Thursday, February 6, 2025
No menu items!
HomeNewsRation Card e-KYC: ರೇಶನ್ ಕಾರ್ಡ್ ಇ-ಕೆವೈಸಿ ಮಾಡಲು ಇನ್ನೂ09 ದಿನ ಮಾತ್ರ ಬಾಕಿ!

Ration Card e-KYC: ರೇಶನ್ ಕಾರ್ಡ್ ಇ-ಕೆವೈಸಿ ಮಾಡಲು ಇನ್ನೂ09 ದಿನ ಮಾತ್ರ ಬಾಕಿ!

ಆಹಾರ ಇಲಾಖೆಯಿಂದ ಪಡಿತರ ಚೀಟಿ ಹೊಂದಿರುವ ಗ್ರಾಹಕರು ಇ-ಕೆವೈಸಿಯನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದ್ದು ಇಲ್ಲಿಯವರೆಗೆ ರೇಷನ್ ಕಾರ್ಡ ಇ-ಕೆವೈಸಿ ಮಾಡಿಸದವರು ಕೂಡಲೇ ಇ-ಕೆವೈಸಿಯನ್ನು ಮಾಡಿಕೊಳ್ಳಲು ಇಲಾಖೆಯಿಂದ ಸೂಚನೆಯನ್ನು ನೀಡಲಾಗಿದೆ.

ಪ್ರಸ್ತುತ ಗ್ರಾಮ ಒನ್/ಬೆಂಗಳೂರು ಒನ್/ ಕರ್ನಾಟಕ ಒನ್ ಕೇಂದ್ರಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ ಮತ್ತು ಇ-ಕೆವೈಸಿ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ತಿಂಗಳ 31 ರ ವರೆಗೆ ಅವಕಾಶ ನೀಡಲಾಗಿದ್ದು ಈ ಸೌಲಭ್ಯದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಲು ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: Yashasvini Card- ಯಶಸ್ವಿನಿ ಕಾರ್ಡ್ ನೋಂದಣಿಗೆ ಕೇವಲ 13 ದಿನಗಳು ಮಾತ್ರ ಬಾಕಿ!

ರೇಶನ್ ಕಾರ್ಡ ಇ-ಕೆವೈಸಿ ಅಗಿರುವುದನ್ನು ಮೊಬೈಲ್ ನಲ್ಲೆ ಹೇಗೆ ಚೆಕ್ ಮಾಡಿಕೊಳ್ಳಬಹುದು? ಹಾಗೂ ಇ-ಕೆವೈಸಿ ಮಾಡಿಕೊಳ್ಳಲು ಯಾವೆಲ್ಲ ದಾಖಲಾತಿಗಳು ಅವಶ್ಯಕ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ration card

ಇದನ್ನೂ ಓದಿ: Kisan credit card-ರೈತರಿಗೆ ಗುಡ್ ನ್ಯೂಸ್! ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲ ಸೌಲಭ್ಯ!

ration card ekyc

ಇದನ್ನೂ ಓದಿ: Morarji Desai school- ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ!

Where to submit application for doing e-kyc: e-kyc ಮಾಡಿಸಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಗ್ರಾಹಕರು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ರೇಶನ್ ಕಾರ್ಡ ಇ-ಕೆವೈಸಿಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Agro Shop License-ರಸಗೊಬ್ಬರ ಮತ್ತು ಬೀಜ ಅಂಗಡಿಯ ಲೈಸೆನ್ಸ್ ಪಡೆಯುವುದು ಹೇಗೆ! ಇಲ್ಲಿದೆ ಉಪಯುಕ್ತ ಮಾಹಿತಿ!

How to apply for e-kyc: ರೇಶನ್ ಕಾರ್ಡ್ e-kyc ಚೆಕ್ ಮಾಡುವ ವಿಧಾನ?

ಸಾರ್ವಜನಿಕರು ರ‍ೇಷನ್ ಕಾರ್ಡ ಇ-ಕೆವೈಸಿ ಅಗಿದಿಯೋ ಇಲ್ಲವೇ ಎಂದು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಲು ಅವಕಾಶವಿರುತ್ತದೆ ಈ ಲಿಂಕ್ Ration Card e-KYC status check ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ “ಇ-ಸ್ಥಿತಿ” ಆಯ್ಕೆ ವಿಭಾಗದ ಮೇಲೆ ಕ್ಲಿಕ್ ಮಾಡಿ “ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ” ಆಯ್ಕೆಯ ಮೇಲೆ ಒತ್ತಿ ನಿಮ್ಮ ಜಿಲ್ಲೆ ಯಾವ ವಿಭಾಗದಲ್ಲಿ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ “ಪಡಿತರ ಚೀಟಿ ವಿವರ” ಆಯ್ಕೆಯ ಮೇಲೆ ಕ್ಲಿಕ್ ಮಾಡಿಬೇಕು.

ಬಳಿಕ ಈ ಪೇಜ್ ನಲ್ಲಿ ಎರಡು ಆಯ್ಕೆಗಳು ತೋರಿಸುತ್ತವೆ ಇದರಲ್ಲಿ “With OTP” ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ರೇಶನ್ ಕಾರ್ಡ ಸಂಖ್ಯೆಯನ್ನು ನಮೂದಿಸಿ “GO” ಬಟನ್ ಮೇಲೆ ಕ್ಲಿಕ್ ಮಾಡಿ “e-KYC Status” ಕಾಲಂ ನಲ್ಲಿ “Done” ಎಂದು ತೋರಿಸಿದರೆ ನಿಮ್ಮ ರೇಶನ್ ಕಾರ್ಡ ನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಅಗಿದೆ ಎಂದು ಅರ್ಥ.

ಇದನ್ನೂ ಓದಿ: Aadhar card- ಉಚಿತ ಆಧಾರ್ ಕಾರ್ಡ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

What are the required documents to do e-kyc: e-kyc ಮಾಡಿಸಲು ಬೇಕಾದ ಅಗತ್ಯ ದಾಖಲೆಗಳೇನು?

  • ಆಧಾರ್ ಕಾರ್ಡ್/Aadhar Card
  • ರೇಶನ್ ಕಾರ್ಡ ಪ್ರತಿ/Ration Card
  • ಮೊಬೈಲ್ ನಂಬರ್/Mobile Number
RELATED ARTICLES
- Advertisment -

Most Popular

Recent Comments