Monday, June 9, 2025
No menu items!
HomeNewsScholorship Application-ಮಿರೇ ಅಸೆಟ್ ಫೌಂಡೇಶನ್ ನಿಂದ ₹50,000 ಸ್ಕಾಲರ್‌ಶಿಪ್ ಪಡೆಯಲು ಅರ್ಜಿ!

Scholorship Application-ಮಿರೇ ಅಸೆಟ್ ಫೌಂಡೇಶನ್ ನಿಂದ ₹50,000 ಸ್ಕಾಲರ್‌ಶಿಪ್ ಪಡೆಯಲು ಅರ್ಜಿ!

“ಮಿರೇ ಅಸೆಟ್ ಫೌಂಡೇಶನ್ ಸ್ಕಾಲರ್‌ಶಿಪ್” ಭಾರತದಾದ್ಯಂತ ಪ್ರಸ್ತುತ ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು(Scholorship)ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ವಿದ್ಯಾರ್ಥಿವೇತನದ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶಿಕ್ಷಣವನ್ನು ಮುಂದುವರಿಸಲು ಮಿರೇ ಅಸೆಟ್ ಫೌಂಡೇಶನ್ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು(Scholorship Application)ಪಡೆಯಲು ಅವಕಾಶವಿದ್ದು ಅರ್ಹ ವಿದ್ಯಾರ್ಥಿಗಳು ಈ ಉಪಯೋಗವನ್ನು ಪಡೆದುಕೊಳ್ಳಲು ಅರ್ಜಿಯನ್ನು ಕರೆಯಲಾಗಿದೆ.

ಇದನ್ನೂ ಓದಿ: Ration Card List-ಪರಿಷ್ಕೃತ ಅನರ್ಹ ರೇಷನ್ ಕಾರ್ಡ್‌ದಾರರ ಪಟ್ಟಿ ಬಿಡುಗಡೆ!

“ಮಿರೇ ಅಸೆಟ್ ಫೌಂಡೇಶನ್ ಸ್ಕಾಲರ್‌ಶಿಪ್” ವತಿಯಿಂದ ವಿದ್ಯಾರ್ಥಿವೇತನವನ್ನುಪಡೆಯಲು ಅವಕಾಶವಿದ್ದು, ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ? ಅರ್ಜಿಯನ್ನು ಸಲ್ಲಿಸುವ ವಿಧಾನ? ಅದಕ್ಕೆ ಬೇಕಾದ ಅಗತ್ಯ ದಾಖಲಾತಿಗಳೇನು? ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ?ಇನ್ನೂ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Last Date For Scholorship Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 20 June 2025

Scholorship Amount-ಈ ಯೋಜನೆಯಡಿ ಎಷ್ಟು ವಿದ್ಯಾರ್ಥಿವೇತನದ ಮೊತ್ತ:

ಪದವಿಪೂರ್ವ (Under graduation) ವಿದ್ಯಾರ್ಥಿಗಳಿಗೆ: ಗರಿಷ್ಠ ₹40,000

ಸ್ನಾತಕೋತ್ತರ (post graduation) ವಿದ್ಯಾರ್ಥಿಗಳಿಗೆ: ಗರಿಷ್ಠ ₹50,000

ಇದನ್ನೂ ಓದಿ: Karnataka Dam Water Level-ಪ್ರಸ್ತುತ ರಾಜ್ಯದ ಡ್ಯಾಂ ಗಳಲ್ಲಿ ಎಷ್ಟು ನೀರು ಸಂಗ್ರಹವಾಗಿದೆ?

Who Can Apply For This Scheme- ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು?

ಮಿರೇ ಅಸೆಟ್ ಫೌಂಡೇಶನ್ ಶಿಷ್ಯವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ನಿಯಮಗಳನ್ನು ಪೂರೈಸಬೇಕು:

ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರ ವಿದ್ಯಾರ್ಥಿಯು ಭಾರತದಲ್ಲಿ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಪದವಿಪೂರ್ವ ಕೋರ್ಸ್‌ನಲ್ಲಿ ದಾಖಲಾಗಿರಬೇಕು.

ಅರ್ಜಿದಾರ ವಿದ್ಯಾರ್ಥಿಯು ಭಾರತದಲ್ಲಿ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್‌ನಲ್ಲಿ ದಾಖಲಾಗಿರಬೇಕು.

ವಿದ್ಯಾರ್ಥಿಯು ಕಳೆದ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳನ್ನು ಕಡ್ಡಾಯವಾಗಿ ಗಳಿಸಿರಬೇಕು.

ವಿದ್ಯಾರ್ಥಿಯ ವಾರ್ಷಿಕ ಕುಟುಂಬ ಆದಾಯವು ಎಲ್ಲಾ ಮೂಲಗಳಿಂದ ರೂ. 8,00,000 ಕ್ಕಿಂತ ಕಡಿಮೆ ಇರಬೇಕು.

ಇದನ್ನೂ ಓದಿ: Poultry farming-ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!

How To Apply- ಅರ್ಜಿಯನ್ನು ಸಲ್ಲಿಸುವ ವಿಧಾನ:

ಮಿರೇ ಅಸೆಟ್ ಫೌಂಡೇಶನ್ ಶಿಷ್ಯವೇತನ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಮೊದಲಿಗೆ ಈ Apply Now ಲಿಂಕ್ ಮೇಲೆ ಒತ್ತಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Gruha Arogya Yojane-ರಾಜ್ಯ ಸರ್ಕಾರದಿಂದ ಗೃಹ ಆರೋಗ್ಯ ಯೋಜನೆ ಜಾರಿ!

Scholorship Application

Step-2: ತದನಂತರ ಮೊದಲ ಬಾರಿಗೆ ಈ ತಂತ್ರಾಂಶಕ್ಕೆ ಪ್ರವೇಶ ಮಾಡುತ್ತಿರುವವರು “Create an Account” ಬಟನ್ ಕ್ಲಿಕ್ ಮಾಡಿ ಖಾತೆಯನ್ನು ರಚಿಸಿಕೊಳ್ಳಬೇಕು ಬಳಿಕ ಖಾತೆ ರಚನೆಯಾದ ಬಳಿಕ “Login” ಬಟನ್ ಕ್ಲಿಕ್ ಮಾಡಿ ಲಾಗಿನ್ ಆಗಿ.

Step-3: ಲಾಗಿನ್ ಆದ ಬಳಿಕ ಅರ್ಜಿ ನಮೂನೆ ತೆರೆಯುತ್ತದೆ. ಇಲ್ಲಿ ಕೇಳುವ ಎಲ್ಲಾ ಮಾಹಿತಿ ಮತ್ತು ಅಗತ್ಯ ದಾಖಲಾತಿಗಳನ್ನು ಆಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Free Hostel- ಉಚಿತ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ!

Who Can Apply-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು?

  • ವಿದ್ಯಾರ್ಥಿಯ ಆಧಾರ್ ಕಾರ್ಡ್/Aadhar card
  • ದ್ವಿತೀಯ PUC ಮಾರ್ಕ್ಸ್ ಕಾರ್ಡ/Pu Marks card
  • ಪೋಷಕರ ITR ರಿಟರ್ನ್ ಅಥವಾ ಸಂಬಳ ಸ್ಲಿಪ್/Salry slip
  • ಬ್ಯಾಂಕ್ ಪಾಸ್ ಬುಕ್/Bank passbook
  • ಫೋಟೋ/Photocopy
  • ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)

For More Information-ಹೆಚ್ಚಿನ ಮಾಹಿತಿಗಾಗಿ:

Website-ಅಧಿಕೃತ ವೆಬ್ಸೈಟ್:- Click Here
Helpline-ಸಹಾಯವಾಣಿ:- 011-430-92248 (344) (Monday to Friday – 10:00AM to 06:00 PM (IST))Mail- miraeasset@buddy4study.com

RELATED ARTICLES
- Advertisment -

Most Popular

Recent Comments