ಯಶಸ್ವಿನಿ ಕಾರ್ಡ್ ಇದು ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಬಹು ಮುಖ್ಯ ಜನಪ್ರಿಯ ಯೋಜನೆಯಲ್ಲಿ ಒಂದಾಗಿದ್ದು, ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಯಶಸ್ವಿನಿ ಕಾರ್ಡನ್ನು(Yashswini card) ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯ 2003ರಲ್ಲಿ ಜಾರಿಗೆ ಬಂದಿದ್ದು ಮಧ್ಯಮ ವರ್ಗದ ಬಡ ಕುಟುಂಬಗಳಿಗೆ ಮತ್ತು ಸಹಕಾರಿ ಸಂಘದ ಸದಸ್ಯರಿಗೆ ವೈದ್ಯಕೀಯ ಸೇವೆಯನ್ನು ಒದಗಿಸುವ ಸಲುವಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಜನರಿಗೆ ಆರೋಗ್ಯ ಸೇವಯನ್ನು ಪಡೆಯಲು ಸಹಕಾರಿಯಾಗಿದೆ..
ಈ ಯೋಜನೆಯ ಸಹಾಯವನ್ನು ಪಡೆದುಕೊಳ್ಳಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳೇನು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಈ ಕಾರ್ಡ್ ಬಳಕೆ ಮಾಡಿಕೊಂಡು ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: Free sewing machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!
Yashswini Yojana Guidelines–ಯಶಸ್ವಿನಿ ಕಾರ್ಡ್ ಪಡೆಯಲು ಮಾನದಂಡಗಳು:
1) ಸಹಕಾರಿ ಸಂಘದ ಸದಸ್ಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದು.
2) ಸರ್ಕಾರಿ ಹುದ್ದೆಯಲ್ಲಿರುವವರನ್ನು ಹೊರತುಪಡಿಸಿ ಹಾಗೂ ಆರ್ಥಿಕತೆಯಲ್ಲಿ ಉತ್ತಮ ದರ್ಜೆಯಲ್ಲಿರುವವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
3) ಒಬ್ಬ ವ್ಯಕ್ತಿಯು ಯಾವುದದೇ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಾಸಿಕ ಆದಾಯವು ರೂ.30,000/-ಕ್ಕಿಂತ ಹೆಚ್ಚು ಒಟ್ಟು ವೇತನವನ್ನು ಪಡೆಯುತ್ತಿದ್ದಲ್ಲಿ ಅಥವಾ ಒಬ್ಬ ವ್ಯಕ್ತಿಯು ಇತರೆ ಯಾವುದೇ ಆರೋಗ್ಯ ವಿಮಾ ಯೋಜನೆಯ ಅಡಿಯಲ್ಲಿ ಸದಸ್ಯರಾಗಿದ್ದಾಗ ಅವರು ಯಶಸ್ವಿನಿ ಯೋಜನೆಯ ಅಡಿ ಸದಸ್ಯರಾಗಲು ಅವಕಾಶವಿಲ್ಲ.
4) ಯಶಸ್ವಿನಿ ಯೋಜನೆ ಯಲ್ಲಿರುವ ವ್ಯಾಖ್ಯೆ ದಂತೆ “ಕುಟುಂಬ” ಎಂದರೆ ಪ್ರಧಾನ ಅರ್ಜಿದಾರರ (Principal Member) ತಂದೆ, ತಾಯಿ, ಗಂಡ/ಹೆಂಡತಿ, ಗಂಡು ಮಕ್ಕಳು, ಮದುವೆಯಾಗದ ಹೆಣ್ಣು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು (ಗಂಡು ಮಕ್ಕಳ ಮಕ್ಕಳು) ಎಂದು ಅರ್ಥೈಯಿಸಲಾಗಿದೆ. ಆ ಕುಟುಂಬದಲ್ಲಿ ಸೊಸೆ ಪ್ರಧಾನ ಅರ್ಜಿದಾರರಾಗಿದ್ದಾಗ ಅವರ ಗಂಡನ ತಂದೆ/ತಾಯಿ ಅಂದರೆ ಅರ್ಜಿದಾರರ ಅತ್ತೆ/ಮಾವ ಸದಸ್ಯರಾಗುಲು ಅರ್ಹರಿರುತ್ತಾರೆ. ಆದರೆ ಅರ್ಜಿದಾರರ ತಂದೆ/ತಾಯಿಯನ್ನು ಸದಸ್ಯರಾಗಿ ಸೇರಿಸಿಕೊಳ್ಳಲು ಸಾಧ್ಯವಿರುವುದಿಲ್ಲ.
ಇದನ್ನೂ ಓದಿ: Karnataka weather Forecast-ಕರ್ನಾಟಕ ಮಳೆ ಮುನ್ಸೂಚನೆ!

ಇದನ್ನೂ ಓದಿ: Pmkisan farmers list- ಕಿಸಾನ್ ಸಮ್ಮಾನ್ ಯೋಜನೆಯಡಿ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ!
Documents for Yashswini Card-ಯಶಸ್ವಿನಿ ಕಾರ್ಡ ಪಡೆಯಲು ಅಗತ್ಯ ದಾಖಲೆಗಳೇನು?
a) ಅರ್ಜಿದಾರರ ಆಧಾರ್ ಕಾರ್ಡ
b) ಪೋಟೋ
c) ಕುಟುಂಬದ ರೇಷನ್ ಕಾರ್ಡ ಪ್ರತಿ
d) ಮೊಬೈಲ್ ನಂಬರ್
Yashswini scheme last date-ಯಶಸ್ವಿನಿ ಕಾರ್ಡ ಪಡೆಯಲು ಪ್ರಮುಖ ದಿನಾಂಕ ಈ ಕೆಳಗಿನಂತಿವೆ:
ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ- 01-12-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31-12-2024
ಇದನ್ನೂ ಓದಿ: PMAY 2.0 Scheme- ಮನೆ ಕಟ್ಟುವ ಆಲೋಚನೆ ಇದ್ದವರಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್! ಮನೆಗೆ ನಿರ್ಮಾಣಕ್ಕೆ ₹2.50 ಲಕ್ಷ ಸಹಾಯಧನ!
Yashswini Yojana Application Fee-ಯಶಸ್ವಿನಿ ಕಾರ್ಡನ ಪ್ರವೇಶ ಶುಲ್ಕ:
1) ಒಂದು ಕುಟುಂಬಕ್ಕೆ ವಾರ್ಷಿಕ ರೂ.500/-ಗಳ ಶುಲ್ಕ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಗಳಿರುವ ಕುಟುಂಬಕ್ಕೆ ಪ್ರತಿಯೊಬ್ಬ ಹೆಚ್ಚಿನ ಸದಸ್ಯರಿಗೆ ರೂ.100/- ಶುಲ್ಕ ಪಾವತಿ ಮಾಡಬೇಕು.
2) ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.1000/- ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿಗಿ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.200/-ಗಳನ್ನು ಪಾವತಿಮಾಡಬೇಕು.
3) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದಲ್ಲಿರುವ ಸದಸ್ಯರಿಗೆ ಗಿರಿಜನ ಉಪ ಯೋಜನೆಯಡಿ ಸಹಾಯ ಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುವುದರಿಂದ ಈ ವರ್ಗದವರು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು.
ಇದನ್ನೂ ಓದಿ: Parihara farmer list-ರೈತರ ಖಾತೆಗೆ ₹297 ಕೋಟಿ ಪರಿಹಾರ! ಹಳ್ಳಿವಾರು ಪಟ್ಟಿ ಬಿಡುಗಡೆ!
How to apply for Yashswini card-ಯಶಸ್ವಿನಿ ಕಾರ್ಡನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?
ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಸಹಕಾರಿ ಸಂಘದವನ್ನು ಕಚೇರಿ ಸಮಯದಲ್ಲಿ ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.
Yashaswini Card benefits- ಯಶಸ್ವಿನಿ ಕಾರ್ಡ ಬಳಕೆ ಮಾಡಿಕೊಂಡು ಯಾವೆಲ್ಲ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಬಹುದು?
1) ಪ್ರಸ್ತುತ ಯಶಸ್ವಿನಿ ಯೋಜನೆಯಡಿಯಲ್ಲಿ ಟ್ರಸ್ಟ್ ಗುರ್ತಿಸಿದ 1650 ವಿವಿಧ ಚಿಕಿತ್ಸೆಗಳು ಮತ್ತು 478 ICU ಚಿಕಿತ್ಸೆಗಳೂ ಸೇರಿದಂತೆ ಒಟ್ಟು 2128 ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳಲಾಗಿದೆ.
2) ರೋಗಿಗಳಿಗೆ ಸದರಿ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದಲ್ಲಿ ನೋಂದಾಯಿಸಿದ ಯಶಸ್ಸಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು. ನೆಟ್ವರ್ಕ್ ಆಸ್ಪತ್ರೆಗಳನ್ನು ಹೊರತುವಡಿಸಿ ಇತರ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಸೇವೆ ಲಭ್ಯವಿರುವುದಿಲ್ಲ. ಯಶಸ್ವಿನಿ ಯೋಜನೆಯಡಿ ಫಲಾನುಭವಿ ಚಿಕಿತ್ಸೆ ಪಡೆಯುವ ಮೊದಲು ಆಸ್ಪತ್ರೆಯು ಯೋಜನೆಗೆ ಒಳಪಟ್ಟಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ನಂತರ ಚಿಕಿತ್ಸೆ ಪಡೆಯತಕ್ಕದ್ದು,
3) ಯೋಜನೆಯಲ್ಲಿ ಒಳಪಡದ ಚಿಕಿತ್ಸೆಗಳ ಮತ್ತು ಟ್ರಸ್ಟ್ ಅಂಗೀಕರಿಸದ ಆಸ್ಪತ್ರೆಗಳಲ್ಲಿ ಪಡೆದಂತಹ ಚಿಕಿತ್ಸೆಗಳಿಗೆ ಯಶಸ್ವಿನಿ ಟ್ರಸ್ಟ್ ಜವಾಬ್ದಾರರಾಗುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಆಸ್ಪತ್ರೆಗಳಿಗಾಗಲಿ ಅಥವಾ ಫಲಾನುಭವಿಗಳಿಗಾಗಲಿ ಚಿಕಿತ್ಸಾ ವೆಚ್ಚವನ್ನು ಪಾವತಿಸಲಾಗುವುದಿಲ್ಲ.
4) ಎರಡು ಹೆರಿಗೆ ವೆಚ್ಚಕ್ಕೆ ಯಶಸ್ವಿನಿ ಯೋಜನೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ.
5) ಯಶಸ್ವಿನಿ ಯೋಜನೆಯ ಪ್ರೋಟೋಕಾಲ್ ಪ್ರಕಾರ ಯಶಸ್ವಿನಿ ಫಲಾನುಭವಿಗಳು ಜನರಲ್ ವಾರ್ಡನಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅರ್ಹರಿರುತ್ತಾರೆ. ಒಂದು ವೇಳೆ ಯೋಜನೆಯಡಿ ನಿಗದಿಪಡಿಸಿರುವ ಜನರಲ್ ವಾರ್ಡ್ ಬದಲಾಗಿ ಉನ್ನತ(Semi Special Ward Or Special Ward)ನಲ್ಲಿ ಚಿಕಿತ್ಸೆ ಪಡೆಯಲು ಇಚ್ಚಿಸಿದಲ್ಲಿ, ಸದರಿ ಫಲಾನುಭವಿಗಳಿಗೆ ಯೋಜನೆಯಡಿ ನಿಗದಿ ಪಡಿಸಿರುವಂತೆ ಜನರಲ್ ವಾರ್ಡಗೆ ಅನ್ವಯಿಸುವ ಚಿಕಿತ್ಸೆಯ ವೆಚ್ಚವನ್ನು ಮಾತ್ರ ಭರಿಸಲಾಗುತ್ತದೆ.