2025-27ರ ಶೈಕ್ಷಣಿಕ ವರ್ಷದಲ್ಲಿ ಎಂಬಿಎ ಕೋರ್ಸ್‌ನಲ್ಲಿ ವ್ಯಾಸಂಗ(Higher Education Scholarship) ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ನಿಂದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ₹2 ಲಕ್ಷ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ವಿದ್ಯಾರ್ಥಿವೇತನವು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಅಗತ್ಯ ಆಧಾರಿತ(EducationSupport)ವಿದ್ಯಾರ್ಥಿವೇತನ ಕಾರ್ಯಕ್ರಮವಾಗಿದ್ದು, ಮದ್ಯನ ಮತ್ತು ಬಡ ಕುಟುಂಬಗಳ ಅಂದರೆ ಕಡಿಮೆ ಆದಾಯವನ್ನು ಹೊಂದಿದ ಕುಟುಂಬದ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲವನ್ನು ನೀಡುವುದರ ಉದ್ದೇಶವಾಗಿದೆ.
ಇದನ್ನೂ ಓದಿ: Mobile Canteen Scheme-₹5 ಲಕ್ಷ ಸಬ್ಸಿಡಿಯಲ್ಲಿ ಮೊಬೈಲ್ ಕ್ಯಾಂಟಿನ್ ತೆರೆಯಲು ಅರ್ಜಿ!
ಪ್ರಸ್ತುತ ಈ ಲೇಖನದಲ್ಲಿ ಈ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅದಕ್ಕೆ ಬೇಕಾದ ಅಗತ್ಯ ದಾಖಲೆಗಳಾವುವು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
Information this scheme-ಐಡಿಎಫ್‌ಸಿ ಬ್ಯಾಂಕ್ ನ ಬಗ್ಗೆ ಒಂದಿಷ್ಟು ಮಾಹಿತಿ:
ಐಡಿಎಫ್‌ಸಿ ಬ್ಯಾಂಕ್ ಮತ್ತು ಕ್ಯಾಪಿಟಲ್ ಫಸ್ಟ್ ವಿಲೀನದ ನಂತರ ಡಿಸೆಂಬರ್ 2018 ರಲ್ಲಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಅನ್ನು ಸ್ಥಾಪಿಸಲಾಯಿತು. ಈ ಬ್ಯಾಂಕ್ ವ್ಯಕ್ತಿಗಳು, ಸಣ್ಣ ವ್ಯವಹಾರಗಳು ಮತ್ತು ಕಾರ್ಪೊರೇಟ್‌ಗಳಿಗೆ ಹಲವಾರು ಹಣಕಾಸು ಪರಿಹಾರಗಳನ್ನು ಒದಗಿಸುತ್ತದೆ. ಇದು ರಾಷ್ಟ್ರವ್ಯಾಪಿ ಅಸ್ತಿತ್ವವನ್ನು ಹೊಂದಿದೆ ಮತ್ತು ಚಿಲ್ಲರೆ ವ್ಯಾಪಾರ, ಸಗಟು ಮತ್ತು ಇತರ ಬ್ಯಾಂಕಿಂಗ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: Girl child scheme-18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ₹1.50 ಲಕ್ಷ ಸಹಾಯಧನ!
Last date-ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಲು ಜೂನ್ 30, 2025 ಅವಕಾಶವಿರುತ್ತದೆ. ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗೆ ಅರ್ಜಿಯನ್ನು ಸಲ್ಲಿಸಲು ಕೋರಿದೆ.
How Can Apply-ಈ ವಿದ್ಯಾರ್ಥಿವೇತನಕ್ಕೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು?
- ವಿದ್ಯಾರ್ಥಿಯು ಭಾರತದಲ್ಲಿ ವಾಸಿಸುವ ಭಾರತೀಯ ಪ್ರಜೆಯಾಗಿರಬೇಕು.
- ವಿದ್ಯಾರ್ಥಿಗಳು ಮೊದಲ ವರ್ಷದ ಕೋರ್ಸ್‌ಗೆ ದಾಖಲಾಗಿರಬೇಕು.
- ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯವು 6 ಲಕ್ಷ ಮೀರಿರಬಾರದು.
- ವಿದ್ಯಾರ್ಥಿಯು ತಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.
- ಅರ್ಜಿದಾರರ ವಯಸ್ಸು 35 ವರ್ಷಗಳಿಗಿಂತ ಮೀರಿರಬಾರದು.
- ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಉದ್ಯೋಗಿಗಳು ಅಥವಾ ಅವರ ಮಕ್ಕಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ಇದನ್ನೂ ಓದಿ: Fasal Bhima Yojane-ಬೆಳೆ ವಿಮೆ ನೊಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ!
Benifites-ಈ ಯೋಜನೆಯ ಪ್ರಯೋಜನಗಳು:
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ನ ಅಡಿಯಲ್ಲಿ ಆಯ್ಕೆಯಾದ ಅರ್ಹ MBA ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಪೂರ್ಣಾವಧಿ MBA ಅಧ್ಯಯನಕ್ಕಾಗಿ 2,00,000 ಲಕ್ಷ ವಿದ್ಯಾರ್ಥಿವೇತನ ಮೊತ್ತವನ್ನು ನೀಡಲಾಗುತ್ತದೆ.
Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜೂನ್ 2025
How To Apply-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಗಳು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
Step-1: ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ Online Scholarship Application ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.
ಇದನ್ನೂ ಓದಿ: E-Khata-ಆಸ್ತಿ ಮಾಲಿಕರಿಗೆ ಮಹತ್ವದ ಮಾಹಿತಿ! ಜುಲೈ 1 ರಿಂದ ಇ-ಖಾತಾ ಕಡ್ಡಾಯ

Step-2: ತದನಂತರ ಇಲ್ಲಿ ಅಧಿಕೃತ ಜಾಲತಾಣವನ್ನು ಒಪನ್ ಅಗುತ್ತದೆ ಇಲ್ಲಿ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ, ಈ ಜಾಲತಾಣಕ್ಕೆ ಮೊದಲ ಬಾರಿಗೆ ಈ ತಂತ್ರಾಂಶವನ್ನು ಭೇಟಿ ಮಾಡುತ್ತಿರುವ ವಿದ್ಯಾರ್ಥಿಗಳು “Create an Account” ಬಟನ್ ಮೇಲೆ ಕ್ಲಿಕ್ ಮಾಡಿ ಖಾತೆಯನ್ನು ರಚಿಸಿಕೊಳ್ಳಬೇಕು ನಂತರ “Login” ಬಟನ್ ಕ್ಲಿಕ್ ಮಾಡಿ ಲಾಗಿನ್ ಅಗತ್ಯ ವಿವರವನ್ನು ಹಾಕಿ ಲಾಗಿನ್ ಅಗಬೇಕು.
Step-3: “Login” ಆದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ಮಾಹಿತಿ ಮತ್ತು ಅವಶ್ಯಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
Documents-ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳು:
- ವಿದ್ಯಾರ್ಥಿಯ ಆಧಾರ್ ಕಾರ್ಡ ಪ್ರತಿ.
- ಪ್ರಸ್ತುತ ಕಾಲೇಜು ಪ್ರವೇಶದ ಕುರಿತು ದೃಡೀಕರಣ ಪತ್ರ.
- 12ನೇ ತರಗತಿ ಮಾರ್ಕ್ಸ್ ಕಾರ್ಡ್.
- ಕುಟುಂಬದ ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಪೋಟೋ
- ಮೊಬೈಲ್ ನಂಬರ್