ಇ-ಶ್ರಮ ಕಾರ್ಡ ಅನ್ನು ಪಡೆಯುವುದು ಹೇಗೆ ಮತ್ತು ಈ ಕಾರ್ಡ ಅನ್ನು ಪಡೆಯುವುದರಿಂದ ಆಗುವ ಪ್ರಯೋಜನಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು, ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ಸಹ ಇಲ್ಲಿ ತಿಳಿಸಲಾಗಿದೆ.
ಕೇಂದ್ರ ಸರಕಾರದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಕೇಂದ್ರದ ಕಾರ್ಮಿಕ ಇಲಾಖೆಯು ಈ ಯೋಜನೆಯ ಅನುಷ್ಥಾನದ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯಂತಹ ಯೋಜನೆಗಳ ಸೌಲಭ್ಯವನ್ನು ಒದಗಿಸಲು ಈ ಯೋಜನೆಯನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: Yashaswini Card- ಯಶಸ್ವಿನಿ ಕಾರ್ಡಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಿದ ಸರ್ಕಾರ!
ಇ-ಶ್ರಮ ಕಾರ್ಡ ಅನ್ನು ಯಾರೆಲ್ಲ ಪಡೆಯಬಹುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಸಹ ಇಲ್ಲಿ ತಿಳಿಸಲಾಗಿದ್ದು ಈ ಮಾಹಿತಿಯನ್ನು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಇತರರಿಗೂ ಮಾಹಿತಿ ತಲುಪಿಸಲು ಸಹಕರಿಸಿ.
Who can apply for e shram card- ಕಾರ್ಡ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು:
ಕೇಂದ್ರ ಸರಕಾರದ ಇ-ಶ್ರಮ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಹೋಟಲ್ ಕಾರ್ಮಿಕರು, ಆಟೋ ಚಾಲಕರು, ಇತರೆ ವಾಹನ ಚಾಲಕರು, ಗೃಹ ಕಾರ್ಮಿಕರು, ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಕುಂಬಾರರು, ಚಮ್ಮಾರರು, ಕ್ಷೌರಿಕರು, ಕಸಾಯಿ ಖಾನೆ ಕಾರ್ಮಿಕರು, ಕಮ್ಮಾರರು, ಅಕ್ಕಸಾಲಿಗರು, ಚಿತ್ರ ಬಿಡಿಸುವವರು, ಕುಶಲ ಕಾರ್ಮಿಕರು, ಟಿಂಬರ್ ಕಾರ್ಮಿಕರು, ಮುದ್ರಕರು, ಬೀದಿ ಬದಿ ವ್ಯಾಪಾರಿಗಳು, ಚಿಂದಿ ಆಯುವವರು,
ಇದನ್ನೂ ಓದಿ: Groundnut MSP-ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ ಕೇಂದ್ರ!
ಅಡಿಗೆ ಕೆಲಸಗಾರರು, ಸಫಾಯಿ ಕರ್ಮಚಾರಿಗಳು, ಭದ್ರತಾ ಸಿಬ್ಬಂದಿ/ ವಾಚ್‌ಮೆನ್‌ಗಳು, ಪ್ರವಾಸಿ ಗೈಡ್ ಗಳು, ಮಂಡಕ್ಕಿ ಭಟ್ಟಿ ಕಾರ್ಮಿಕ, ಛಾಯವೃತ್ತಿ ಕಾರ್ಮಿಕರು, ಮಿಲ್ ಕೆಲಸಗಾರು, ಎಲ್ಲಾ ಬಗೆಯ ರಿಪೇರಿ ಕೆಲಸಗಾರರು, ಕಲ್ಲು ಹೊಡೆಯುವ ಕಾರ್ಮಿಕರು, ಬಿದಿರು ಕೆಲಸಗಾರರು, ಕಾಟನ್ ಗಿನ್ನಿಂಗ್ ಮತ್ತು ಪ್ರೊಸೆಸಿಂಗ್, ಬೀಡಿ ಕಟ್ಟುವವರು, ಅಗರಬತ್ತಿ ತಯಾರಿಸುವ ಕಾರ್ಮಿಕರು, ಕಸಾಯಿ ಖಾನೆ ಕಾರ್ಮಿಕರು ಅರ್ಜಿ ಸಲ್ಲಿಸಬಹುದಾಗಿದೆ.
E-shram card application- ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಆನ್ಲೈನ್ ಮೂಲಕ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್/CSC ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: Labor Marriage scheme- ಕಾರ್ಮಿಕ ಇಲಾಖೆಯಡಿ ಮದುವೆಗೆ ₹60,000 ರೂ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!
Documents required for e-shram card- ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1) ಆಧಾರ್ ಕಾರ್ಡ ಪ್ರತಿ
2) ಅರ್ಜಿದಾರರ ಪೋಟೋ
3) ಬ್ಯಾಂಕ್ ಪಾಸ್ ಬುಕ್ ಪ್ರತಿ
4) ಮೊಬೈಲ್ ನಂಬರ್
e-shram Card Online Application- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಇ-ಶ್ರಮ ಕಾರ್ಡ ಅನ್ನು ಪಡೆಯಲು ಆಸಕ್ತ ಅರ್ಜಿದಾರರು ಈ ಕೆಳಗಡೆ ನೀಡಿರುವ ಕೇಂದ್ರ ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ನಲ್ಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: Pension Application-60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ ₹3000 ರೂ ಪಿಂಚಣಿ ಸೌಲಭ್ಯ!
Step-1: ಮೊದಲಿಗೆ e-shram Online Application ಈ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಬಳಿಕ ಇಲ್ಲಿ “ಸ್ವಯಂ ನೋಂದಣಿ” ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿ ಅರ್ಜಿದಾರರ ಆಧಾರ್ ಕಾರ್ಡ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ನಮೂದಿಸಿ ಕೆಳಗಿನ ಕಾಲಂ ನಲ್ಲಿ ಕ್ಯಾಪ್ಚ್ ಕೋಡ್ ಅನ್ನು ಹಾಕಿ “OTP ಕಳುಹಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ದಾಖಲಿಸಿ ಲಾಗಿನ್ ಅಗಬೇಕು.
Step-3: ಲಾಗಿನ್ ಅದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ಇದನ್ನೂ ಓದಿ: Land Documents- ಜಮೀನು ಖರೀದಿ ಹಾಗೂ ಮಾರಾಟ ಮಾಡುವ ಮುನ್ನ ಈ ದಾಖಲೆಗಳು ಸರಿಯಾಗಿರುವುದು ಕಡ್ಡಾಯ!
e-shram card benefits- ಇ-ಶ್ರಮ್ ಕಾರ್ಡ ಪಡೆಯುವುದರ ಪ್ರಯೋಜನಗಳು:
ಇ-ಶ್ರಮ್ ಕಾರ್ಡ ಹೊಂದಿರುವವರು 60 ವರ್ಷ ವಯಸ್ಸಿನ ನಂತರ ರೂ 3000/- ಪಿಂಚಣಿ ಪಡೆಯಬಹುದು.
ಕಾರ್ಮಿಕರು ಅಪಘಾತದಿಂದ ಮರಣಹೊಂದಿದರೆ, ಅವರ ಕುಟುಂಬಕ್ಕೆ 2 ಲಕ್ಷ ಪರಿಹಾರ ಸೌಲಭ್ಯವನ್ನು ಪಡೆಯಲು ಅವಕಾಶವಿರುತ್ತದೆ.
ಕಾರ್ಮಿಕ ಅಪಘಾತದಿಂದ ಅಂಗವೈಕಲ್ಯಕ್ಕೊಳಗಾದರೆ, ಅವರಿಗೆ 1 ಲಕ್ಷ ಪರಿಹಾರ ಪಡೆಯಲು ಅವಕಾಶವಿರುತ್ತದೆ.
ಇದನ್ನೂ ಓದಿ: Department of Excise-ಅಬಕಾರಿ ಇಲಾಖೆಯಲ್ಲಿನ ವರ್ಗಾವಣೆಗೆ ನೂತನ ನಿಯಮ: ಸಚಿವ ಆರ್.ಬಿ.ತಿಮ್ಮಾಪೂರ!
ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕಾಗಿ ರೂ 2000 ಶಿಕ್ಷಣ ಭತ್ಯೆ ನೀಡಲಾಗುತ್ತದೆ ಮತ್ತು ಗರ್ಭವತಿ ಮಹಿಳೆಗೆ – 5,000 ಮಾತೃತ್ವ ಲಾಭ ಸಹಾಯಧನ ನೀಡಲಾಗುತ್ತದೆ.
ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕಾಗಿ 10,000 ವರೆಗೆ ಸಹಾಯಧನ ನೀಡಲಾಗುತ್ತದೆ ಹಾಗೂ ಕಾರ್ಮಿಕರಿಗೆ ಉಚಿತ ವೃತ್ತಿಪರ ತರಬೇತಿ ನೀಡಲಾಗುವುದು, ಇದು ಅವರಿಗೆ ಉತ್ತಮ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಕಾರ್ಮಿಕರು ಸ್ವಯಂ ಉದ್ಯೋಗಕ್ಕಾಗಿ 2 ಲಕ್ಷದವರೆಗೆ ಸಣ್ಣ ಸಾಲಗಳನ್ನು ಪಡೆಯಲು ಅರ್ಹರಾಗುತ್ತಾರೆ.
ಇದನ್ನೂ ಓದಿ: Ration Card e-KYC: ರೇಶನ್ ಕಾರ್ಡ್ ಇ-ಕೆವೈಸಿ ಮಾಡಲು ಇನ್ನೂ12 ದಿನ ಮಾತ್ರ ಬಾಕಿ!
e-shram card helpline-ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 18008896811 ಅಥವಾ 14434