Saturday, November 8, 2025
No menu items!
HomeNewsRagi MSP-ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿ ಪ್ರಾರಂಭ! ಕ್ವಿಂಟಾಲ್‌ಗೆ ದರ ಎಷ್ಟು!

Ragi MSP-ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿ ಪ್ರಾರಂಭ! ಕ್ವಿಂಟಾಲ್‌ಗೆ ದರ ಎಷ್ಟು!

ರಾಗಿ ಬೆಳೆದ ರೈತರಿಗೆ ಸಿಹಿ ಸುದ್ದಿ! ಪ್ರಸ್ತುತ ಸರ್ಕಾರವು ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ರಾಗಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದ್ದು, ಆನ್ಲೈನ್ ಮೂಲಕ ರೈತರು ನೋಂದಣಿಯನ್ನು ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.

ಇಂದಿನ ದಿನಗಳಲ್ಲಿ ಮಾರುಕಟ್ಟೆಯ ದರದಲ್ಲಿ ಏರಿಳಿತಗಳಾಗುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಆದ್ದರಿಂದ ಸರ್ಕಾರವು ರೈತರಿಗೆ ನ್ಯಾಯದಾಯಕ ಬೆಲೆಯನ್ನು ಒದಗಿಸುವ ಸಲುವಾಗಿ ಹಾಗೂ ಆರ್ಥಿಕ ಸುರಕ್ಷತೆಯನ್ನು ಕಾಪಾಡುವುದ ಉದ್ದೇಶವಾಗಿದೆ.

ಇದನ್ನೂ ಓದಿ: SBI Scholarship- SBI ಫೌಂಡೇಶನ್ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ₹75,000/-ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

ಈ ಲೇಖನದಲ್ಲಿ ರಾಗಿ ಮಾರಾಟ ಮಾಡಲು ರೈತರು ನೋಂದಣಿಯನ್ನು ಹೇಗೆ ಮಾಡಿಕೊಳ್ಳಬೇಕು? ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ರಾಗಿ ಖರೀದಿಗೆ ನಿಗದಿಪಡಿಸಿರುವ ಬೆಂಬಲ ಬೆಲೆ ಎಷ್ಟು? ನೋಂದಣಿ ಮಾಡಿಕೊಳ್ಳಲು ಯಾವೆಲ್ಲ ದಾಖಲಾತಿಗಳನ್ನು ಒದಗಿಸಬೇಕು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಲೇಖನದಲ್ಲಿ ವಿವರಿಸಲಾಗಿದೆ.

Ragi MSP Price-ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ ಎಷ್ಟು ದರ ನಿಗದಿಪಡಿಸಲಾಗಿದೆ?

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ರೈತರಿಂದ ನೇರವಾಗಿ ರಾಗಿ ಖರೀದಿ ಮಾಡುವ ಪ್ರತಿ ಕ್ವಿಂಟಾಲ್‌ಗೆ ರೂ 4886/- ದರವನ್ನು ನಿಗದಿಪಡಿಸಲಾಗಿದೆ.

Important Dates For Registration-ರಾಗಿ ಖರೀದಿಯ ಪ್ರಮುಖ ದಿನಾಂಕಗಳು:

ರಾಗಿ ಖರೀದಿಗೆ ನೋಂದಣಿ ಪ್ರಕ್ರಿಯೆ ದಿನಾಂಕ- 01 ಅಕ್ಟೋಬರ್ 2025 ರಿಂದ 15 ಡಿಸೆಂಬರ್ 2025 ರವರೆಗೆ ನೋಂದಾಯಿತ ರೈತರಿಂದ ರಾಗಿ ಖರೀದಿ ಅವಧಿ- 01 ಜನವರಿ 2026 ರಿಂದ ಪ್ರಾರಂಭಿಸಿ 31 ಮಾರ್ಚ್ 2026 ರವರೆಗೆ ಖರೀದಿಸಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: Udyam Certificate-ಬ್ಯಾಂಕ್ ಸಾಲ ಪಡೆಯಲು ಈ ದಾಖಲೆ ಕಡ್ಡಾಯ! ಯಾವುದು ಈ ದಾಖಲೆ ಇಲ್ಲಿದೆ ಮಾಹಿತಿ!

Who Can Apply For Ragi MSP-ರಾಇ ಮಾರಾಟ ಮಾಡಲು ಯಾವೆಲ್ಲ ಮಾನದಂಡಗಳನ್ನು ಅನುಸರಿಸಬೇಕು?

ಪ್ರತಿ ರೈತರಿಂದ ಒಂದು ಎಕರೆಗೆ ಗರಿಷ್ಠ 10 ಕ್ವಿಂಟಾಲ್, ಅಂದರೆ ಅತೀ ಹೆಚ್ಚು 50 ಕ್ವಿಂಟಾಲ್‌ಗಳವರೆಗೆ ಮಾತ್ರ ರಾಗಿ ಖರೀದಿ ಮಾಡಲಾಗುತ್ತದೆ. ಜೊತೆಗೆ, FAQ ಮಾನದಂಡಗಳಿಗೆ ತಕ್ಕ ಉತ್ತಮ ಗುಣಮಟ್ಟದ ರಾಗಿಯನ್ನಷ್ಟೇ ಕೇಂದ್ರಗಳು ಸ್ವೀಕರಿಸಲಿವೆ.

ಈ ಬಾರಿ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಎರಡು ಹಂತಗಳಲ್ಲಿ ಬಯೋಮೆಟ್ರಿಕ್ ಪರಿಶೀಲನೆ ನಡೆಯಲಿದೆ

1) ನೊಂದಣಿ ಸಮಯದಲ್ಲಿ

2) ಖರೀದಿ ಸಮಯದಲ್ಲಿ

ಆದ್ದರಿಂದ ರೈತರು ತಮ್ಮ ನೊಂದಾಯಿತ ಖರೀದಿ ಕೇಂದ್ರಗಳಿಗೂ ಮಾತ್ರ ರಾಗಿ ತಂದು ಮಾರಾಟ ಮಾಡಬೇಕು.

ರೈತರು ಕೃಷಿ ಇಲಾಖೆಯಿಂದ ನೀಡಲಾದ FRUITS (ಫ್ರೂಟ್ಸ್) ಐಡಿ ಸಂಖ್ಯೆಯನ್ನು ಖರೀದಿ ಕೇಂದ್ರದಲ್ಲಿ ಕಡ್ಡಾಯವಾಗಿ ನೊಂದಾಯಿಸಬೇಕು. FRUITS ಐಡಿ ಇಲ್ಲದ ರೈತರ ಹೆಸರು ನೋಂದಣಿಗೆ ಮಾನ್ಯವಾಗುವುದಿಲ್ಲ. ಜೊತೆಗೆ, ನೊಂದಣಿ ವೇಳೆ ಆಧಾರ್ ಕಾರ್ಡ್ ತರುವುದು ಕಡ್ಡಾಯ.

ಇದನ್ನೂ ಓದಿ: Bharti Airtel Scholarship-ಭಾರ್ತಿ ಏರ್‌ಟೆಲ್ ಫೌಂಡೇಶನ್‌ ಅಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Ragi MSP Price 2025

ಇದನ್ನೂ ಓದಿ: Caste Survey 2025-ಮನೆಯಿಂದಲೇ ನಿಮ್ಮ ಮೊಬೈಲ್ ಮೂಲಕವೇ ಜಾತಿಗಣತಿ ಸಮೀಕ್ಷೆ ಮಾಡಲು ಅವಕಾಶ!

Farmer Registration-ನೊಂದಣಿಯಾದ ರೈತರಿಂದ ಮಾತ್ರ ರಾಗಿ ಖರೀದಿ ಅವಕಾಶ:

ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರಾಗಿ ಮಾರಾಟ ಮಾಡಲು ರೈತರು ಮೊದಲಿಗೆ ತಮ್ಮ ಸಮೀಪದ ಖರೀದಿ ಕೇಂದ್ರಕ್ಕೆ ತೆರಳಿ, ಅಗತ್ಯ ದಾಖಲೆಗಳು ಮತ್ತು ವಿವರಗಳನ್ನು ನೀಡಿ ನೊಂದಣಿ ಮಾಡಿಕೊಳ್ಳುವುದು ಕಡ್ಡಾಯ. ಸಂಬಂಧಿತ ಇಲಾಖೆಯ ಸೂಚನೆಯಂತೆ, ನೊಂದಣಿ ಮಾಡಿಸಿದ ರೈತರಿಂದ ಮಾತ್ರ ಈ ವರ್ಷ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

How To Sell Millet MSP Price-ರೈತರು ರಾಗಿ ಮಾರಾಟ ಮಾಡುವುದು ಹೇಗೆ?

ಬೆಂಬಲ ಬೆಲೆ (MSP) ಯೋಜನೆ ಅಡಿಯಲ್ಲಿ ರಾಗಿ ಸೇರಿದಂತೆ ಇತರ ಧಾನ್ಯಗಳನ್ನು ಮಾರಾಟ ಮಾಡಲು, ರೈತರು ಮೊದಲು ತಮ್ಮ ಸಮೀಪದ ಖರೀದಿ ಕೇಂದ್ರಕ್ಕೆ ತೆರಳಿ, ಅಗತ್ಯ ವಿವರಗಳು ಮತ್ತು ದಾಖಲಾತಿಗಳೊಂದಿಗೆ ನೊಂದಣಿ ಮಾಡಿಕೊಳ್ಳುವುದು ಕಡ್ಡಾಯ.

ಇದನ್ನೂ ಓದಿ: Azim Premji Foundation-ಅಜೀಂ ಪ್ರೇಮ್ಜಿ ಫೌಂಡೇಶನ್ ವತಿಯಿಂದ ₹30,000 ಸ್ಕಾಲರ್ಶಿಪ್ ಪಡೆಯಲು ಅರ್ಜಿ!

ನೊಂದಣಿ ಪೂರ್ಣವಾದ ನಂತರ, ಅಧಿಕೃತವಾಗಿ ನಿಗದಿಪಡಿಸಿದ ದಿನಾಂಕದಂದು ರೈತರು ತಮ್ಮ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

RELATED ARTICLES
- Advertisment -

Most Popular

Recent Comments