ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಡಿಯಲ್ಲಿ “ಗೃಹ ಆರೋಗ್ಯ” ಯೋಜನೆ ರಾಜ್ಯದಾದ್ಯಂತ ವಿಸ್ತರಿಸುತ್ತಿದ್ದು, ಈ ಯೋಜನೆಯ ಅಡಿಯಲ್ಲಿ 14 ಅಸಾಂಕ್ರಾಮಿಕ(Non-Communicable Diseases – NCD) ರೋಗಗಳ ಉಚಿತ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆಯನ್ನು ಮಾಡಲಾಗುತ್ತದೆ.
ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ 19-29 ವರ್ಷ ವಯಸ್ಸಿನವರಿಗೆ ಆರೋಗ್ಯ ತಪಾಸಣೆಯನ್ನು(Free Health Screening) ಉಚಿತವಾಗಿ ನೆಡೆಸಲಾಗುತ್ತಿದೆ. ರೋಗನಿರ್ಣಯವಾದ ನಂತರ, ವ್ಯಕ್ತಿಗಳು ಹತ್ತಿರದ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಭೇಟಿ ಮಾಡಿ ಆರೋಗ್ಯ ತಪಾಸಣೆ, ನಿರ್ವಹಣೆ ಮತ್ತು ಉಚಿತವಾಗಿ ಅಸಾಂಕ್ರಾಮಿಕ ರೋಗಗಳಿಗೆ ಸಂಭದಿಸಿದ ಔಷಧಿಗಳನ್ನು ಪಡೆಯಲು ಅವಕಾಶವಿದೆ.
ಇದನ್ನೂ ಓದಿ: Free Hostel- ಉಚಿತ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ!
ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ಭೇಟಿ ಮಾಡಿ ಕುಟುಂಬದ ಸದಸ್ಯರಲ್ಲಿ ಅಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳ ಮೂಲಕ ತಪಾಸಣಾ ಕಾರ್ಯಕ್ಕೆ ನೆರವಾಗಲಿದ್ದಾರೆ.
ಸಮುದಾಯ ಆರೋಗ್ಯ ಅಧಿಕಾರಿಗಳು ತಪಾಸಣೆ ನಡೆಸಿ NCD ಪೊರ್ಟಲ್‌ನಲ್ಲಿ ಡೇಟಾ ನಮೂದಿಸಲಿದ್ದು, ರಕ್ತದೊತ್ತಡ, ಡಯಾಬಿಟಿಸ್ ಹೊಂದಿದವರಿಗೆ ಸ್ಥಳದಲ್ಲೇ ಔಷಧಿಗಳನ್ನ ಉಚಿತವಾಗಿ ಒದಗಿಸುವ ವ್ಯವಸ್ಥೆಯನ್ನ ಗೃಹ ಆರೋಗ್ಯ ಯೋಜನೆಯಲ್ಲಿ ಕಲ್ಪಿಸಲಾಗಿದೆ.
Gruha Arogya -ಗೃಹ ಆರೋಗ್ಯ ಯೋಜನೆ ಎಂದರೇನು?
ಗೃಹ ಆರೋಗ್ಯ ಯೋಜನೆಯು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಾರಿಗೊಳಿಸಲಾದ ಒಂದು ಕಾರ್ಯಕ್ರಮವಾಗಿದೆ. ಈ ಯೋಜನೆಯ ಮೂಲ ಉದ್ದೇಶವು ರಾಜ್ಯದ ಜನರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ 30 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಮನೆ ಬಾಗಿಲಿಗೆ ಆರೋಗ್ಯ ತಪಾಸಣೆ ಸೇವೆ ಒದಗಿಸುವುದು. ಈ ಯೋಜನೆಯಡಿ, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ, ಆರೋಗ್ಯ ತಪಾಸಣೆ ನಡೆಸುವುದರ ಜೊತೆಗೆ, ಅಗತ್ಯವಿರುವ ಔಷಧಿಗಳನ್ನು ಉಚಿತವಾಗಿ ವಿತರಿಸುತ್ತಾರೆ. ಇದರಿಂದ ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಚಿಕಿತ್ಸೆ ನೀಡುವ ಮೂಲಕ ತೊಡಕುಗಳನ್ನು ಮತ್ತು ಅಕಾಲಿಕ ಮರಣಗಳನ್ನು ತಡೆಗಟ್ಟಬಹುದಾಗಿದೆ.
ಇದನ್ನೂ ಓದಿ: Scholorship-B.Sc ಮತ್ತು B.Tec ವಿದ್ಯಾರ್ಥಿನಿಯರಿಗೆ 2.4 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
ಈ ಯೋಜನೆಯನ್ನು ಕುರಿತು ದಿನೇಶ್ ಗುಂಡೂರಾವ್ ಅವರು ಏನು ಹೇಳಿದ್ದಾರೆ?
ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಯೋಜನೆಯ ಬಗ್ಗೆ ಮಾತನಾಡುತ್ತಾ, “ಗೃಹ ಆರೋಗ್ಯ ಯೋಜನೆಯು ರಾಜ್ಯದ ಜನರಿಗೆ, ವಿಶೇಷವಾಗಿ ಗ್ರಾಮೀಣ ಜನರಿಗೆ, ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ಇದೇ ಮೊದಲ ಬಾರಿಗೆ ಸರ್ಕಾರವು ಇಂತಹ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ,” ಎಂದು ಹೇಳಿದ್ದಾರೆ.
ಈ ಯೋಜನೆಯ ಅಡಿಯಲ್ಲಿ ಯಾವೆಲ್ಲಾ ರೋಗಗಳಿಗೆ ಉಚಿತ ತಪಾಸಣೆ ಮಾಡಲಾಗುತ್ತದೆ?
1) ಮಧುಮೇಹ(Diabetes)
2) ಅಧಿಕ ರಕ್ತದೊತ್ತಡ(High blood pressure)
3) ಬಾಯಿ ಕ್ಯಾನ್ಸರ್(Oral cancer)
4) ಸ್ತನ ಕ್ಯಾನ್ಸರ್(Breast cancer)
5) ಗರ್ಭಕಂಠದ ಕ್ಯಾನ್ಸರ್(Cervical cancer)
6) ಡಯಾಬೆಟಿಕ್ ಫೂಟ್(Diabetic foot)
7) ರೆಟಿನೋಪತಿ(Retinopathy)
ಇದನ್ನೂ ಓದಿ: BMTC Tour Packages-ಬಿಎಂಟಿಸಿಯಿಂದ ಒಂದು ದಿನದ ಪ್ಯಾಕೇಜ್ ಟೂರ್ ಆರಂಭ!
8) ರಕ್ತಹೀನತೆ(Anemia)
9) ಮಾನಸಿಕ ಆರೋಗ್ಯ ಅಸ್ವಸ್ಥೆಗಳು(Mental Health Disorders)
10) ನರವೈಜ್ನಾನಿಕ ಅಸ್ವಸ್ಥೆಗಳು(Neurological Disorders)
11) ನಿದ್ರೆಯಲ್ಲಿ ಉಸಿರುಗಟ್ಟುವಿಕೆ(Sleep Apnea)
12) ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ(Chronic Kidney Disease)
13) ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ(Chronic Obstructive Pulmonary Disease)
14) ಆಲ್ಕೋಹಾಲ್ ರಹಿತ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ(Non-Alcoholic Fatty Liver Disease)
Purpose of this scheme-ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು?
ಸಮಗ್ರ ಆರೋಗ್ಯ ಸೇವೆಗಳನ್ನು ಕುಟುಂಬದ ಮನೆಬಾಗಿಲಿಗೆ ತಲುಪಿಸುವುದು. ಗ್ರಾಮೀಣ ಮತ್ತು ನಗರ ಬಡವರ್ಗದ ಜನಸಾಮಾನ್ಯರು ತಮ್ಮ ದೈನಂದಿನದ ಬದುಕಿನಲ್ಲಿ ಕೆಲವು ಬಾರಿ ಆರೋಗ್ಯ ತಪಾಸಣೆಗೆ ಆಸ್ಪತ್ರೆಗಳಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಈ ಯೋಜನೆಯ ಮೂಲಕ ಆರೋಗ್ಯ ಸೇವೆಯನ್ನು ನೇರವಾಗಿ ಮನೆಮನೆಗೆ ತಲುಪಿಸುವ ಮಹತ್ವದ ಯೋಜನೆಯ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: Diesel Pump Scheme-ಡಿಸೇಲ್ ಪಂಪ್ ಪಡೆಯಲು ಶೇ 90% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!

ಇದನ್ನೂ ಓದಿ: Free Hostel Application-ಉಚಿತ BCM ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!
ಅಸಾಂಕ್ರಾಮಿಕ ರೋಗಗಳ ತಕ್ಷಣ ಪತ್ತೆ: ಮಧುಮೇಹ, ಬಿಪಿ, ಹೃದಯರೋಗ, ಕ್ಯಾನ್ಸರ್ ಮೊದಲಾದ ಅಸಾಂಕ್ರಾಮಿಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡುವುದು.
ಮನೆಯಲ್ಲಿಯೇ ಆರೋಗ್ಯ ತಪಾಸಣೆ: ಸಾರ್ವಜನಿಕರು ಆಸ್ಪತ್ರೆಗೆ ತೆರಳದೆ ಮನೆಯಲ್ಲಿಯೇ ತಪಾಸಣೆ ಪಡೆಯುವ ಅವಕಾಶ ಇದರ ಉದ್ದೇಶವಾಗಿದೆ.
ಜನರಲ್ಲಿ ಆರೋಗ್ಯ ಜಾಗೃತಿ ಮತ್ತು ಮುನ್ನೆಚ್ಚರಿಕೆ: ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಪ್ರೇರಣೆ ನೀಡುವುದು.
ಆರ್ಥಿಕ ನೆರವು: ಉಚಿತ ತಪಾಸಣೆಯ ಮೂಲಕ ಏಷ್ಟೊ ಬಡ ಕುಟುಂಬಗಳಿಗೆ ಚಿಕಿತ್ಸೆ ಮೊದಲಾದ ಹಣದ ಭಾರವನ್ನು ಕಡಿಮೆ ಮಾಡುವುದು.
ಡಿಜಿಟಲ್ ಆರೋಗ್ಯ ದಾಖಲಾತಿ: ಪ್ರತಿ ವ್ಯಕ್ತಿಯ ಆರೋಗ್ಯ ಮಾಹಿತಿ ಡಿಜಿಟಲ್ ದಾಖಲೆ ರೂಪದಲ್ಲಿ ಸಂಗ್ರಹಿಸಿ, ಮುಂದಿನ ಚಿಕಿತ್ಸೆ ಮತ್ತು follow-up ಗೆ ನೆರವು ನೀಡುವುದು.
ಇದನ್ನೂ ಓದಿ: Crop Insurance-ಬೆಳೆ ವಿಮೆ ಯೋಜನೆಯ ಕುರಿತು ಇಲ್ಲಿದೆ ಅಗತ್ಯ ಮಾಹಿತಿ!
ಆಯುಷ್ಮಾನ್ ಆರೋಗ್ಯ ಮಂದಿರಗಳ ಸಹಯೋಗ: 19-29 ವರ್ಷ ವಯಸ್ಸಿನವರಿಗೆ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಉಚಿತ ತಪಾಸಣೆಯ ಸೌಲಭ್ಯವಿದೆ.
How to get service under this scheme-ಈ ಯೋಜನೆಯ ಅಡಿಯಲ್ಲಿ ಸೇವೆಯನ್ನು ಹೇಗೆ ಪಡೆಯುವುದು?
ಗೃಹ ಆರೋಗ್ಯ ಯೋಜನೆಯ ಸೌಲಭ್ಯವನ್ನು ಪಡೆಯಲು, ಜನರು ತಮ್ಮ ಹತ್ತಿರದಲ್ಲಿರುವ ಸಮೀಪದ ಆರೋಗ್ಯ ಕಾರ್ಯಕರ್ತರನ್ನು ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಭೇಟಿ ಮಾಡಿ ಸೇವೆಯನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ, ಆರೋಗ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ: Horticulture Department- ತೋಟಗಾರಿಕೆ ಇಲಾಖೆಯಡಿ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
Benifits of this scheme-ಈ ಯೋಜನೆಯ ಲಾಭಗಳು:
- ಕಡಿಮೆ ಆದಾಯದ ಕುಟುಂಬಗಳಿಗೆ ಉತ್ತಮ ಆರೋಗ್ಯ ಸಂರಕ್ಷಣಾ ವ್ಯವಸ್ಥೆಯನು ಕಲ್ಪಿಸುವುದು.
- ರೋಗಗಳನ್ನು ತ್ವರಿತವಾಗಿ ಪತ್ತೆ ಮಾಡಿ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಗಂಭೀರ ಸ್ಥಿತಿಗೆ ತಲುಪುವುದನ್ನು ತಡೆಯಬಹುದು.
- ಕುಟುಂಬದ ಸದಸ್ಯರಲ್ಲಿ ಆರೋಗ್ಯ ಜಾಗೃತಿ ಮತ್ತು ವೈಯಕ್ತಿಕ ಆರೈಕೆ ಸಂಸ್ಕೃತಿಗೆ ಉತ್ತೇಜನ ನೀಡುವುದು.