Tuesday, March 11, 2025
No menu items!
HomeSchemesRation shop- ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ!

Ration shop- ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ!

ಪಡಿತರ ಚೀಟಿಯನ್ನು ಹೊಂದಿರುವ ಆಧಾರದ ಮೇಲೆ ಕೆಲವು ಜಿಲ್ಲೆಗಳಲ್ಲಿ ಹೊಸ “ನ್ಯಾಯಬೆಲೆ ಅಂಗಡಿ” ಅಥವಾ ರೇಷನ್ ಅಂಗಡಿಗಳನ್ನು(Ration Angadi) ತೆರೆಯಲು ಸರಕಾರದಿಂದ ಅರ್ಜಿಯನ್ನು ಕರೆಯಲಾಗಿದೆ.

ಆಹಾರ ಭದ್ರತಾ ಕಾಯ್ದೆಯಡಿ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ(Ration Angadi Registration) ಮೂಲಭೂತ ಆಹಾರ ವಸ್ತುಗಳನ್ನು ಕಡಿಮೆ ದರದಲ್ಲಿ ಒದಗಿಸುವುದರ ಉದ್ದೇಶವಾಗಿದೆ. ಜನಸಾಮಾನ್ಯರಿಗೆ ಉತ್ತಮ ಪೌಷ್ಟಿಕ ಆಹಾರಗಳನ್ನು ಕಡಿಮೆ ದರದಲ್ಲಿ ಪೂರೈಸುವುದರ ಮೂಲಕ, ಸರಕಾರವು ಸಾಮಾಜಿಕ ನ್ಯಾಯ ಮತ್ತು ಆಹಾರ ಸುರಕ್ಷತೆಯ ದೃಷ್ಟಿಯಲ್ಲಿ ಮಹತ್ವಪೂರ್ಣ ಹೆಜ್ಜೆಯಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರಿ ದರದಲ್ಲಿ ಅಕ್ಕಿ, ಗೋಧಿ, ಸಕ್ಕರೆ, ಎಣ್ಣೆ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತದೆ.

ಇದನ್ನೂ ಓದಿ: LPG Gas- ಇಳಿಕೆಯತ್ತ LPG ಸಿಲಿಂಡರ್ ಬೆಲೆ! ಇಲ್ಲಿದೆ ಬೆಲೆ ವಿವರ!

ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕೆಲವು ಜಿಲ್ಲೆಗಳಲ್ಲಿ ಅರ್ಜಿಯನ್ನು ಕರೆಯಲಾಗಿದ್ದು, ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಹೇಗೆ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

Who should apply for opening a fair price shop-ನ್ಯಾಯಬೆಲೆ ಅಂಗಡಿ ತೆರೆಯಲು ಯಾರು ಅರ್ಜಿಯನ್ನು ಸಲ್ಲಿಸಬೇಕು?

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಮತ್ತು ಸಂಬದಿಸಿದ ರಾಜ್ಯ ಅಥವಾ ಜಿಲ್ಲೆಯಲ್ಲಿ ವಾಸವಾಗಿರಬೇಕು.
  • ಅರ್ಜಿ ಸಲ್ಲಿಸುವವರಿಗೆ ಕನಿಷ್ಠ ಪದವಿ ಅಥವಾ ಅದರ ಸಮಾನವಾದ ವಿದ್ಯಾರ್ಹತೆ ಹೊಂದಿರಬೇಕು.
  • ಅರ್ಜಿ ಸಲ್ಲಿಸಲು ಸಹಕಾರಿ ಸಂಘಗಳಲ್ಲಿ ಕನಿಷ್ಠ 3 ವರ್ಷದ ಹಿಂದೆ ನೋಂದಾವಣೆ ಮಾಡಿರಬೇಕು. ಮತ್ತು ಕನಿಷ್ಠ ₹2,00,000 ಲಕ್ಷ ರೂ ಗಳ ಬ್ಯಾಂಕ್ ಮೊತ್ತ ಹೊಂದಿರಬೇಕು.

ಇದನ್ನೂ ಓದಿ: Gold Rate-ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ!

  • ವಿವಿಧ ಸಹಕಾರಿ ಸಂಘಗಳು, ಸ್ತ್ರೀ ಶಕ್ತಿ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಲ್ಲಿರುವವರಿಗೂ ಸಹ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  • ತೃತೀಯ ಲಿಂಗಿಗಳಿಗೂ ಸಹ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  • ಸ್ತ್ರೀ ಸಹಾಯ ಸಂಘಗಳು ₹1,00,000 ಲಕ್ಷ ಹಾಗೂ ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ಕನಿಷ್ಠ ₹50,000 ಸಾವಿರ ರೂ ಗಳ ಬ್ಯಾಂಕ್ ನಗದು ಠೇವಣಿ ಹೊಂದಿರಬೇಕು.

ration shop

ಇದನ್ನೂ ಓದಿ: e-shram card-ಇ-ಶ್ರಮ್ ಕಾರ್ಡ ಪಡೆಯುವುದು ಹೇಗೆ? ಇದರ ಪ್ರಯೋಜನಗಳೇನು?

Where to submit an application for opening a fair price shop-ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ನ್ಯಾಯಬೆಲೆ ಅಂಗಡಿ ತೆರೆಯಲು ಸರ್ಕಾರಿ ಕಚೇರಿ ಅಥವಾ ಪೌರಸಭಾ ಕಚೇರಿಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ನೇರವಾಗಿ ನಿಮ್ಮ ಸ್ಥಳೀಯ ಉಪಚುನಾವಣೆ ಅಧಿಕಾರಿಗಳಿಂದ /ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

How to apply for opening a fair price shop-ನ್ಯಾಯಬೆಲೆ ಅಂಗಡಿ ತೆರೆಯಲು ಹೇಗೆ ಅರ್ಜಿಯನ್ನು ಸಲ್ಲಿಸಬೇಕು?

ಅರ್ಜಿದಾರರು ಅಗತ್ಯ ಪುರಾವೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ತಾಲ್ಲೂಕಿನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಚೇರಿಯನ್ನು ಭೇಟಿ ಮಾಡಿ Form-A ಅರ್ಜಿಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ನಿಮ್ಮ ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Yashaswini Card- ಯಶಸ್ವಿನಿ ಕಾರ್ಡಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಿದ ಸರ್ಕಾರ!

What are the documents required to open a fair price shop-ನ್ಯಾಯಬೆಲೆ ಅಂಗಡಿ ತೆರೆಯಲು ಅಗತ್ಯ ದಾಖಲೆಗಳಾವುವು?

  1. ಅರ್ಜಿದಾರರ ಆಧಾರ ಕಾರ್ಡ್/Aadhar Card
  2. ಪಾನ್ ಕಾರ್ಡ್/Pan Card
  3. ನಿವಾಸಿ ಪ್ರಮಾಣ ಪತ್ರ/Resident certificate
  4. ಬ್ಯಾಂಕ್ ಪಾಸ್ ಬುಕ್/Bank Passbook
  5. ವ್ಯಾಪಾರದ ಮಳಿಗೆಯ ಖಾತೆ ಕರಾರು ಪತ್ರ/Account promissory note of trade store
  6. 3 ಫೋಟೋ/Photo Copy

ಇದನ್ನೂ ಓದಿ: Groundnut MSP-ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ ಕೇಂದ್ರ!

RELATED ARTICLES
- Advertisment -

Most Popular

Recent Comments