ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಕಡಲೆಕಾಳು(Kadale market price) ಮಾಡಲು ಕೃಷಿ ಉತ್ಪನ್ನ ಮಾರಾಟ ಇಲಾಖೆಯ ವತಿಯಿಂದ ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ಒಂದು ವಾರದ ಒಳಗಾಗಿ ನೋಂದಣಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಕೃಷಿಕರ ಪ್ರಾಮುಖ್ಯತೆ ಹಾಗೂ ಕೃಷಿ ಉದ್ಯಮವನ್ನು ಉತ್ತೇಜಿಸಲು(groundnut msp), ರೈತರಿಗೆ ತಮ್ಮ ಬೆಳೆಗಳ ಉತ್ಪಾದನೆಗಳಿಗೆ ಉತ್ತಮ ಬೆಲೆಯಲ್ಲಿ ಮಾರಾಟ ಮಾಡಲು ಈ ಯೋಜನೆಯು ಸಹಾಯಕಾರಿಯಾಗಿದೆ.
ಇದನ್ನೂ ಓದಿ: Labor Marriage scheme- ಕಾರ್ಮಿಕ ಇಲಾಖೆಯಡಿ ಮದುವೆಗೆ ₹60,000 ರೂ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!
ಕಡಲೆಕಾಳು ಬೆಂಬಲ ಬೆಲೆಯಲ್ಲಿ ಯಾವೆಲ್ಲ ಜಿಲ್ಲೆಗಳಲ್ಲಿ ಕಡಲೆಕಾಳುಗಳನ್ನು ಖರೀದಿ ಮಾಡಲಾಗುತ್ತದೆ? ಬೆಂಬಲ ಬೆಲೆಯಲ್ಲಿ ಕಡಲೆಕಾಳುಗಳನ್ನು ಮಾರಾಟ ಮಾಡಲು ಪಾಲನೆಮಾಡಬೇಕಾದ ಅಂಶಗಳಾವುವು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
What is the price fixed by the central government-ಕೇಂದ್ರ ಸರ್ಕಾರದಿಂದ ನಿಗದಿಪಡಿಸಿದ ಕಡಲೆಕಾಳು ಬೆಂಬಲ ಬೆಲೆ ಎಷ್ಟು?
ರಾಜ್ಯ ಸರಕಾರವು ಕಡಲೆಕಾಳುಗಳನ್ನು ಬೆಂಬಲ ಬೆಲೆಗೆ ಖರೀದಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದುದಾಗಿ ಕೃಷಿ ಉತ್ಪನ್ನ ಮಾರಾಟ ಇಲಾಖೆಯಲ್ಲಿ ಪ್ರತಿ ಕ್ವಿಂಟಲ್ ಕಡಲೆಕಾಳಿಗೆ ₹5,650 ರೂ. ಬೆಂಬಲ ಬೆಲೆ ನಿಗದಿಯಾಗಿದೆ ಎಂದು ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Pension Application-60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ ₹3000 ರೂ ಪಿಂಚಣಿ ಸೌಲಭ್ಯ!
Which districts buy groundnut-ಯಾವ ಯಾವ ಜಿಲ್ಲೆಗಳಲ್ಲಿ ಕಡಲೆಕಾಳು ಖರೀದಿ ಮಾಡಲಾಗುತ್ತದೆ?
ಬೀದರ್,ಗದಗ, ಧಾರವಾಡ, ಕೊಪ್ಪಳ, ಬೆಳಗಾವಿ, ಕಲಬುರಗಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಕಡಲೆಕಾಳುಗಳನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರಾದ ಶಿವಾನಂದ ಎಸ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Land Documents- ಜಮೀನು ಖರೀದಿ ಹಾಗೂ ಮಾರಾಟ ಮಾಡುವ ಮುನ್ನ ಈ ದಾಖಲೆಗಳು ಸರಿಯಾಗಿರುವುದು ಕಡ್ಡಾಯ!
When to submit application for groundnut-ಕಡಲೆಕಾಳು ಖರೀದಿ ನೋಂದಣಿಗೆ ಅರ್ಜಿಯನ್ನು ಯಾವಾಗ ಸಲ್ಲಿಸಬೇಕು?
ಕಡಲೆಕಾಳುಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಇನ್ನು ಒಂದು ವಾರದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು, ನೋಂದಣಿಗಾಗಿ 80 ದಿನ ಹಾಗೂ ಖರೀದಿಗಾಗಿ 90 ದಿನಗಳ ಅವಧಿಯನ್ನು ರೈತರಿಗೆ ನೀಡಲಾಗುತ್ತದೆ ಎಂದು ಇಲಾಖೆ ಸಚಿವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Where to register to sell groundnut-ಕಡಲೆಕಾಳು ಮಾರಾಟ ಮಾಡಲು ಎಲ್ಲಿ ನೋಂದಣಿಯನ್ನು ಮಾಡಬೇಕು?
ಇದನ್ನೂ ಓದಿ: Department of Excise-ಅಬಕಾರಿ ಇಲಾಖೆಯಲ್ಲಿನ ವರ್ಗಾವಣೆಗೆ ನೂತನ ನಿಯಮ: ಸಚಿವ ಆರ್.ಬಿ.ತಿಮ್ಮಾಪೂರ!
ನಾಫೆಡ್ ಮತ್ತು ಎನ್‍ಸಿಸಿಎಫ್ ಸಂಸ್ಥೆಗಳನ್ನು ಹಾಗೂ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಮತ್ತು ಕಲಬುರಗಿಯ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನು ಕಡಲೆಕಾಳು ಖರೀದಿ ಮಾಡುವ ಖರೀದಿ ಸಂಸ್ಥೆಗಳನ್ನಾಗಿ ನೇಮಕ ಮಾಡಿ, ಕಡಲೆಕಾಳು ಖರೀದಿಗಾಗಿ ಹಂಚಿಕೆ ಮಾಡಿರುವ ಜಿಲ್ಲೆಗಳನ್ನು ನಿರ್ಧರಿಸಿದೆ. ರೈತರು ತಮ್ಮ ಸಮೀಪದ ಟಿ.ಎ.ಪಿ.ಸಿ.ಎಂ.ಎಸ್, ಎಫ್.ಪಿ.ಒ ಹಾಗೂ ಪಿ.ಎ.ಸಿ.ಎಸ್.ಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.
What are the documents-ಕಡಲೆಕಾಳು ಖರೀದಿ ನೋಂದಣಿಗೆ ಬೇಕಾದ ಅಗತ್ಯ ದಾಖಲೆಗಳೇನು?
- ಅರ್ಜಿದಾರರ ಆಧಾರ್ ಕಾರ್ಡ/Aadhar card
- ಬ್ಯಾಂಕ್ ಪಾಸ್ ಬುಕ್/Bank Passbook
- FID ನಂಬರ್/FID number
- ಜಮೀನಿನ ಪಹಣಿ/RTC
- ಕೃಷಿ ಕೇಂದ್ರದಿಂದ ಪಡೆದ ಪ್ರಮಾಣಪತ್ರ/Certificate from Agriculture Centre
ಇದನ್ನೂ ಓದಿ: Ration Card e-KYC: ರೇಶನ್ ಕಾರ್ಡ್ ಇ-ಕೆವೈಸಿ ಮಾಡಲು ಇನ್ನೂ12 ದಿನ ಮಾತ್ರ ಬಾಕಿ!