಗೆ ಭದ್ರತೆ ಮತ್ತು ವಿಶ್ವಾಸವನ್ನು ನೀಡಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
“ನಮ್ಮ ಸರ್ಕಾರವು ಸಾಮಾನ್ಯ ಜನರ ಆರೋಗ್ಯ ಹಾಗೂ ಕಲ್ಯಾಣದತ್ತ ನಿಭಾಯಿತ ದೃಷ್ಠಿಕೋನ ಹೊಂದಿದೆ. ಈ ಆರೋಗ್ಯ ಯೋಜನೆಯು ಸಾರ್ವಜನಿಕ ಉದ್ಯೋಗಿಗಳಿಗೆ ಭದ್ರತೆ ಮತ್ತು ವಿಶ್ವಾಸವನ್ನು ನೀಡಲಿದೆ. ಅವರ ಬದುಕಿನ ಮಟ್ಟವನ್ನು ಹೆಚ್ಚಿಸಲು ನಾವು ಸಂಪೂರ್ಣ ಬದ್ಧರಾಗಿದ್ದೇವೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.