Saturday, July 19, 2025
No menu items!
HomeNewsVidyadhan Scholorship-SSLC ಪಾಸಾದ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ! 

Vidyadhan Scholorship-SSLC ಪಾಸಾದ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ! 

ವಿದ್ಯಾಧನ್ ವಿದ್ಯಾರ್ಥಿವೇತನ-2025 ಕಾರ್ಯಕ್ರಮದ ಅಡಿಯಲ್ಲಿ(Vidyadhan Scholorship)ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ SSLC ಪಾಸಾದ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕರ್ನಾಟಕ 2025 ರ ವಿದ್ಯಾಧನ್ ವಿದ್ಯಾರ್ಥಿವೇತನವು 11 ಮತ್ತು 12 ನೇ ತರಗತಿಯ ವಿದ್ಯಾರ್ಥಿವೇತನ(SSLC Scholorship Application)ಕಾರ್ಯಕ್ರಮವು ರಾಜ್ಯದ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸರೋಜಿನಿ ದಾಮೋದರನ್ ಫೌಂಡೇಶನ್‌ನ ಒಂದು ಉಪಕ್ರಮವಾಗಿದೆ. ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಹಿಂದಿನ ಉದ್ದೇಶವಾಗಿದೆ.

ಇದನ್ನೂ ಓದಿ: Home Grant Scheme-ಮತ್ಸ್ಯಾಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯಧನ!

ಪ್ರಸ್ತುತ ಈ ಲೇಖನದಲ್ಲಿ ಈ ಕಾರ್ಯಕ್ರಮದ(Scholorship Application) ಅಡಿಯಲ್ಲಿ ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ಹಂತಗಳನ್ನು ಅನುಸರಿಸಬೇಕು? ಅದಕ್ಕೆ ಸಂಬಂದಿಸಿದ ದಾಖಲಾತಿಗಳೇನು? ಎಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ? ಇನ್ನಿತರ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Vidyadhan Scholorship-2025: ವಿದ್ಯಾಧಾನ್ ವಿದ್ಯಾರ್ಥಿವೇತನ ಯೋಜನೆ ಕುರಿತು ಮಾಹಿತಿ:

ವಿದ್ಯಾಧಾನ್ ಕಾರ್ಯಕ್ರಮವು ಇಂಡಿಯಾ ವಿದ್ಯಾರ್ಥಿವೇತನ ಯೋಜನೆಯಾಗಿದ್ದು, ಇದನ್ನು ಸರೋಜಿನಿ ದಾಮೋದರನ್ ಫೌಂಡೇಶನ್ (Sarojini Damodaran Foundation)‌ನಿಂದ ಕಾರ್ಯನಿರ್ವಹಿಸಲಾಗುತ್ತಿದೆ. ಈ ಪ್ರತಿಷ್ಠಾನವನ್ನು 1999ರಲ್ಲಿ ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾದ ಶ್ರೀ ಎಸ್.ಡಿ. ಶಿಬುಲಾಲ್ ಹಾಗೂ ಶ್ರೀಮತಿ ಕುಮಾರಿ ಶಿಬುಲಾ ಅವರು ಸ್ಥಾಪಿಸಿದರು.

ಇದನ್ನೂ ಓದಿ: Scholorship Application:1-10 ನೇ ತರಗತಿ ವಿದ್ಯಾರ್ಥಿಗಳಿಗೆ ₹25,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

ಈ ಯೋಜನೆಯ ಅಡಿಯಲ್ಲಿ ಈಗಾಗಲೇ 51,000ಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ವಿತರಿಸಲಾಗಿದ್ದು, 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ನೇರ ಲಾಭವನ್ನು ಪಡೆದಿದ್ದಾರೆ.

ವಿದ್ಯಾಧಾನ್ ಯೋಜನೆಯು ಭಾರತದ ಹಲವೆಡೆ ಕಾರ್ಯನಿರ್ವಹಿಸುತ್ತಿದ್ದು, ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ:

ಕೇರಳ, ಕರ್ನಾಟಕ, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಗೋವಾ, ಒಡಿಶಾ, ದೆಹಲಿ, ಲಡಾಖ್, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ, ಹರಿಯಾಣ ಹಾಗೂ ಚಂಡೀಗಢ.

ಇದನ್ನೂ ಓದಿ: Labour Card-ಕಾರ್ಮಿಕ ಕಾರ್ಡ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Scholorship Amount-ವಿದ್ಯಾಧನ್ ಯೋಜನೆಯಡಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಲಾಗುತ್ತದೆ.

ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳಿಗೆ ಪಿಯುಸಿ ಮತ್ತು ಪದವಿ ಮಟ್ಟದ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ನೀಡಲಾಗುತ್ತದೆ.

ಪಿಯುಸಿ ಶಿಕ್ಷಣದ ಹಂತದಲ್ಲಿ: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ರೂ. 10,000/- ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.

ಪದವಿ ಶಿಕ್ಷಣದ ಹಂತದಲ್ಲಿ: ಪದವಿಗೆ ಮುಂದುವರಿದ ವಿದ್ಯಾರ್ಥಿಗಳಿಗೆ ವ್ಯಾಸಂಗದ ಪ್ರಕಾರ, ರೂ. 15,000/- ರಿಂದ ರೂ. 75,000/- ವರೆಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ.

ಇದನ್ನೂ ಓದಿ: India Scholorship-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

Important Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 08-07-2025

ಸ್ಕ್ರೀನಿಂಗ್ ಪರೀಕ್ಷೆ ನಡೆಸುವ ದಿನಾಂಕ- 27-07-2025

ಸಂದರ್ಶನ/ಪರೀಕ್ಷೆ ನಡೆಯುವ ದಿನಾಂಕ-09-08-2025 ರಿಂದ 24-08-2025 ರವರೆಗೆ ನೆಡೆಯುತ್ತದೆ.

Who Can Apply For This Scheme-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು:

  • ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • 2025 ನೇ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯವು ₹2,00,000 ಮೀರಿರಬಾರದು.
  • ವಿದ್ಯಾರ್ಥಿಯು 2025ನೇ ಸಾಲಿನಲ್ಲಿ 10 ನೇ ತರಗತಿಯನ್ನು ತೇರ್ಗಡೆ ಹೊಂದಿರಬೇಕು.
  • SSLC ಪರೀಕ್ಷೆಯಲ್ಲಿ ಶೇ 90% ಕ್ಕಿಂತ ಹೆಚ್ಚಿನ ಅಂಕವನ್ನು ಪಡೆದಿರಬೇಕು.
  • ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳು ಶೇ 75% ಪಡೆದಿರಬೇಕು.

ಇದನ್ನೂ ಓದಿ: E-Khatha-ಮನೆಯಲ್ಲೇ ಕುಳಿತು ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

What Are The Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  1. ಆಧಾರ್ ಕಾರ್ಡ ಪ್ರತಿ/Aadhar Card
  2. ಆದಾಯ ಪ್ರಮಾಣ ಪತ್ರ/Income Certificate
  3. ಅಂಗವೈಕಲ್ಯ ಪ್ರಮಾಣಪತ್ರ/Disability Certificate
  4. SSLC ಮಾರ್ಕ್ಸ್ ಕಾರ್ಡ್/SSLC Marks Card
  5. ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Passbook
  6. ಇ-ಮೇಲ್ ವಿಳಾಸ/E Mail Adress
  7. ಪೋಟೋ/Photocopy
  8. ಮೊಬೈಲ್ ನಂಬರ್/Mobile Number

ಇದನ್ನೂ ಓದಿ: E-Swattu-ನಿಮ್ಮ ಮೊಬೈಲ್ ನಲ್ಲೇ ಉಚಿತವಾಗಿ ಇ-ಸ್ವತ್ತು ಪಡೆಯಲು ಅರ್ಜಿ!

sslc scholorship

ಇದನ್ನೂ ಓದಿ: Free Eye Checkup-ಆಶಾಕಿರಣ ಯೋಜನೆಯಡಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ!

Online Application-ಅರ್ಜಿಯನ್ನು ಸಲ್ಲಿಸುವ ವಿಧಾನ:

ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಗಳು ಈ ಕೆಳಗೆ ತಿಳಿಸಿತುವ ಹಂತಗಳನ್ನು ಅನುಸರಿಸಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಮೊದಲು ಈ ಲಿಂಕ್ Click Here ಮೇಲೆ ಕ್ಲಿಕ್ ಮಾಡಿ ಅಧಿಕೃತ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

Step-2: ತದನಂತರ ಅದೇ ಪುಟದಲ್ಲಿ ಕಾಣುವ “Apply For Scholarships” ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಕೆಳಗೆ ಕಾಣುವ “Karnataka 11th Program-2025 ಈ ಆಯ್ಕೆಯ ಮೇಲೆ ಒತ್ತಿ ನಂತರ ಇಲ್ಲಿ ಕೆಳಗೆ ಕಾಣುವ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ಬಳಿಕ ಈ ಪೇಜ್ ನಲ್ಲಿ ಎರಡು ಆಯ್ಕೆಗಳು ಕಾಣಿಸುತ್ತವೆ ಇಲ್ಲಿ “Register” ಮತ್ತು “Already Registered?Login” ಇವುಗಳಲ್ಲಿ ಯಾವುದಾದರೊಂದರ ಮೇಲೆ ಕ್ಲಿಕ್ ಮಾಡಿ ಬಳಕೆದಾರ ID ಮತ್ತು Password ಅನ್ನು ಹಾಕಿ ಲಾಗಿನ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Agri Diploma Admission-ಕೃಷಿ ಡಿಪ್ಲೊಮಾ ವಿಶ್ವವಿದ್ಯಾಲಯದಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

Step-4: ಲಾಗಿನ್ ಅದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ನಂತರ ಅಲ್ಲಿ ಕೇಳುವ ಅಗತ್ಯ ವಿವರವನ್ನು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.

For More Information-ಈ ಯೋಜನೆಯ ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here

RELATED ARTICLES
- Advertisment -

Most Popular

Recent Comments