Thursday, February 13, 2025
No menu items!
HomeAgricultureDepartment of Animal Husbandry-ಪಶು ಸಂಗೋಪನೆ ಇಲಾಖೆಯಿಂದ ಉಚಿತ ಕೋಳಿಮರಿ ಪಡೆಯಲು ಅರ್ಜಿ ಆಹ್ವಾನ!

Department of Animal Husbandry-ಪಶು ಸಂಗೋಪನೆ ಇಲಾಖೆಯಿಂದ ಉಚಿತ ಕೋಳಿಮರಿ ಪಡೆಯಲು ಅರ್ಜಿ ಆಹ್ವಾನ!

ಪಶು ಸಂಗೋಪನೆ ಇಲಾಖೆ(Department of Animal Husbandry) ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು(Economically backward families) ಮತ್ತು ಕೋಳಿ ಸಾಕಾಣಿಕೆ ಮಾಡುವ ಆಸಕ್ತ ರೈತರಿಗೆ ಉಚಿತವಾಗಿ ಕೋಳಿ ಮರಿಗಳನ್ನು ಪಡೆಯಲು ಅರ್ಜಿ ಕರೆಯಲಾಗಿದೆ.

ಈ ಯೋಜನೆಯ ಉದ್ದೇಶವು ಬಡತನವನ್ನು ಕಡಿಮೆ ಮಾಡಲು ಸ್ವಾವಲಂಬನೆ ಮತ್ತು ಆರ್ಥಿಕ ಸುಧಾರಣೆಗಾಗಿ(self-reliance and economic improvement)ಬಡ ಜನರಿಗೆ ಸಹಾಯಮಾಡುತ್ತದೆ. ಹಾಗೂ ಈ ಯೋಜನೆಯಡಿಯಲ್ಲಿ ಅರ್ಹ ಮಹಿಳೆಯರಿಗೆ ಕೋಳಿಮರಿ ಪಡೆಯುವುದರ ಜೊತೆಗೆ ಪಶುಪಾಲನೆ(Animal Husbandry) ಕುರಿತಾಗಿ ಮಾರ್ಗದರ್ಶನವನ್ನು ನೀಡಲಾಗುವುದು. ತರಬೇತಿ ಮತ್ತು ಬೆಂಬಲವನ್ನು ಸಹ ಒದಗಿಸಿಕೊಡಲಾಗುತ್ತದೆ. ಇದೇ ರೀತಿ ಕೋಳಿ ಸಾಕಾಣಿಕೆ ಮತ್ತು ಪೋಷಣೆಗೆ ಸಂಬಂಧಪಟ್ಟಂತೆ ಸ್ವಾವಲಂಬಿ ಉದ್ಯಮವನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಅಭಿವೃದ್ಧಿಗೆ ಸಹಾಯವನ್ನು ಮಾಡಲು ಈ ಯೋಜನೆಯು ಮುಖ್ಯ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: Today Gold Rate-ಗೋಲ್ಡ್ ಪ್ರಿಯರಿಗೆ ಮತ್ತೆ ಶಾಕ್! ಕೊಂಚ ಏರಿಕೆಯತ್ತ ಇಂದಿನ ಚಿನ್ನದ ದರ!

ಉಚಿತ ಕೋಳಿ ಮರಿಯನ್ನು ಪಡೆಯಲು ಕೋಳಿ ಸಾಕಾಣಿಕೆ ಸೂಕ್ತವಾದ ಸ್ಥಳ ಮತ್ತು ಮೂಲಸೌಕರ್ಯಗಳನ್ನು ಪಡೆದುಕೊಳ್ಳಲು ಯಾರು ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳೇನು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಇನ್ನು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Who should submit to get free chicks-ಉಚಿತ ಕೋಳಿ ಮರಿ ಪಡೆಯಲು ಯಾರು ಸಲ್ಲಿಸಬೇಕು?

ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅವಕಾಶವಿರುತ್ತದೆ.

ಎಲ್ಲಾ ವರ್ಗದ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು.

ಹೆಚ್ಚಿನದಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು.

ಕಳೆದ ವರ್ಷದಲ್ಲಿ ಈ ಯೋಜನೆಯಡಿ ಕೋಳಿ ಮರಿ ಪಡೆದಿರುವವರು ಈ ವರ್ಷ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Yashswini Yojana-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆ ಪಡೆಯಬಹುದು?ಇಲ್ಲಿದೆ ಸಂಪೂರ್ಣ ಮಾಹಿತಿ!

Where to submit the application-ಅರ್ಜಿಯಲ್ಲಿ ಎಲ್ಲಿ ಸಲ್ಲಿಸಬೇಕು?

ಅರ್ಹ ಮಹಿಳೆಯರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ತಾಲ್ಲೂಕಿನ ಪಶುಸಂಗೋಪನೆ ಇಲಾಖೆಯ ಕಚೇರಿಯನ್ನು(Department of Animal Husbandry) ಪ್ರವೇಶ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

pashusangopane ilake

ಇದನ್ನೂ ಓದಿ: Free sewing machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

What are the required documents to apply-ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳೇನು?

ಅರ್ಜಿದಾರರ ಆಧಾರ ಕಾರ್ಡ ಪ್ರತಿ/Aadhaar card copy of the applicant
ಅರ್ಜಿದಾರರ ಪೋಟೋ/Photo copy
ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Passbook
ಅರ್ಜಿದಾರರ ಮೊಬೈಲ್ ನಂಬರ್/Mobile number

ಇದನ್ನೂ ಓದಿ: Gruhalakshmi Status- ನಿಮ್ಮ ಆಧಾರ್ ನಂಬರ್ ಹಾಕಿ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

Objectives of the Animal Husbandry Scheme-ಕೋಳಿ ಸಾಕಾಣಿಕೆ ಯೋಜನೆಯ ಮುಖ್ಯ ಉದ್ದೇಶಗಳು ಹೀಗಿವೆ:

ಆರ್ಥಿಕ ಶಕ್ತಿ ನೀಡುವುದು(Financial empowerment):

ಬಡ ಕುಟುಂಬಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆಯ ಅವಕಾಶ ನೀಡುವುದ ಜೊತೆಗೆ ಹಕ್ಕಿ ಸಾಕಣೆ ವೃತ್ತಿಯಿಂದ ಮಾಂಸ ಮತ್ತು ಮೊಟ್ಟೆ ಮಾರಾಟದ ಮೂಲಕ ದೈನಂದಿನ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವುದು.

ಸಮುದಾಯ ಅಭಿವೃದ್ಧಿ(Community development):

ಗ್ರಾಮೀಣ ಸಮುದಾಯದಲ್ಲಿ ಹಕ್ಕಿಪಾಲನೆಯು ಆರ್ಥಿಕ ಮತ್ತು ಪೋಷಣಾ ಉಪಯೊಗಗಳನ್ನು ಒದಗಿಸುವುದರ ಜೊತೆಗೆ ಈ ಯೋಜನೆ ಸ್ವಾವಲಂಬಿ ಉದ್ಯಮಶೀಲತೆಯನ್ನು ಉತ್ತೇಜಿಸಿ ಸ್ಥಳೀಯ ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಪೋಷಕಾಂಶ ಒದಗಿಸುವುದು(Providing nutrients):

ಹಕ್ಕಿ ಸಾಕಾಣಿಕೆಯಿಂದ ಹೆಚ್ಚು ಮೊಟ್ಟೆ ಮತ್ತು ಮಾಂಸವನ್ನು ಉತ್ಪಾದಿಸಿ, ಪೋಷಕಾಂಶ ಇರುವ ಆಹಾರವನ್ನು ಸಮುದಾಯಕ್ಕೆ ಪ್ರಾಪ್ತಿಗೊಳಿಸುವ ಉದ್ದೇಶ ಇದಾಗಿದೆ.

ಬಡತನ ನಿರ್ಮೂಲನೆ(Eradication of poverty):

ಬಡತನ ಕಡಿಮೆ ಮಾಡುವ ಮತ್ತು ಬದುಕು ಸಾಗಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಬಡ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸಲು ಈ ಯೋಜನೆಯು ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

    Which districts can apply-ಯಾವ ಯಾವ ಜಿಲ್ಲೆಯವರು ಅರ್ಜಿಯನ್ನು ಸಲ್ಲಿಸಬಹುದು?

    ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಈಗಾಗಲೇ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದೇ ಮಾದರಿಯಲ್ಲಿ ಇತರ ಜಿಲ್ಲೆಗಳಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

    ಇದನ್ನೂ ಓದಿ: Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ!

    RELATED ARTICLES
    - Advertisment -

    Most Popular

    Recent Comments