ವಯೋವೃದ್ಧರಾದ ಕಾರ್ಮಿಕರಿಗೆ(elderly workers) ಭವಿಷ್ಯದ ಭದ್ರತೆಗಾಗಿ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತದ್ದಿದ್ದು, 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ತಮ್ಮ ನಿವೃತ್ತಿಯ ನಂತರ ಅನುಕೂಲವಾಗುವಂತೆ ಮಾಸಿಕ ಪಿಂಚಣಿ ಸೌಲಭ್ಯವನ್ನು(Monthly pension facility) ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಯೋಜನೆ, 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಭದ್ರತೆ ಮತ್ತು ನಿರ್ವಹಣೆಯ ಕನಸು ನನಸು ಮಾಡುವ ಮಹತ್ವದ ಹೆಜ್ಜೆಯಾಗಿದ್ದು, ಕಾರ್ಮಿಕರ ನಿವೃತ್ತಿ ನಂತರದ ಜೀವನದ ಆರ್ಥಿಕ ಸ್ಥಿತಿಯನ್ನು ಕಡಿಮೆ ಮಾಡುವ ಉದ್ದೇಶವಾಗಿದೆ. ಕಾರ್ಮಿಕರು ತಮ್ಮ ಕೆಲಸದ ಅವಧಿಯಲ್ಲಿ ಸಲ್ಲಿಸಿದ ಸೇವೆಗೆ ಅನುಗುಣವಾಗಿ ಸರ್ಕಾರದಿಂದ ನೀಡಿದ ಈ ಸೌಲಭ್ಯವು ಕಾರ್ಮಿಕರ ಸ್ಥಿತಿಯನ್ನು ಸುಧಾರಿಸಲು ಸಹಾಯಮಾಡುತ್ತದೆ.
ಇದನ್ನೂ ಓದಿ: Land Documents- ಜಮೀನು ಖರೀದಿ ಹಾಗೂ ಮಾರಾಟ ಮಾಡುವ ಮುನ್ನ ಈ ದಾಖಲೆಗಳು ಸರಿಯಾಗಿರುವುದು ಕಡ್ಡಾಯ!
ಪ್ರತಿಯೊಬ್ಬ ಕಾರ್ಮಿಕರಿಗೆ ಈ ಪಿಂಚಣಿ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸುವ ಅವಕಾಶವಿದ್ದು, ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
Who can apply for monthly pension-ಮಾಸಿಕ ಪಿಂಚಣಿ ಸೌಲಭ್ಯ ಪಡೆಯಲು ಯಾರು ಅರ್ಜಿಯನ್ನು ಸಲ್ಲಿಸಬಹುದು?
ಇದನ್ನೂ ಓದಿ: Department of Excise-ಅಬಕಾರಿ ಇಲಾಖೆಯಲ್ಲಿನ ವರ್ಗಾವಣೆಗೆ ನೂತನ ನಿಯಮ: ಸಚಿವ ಆರ್.ಬಿ.ತಿಮ್ಮಾಪೂರ!
- ಅಭ್ಯರ್ಥಿಯ ವಯಸ್ಸು 60 ವರ್ಷ ಅಥವಾ 60 ವರ್ಷಕ್ಕಿಂತ ಹೆಚ್ಚಿನವಾಗಿರಬೇಕು.
- ಅರ್ಜಿ ಸಲ್ಲಿಸುವವರು ಕನಿಷ್ಠ 10 ವರ್ಷಗಳಿಂದ ಕಾರ್ಮಿಕರಾಗಿ ಕಾರ್ಯನಿರ್ವಹಿಸಿರಬೇಕು.
- ಅರ್ಜಿ ಸಲ್ಲಿಸುವವರು ಸರ್ಕಾರದ ಇತರೆ ಪಿಂಚಣಿ ಯೋಜನೆಗಳಲ್ಲಿ ಸೌಲಭ್ಯವನ್ನುಪಡೆದಿರಬಾರದು.
- ಅರ್ಜಿದಾರರು ಪಿಂಚಣಿ ಪಡೆಯಲು ಮೂಲ ಆರ್ಥಿಕ ಮಾನದಂಡಗಳನ್ನು ಹೊಂದಿರಬೇಕು.
- 60 ವರ್ಷ ಪೂರ್ಣಗೊಳ್ಳುವ ಮುನ್ನ ಕನಿಷ್ಟ ವರ್ಷನಿರಂತರವಾಗಿ ಮಂಡಳಿಯ ಸದಸ್ಯತ್ವವನ್ನು ನವೀಕರಿಸಿ ಫಲಾನುಭವಿಯಾಗಿ ಮುಂದುವರೆದಿರಬೇಕು.
Where to apply for monthly pension facility-ಮಾಸಿಕ ಪಿಂಚಣಿ ಸೌಲಭ್ಯ ಪಡೆಯಲು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು?
ಅರ್ಜಿಯನ್ನು ಸಲ್ಲಿಸಲು ಕಾರ್ಮಿಕರು ಹತ್ತಿರದ ಕಾರ್ಮಿಕ ಪಿಂಚಣಿ ಆಯೋಗ ಅಥವಾ ಸ್ಥಳೀಯ ಕಾರ್ಯಾಲಯಗಳಲ್ಲಿ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಅರ್ಜಿಯನ್ನು ಇಲಾಖೆ ನಿಗದಿಪಡಿಸಿರುವ ಅಧಿಕೃತ ವೆಬ್ಸೈಟ್ ನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: Ration Card e-KYC: ರೇಶನ್ ಕಾರ್ಡ್ ಇ-ಕೆವೈಸಿ ಮಾಡಲು ಇನ್ನೂ12 ದಿನ ಮಾತ್ರ ಬಾಕಿ!
How to apply for monthly pension-ಮಾಸಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಈ ಕೆಳಗೆ ನೀಡಿರುವ ಕಾರ್ಮಿಕ ಮಂಡಳಿಯ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
Step-1: ಇಲ್ಲಿ ಕ್ಲಿಕ್ Apply Now ಮಾಡಿ ಅಧಿಕೃತ ಕಾರ್ಮಿಕ ಇಲಾಖೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಬಳಿಕ ಈಗಾಗಲೇ ನೋಂದಣಿಯನ್ನು ಮಾಡಿಕೊಂಡಿರುವವರು ನೇರವಾಗಿ “Login” ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು ಮೊದಲ ಬಾರಿಗೆ ಈ ವೆಬ್ಸೈಟ್ ಭೇಟಿ ಮಾಡುತ್ತಿರುವವರು “Register” ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ನೋಂದಣಿಯನ್ನು ಮಾಡಿಕೊಂಡು ಲಾಗಿನ್ ಅಗಬೇಕು.
Step-3: ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಮತ್ತು ಅದಕ್ಕೆ ಬರುವ OTP ಅನ್ನು ನಮೂದಿಸಿ ಲಾಗಿನ್ ಅದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ಇದನ್ನೂ ಓದಿ: Yashasvini Card- ಯಶಸ್ವಿನಿ ಕಾರ್ಡ್ ನೋಂದಣಿಗೆ ಕೇವಲ 13 ದಿನಗಳು ಮಾತ್ರ ಬಾಕಿ!
What are the required documents to get monthly pension facility-ಮಾಸಿಕ ಪಿಂಚಣಿ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳೇನು?
- ಜನನ ಪ್ರಮಾಣಪತ್ರ/Birth Certificate
- ಹಿಂದಿನ ಕಾರ್ಮಿಕ ಸಂಸ್ಥೆಯಿಂದ ನೀಡಲ್ಪಟ್ಟ ಸೇವಾ ಪ್ರಮಾಣಪತ್ರ/Service certificate issued by previous agency.
- ಬ್ಯಾಂಕ್ ಖಾತೆಯ ಪ್ರತಿ/Bank Passbook
- ಆಧಾರ್ ಕಾರ್ಡ್/Aadhar Card
- ಮೊಬೈಲ್ ನಂಬರ್/Mobile number
ಇದನ್ನೂ ಓದಿ: Kisan credit card-ರೈತರಿಗೆ ಗುಡ್ ನ್ಯೂಸ್! ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲ ಸೌಲಭ್ಯ!
ಹೆಚ್ಚಿನ ಮಾಹಿತಿಗಾಗಿ ಅರ್ಜಿಗಳನ್ನು ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ: Click here