ಭಾರತ ದೇಶದ ನಾಗರಿಕರಿಗೆ ಆಧಾರ್ ಕಾರ್ಡ ಒಂದು ಅತೀ ಅಗತ್ಯ ದಾಖಲೆಗಳಲ್ಲಿ ಒಂದಾಗಿದ್ದು ಸಾರ್ವಜನಿಕರು ಆಧಾರ್ ಕಾರ್ಡ(Aadhar card) ನವೀಕರಣ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಆಧಾರ್ ಕಾರ್ಡ ನವೀಕರಣವನ್ನು(Aadhar card renew) ಏಕೆ? ಮಾಡಿಸಿಕೊಳ್ಳಬೇಕು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳೇನು? ಇನ್ನಿತರೆ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಸಾರ್ವಜನಿಕರು ಆಧಾರ್ ಕಾರ್ಡ ಅನ್ನು ಪಡೆದುಕೊಂಡು 10 ವರ್ಷದಲ್ಲಿ ತಮ್ಮ ಆಧಾರ್ ವಿವರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಸದೇ ಇದ್ದ ಪಕ್ಷದಲ್ಲಿ ಇಂತಹ ನಾಗರಿಕರು ಅಗತ್ಯ ದಾಖಲೆಗಳನ್ನು ಒದಗಿಸಿ ತಮ್ಮ ಆಧಾರ್ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳಬೇಕು.
ಇದನ್ನೂ ಓದಿ: Agro Shop License-ರಸಗೊಬ್ಬರ ಮತ್ತು ಬೀಜ ಅಂಗಡಿಯ ಲೈಸೆನ್ಸ್ ಪಡೆಯುವುದು ಹೇಗೆ! ಇಲ್ಲಿದೆ ಉಪಯುಕ್ತ ಮಾಹಿತಿ!
Last Date-ಉಚಿತವಾಗಿ ಆಧಾರ್ ಕಾರ್ಡ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ ಮಾಡಲಾಗಿದೆ:
ನಾಗರಿಕರು ಅಗತ್ಯ ದಾಖಲಾತಿಗಳನ್ನು ಒದಗಿಸಿ ಉಚಿತವಾಗಿ ಆಧಾರ್ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳಲು ಈ ಹಿಂದೆ 2024 ರ ಡಿಸೆಂಬರ್ ಕೊನೆಯ ದಿನ ಎಂದು ಆಧಾರ್ ಪ್ರಧಿಕಾರದಿಂದ ನಿಗದಿಪಡಿಸಲಾಗಿತ್ತು ಆದರೆ ಈಗ ಹೊಸ ಪ್ರಕಟಣೆಯನ್ವಯ ಉಚಿತವಾಗಿ ಆಧಾರ್ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳಲು 14 ಜೂನ್ 2025 ರ ವರೆಗೆ ಅವಕಾಶ ನೀಡಲಾಗಿದೆ.
Why renew Aadhaar card- ಆಧಾರ್ ನವೀಕರಣ ಏಕೆ ಮಾಡಿಕೊಳ್ಳಬೇಕು?
ಒಮ್ಮೆ ಆಧಾರ್ ಕಾರ್ಡ ಅನ್ನು ಮಾಡಿಸಿಕೊಂಡು ಕಳೆದ 10 ವರ್ಷದಲ್ಲಿ ಯಾವುದೇ ಬಗ್ಗೆಯ ವಿವರವನ್ನು ಆಧಾರ್ ಕಾರ್ಡ ನಲ್ಲಿ ನವೀಕರಣ ಮಾಡಿಸದೇ ಇದ್ದಲ್ಲಿ ಅಂತಹ ನಾಗರಿಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆಧಾರ್ ಕಾರ್ಡ ನವೀಕರಣ ಮಾಡಿಕೊಳ್ಳಬೇಕು ಎಂದು UIDAI/ಆಧಾರ್ ಪ್ರಾಧಿಕಾರದಿಂದ ಅಧಿಕೃತ ಪ್ರಕಟಣೆ , ನವೀಕರಣ ಏಕೆ ಮಾಡಿಕೊಳ್ಳಬೇಕು?
ಎನ್ನುವ ಪಟ್ಟಿಯನ್ನು ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: Kisan credit card-ರೈತರಿಗೆ ಗುಡ್ ನ್ಯೂಸ್! ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲ ಸೌಲಭ್ಯ!
(1) ನಕಲಿ ದಾಖಲೆಗಳನ್ನು ಬಳಕೆ ಮಾಡಿಕೊಂಡು ಆಧಾರ್ ಕಾರ್ಡ ಅನ್ನು ಪಡೆಯುವುದನ್ನು ತಡೆಗಟ್ಟಲು.
(2) ಆಧಾರ್ ಕಾರ್ಡ ಹೊಂದಿರುವ ನಾಗರಿಕರ ನೈಜತೆಯನ್ನು ಖಚಿತಪಡಿಸಿಕೊಳ್ಳುಲು.
(3) ಪ್ರಸ್ತುತ ಇರುವ ವೈಯಕ್ತಿಕ ವಿವರವನ್ನು ಆಧಾರ್ ಕಾರ್ಡನಲ್ಲಿ ನವೀಕರಿಸಲು ಈ ಕ್ರಮ ನೆರವಾಗುತ್ತದೆ.
How to apply For Aadhaar update-ನವೀಕರಣಕ್ಕೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ತಯಾರಿ ಮಾಡಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ನೇರವಾಗಿ ನೀವೇ ಸ್ವಂತ ನಿಮ್ಮ ಮೊಬೈಲ್ ನಲ್ಲಿ UIDAI ವೆಬ್ಸೈಟ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: Udyogini Yojana-ಉದ್ಯೋಗಿನಿ ಯೋಜನೆಯಡಿ ₹3.0 ಲಕ್ಷ ರೂ ಬಡ್ಡಿ ರಹಿತ ಸಾಲ!
Documents-ಒದಗಿಸಬೇಕಾದ ದಾಖಲೆಗಳು:
A) ಆಧಾರ್ ಕಾರ್ಡ ಪ್ರತಿ.
B) ವಿಳಾಸ ದೃಢೀಕರಣಕ್ಕೆ ಯಾವುದಾದರು ಒಂದು ಗುರುತಿನ ಚೀಟಿ(ಪಾನ್ ಕಾರ್ಡ/ವೋಟರ್ ಐಡಿ/ವಾಹನ ಚಾಲನಾ ಪ್ರಮಾಣ ಪತ್ರ ಇತ್ಯಾದಿ).
C) ಮೊಬೈಲ್ ನಂಬರ್
Aadhaar update on mobile- ಆನ್ಲೈನ್ ನಲ್ಲಿ ನವೀಕರಣಕ್ಕೆ ಅರ್ಜಿ ಸಲ್ಲಿಸುವ ವಿಧಾನ:
ನಾಗರಿಕರು ಆಧಾರ್ ಪ್ರಾಧಿಕಾರದ(UIDAI) ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಆಧಾರ್ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದು.
Step-1: ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Aadhaar Update ಅಧಿಕೃತ UIDAI ಜಾಲತಾಣವನ್ನು ಭೇಟಿ ಮಾಡಬೇಕು.
ಇದನ್ನೂ ಓದಿ: Shri Kshetra Dharmasthala- ಧರ್ಮಸ್ಥಳದಲ್ಲಿ 52 ನೇ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ!

Step-2: ತದನಂತರ “LOGIN” ಬಟನ್ ಮೇಲೆ ಕ್ಲಿಕ್ ಮಾಡಿ ಆಧಾರ್ ಕಾರ್ಡನ ನಂಬರ್ ಅನ್ನು ಹಾಕಿ ಪಕ್ಕ ಕಾಣುವ ಕ್ಯಾಪ್ಚ ಕೊಡ್ ಅನ್ನು ಹಾಕಿ ಅಲ್ಲಿ ಕೆಳಗಿರುವ “Send OTP” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step-2: ಬಳಿಕ ಆಧಾರ್ ಕಾರ್ಡನಲ್ಲಿರುವ ಮೊಬೈಲ್ ನಂಬರ್ ಗೆ ಬರುವ 6 ಸಂಖ್ಯೆಯ OTP ಅನ್ನು ನಮೂದಿಸಿ “Login” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.
Step-3: ಈ ಪೇಜ್ ನಲ್ಲಿ “Document Update” ಬಟನ್ ಮೇಲೆ ಕ್ಲಿಕ್ ಮಾಡಿ “Next” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step-4: ಮೇಲಿನ ಹಂತಗಳನ್ನು ಮುಗಿಸಿದ ಬಳಿಕ ನಿಮ್ಮ ಆಧಾರ್ ಕಾರ್ಡನಲ್ಲಿ ಇರುವಂತೆ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸದ ವಿವರ ಗೋಚರಿಸುತ್ತದೆ ಎಲ್ಲಾ ಮಾಹಿತಿ ಸರಿ ಇದಿಯೇ ಎಂದು ಒಮ್ಮೆ ಚೆಕ್ ಮಾಡಿಕೊಂಡು ಇಲ್ಲಿ ತೋರಿಸುವ ಮಾಹಿತಿ ಸರಿ ಇದ್ದಲ್ಲಿ “I verify that above details are correct” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Next” ಬಟನ್ ಮೇಲೆ ಕ್ಲಿಕ್ ಮಾಡಿ.
Step-5: ಈ ಪೇಜ್ ನಲ್ಲಿ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆ ದಾಖಲಾತಿಗಳನ್ನು ಅಪ್ಲೋಡ ಮಾಡಬೇಕು(Document size should be less than 2 MB, Supported file Formats are: JPEG, PNG and PDF ) ಅಪ್ಲೋಡ್ ಮಾಡಿದ ಬಳಿಕ “Next” ಬಟನ್ ಮೇಲೆ ಒತ್ತಿ “Submit” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ ನವೀಕಣ ಅಗುತ್ತದೆ.