Sunday, February 9, 2025
No menu items!
HomeSchemesLabor Marriage scheme- ಕಾರ್ಮಿಕ ಇಲಾಖೆಯಡಿ ಮದುವೆಗೆ ₹60,000 ರೂ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Labor Marriage scheme- ಕಾರ್ಮಿಕ ಇಲಾಖೆಯಡಿ ಮದುವೆಗೆ ₹60,000 ರೂ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಡ ಮಂಡಳಿ ವತಿಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ(Labor welfare grant) ಮತ್ತೊಂದು ಮಹತ್ವಪೂರ್ಣ ನಿರ್ಧಾರವನ್ನು ಮಾಡಿದ್ದು, ಗ್ರಾಮೀಣ ಪ್ರದೇಶಗಳ ಕಾರ್ಮಿಕರಿಗೆ ಸರಕಾರವು ಮದುವೆ ಬೆಂಬಲ ಯೋಜನೆಯ ಅಡಿಯಲ್ಲಿ ₹60,000 ರೂ. ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯ ಉದ್ದೇಶವು ಆರ್ಥಿಕವಾಗಿ ಹಿಂದುಳಿದ ಕಾರ್ಮಿಕ ಕುಟುಂಬಗಳಿಗಾಗಿ ರೂಪಿಸಲಾಗಿದ್ದು, ಸಮಾಜದಲ್ಲಿ ಕುಟುಂಬದ ಸಂಬಂಧಗಳನ್ನು(Marriage support scheme) ಬಲಪಡಿಸಲು ಮತ್ತು ಸಾಮಾಜಿಕ ಪ್ರಗತಿಯಲ್ಲಿ ಸಾಗಲು ಸಹಾಯ ಮಾಡುತ್ತದೆ. ಹಾಗೂ ನಿರುದ್ಯೋಗ ಅಥವಾ ಆರ್ಥಿಕವಾಗಿ ತೊಂದರೆಗಳಿಂದಿರುವ ರ್ಕಾರ್ಮಿಕರ ಜೀವನದಲ್ಲಿ ಸುಧಾರಣೆಯನ್ನು ನೋಡುವುದರ ಉದ್ದೇಶವಾಗಿದೆ.

ಇದನ್ನೂ ಓದಿ: Pension Application-60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ ₹3000 ರೂ ಪಿಂಚಣಿ ಸೌಲಭ್ಯ!

ಸರ್ಕಾರವು ಕಾರ್ಮಿಕರ ಸಕಾರಾತ್ಮಕ ಬೆಳವಣಿಗೆಗಾಗಿ ಹೊಸ ತಲೆಮಾರಿಗೆ ವಿಶೇಷ ಮಾಹಿತಿಯನ್ನು ಘೋಷಿಸಿದ್ದು, ಈ ಯೋಜನೆಯ ಸಹಾಯಧನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Who should apply for this scheme-ಈ ಯೋಜನೆಗೆ ಯಾರು ಅರ್ಜಿಯನ್ನು ಸಲ್ಲಿಸಬೇಕು?

  • ಅರ್ಜಿದಾರರ ವಯಸ್ಸು18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
  • ಅರ್ಜಿದಾರರು ಅಂತರ್-ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿರಬೇಕು.
  • ಅರ್ಜಿ ಸಲ್ಲಿಸುವ ಮುಂಚಿತವಾಗಿ ತಮ್ಮ ಪೋಷಕರನ್ನು ಕಾರ್ಮಿಕರ ಪಟ್ಟಿಯಲ್ಲಿ ನೋಂದಾಯಿಸಿ ಕೊಂಡಿರಬೇಕು.
  • ಒ೦ದು ಕುಟು೦ಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅವಕಾಶವಿರುತ್ತದೆ.
  • ಮ೦ಡಳಿಯಲ್ಲಿ ನೋ೦ದಾಯಿತ ಸದಸ್ಯರಾಗಿರಬೇಕು ಹಾಗೂ ಮ೦ಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
marrige fund

ಇದನ್ನೂ ಓದಿ: Land Documents- ಜಮೀನು ಖರೀದಿ ಹಾಗೂ ಮಾರಾಟ ಮಾಡುವ ಮುನ್ನ ಈ ದಾಖಲೆಗಳು ಸರಿಯಾಗಿರುವುದು ಕಡ್ಡಾಯ!

Where to apply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಜಿಯನ್ನು ಸಲ್ಲಿಸಲು ನೇರವಾಗಿ ಜಿಲ್ಲೆಯ ಕಾರ್ಮಿಕ ಇಲಾಖೆ ಅಥವಾ ಸ್ಥಳೀಯ ಕಾರ್ಯಾಲಯಕ್ಕೆ ಭೇಟಿ ಮಾಡಿ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ಮದುವೆಯ ದಿನಾ೦ಕದಿಂದ 6 ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಸರ್ಕಾರವು ನಿಗದಿಪಡಿಸಿರುವ ಅಧಿಕೃತ ವೆಬ್‌ಸೈಟ್ ಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

How to submit an application?ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಇದನ್ನೂ ಓದಿ: Department of Excise-ಅಬಕಾರಿ ಇಲಾಖೆಯಲ್ಲಿನ ವರ್ಗಾವಣೆಗೆ ನೂತನ ನಿಯಮ: ಸಚಿವ ಆರ್.ಬಿ.ತಿಮ್ಮಾಪೂರ!

ಹಂತ-೧: ಮೊದಲು ಈ ಲಿಂಕ್ ಮೇಲೆ Apply now ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.

ಹಂತ-೨: ಈ ಜಾಲತಾಣವನ್ನು ಭೇಟಿ ಮಾಡಿದ ನಂತರ “Log in” ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ “Registration” ಬಟನ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಬೇಕು.

ಹಂತ-೩: ಬಳಿಕ ಅಲ್ಲಿ ಕಾಣುವ “Schemes” ಬಟನ್ ಮೇಲೆ ಕ್ಲಿಕ್ ಮಾಡಬೇಕು, ತದನಂತರ “ಮದುವೆ ಸಹಾಯಧನ” ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿರುವ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು.

ಇದನ್ನೂ ಓದಿ: Ration Card e-KYC: ರೇಶನ್ ಕಾರ್ಡ್ ಇ-ಕೆವೈಸಿ ಮಾಡಲು ಇನ್ನೂ12 ದಿನ ಮಾತ್ರ ಬಾಕಿ!

ಹಂತ-೪: ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿದ ನಂತರ ಕೊನೆಯಲ್ಲಿ “submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

Requird Documents- ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳೇನು?

ಆಧಾರ್ ಕಾರ್ಡ್/Aadhaar card
ಬ್ಯಾಂಕ್ ಖಾತೆ ವಿವರ/Bank account details
ಮದುವೆಯ ಅರ್ಜಿ ಪ್ರತಿ/Marriage application copy
ವಿವಾಹ ಪ್ರಮಾಣಪತ್ರ/Marriage Certificate
ಕಾರ್ಮಿಕ ನವಿರಣಾ ದಾಖಲೆ/Labor Maintenance Record

ಇದನ್ನೂ ಓದಿ: Yashasvini Card- ಯಶಸ್ವಿನಿ ಕಾರ್ಡ್ ನೋಂದಣಿಗೆ ಕೇವಲ 13 ದಿನಗಳು ಮಾತ್ರ ಬಾಕಿ!

For more information- ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ: Click Here

RELATED ARTICLES
- Advertisment -

Most Popular

Recent Comments