Thursday, February 6, 2025
No menu items!
HomeNewsMorarji Desai school- ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ!

Morarji Desai school- ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ!

ಮೊರಾರ್ಜಿ ದೇಸಾಯಿ ಶಾಲೆಗಳು(Morarji Desai Schools) ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾಗಿದ್ದು,ಇವು ಸಮಾಜದ ಎಲ್ಲಾ ವರ್ಗಗಳ ಮಕ್ಕಳಿಗೆ(children from all sections of society) ಉತ್ತಮ ಮತ್ತು ಸಮಾನವಾದ ಶಿಕ್ಷಣವನ್ನು ಒದಗಿಸುವ ಉದ್ದೇಶವನ್ನು ಹೊಂದಿವೆ. ಎಲ್ಲಾ ವಸತಿ ಶಾಲೆಗಳಲ್ಲಿ 2025-26 ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ.

ಮೊರಾರ್ಜಿ ದೇಸಾಯಿ ಶಾಲೆಗಳು ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ(education field) ಪ್ರಮುಖವಾದ ಶಿಕ್ಷಣ ಸಂಸ್ಥೆಗಳಾಗಿವೆ. ಮೊರಾರ್ಜಿ ಶಾಲೆಗಳು 1981 ರಲ್ಲಿ ಸ್ಥಾಪಿಸಿದ್ದು, ಸುಮಾರು 45 ವರ್ಷಗಳಿಂದ ದೇಶಾದ್ಯಾಂತ ಆರ್ಥಿಕವಾಗಿ ಹೀನತೆಯಲ್ಲಿರುವ, ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ(children of poor and backward classes) ಗುಣಮಟ್ಟದ ಶಿಕ್ಷಣವನ್ನು ನೀಡುವ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: Aadhar card- ಉಚಿತ ಆಧಾರ್ ಕಾರ್ಡ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

ಸರ್ಕಾರದಿಂದ ಸಹಾಯ ಮಾಡುವ ಈ ವಸತಿ ಶಾಲೆಗಳು ಪ್ರಸ್ತುತ ದರದ ಶೈಕ್ಷಣಿಕ ವ್ಯವಸ್ಥೆಗಳನ್ನು ಮಕ್ಕಳಿಗೆ ಪೂರಕವಾಗಿ ಒದಗಿಸಲು, ಮತ್ತು ಅವರ ಶೈಕ್ಷಣಿಕ, ಸಾಮಾಜಿಕ ಹಾಗೂ ಮಾನವೀಯ ಅಭಿವೃದ್ಧಿಗೆ ಸಹಕಾರ ನೀಡಲು ಕಾರ್ಯನಿರತದಲ್ಲಿವೆ.

5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು 6ನೇ ತರಗತಿಗೆ ವಸತಿ ಶಾಲೆಗಳಿಗೆ ದಾಖಲಿಸಲು ಕೊನೆಯ ದಿನಾಂಕ ಮುಕ್ತಾಯ ಅಗುವುದರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಯಾರು ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಇನ್ನು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Agro Shop License-ರಸಗೊಬ್ಬರ ಮತ್ತು ಬೀಜ ಅಂಗಡಿಯ ಲೈಸೆನ್ಸ್ ಪಡೆಯುವುದು ಹೇಗೆ! ಇಲ್ಲಿದೆ ಉಪಯುಕ್ತ ಮಾಹಿತಿ!

Annual income of family for submission of application-ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯದ ಮಿತಿ:

1) 2A, 2B, 3A, 3B ವರ್ಗ:- ₹1,00,000/- ರೂ
2) ಹಿಂದುಳಿದ ವರ್ಗ ಪ್ರವರ್ಗ-1:- ₹2,50,000/- ರೂ
3) ಪರಿಶಿಷ್ಟ ಜಾತಿ/ಪ.ಪ ವರ್ಗ ದವರು:- ₹2,50,000/- ರೂ

morarji desai applivation

Last date and examination date-ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಸಲು ಕೊನೆಯ ಮತ್ತು ಪ್ರವೇಶ ಪರೀಕ್ಷೆ ದಿನಾಂಕ:

ಇದನ್ನೂ ಓದಿ: Kisan credit card-ರೈತರಿಗೆ ಗುಡ್ ನ್ಯೂಸ್! ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲ ಸೌಲಭ್ಯ!

ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ: 25-01-2025

ಪ್ರವೇಶ ಪರೀಕ್ಷೆ ದಿನಾಂಕ: 15-02-2025

Who should apply for Morarji Desai School Admission-ಮೊರಾರ್ಜಿ ದೇಸಾಯಿ ಶಾಲೆಯ ಪ್ರವೇಶಕ್ಕೆ ಯಾರು ಅರ್ಜಿಯನ್ನು ಸಲ್ಲಿಸಬೇಕು?

1) ಅಭ್ಯರ್ಥಿಯು ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯನ್ನು ವ್ಯಾಸಂಗ ಮುಗಿಸಿರಬೇಕು.
2) ಅರ್ಜಿದಾರ ವಿದ್ಯಾರ್ಥಿಯ ವಯಸ್ಸು 09 ರಿಂದ 14 ವರ್ಷದವರಾಗಿರಬೇಕು.
3) ಅಭ್ಯರ್ಥಿಯು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
4) ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ.

ಇದನ್ನೂ ಓದಿ: Udyogini Yojana-ಉದ್ಯೋಗಿನಿ ಯೋಜನೆಯಡಿ ₹3.0 ಲಕ್ಷ ರೂ ಬಡ್ಡಿ ರಹಿತ ಸಾಲ!

How to Apply for Morarji Desai School Admission-ಮೊರಾರ್ಜಿ ದೇಸಾಯಿ ಶಾಲೆಯ ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಈ ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

೧) ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

೨) ಕರ್ನಾಟಕ ಪರೀಕ್ಷೆ ಪ್ರಾಧಿಕಾರದ ಅಧಿಕೃತ ಜಾಲತಾಣವನ್ನು Apply now ಭೇಟಿ ಮಾಡಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Shri Kshetra Dharmasthala- ಧರ್ಮಸ್ಥಳದಲ್ಲಿ 52 ನೇ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ!

What are the documents required to apply for Morarji Desai School admission-ಮೊರಾರ್ಜಿ ದೇಸಾಯಿ ಶಾಲೆಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳೇನು?

1) ಜನನ ಪ್ರಮಾಣಪತ್ರ/Birth Certificate
2) ಆಧಾರ್ ಕಾರ್ಡ ಪ್ರತಿ/Aadhar Card
3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Cast & Income Certificate
4) ಶಾಲಾ ವಿವರಗಳ ಪ್ರಮಾಣಪತ್ರ/Previous Examination Certificate
5) ಅಂಕಪಟ್ಟಿ/MarksCard
6) ಮೊಬೈಲ್ ನಂಬರ್/Mobile number

ಇದನ್ನೂ ಓದಿ: Gruhalakshmi amount- ಈ ಪಟ್ಟಿಯಲ್ಲಿ ಹೆಸರಿರುವವರಿಗಿಲ್ಲ ಗೃಹಲಕ್ಷ್ಮಿ ಹಣ! ನಿಮ್ಮ ಹೆಸರಿದಿಯಾ ಚೆಕ್ ಮಾಡಿಕೊಳ್ಳಿ!

For More information-ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ-Click here

RELATED ARTICLES
- Advertisment -

Most Popular

Recent Comments