Saturday, July 12, 2025
No menu items!
HomeNewsLabour Card-ಕಾರ್ಮಿಕ ಕಾರ್ಡ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Labour Card-ಕಾರ್ಮಿಕ ಕಾರ್ಡ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಕಾರ್ಮಿಕ ಇಲಾಖೆಯ(Labour Card Application) ಅಡಿಯಲ್ಲಿ ಹೊಸದಾಗಿ ಕಾರ್ಮಿಕ ಕಾರ್ಡ ಅನ್ನು ನೋಂದಣಿ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಕಾರ್ಮಿಕರ ಭವಿಷ್ಯವನ್ನು ರಕ್ಷಿಸುವ ಕಾರ್ಯದಲ್ಲಿ ಸರ್ಕಾರವು ಕಾರ್ಮಿಕ ಕಾರ್ಡ(Labour Card) ಎಂಬ ಮಹತ್ವದ ದಾಖಲೆಯೊಂದನ್ನು ಜಾರಿಗೆ ತಂದಿದೆ. ಈ ಕಾರ್ಡ್‌ ಮೂಲಕ ಕಾರ್ಮಿಕರು ಶಿಕ್ಷಣ ಸಹಾಯಧನ, ಆರೋಗ್ಯ ವಿಮೆ, ಮನೆ ನಿರ್ಮಾಣ ಅನುದಾನ, ಮರಣ ಪರಿಹಾರ ಸೇರಿದಂತೆ ನೂರಾರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: India Scholorship-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

ಪ್ರಸ್ತುತ ಈ ಲೇಖನದಲ್ಲಿ ಕಾರ್ಮಿಕ ಮಂಡಳಿಯಡಿ ಕಾರ್ಮಿಕ ಕಾರ್ಡ ಅನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು? ಏನಿದು ಕಾರ್ಮಿಕ ಕಾರ್ಡ?ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅದಕ್ಕೆ ಸಂಭಂದಿಸಿದ ಅಗತ್ಯ ದಾಖಲಾತಿಗಳೇನು? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Karmika Card-ಕಾರ್ಮಿಕ ಕಾರ್ಡ್ ಎಂದರೇನು?

ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡ್ ಎಂಬುದು ಕಾರ್ಮಿಕ ಇಲಾಖೆಯು ಅಥವಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು (KBOCWWB) ನೀಡುವ ಅಧಿಕೃತ ಗುರುತಿನ ದಾಖಲೆಯಾಗಿದೆ.

ಈ ಕಾರ್ಡ್‌ನಲ್ಲಿ ಕಾರ್ಮಿಕನ ಹೆಸರು, ವಿಳಾಸ, ವಯಸ್ಸು, ಉದ್ಯೋಗದ ಸ್ವರೂಪ, ವಿದ್ಯಾ ಹಂತ ಸೇರಿದಂತೆ ಅನೇಕ ವೈಯಕ್ತಿಕ ಮಾಹಿತಿಗಳು ದಾಖಲಾಗಿರುತ್ತವೆ. ಈ ಕಾರ್ಡ್ ಹೊಂದಿರುವ ಮೂಲಕ ಕಾರ್ಮಿಕರು ಸರ್ಕಾರದ ವಿವಿಧ ಯೋಜನೆಗಳ ಲಾಭಗಳು ಹಾಗೂ ಪಿಂಚಣಿ, ಶಿಕ್ಷಣ ಸಹಾಯಧನ, ಆರೋಗ್ಯ ವಿಮೆ, ಗೃಹ ನಿರ್ಮಾಣ ಸಹಾಯಧನವನ್ನು ಪಡೆಯಲು ಸಹಾಯಕಾರಿಯಾಗಿದೆ.

ಇದನ್ನೂ ಓದಿ: E-Khatha-ಮನೆಯಲ್ಲೇ ಕುಳಿತು ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

Who Can Apply- ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿಯನ್ನು ಯಾರು ಸಲ್ಲಿಸಬೇಕು?

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರ ವಯಸ್ಸು 18 ರಿಂದ 60 ವರ್ಷ ಮೀರಿರಬಾರದು.

ಅರ್ಜಿದಾರರು ಕನಿಷ್ಟ 90 ದಿನಗಳ ಕಾಲ ಕಾರ್ಮಿಕ ಕೆಲಸದಲ್ಲಿ ಕಾರ್ಯ ನಿರ್ವಹಿಸಿರಬೇಕು.

ಅರ್ಜಿದಾರರು ಸರ್ಕಾರದಿಂದ ಮಾನ್ಯತೆ ಪಡೆದ ಕಾರ್ಮಿಕ ಸಂಘಗಳಿಗೆ ಸದಸ್ಯರಾಗಿರಬೇಕು.

ಅರ್ಜಿದಾರರು ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೋಂದಣಿಯನ್ನು ಮಾಡಿಕೊಂಡಿರಬೇಕು.

ಇದನ್ನೂ ಓದಿ: E-Swattu-ನಿಮ್ಮ ಮೊಬೈಲ್ ನಲ್ಲೇ ಉಚಿತವಾಗಿ ಇ-ಸ್ವತ್ತು ಪಡೆಯಲು ಅರ್ಜಿ!

Documents-ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ದಾಖಲೆಗಳು?

  • ಅರ್ಜಿದಾರರ ಆಧಾರ್ ಕಾರ್ಡ/Aadhar card
  • ಮತದಾರ ಗುರುತಿನ ಚೀಟಿ/Identity Card
  • ಉದ್ಯೋಗ ದೃಡೀಕರಣ ಪತ್ರ/Employment certificate
  • ವಯಸ್ಸಿನ ದೃಡೀಕರಣ ಪತ್ರ/Age certificate
  • ರೇಶನ್ ಕಾರ್ಡ್/Ration Card
  • ಬ್ಯಾಂಕ್ ಪಾಸ್ ಬುಕ್/Bank Passbook
  • ಪೋಟೋ/Photocopy

ಇದನ್ನೂ ಓದಿ: Free Eye Checkup-ಆಶಾಕಿರಣ ಯೋಜನೆಯಡಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ!

Where to Apply-ಕಾರ್ಮಿಕ ಕಾರ್ಡ ಪಡೆಯಲು ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಹ ಅಭ್ಯರ್ಥಿಗಳು ಕಾರ್ಮಿಕ ಮಂಡಳಿಯಡಿ ಕಾರ್ಮಿಕ ಕಾರ್ಡ ಅನ್ನು ಪಡೆಯಲು ನಿಮ್ಮ್ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಕ್ಕೆ ಅಗತ್ಯ ದಾಖಲೆಗಳ ಮೂಲಕ ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

How To Apply-ಕಾರ್ಮಿಕ ಕಾರ್ಡ ಪಡೆಯಲು ಅರ್ಜಿಯನ್ನು ಸಲ್ಲಿಸುವ ವಿಧಾನ:

Step-1: ಮೊದಲಿಗೆ ಈ ಲಿಂಕ್ “Apply Now” ಮೇಲೆ ಕ್ಲಿಕ್ ಮಾಡಿ ಅಧಿಕೃತ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ವೆಬ್ಸೈಟ್ ಗೆ ಭೇಟಿ ಮಾಡಬೇಕು.

ಇದನ್ನೂ ಓದಿ: Agri Diploma Admission-ಕೃಷಿ ಡಿಪ್ಲೊಮಾ ವಿಶ್ವವಿದ್ಯಾಲಯದಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

Image

ಇದನ್ನೂ ಓದಿ: Home Loan Schems-PMAY 2.0 ಯೋಜನೆಯಡಿ ₹ 2.50 ಲಕ್ಷ ಸಹಾಯಧನಕ್ಕೆ ಅರ್ಜಿ! 

Step-2: ನಂತರ ಈ ವೆಬ್ಸೈಟ್ ಗೆ ಹೊಸದಾಗಿ ನೋಂದಣಿ ಮಾಡುವವರು “New User Registration” ಬಟನ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟರ್ ಮಾಡಲಿರುವ ಮೊಬೈಲ್ ನಂಬರ್ ಅನ್ನು ಹಾಕಬೇಕು. ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಗೆ ಬಂದಿರುವ OTP ಅನ್ನು ನಮೂದಿಸಿ ಐಡಿ ಹಾಗೂ ಪಾಸ್‌ವರ್ಡ್ ಅನ್ನು ಸಿದ್ದ ಮಾಡಿಕೊಳ್ಳಬೇಕು.

Step-3: ಲಾಗಿನ್ ಆದ ನಂತರ ಅದೇ ಪುಟದಲ್ಲಿ ಕಾಣುವ “Building and Other Construction Workers Registration” ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅರ್ಜಿ ನಮೂದಿಯಲ್ಲಿರುವ ಹೆಸರು, ವಿಳಾಸ, ವಯಸ್ಸು, ಉದ್ಯೋಗ ಪ್ರಕಾರ, ವಾರ್ಷಿಕ ಆದಾಯ ಇತ್ಯಾದಿ ಮಾಹಿತಿಯನ್ನು ಭರ್ತಿ ಮಾಡಬೇಕು.

Step-4: ತದನಂತರ ಅಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ನೋಂದಣಿ ಶುಲ್ಕವನ್ನು ಪಾವತಿ ಮಾಡಿದ ನಂತರ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: E Khata-ಸರ್ಕಾರದಿಂದ ಮನೆ ಬಾಗಿಲಿಗೆ ಇ-ಖಾತಾ ವಿತರಿಸುವ ಯೋಜನೆ ಜಾರಿ!

For More Information-ಹೆಚ್ಚಿನ ಉಪಯುಕ್ತ ಸಂಪೂರ್ಣ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ: Click Here

RELATED ARTICLES
- Advertisment -

Most Popular

Recent Comments