ಕೃಷಿ ಇಲಾಖೆಯ ವತಿಯಿಂದ ಬೀಜ ಮತ್ತು ರಸಗೊಬ್ಬರ ಅಂಗಡಿಯ ಲೈಸೆನ್ಸ್(Seed and Fertilizer Shop License) ನ್ನು ಪಡೆದುಕೊಳ್ಳಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಕೃಷಿ ಕ್ಷೇತ್ರವು ದೇಶದ ಆರ್ಥಿಕತೆಯಲ್ಲಿ(Agriculture sector in the country’s economy) ಮಹತ್ವಪೂರ್ಣ ಪಾತ್ರವನ್ನು ಹೊಂದಿದ್ದು, ಬೀಜ ಮತ್ತು ಗೊಬ್ಬರ ಅಂಗಡಿ ಆರಂಭಿಸಲು, ಸರಿಯಾದ ಪರವಾನಗಿ ಅಥವಾ ಲೈಸೆನ್ಸ್ ಪಡೆಯುವುದು ಅತಿ ಮುಖ್ಯ, ಏಕೆಂದರೆ ಇದು ವ್ಯಾಪಾರಕ್ಕೆ ಕಾನೂನಾತ್ಮಕವಾಗಿ ಮಾನ್ಯತೆ ನೀಡುತ್ತದೆ ಮತ್ತು ರೈತರಿಗೆ ಗುಣಮಟ್ಟದ ಉತ್ಪನ್ನಗಳನ್ನು ಸರಿಯಾಗಿ ಒದಗಿಸಲು ಸಹಾಯ ಮಾಡುತ್ತದೆ.
ಬೀಜ ಮತ್ತು ಗೊಬ್ಬರ ಅಂಗಡಿಗಳು ಕೃಷಿ ಕ್ಷೇತ್ರದಲ್ಲಿ(field of agriculture) ಅವಿಭಾಜ್ಯ ಭಾಗವಾಗಿದ್ದು, ರೈತರಿಗೆ ತಮ್ಮ ಬೆಳೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Kisan credit card-ರೈತರಿಗೆ ಗುಡ್ ನ್ಯೂಸ್! ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲ ಸೌಲಭ್ಯ!
ಕೃಷಿ ನಿಯಮಗಳ ಪ್ರಕಾರ, ಬೀಜ ಮತ್ತು ಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಾಡುವ ಅಂಗಡಿಗೆ ಇಲಾಖೆಗಳಿಂದ ಅನುಮತಿ ಪಡೆಯಲು ಅಗತ್ಯವಾಗಿದೆ. ಆದ್ದರಿಂದ ಈ ಪರವಾನಿಗೆ ಪಡೆಯುವುದು ಹೇಗೆ? ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಇನ್ನು ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Who is Eligible for Seed and Fertilizer Shop License-ಬೀಜ ಮತ್ತು ರಸಗೊಬ್ಬರ, ಕೀಟನಾಶಕ ಅಂಗಡಿ ಲೈಸೆನ್ಸ್ ಪಡೆಯಲು ಯಾರು ಅರ್ಹರು?
ಇದನ್ನೂ ಓದಿ: Udyogini Yojana-ಉದ್ಯೋಗಿನಿ ಯೋಜನೆಯಡಿ ₹3.0 ಲಕ್ಷ ರೂ ಬಡ್ಡಿ ರಹಿತ ಸಾಲ!
- ಅಭ್ಯರ್ಥಿಗೆ 18 ವರ್ಷದ ಮೇಲ್ಪಟ್ಟಿರಬೇಕು.
- ಅಭ್ಯರ್ಥಿಯು ಯಾವುದೇ ಅಪರಾಧಿಗಳಿಗೆ ಮತ್ತು ಕಾನೂನು ಉಲ್ಲಂಘನೆಗಳಿಗೆ ಒಳಗಾಗಬಾರದು.
- ಕೃಷಿ ವಿಶ್ವವಿದ್ಯಾಲಯದಲ್ಲಿ ನಾಲ್ಕು ವರ್ಷದ ಕೃಷಿಯಲ್ಲಿ ಪದವಿಯನ್ನು ಪಡೆದಿರಬೇಕು.
- ಕೃಷಿ ಡಿಪ್ಲೋಮಾ, ರಸಾಯನಶಾಸ್ತ್ರ ವಿಷಯದಲ್ಲಿ ಪದವಿಯನ್ನು ಪಡೆದಿರುವವರು ಅರ್ಜಿಯನ್ನು ಸಲ್ಲಿಸಬಹುದು.
- ಅರ್ಜಿದಾರರು ಅಂಗಡಿ ನಡೆಸಲು ಸ್ಥಳವನ್ನು ಹೊಂದಿರಬೇಕು ಅಥವಾ ಕಾನೂನಾತ್ಮಕ ಬಾಡಿಗೆ ಒಪ್ಪಂದವನ್ನು ಹೊಂದಿರಬೇಕು.
- ಅರ್ಜಿದಾರರು ಎಲ್ಲಾ ಕೃಷಿ ಮತ್ತು ಗೊಬ್ಬರಗಳ ಮಾರಾಟಕ್ಕೆ ಸಂಬಂಧಿಸಿದ ಕಾನೂನು ಮತ್ತು ನಿಯಮಗಳನ್ನು ಪಾಲಿಸಲು ಒಪ್ಪಿಗೆಯಿರಬೇಕು.
ಇದನ್ನೂ ಓದಿ: Shri Kshetra Dharmasthala- ಧರ್ಮಸ್ಥಳದಲ್ಲಿ 52 ನೇ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ!
What are the documents required to obtain shop license-ಬೀಜ ಮತ್ತು ರಸಗೊಬ್ಬರ ಅಂಗಡಿ ಲೈಸೆನ್ಸ್ ಪಡೆಯಲು ಅಗತ್ಯ ದಾಖಲೆಗಳೇನು?
- ಅರ್ಜಿದಾರರ ಆಧಾರ್ ಕಾರ್ಡ/Aadhar Card
- ಪಾನ್ ಕಾರ್ಡ/Pan Card
- GST ಪ್ರಮಾಣ ಪತ್ರ/GST Certificate
- ವಿದ್ಯಾರ್ಹತೆ ಪ್ರಮಾಣ ಪತ್ರ/Educational Certificate
- ಅಂಗಡಿ ಸ್ಥಳದ Site Map/Map
- ಅಂಗಡಿ ಬಾಡಿಗೆ ಅಗ್ರಿಮೇಂಟ್ ಪ್ರತಿ/Shop Agriment Certificate
- ಸ್ಥಳೀಯ ಪ್ರಾಧಿಕಾರದ ಪರವಾನಗಿ ಪತ್ರ/License letter from local authority
- ಶುಲ್ಕ ಪಾವತಿ ಚಾನೆಲ್/Fee payment channel
- ಕೀಟನಾಶಕಗಳಿಗೆ ಅನುಮೋದಿತ ಪ್ರಧಾನ ಪ್ರಮಾಣಪತ್ರ/Approved Principal Certifiacate for pesticides
- ರಸಗೊಬ್ಬರ ಮೂಲವಾರು ಅಧಿಕೃತ ನಮೂನೆ/Source wise authorized form-o with fertilizer details
- ಪೂರೈಕೆಯ A2-ಸಗಟು ಮಾರ್ಕೆಟಿಂಗ್ ಪರವಾನಗಿ/Source of supply A2-Wholesale marketing license
ಇದನ್ನೂ ಓದಿ: Gruhalakshmi amount- ಈ ಪಟ್ಟಿಯಲ್ಲಿ ಹೆಸರಿರುವವರಿಗಿಲ್ಲ ಗೃಹಲಕ್ಷ್ಮಿ ಹಣ! ನಿಮ್ಮ ಹೆಸರಿದಿಯಾ ಚೆಕ್ ಮಾಡಿಕೊಳ್ಳಿ!
Where to apply for license-ಲೈಸೆನ್ಸ್ ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಕೃಷಿ ಇಲಾಖೆಯ ಕೆ-ಕಿಸಾನ್ ತಂತ್ರಾಂಶವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅಥವಾ, ನೀವು ನಗರ ಪಾಲಿಕೆಗೆ ಅಥವಾ ಪಟ್ಟಣ ಪಂಚಾಯತಿಯಲ್ಲಿಯೂ ಸಹ ಅರ್ಜಿಯನ್ನು ಸಲ್ಲಿಸಬಹುದು.
Procedures for applying for license-ಲೈಸೆನ್ಸ್ ಪಡೆಯಲು ಅರ್ಜಿಯನ್ನು ಸಲ್ಲಿಸುವ ವಿಧಾನಗಳು:
ಹಂತ-1: ಮೊದಲು Fertilizer shop license ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕೆ-ಕಿಸಾನ್ ತಂತ್ರಾಂಶವನ್ನು ಭೇಟಿ ಮಾಡಬೇಕು.
ಹಂತ-2: ನಂತರ ಆ ಪೇಜ್ ನಲ್ಲಿ ಕಾಣುವ Register(ನೋಂದಣಿ) ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ Firm Name ಮತ್ತು ವಿಳಾಸದ ವಿವರ ಸೇರಿದಂತೆ ಇತರೆ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ ಕಾಣುವ Enter Security Code ಅಲ್ಲಿ ಕೋಡ್ ಹಾಕಿ ಬಳಕೆದಾರರ Password ಮತ್ತು ID ಅನ್ನು ಹಾಕಿ ತಯಾರು ಮಾಡಿಕೊಳ್ಳಬೇಕು.
ಇದನ್ನೂ ಓದಿ: Monthly Scholarship- ತಿಂಗಳಿಗೆ ₹10,000 ರೂ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!
ಹಂತ-3: ಮೇಲಿನ ತಿಳಿಸಿದ ಹಂತಗಳನ್ನು ಅನುಸರಿಸಿ ಬಳಕೆದಾರ Password ಮತ್ತು ID ಅನ್ನು ತಯಾರು ಮಾಡಿಕೊಂಡ ನಂತರ Login ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ಹಾಕಿ ಲಾಗಿನ್ ಅಗಬೇಕು.
ಹಂತ-4: ಲಾಗಿನ್ ಅದ ಬಳಿಕ ಅರ್ಜಿ ನಮೂನೆ ಕಾಣಿಸುತ್ತದೆ. ಇಲ್ಲಿ ಅರ್ಜಿದಾರರ ವೈಯಕ್ತಿಕ ವಿವರ ಮತ್ತು ಅಂಗಡಿ ಪರವಾನಗಿಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಶುಲ್ಕ ಪಾವತಿ ಮಾಡಿದರೆ ಅರ್ಜಿ ಸಲ್ಲಿಸುವ ಪ್ರಕಿಯೆ ಪೂರ್ಣಗೊಳ್ಳುತ್ತದೆ.