Saturday, August 30, 2025
No menu items!
HomeNewsProperty digitization-ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಬೃಹತ್ ಇ-ಖಾತಾ ಆಂದೋಲನ!

Property digitization-ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಬೃಹತ್ ಇ-ಖಾತಾ ಆಂದೋಲನ!

ಕರ್ನಾಟಕ ರಾಜ್ಯ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಆಸ್ತಿ ದಾಖಲೆಗಳ(Property digitization) ಸುರಕ್ಷತೆಗಾಗಿ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಜುಲೈ 1, 2025 ರಿಂದ ಒಂದು ತಿಂಗಳ ಕಾಲ ಬೃಹತ್ ಇ-ಖಾತಾ ಆಂದೋಲನವನ್ನು ಪ್ರಾರಂಭಿಸಲಾಗಿದೆ.

ಬೆಂಗಳೂರಿನ ನಾಗರಿಕರು ಇನ್ಮುಂದೆ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ವಂಚನೆಗೊಳಗಾಗುವ(Land record modernization ಭಯವಿಲ್ಲ, ಕಚೇರಿಗಳಿಗೆ ಅಲೆದಾಡಬೇಕಿಲ್ಲ, ಮಧ್ಯವರ್ತಿಗಳ ಹಾವಳಿಯಿಲ್ಲ. ಜುಲೈ 1ರಿಂದ ಒಂದು ತಿಂಗಳುಗಳ ಕಾಲ ನಡೆಯಲಿರುವ ಬೃಹತ್ ಇ- ಖಾತಾ ಆಂದೋಲದಲ್ಲಿ ನಮ್ಮ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬಂದು ಖಾತೆಗಳ ಡಿಜಿಟಲೀಕರಣವನ್ನು ಮಾಡಿಕೊಡಲಿದ್ದಾರೆ. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಆದೇಶವನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: Airtel Scholarship- ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಮತ್ತು ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

ಪ್ರಸ್ತುತ ಈ ಲೇಖನದಲ್ಲಿ ಇ-ಖಾತಾ ಪಡೆಯುವುದರ ಕುರಿತು ಯಾವೆಲ್ಲ(eKhata application) ಕ್ರಮಗಳನ್ನು ಅನುಸರಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಆನ್ಲೈನ್ ಮೂಲಕ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ?ಇ-ಖಾತಾಯ ಯೋಜನೆಯ ಉದ್ದೇಶ ಮತ್ತು ಪ್ರಯೋಜನಗಳು ಸೇರಿದಂತೆ ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Purpose Of This Scheme-ಈ ಯೋಜನೆಯ ಮುಖ್ಯ ಉದ್ದೇಶ:

ಜಮೀನು ಮತ್ತು ಆಸ್ತಿ ಸಂಬಂಧಿತ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲ್ ವ್ಯವಸ್ಥೆಯ ರೂಪಕ್ಕೆ ತರುವುದು. ಹಾಗೆಯೇ ಹಳೆಯ ಕಾಲದ ದಾಖಲೆಗಳು ಕೈಯಲ್ಲಿ ಅಥವಾ ಕಾಗದದ ಆಧಾರಿತವಾಗಿದ್ದರಿಂದ ಅವು ನಷ್ಟವಾಗುವ ಅಥವಾ ಅಸ್ಥಿರತೆ ಉಂಟಾಗುವ ಸಾಧ್ಯತೆ ಉಂಟಾಗುತ್ತಿದ್ದು, ಈ ಸಮಸ್ಯೆಗೆ ಪರಿಹಾರವಾಗಿ ಇ-ಖಾತಾ ಪದ್ದತಿಯನ್ನು ಹೊಸದಾಗಿ ಜುಲೈ 1 ರಿಂದ ಜಾರಿಗೆ ತರಲಾಗಿದೆ.

ಇದನ್ನೂ ಓದಿ: Free Diploma Courses-ಉಚಿತವಾಗಿ ಡಿಪ್ಲೋಮಾ ಕೋರ್ಸುಗಳ ಶಿಕ್ಷಣ ಪಡೆಯಲು ಅರ್ಜಿ ಆಹ್ವಾನ!

Uses Of This Scheme-ಈ ಯೋಜನೆಯಿಂದ ಪ್ರಜೆಗಳಿಗೆ ಲಾಭ:

ಮನೆ, ಜಮೀನು ಅಥವಾ ಆಸ್ತಿಗಳ ಬಗ್ಗೆ ನಿಖರ ಮಾಹಿತಿಯನ್ನು ಪಡೆಯಲು ಸೌಲಭ್ಯಕರವಾಗಿದೆ.

ನಕಲಿ ದಾಖಲೆಗಳು ಅಥವಾ ಭೂಮಿಯ ಭ್ರಷ್ಟ ವಹಿವಾಟುಗಳನ್ನು ತಡೆಯುವಲ್ಲಿ ಸಹಾಯವಾಗಿದೆ.

ಖಾತೆ ನವೀಕರಣ, ಮ್ಯುಟೇಷನ್, ಪಟ್ಟಿ ನೋಂದಣಿ ಹಾಗೂ ಇತರ ದಾಖಲೆಗಳನ್ನು ಅತೀ ಬೇಗನೇ ಆನ್‌ಲೈನ್‌ನ ಮೂಲಕ ಪಡೆಯುವ ಅವಕಾಶ.

ಬ್ಯಾಂಕ್ ಸಾಲ ಅಥವಾ ಇತರೆ ಆರ್ಥಿಕ ವ್ಯವಹಾರಗಳಿಗೆ ಅಗತ್ಯವಿರುವ ದಾಖಲೆಗಳನ್ನು ಆನ್‌ಲೈನ್‌ ರೂಪಾಂತರಕ್ಕೆ ತಕ್ಷಣ ಪಡೆಯಲು ಸಹಕಾರ.

ಇದನ್ನೂ ಓದಿ: Vidyadhan Scholorship-SSLC ಪಾಸಾದ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ! 

ಮನೆ ಬಾಗಿಲಿಗೆ ಇ-ಖಾತಾ ಡಿಜಿಟಲೀಕರಣ:

ಇದು ಬೆಂಗಳೂರಿನ ಸುಮಾರು 21 ಲಕ್ಷ ಆಸ್ತಿ ಮಾಲೀಕರಿಗೆ ಲಾಭ ತರುವ ಸಾಧ್ಯತೆಯಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ತಯಾರಾಗಿದ್ದು, ಡ್ರಾಫ್ಟ್ ಇ-ಖಾತಾಗಳನ್ನು ಈಗಾಗಲೇ ಆನ್‌ಲೈನ್‌ನಲ್ಲಿ ಲಭ್ಯವಾಗಿಸಿದೆ. ಸರ್ಕಾರಿ ಅಧಿಕಾರಿಗಳು ನೇರವಾಗಿ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಖಾತೆಗಳ ಡಿಜಿಟಲೀಕರಣವನ್ನು ಮಾಡಿಕೊಡಲಿದ್ದಾರೆ.

Documents required-ಇ-ಖಾತಾ ಪಡೆಯಲು ಅವಶ್ಯಕ ದಾಖಲೆಗಳು:

  • ಆಧಾರ್ ಕಾರ್ಡ/Aadhar Card
  • ಆಸ್ತಿ ತೆರಿಗೆ ಎಸ್ ಎ ಎಸ್ ಸಂಖ್ಯೆ/Property Tax SAS Number
  • ಮಾರಾಟ ಅಥವಾ ನೋಂದಾಯಿತ ಪತ್ರ/Sale or Registration Deed
  • ಆಸ್ತಿಯ ಜಿಪಿಎಸ್ ಸ್ಥಳ/GPS Location of Property
  • ಮಾಲೀಕರು ಜಾಗದಲ್ಲಿ ನಿಂತಿರುವ ಪೋಟೋ/Photo of Owner Standing on the Land
  • ವಿಭಾಗ ಪತ್ರ/Section Letter
  • ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Home Grant Scheme-ಮತ್ಸ್ಯಾಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯಧನ!

Image

ಇದನ್ನೂ ಓದಿ: Scholorship Application:1-10 ನೇ ತರಗತಿ ವಿದ್ಯಾರ್ಥಿಗಳಿಗೆ ₹25,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

How To Apply-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

Step-1: ಮೊದಲು ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಬಳಿಕ ಈ ಪೇಜ್ ನಲ್ಲಿ ಲಾಗಿನ್ ಕಾಲಂ ನಲ್ಲಿ ನಿಮ್ಮ Mobile Number ಮತ್ತು OTP ಅನ್ನು ಹಾಕಿ ಅಗತ್ಯ ವಿವರವನ್ನು ಭರ್ತಿ ಮಾಡಿ “Login” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Labour Card-ಕಾರ್ಮಿಕ ಕಾರ್ಡ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Step-3: ಮೇಲೆ ತಿಳಿಸಿದ ಹಂತಗಳನ್ನು ಪೂರ್ಣಗೊಳಿಸಿದ ನಂತರ ಲಾಗಿನ್ ಅದ ಬಳಿಕ “e-khata” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ಪಟ್ಟಿ ತೋರಿಸುತ್ತದೆ. ಇಲ್ಲಿ ನಿಮ್ಮ ವಾರ್ಡ ಅನ್ನು ಹುಡುಕಿ ನಂತರ ಆಸ್ತಿಯ ಮಾಲೀಕರ ಹೆಸರನ್ನು ಸರ್ಚ್ ಮಾಡಬೇಕು.

Step-4: ನಂತರ ಈ ಪುಟದಲ್ಲಿ “Submit Information For e khata” ಕಾಲಂ ನಲ್ಲಿ ಕೆಳಗೆ ತೋರಿಸುವ Click Here ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ. ಕೊನೆಯಲ್ಲಿ ರಶೀದಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: India Scholorship-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

E-Khata More Information-ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here

RELATED ARTICLES
- Advertisment -

Most Popular

Recent Comments