ಕೃಷಿ ಉದ್ಯಮಿ ಅಡಿಯಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದದ ವತಿಯಿಂದ ಯುವಕರಿಗೆ ಉಚಿತ ಕೋಳಿ ಸಾಕಾಣಿಕ ತರಬೇತಿ(Poultry farming) ಮತ್ತು ಕೋಳಿ ಸಾಕಾಣಿಕೆ ಉದ್ಯಮ(Poultry farming industry)ವನ್ನು ಪ್ರಾರಂಭ ಮಾಡಲು ಅರ್ಜಿಯನ್ನು ಕರೆಯಲಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಡತನವನ್ನು ನಿವಾರಣೆ ಮಾಡಲು ಹಾಗೂ ಸ್ವಂತ ಉದ್ಯೋಗವನ್ನು ಪ್ರಾಂಭಿಸುವ ಉದ್ದೇಶದಿಂದ ಸರ್ಕಾರಿ(Government Poultry Training)ಮತ್ತು ಖಾಸಗಿ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ವತಿಯಿಂದ ಇಚಿತ ಕೋಳಿ ಸಾಕಾಣಿಕೆ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಈ ತರಬೇತಿಯು ಹೆಚ್ಚಿನ ಆದಾಯವನ್ನು ಮಾಡಲು ಸಹಾಯಕಾರಿಯಾಗಿದ್ದು, ಹಾಗೂ ಸ್ವಂತ ಉದ್ಯೋಗ ಆರಂಭಿಸಲು ಉತ್ತಮ ಅವಕಾಶವನ್ನು ಕಲ್ಪಿಸಲಾಗಿದೆ.
ಇದನ್ನೂ ಓದಿ: Gruha Arogya Yojane-ರಾಜ್ಯ ಸರ್ಕಾರದಿಂದ ಗೃಹ ಆರೋಗ್ಯ ಯೋಜನೆ ಜಾರಿ!
ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ? ಕೋಳಿ ಸಾಕಾಣಿಕೆಗೆ ಸಬ್ಸಿಡಿ ಯೋಜನೆಗಳಾವುವು? ಅರ್ಜಿಯನ್ನು ಎಲ್ಲಿ ಹೇಗೆ ಸಲ್ಲಿಸಬೇಕು? ಅದಕ್ಕೆ ಬೇಕಾದ ಪ್ರಮುಖ ದಾಖಲಾತಿಗಳೇನು? ಹೆಚ್ಚಿನ ಪೂರ್ತಿಯಾದ ಮಾಹಿತಿಯನ್ನು ಈ ಲೇಖದಲ್ಲಿ ವಿವರಿಸಲಾಗಿದೆ.
Poultry farm Training-ತರಬೇತಿ ನಡೆಯುವ ಮತ್ತು ಮುಕ್ತಾಯವಾಗುವ ಅವಧಿ:
ಉಚಿತ ಕೋಳಿ ಸಾಕಾಣಿಕೆ ತರಬೇತಿಯ ಪ್ರಾರಂಭದ ದಿನಾಂಕ: 09-06- 2025
ಉಚಿತ ಕೋಳಿ ಸಾಕಾಣಿಕೆ ತರಬೇತಿಯ ಮುಕ್ತಾಯದ ದಿನಾಂಕ: 21-06- 2025
Who Can Apply- ಈ ತರಬೇತಿಗೆ ಯಾರು ಅರ್ಜಿಯನ್ನು ಸಲ್ಲಿಸಲು ಅರ್ಹರು?
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು ಕನಿಷ್ಠ 8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಅರ್ಜಿದಾರರಿಗೆ ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿರುತ್ತದೆ.
- ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು.
- ಗ್ರಾಮೀಣ ಭಾಗದ BPL ಕಾರ್ಡ್ ದಾರರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
- ಅರ್ಜಿದಾರರು ಕಡ್ಡಾಯವಾಗಿ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ ಅನ್ನು ಹೊಂದಿರಬೇಕು.
ಇದನ್ನೂ ಓದಿ: Free Hostel- ಉಚಿತ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ!
Required documents- ಅಗತ್ಯ ದಾಖಲೆಗಳು:
- ಅರ್ಜಿದಾರರ ಆಧಾರ್ ಕಾರ್ಡ/Aadhar card
- ರೇಶನ್ ಕಾರ್ಡ ಪ್ರತಿ/Ration card
- ಬ್ಯಾಂಕ್ ಪಾಸ್ ಬುಕ್/Bank passbook
- ವಿದ್ಯಾರ್ಹತೆ ಪ್ರಮಾಣಪತ್ರ/TC/Marks card
- 2 ಪೋಟೋ/Photocopy
- ಮೊಬೈಲ್ ನಂಬರ್/Mobile number
Address-ತರಬೇತಿ ನಡೆಯುವ ಸ್ಥಳ:
ಈ ತರಬೇತಿಯು ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343,
ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಮೊಬೈಲ್ ನಂಬರ್ ಗೆ ಸಂಪರ್ಕಿಸಿ: 9449860007, 9538281989, 9916783825, 888044612
ಇದನ್ನೂ ಓದಿ: Scholorship-B.Sc ಮತ್ತು B.Tec ವಿದ್ಯಾರ್ಥಿನಿಯರಿಗೆ 2.4 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಇದನ್ನೂ ಓದಿ: BMTC Tour Packages-ಬಿಎಂಟಿಸಿಯಿಂದ ಒಂದು ದಿನದ ಪ್ಯಾಕೇಜ್ ಟೂರ್ ಆರಂಭ!
How To Apply-ತರಬೇತಿಯನ್ನು ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು:
ತರಬೇತಿಯನ್ನು ಪಡೆಯಲು ಈ 2 ವಿಧಾನಗಳನ್ನು ಪಾಲನೆಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ Google Form ಅನ್ನು FIll ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಅಗತ್ಯ ದಾಖಲೆಗಳ ಸಮೇತ ಕೋಳಿ ಸಾಕಾಣಿಕೆ ತರಬೇತಿ ನಡೆಯುವ ಸ್ಥಳಕ್ಕೆ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
Purpose of Poultry forming-ಕೋಳಿ ಸಾಕಾಣಿಕೆಯ ಮುಖ್ಯ ಉದ್ದೇಶಗಳು:
A) ಮಾಂಸದ ಉತ್ಪಾದನೆ (ಬ್ರಾಯ್ಲರ್ ಕೋಳಿ)
B) ಮೊಟ್ಟೆಯ ಉತ್ಪಾದನೆ (ಲೇಯರ್ ಕೋಳಿ)
C) ಜೈವ ಗೊಬ್ಬರ ಉತ್ಪಾದನೆ (ಕೋಳಿಮಲೇ)
D) ಆರ್ಥಿಕ ಆದಾಯ ಗಳಿಸಲು ಅಥವಾ ಸ್ವಂತ ಉದ್ಯೋಗ ಮಾಡಲು ಅನುಕೂಲವಾಗುತ್ತದೆ.
ಇದನ್ನೂ ಓದಿ: Diesel Pump Scheme-ಡಿಸೇಲ್ ಪಂಪ್ ಪಡೆಯಲು ಶೇ 90% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!
ಯಾವೆಲ್ಲ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು?
ದೇಸಿ ತಳಿಗಳು(Desi breeds):
ಗಿರಿರಾಜ, ವನರಾಜ, ಕಾಡುನಾಟಿ ಇತ್ಯಾದಿ ದೇಸಿ ಕೋಳಿ ತಳಿಗಳು ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ನಿರ್ವಹಣೆ ವೆಚ್ಚವೂ ಕಡಿಮೆಯಿದೆ. ಈ ತಳಿಗಳು ಸ್ಥಳೀಯ ಪರಿಸರಕ್ಕೆ ತಕ್ಕಮಟ್ಟಿಗೆ ಹೊಂದಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದಲ್ಲಿ ಮಾಂಸ ಮತ್ತು ಮೊಟ್ಟೆಗೆ ಉತ್ತಮ ಮಾರುಕಟ್ಟೆ ಬೇಡಿಕೆಯನ್ನು ಹೊಂದಿವೆ. ಸ್ಥಳೀಯ ಮಾರುಕಟ್ಟೆಗೆ ನೇರ ಮಾರಾಟದ ಅವಕಾಶವಿರುವುದರಿಂದ ರೈತರಿಗೆ ನಿಕರದ ಆದಾಯ ಲಭ್ಯ.
ವಾಣಿಜ್ಯ ತಳಿಗಳು(Commercial varieties):
ಮಾಂಸ ಉತ್ಪಾದನೆಗೆ ಬ್ರಾಯ್ಲರ್ (ಉದಾ: ಕಾಬ್, ರಾಸ್) ಮತ್ತು ಮೊಟ್ಟೆ ಉತ್ಪಾದನೆಗೆ ಲೇಯರ್ (ಉದಾ: BV-380) ತಳಿಗಳು ವ್ಯಾಪಕವಾಗಿ ಬಳಸಲಾಗುತ್ತಿವೆ. ಈ ತಳಿಗಳು ವೇಗವಾಗಿ ಬೆಳೆಯುತ್ತಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿವೆ. ವಾಣಿಜ್ಯ ಸಾಕಾಣಿಕೆಗೆ ಉತಮ ಆಯ್ಕೆಯಾಗಿವೆ.
ಇದನ್ನೂ ಓದಿ: Free Hostel Application-ಉಚಿತ BCM ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!
Breed selection advice-ತಳಿ ಆಯ್ಕೆ ಸಲಹೆ:
ನಿಮ್ಮ ಪ್ರದೇಶದ ಹವಾಮಾನ, ಮಾರುಕಟ್ಟೆಯ ಬೇಡಿಕೆ, ಆಹಾರ ಮತ್ತು ನೀರಿನ ಲಭ್ಯತೆ, ಹಾಗೂ ನಿರ್ವಹಣಾ ಸಾಮರ್ಥ್ಯ ಆಧರಿಸಿ ತಳಿಯನ್ನು ಆಯ್ಕೆಮಾಡುವುದು ಸೂಕ್ತ. ಉದಾಹರಣೆಗೆ, ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡು ಪ್ರದೇಶಗಳಿಗೆ ದೇಸಿ ತಳಿಗಳು ಹೆಚ್ಚು ಸೂಕ್ತವಾಗಿವೆ, ಏಕೆಂದರೆ ಅವು ಸ್ಥಳೀಯ ಪರಿಸರದ ಒತ್ತಡಗಳನ್ನು ಸುಲಭವಾಗಿ ತಡೆದುಕೊಳ್ಳಬಲ್ಲವು.