Sunday, February 9, 2025
No menu items!
HomeSchemesYashaswini Card- ಯಶಸ್ವಿನಿ ಕಾರ್ಡಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಿದ ಸರ್ಕಾರ!

Yashaswini Card- ಯಶಸ್ವಿನಿ ಕಾರ್ಡಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಿದ ಸರ್ಕಾರ!

ಯಶಸ್ವಿನಿ ಕಾರ್ಡ್ ಇದು ಕರ್ನಾಟಕ ಸರ್ಕಾರದ ಆರೋಗ್ಯ ಸೇವಾ ಯೋಜನೆಯ(yashaswini card scheme) ಪ್ರಮುಖ ಯೋಜನೆ ಆಗಿದ್ದು, ರೈತರು ಮತ್ತು ಸಹಕಾರಿ ಸಂಘಗಳ ಮೂಲಕ ಅರ್ಹ ಸದಸ್ಯರಿಗೆ ಉಚಿತವಾಗಿ ಚಿಕಿತ್ಸೆಗಳನ್ನು ಪಡೆಯಬಹುದು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಅಡಿಯಲ್ಲಿ, ಯಾವುದೇ ಆರೋಗ್ಯ ಸಮಸ್ಯೆಗೆ ಪರಿಹಾರವಾಗಿ ಆಯ್ಕೆಯಾದ ಆಸ್ಪತ್ರೆಗಳಲ್ಲಿ ಸಹಕಾರಿ ಸಂಘದ ಸದಸ್ಯರು ಸೂಕ್ತವಾದ ಚಿಕಿತ್ಸೆಯನ್ನು ಪಡೆಯಲು ಯಶಸ್ವಿನಿ ಕಾರ್ಡ್ ಬಳಸಬಹುದು. ಈ ಕಾರ್ಡ್ ನ(yashaswini cars benifits) ಮೂಲಕ ಶಸ್ತ್ರಚಿಕಿತ್ಸೆ, ಆಸ್ಪತ್ರೆಯ ಚಿಕಿತ್ಸೆ ಮತ್ತು ಇತರ ವೈದ್ಯಕೀಯ ಸೇವೆಗಳ ವೆಚ್ಚವನ್ನು ಕಡಿಮೆ ಹಣದಲ್ಲಿ ಉತ್ತಮ ವೈದ್ಯಕೀಯ ಸೇವೆಗಳನ್ನು ನೀಡಲು ನೆರವಾಗಿದೆ.

ಇದನ್ನೂ ಓದಿ: Groundnut MSP-ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ ಕೇಂದ್ರ!

ಯಶಸ್ವಿನಿ ಕಾರ್ಡ ಪಡೆಯಲು ಕೊನೆಯ ದಿನಾಂಕವನ್ನು ವಿಸ್ತರಿಸಿದ್ದು ಅರ್ಹ ಅರ್ಜಿದಾರರು ಎಲ್ಲಿ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಯಾರು ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Who Can Apply Yashaswini Card-ಯಶಸ್ವಿನಿ ಕಾರ್ಡ್ ಪಡೆಯಲು ಯಾರು ಅರ್ಜಿಯನ್ನು ಸಲ್ಲಿಸಬೇಕು?

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
  • ಯಾವುದೇ ರೀತಿಯ ಸಹಕಾರಿ ಸಂಘದಲ್ಲಿ ಸದಸ್ಯರಾಗಿದ್ದರೆ ಅರ್ಜಿಯನ್ನು ಸಲ್ಲಿಸಬಹುದು.
  • ಸರಕಾರಿ ನೌಕರಿಯಲ್ಲಿ ಮಾಡುತ್ತಿರುವವರನ್ನು ಹೊರತುಪಡಿಸಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
  • ಒಬ್ಬ ವ್ಯಕ್ತಿಯು ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾಸಿಕ ರೂ.30,000/-ಕ್ಕಿಂತ ಹೆಚ್ಚು ಒಟ್ಟು ವೇತನ ಪಡೆಯುತ್ತಿದ್ದಲ್ಲಿ ಅಂತಹವರು ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಅರ್ಹರಿರುವುದಿಲ್ಲ.
  • ಒಬ್ಬ ವ್ಯಕ್ತಿಯು ಬೇರೆ ಯಾವುದೇ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಸದಸ್ಯರಾಗಿದ್ದರೆ ಈ ಕಾರ್ಡ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Labor Marriage scheme- ಕಾರ್ಮಿಕ ಇಲಾಖೆಯಡಿ ಮದುವೆಗೆ ₹60,000 ರೂ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

  • ಯಶಸ್ವಿನಿ ಯೋಜನೆಯಲ್ಲಿನ “ಕುಟುಂಬ” ಎಂದರೆ ಮುಖ್ಯ ಅರ್ಜಿದಾರರ ತಂದೆ, ತಾಯಿ, ಗಂಡ/ಹೆಂಡತಿ, ಗಂಡು ಮಕ್ಕಳು, ಮದುವೆಯಾಗದ ಹೆಣ್ಣು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು (ಗಂಡು ಮಕ್ಕಳ ಮಕ್ಕಳು) ಎಂದು ಅರ್ಥೈಯಿಸುವುದು. ಒಂದು ಮನೆಯಲ್ಲಿ ಸೊಸೆ ಪ್ರಧಾನ ಅರ್ಜಿದಾರರಾಗಿದ್ದಲ್ಲಿ ಅವರ ಗಂಡನ ತಂದೆ/ತಾಯಿ ಅಂದರೆ ಅರ್ಜಿದಾರರ ಅತ್ತೆ/ಮಾವ ಅರ್ಹ ಸದಸ್ಯರಾಗುತ್ತಾರೆ. ಆದರೆ ಅರ್ಜಿದಾರರ ತಂದೆ/ತಾಯಿಯವರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲು ಅವಕಾಶವಿರುವುದಿಲ್ಲ.
yashaswini card

Whar are the Documents-ಯಶಸ್ವಿನಿ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳೇನು?

ಅರ್ಜಿದಾರರ ಆಧಾರ್ ಕಾರ್ಡ/Aadhar Card

ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್/Bank Passbook

ಅರ್ಜಿದಾರರ ಪೋಟೋ/Photocopy

ಅರ್ಜಿದಾರರ ಮೊಬೈಲ್ ನಂಬರ್/Mobile number

ಇದನ್ನೂ ಓದಿ: Pension Application-60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ ₹3000 ರೂ ಪಿಂಚಣಿ ಸೌಲಭ್ಯ!

Where will apply-ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಯಶಸ್ವಿನಿ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಹ ಅರ್ಜಿದಾರರು ಅರ್ಜಿಯನ್ನು ಆಹ್ವಾನಿಸಿದ ಸಮಯದಲ್ಲಿ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಸಹಕಾರಿ ಸಂಘದ ಕಚೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Important Dates-ಯಶಸ್ವಿನಿ ಕಾರ್ಡ ಪಡೆಯಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭ ದಿನಾಂಕ- 01-12-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31-03- 2025

ಇದನ್ನೂ ಓದಿ: Land Documents- ಜಮೀನು ಖರೀದಿ ಹಾಗೂ ಮಾರಾಟ ಮಾಡುವ ಮುನ್ನ ಈ ದಾಖಲೆಗಳು ಸರಿಯಾಗಿರುವುದು ಕಡ್ಡಾಯ!

Uses of Yashaswini Card-ಯಶಸ್ವಿನಿ ಕಾರ್ಡ ನ ಅಡಿಯಲ್ಲಿ ಬರುವ ಉಪಯೋಗಗಳು?

ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯಡಿಯಲ್ಲಿ ಬರುವ 200ಕ್ಕೂ ಹೆಚ್ಚು ಚಿಕಿತ್ಸಾ ದರವನ್ನು ಪರಿಷ್ಕರಣೆ ಮಾಡಿದ್ದು, ಯಶಸ್ವಿನಿ ಯೋಜನೆಯಡಿ ಬರುವ ದರ ಕಡಿಮೆಯಿದ್ದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಈ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದವು.

ಇದನ್ನೂ ಓದಿ: Department of Excise-ಅಬಕಾರಿ ಇಲಾಖೆಯಲ್ಲಿನ ವರ್ಗಾವಣೆಗೆ ನೂತನ ನಿಯಮ: ಸಚಿವ ಆರ್.ಬಿ.ತಿಮ್ಮಾಪೂರ!

ಇದರಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದು ಕಷ್ಟವಾಗಿತ್ತು. ಇದನ್ನು ಅರಿತ ರಾಜ್ಯ ಸರ್ಕಾರ ಯೋಜನೆಯ ಚಿಕಿತ್ಸಾ ದರವನ್ನು ಶೇ 300ರವರೆಗೂ ಹೆಚ್ಚಳ ಮಾಡಿದೆ. ಪರಿಣಾಮ 370ರಷ್ಟಿದ್ದ ಖಾಸಗಿ ಆಸ್ಪತ್ರೆಗಳ ಸಂಖ್ಯೆ 600ರ ಗಡಿ ದಾಟಿದೆ.

ಈ ಯೋಜನೆಯಡಿ 2,128 ಚಿಕಿತ್ಸೆಗಳು ಲಭ್ಯವಾಗಲಿದ್ದು, ಈ ಪೈಕಿ 206 ಚಿಕಿತ್ಸೆಗಳ ದರ ಪರಿಷ್ಕರಣೆ ಮಾಡಲಾಗಿದೆ. ಈ ಮೊದಲು ಯೋಜನೆಯಡಿ 1,650 ಚಿಕಿತ್ಸೆಗಳನ್ನು ಒದಗಿಸಲಾಗುತ್ತಿತ್ತು. ಯೋಜನೆಯಡಿ ಒಟ್ಟು 637 ನೆಟ್‌ವರ್ಕ್‌ ಆಸ್ಪತ್ರೆಗಳು ನೋಂದಣಿಯಾಗಿದ್ದು, ಇದರಲ್ಲಿ 602 ಖಾಸಗಿ ಆಸ್ಪತ್ರೆಗಳು ನೋಂದಣಿ ಮಾಡಲಾಗಿದೆ.

ಇದನ್ನೂ ಓದಿ: Ration Card e-KYC: ರೇಶನ್ ಕಾರ್ಡ್ ಇ-ಕೆವೈಸಿ ಮಾಡಲು ಇನ್ನೂ12 ದಿನ ಮಾತ್ರ ಬಾಕಿ!

RELATED ARTICLES
- Advertisment -

Most Popular

Recent Comments