Sunday, June 15, 2025
No menu items!
HomeAgricultureMSP Price list-2025: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೇಂದ್ರದಿಂದ 14 ಬೆಳೆಗಳ ಬೆಂಬಲ ಬೆಲೆ...

MSP Price list-2025: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೇಂದ್ರದಿಂದ 14 ಬೆಳೆಗಳ ಬೆಂಬಲ ಬೆಲೆ ಏರಿಕೆ!

ಕೇಂದ್ರ ಸರ್ಕಾರವು ರೈತರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಮುಂಗಾರು ಬೆಳೆಗಳ(MSP Kharif crops) ಬಿತ್ತನೆಗೂ ಮುನ್ನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 14 ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಪ್ರತಿ ವರ್ಷವು ಸಹ ಬೆಂಬಲ ಬೆಲೆ ಯೋಜನೆಯಡಿ ಬರುವ ಬೆಳೆಗಳ ಬೆಲೆಯನ್ನು ಏರಿಕೆ(MSP Price Hike) ಮಾಡುವುದು ವಾಡಿಕೆಯಾಗಿದ್ದು ಇದೇ ಮಾದರಿಯಲ್ಲಿ 2025-26 ನೇ ಸಾಲಿಗೆ ರೈತರು ಬೆಳೆಯುವ ಪ್ರಮುಖ ಆಹಾರ ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ಅಧಿಕೃತ ಅನುಮೋದನೆಯನ್ನು ನೀಡಿದೆ.

ಇದನ್ನೂ ಓದಿ: Rain Forecast-ರಾಜ್ಯದಲ್ಲಿ ಈ ದಿನದಿಂದ ಮತ್ತೆ ಮುಂಗಾರು ಚುರುಕು ಸಾಧ್ಯತೆ!

ಈ ಲೇಖನದಲ್ಲಿ ಪ್ರಸ್ತುತ ಯಾವೆಲ್ಲ ಬೆಲೆಗಳ ಬೆಂಬಲ ಬೆಲೆಯನ್ನು(bembala bele) ಏರಿಕೆ ಮಾಡಲಾಗಿದೆ? ಬೆಳೆವಾರು ಎಷ್ಟು ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ? ರೈತರು ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇನ್ನಿತರೆ ಅಗತ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

MSP scheme-ಪ್ರಸ್ತುತ ಈ ಕೆಳಗಿನ ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ:
  • ಭತ್ತ
  • ಭತ್ತ ಎ ಗೇಡ್
  • ಜೋಳ(ಹೈಬ್ರಿಡ್)
  • ಮಾಲ್ದಂಡಿ ಜೋಳ
  • ಸಜ್ಜೆ
  • ರಾಗಿ
  • ಮೆಕ್ಕೆಜೋಳ
  • ತೊಗರಿ
  • ಹೆಸರುಕಾಳು
ಇದನ್ನೂ ಓದಿ: Free Tailoring Machine-ಉಚಿತ ಟೈಲರಿಂಗ್ ಯಂತ್ರ ಪಡೆಯಲು ಅರ್ಜಿ ಆಹ್ವಾನ!
  • ಉದ್ದು
  • ನೆಲಗಡಲೆ
  • ಸೂರ್ಯಕಾಂತಿ
  • ಸೋಯಾಬೀನ್
  • ಎಳ್ಳು
  • ಹುಚ್ಚೆಳ್ಳು
  • ಹತ್ತಿ(ಮಧ್ಯಮ ಎಳೆ)
  • ಹತ್ತಿ(ಉದ್ದನೆಯ ಎಳೆ)

msp price hike

MSP Price List-2025: ಯಾವೆಲ್ಲ ಬೆಳೆಗಳ ಬೆಂಬಲ ಬೆಲೆಯನ್ನು ಎಷ್ಟು ಏರಿಕೆ ಮಾಡಲಾಗಿದೆ ಎನ್ನುವ ಮಾಹಿತಿ ಹೀಗಿದೆ:
ಕೇಂದ್ರ ಸರ್ಕಾರದಿಂದ ಪ್ರಸ್ತುತ ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದ್ದು ಅವುಗಳ ವಿವರ ಈ ಕೆಳಗಿನಂತಿದೆ.

ಇದನ್ನೂ ಓದಿ: Scholorship Application-ಮಿರೇ ಅಸೆಟ್ ಫೌಂಡೇಶನ್ ನಿಂದ ₹50,000 ಸ್ಕಾಲರ್‌ಶಿಪ್ ಪಡೆಯಲು ಅರ್ಜಿ!

ಬೆಳೆ 2024-25 2025-26 ಹೆಚ್ಚಳ
ಭತ್ತ 2,300 2,369 69
ಭತ್ತ ಎ ಗೇಡ್ 2,320 2,389 69
ಜೋಳ(ಹೈಬ್ರಿಡ್) 3,371 3,699 328
ಮಾಲ್ದಂಡಿ ಜೋಳ 3,421 3,749 328
ಸಜ್ಜೆ 2,625 2,775 150
ರಾಗಿ 4,290 4,886 596
ಮೆಕ್ಕೆಜೋಳ 2,225 2,400 175
ತೊಗರಿ 7,550 8,000 450
ಹೆಸರುಕಾಳು 8,682 8,768 86
ಉದ್ದು 7,400 7,800 400
ನೆಲಗಡಲೆ 6,783 7,721 441
ಸೂರ್ಯಕಾಂತಿ 7,280 7,721 441
ಸೋಯಾಬೀನ್ 4,892 5,328 436
ಎಳ್ಳು 9,267 9,846 579
ಹುಚ್ಚೆಳ್ಳು 8,717 9,537 820
ಹತ್ತಿ(ಮಧ್ಯಮ ಎಳೆ)- 7,121 7,710 589
ಹತ್ತಿ(ಉದ್ದನೆಯ ಎಳೆ)- 7,121 8,110 589
ಇದನ್ನೂ ಓದಿ: Ration Card List-ಪರಿಷ್ಕೃತ ಅನರ್ಹ ರೇಷನ್ ಕಾರ್ಡ್‌ದಾರರ ಪಟ್ಟಿ ಬಿಡುಗಡೆ!
Ragi MSP Price- ರಾಗಿ ಬೆಳೆಯುವವರಿಗೆ ಉತ್ತಮ ಅವಕಾಶ:
ರಾಜ್ಯದಲ್ಲಿ ರಾಗಿ ಬೆಳೆಗಾರರಿಗೆ ಈ ಬಾರಿ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಪ್ರಸ್ತುತ ಬೆಂಬಲ ಬೆಲೆ ಏರಿಕೆಯ ಅನ್ವಯ ಪ್ರತಿ ಕ್ವಿಂಟಾಲ್ ರಾಗಿಗೆ ರೂ 4,886 ನಿಗದಿ ಮಾಡಿರುವುದರಿಂದ ರೈತರಿಗೆ ಉತ್ತಮ ದರ ಮಾರುಕಟ್ಟೆಯಲ್ಲಿ ಸಿಗಲಿದೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್ ರಾಗಿಗೆ ರೂ 4,290/- ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿತ್ತು ಈ ವರ್ಷ ಈ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ ರೂ 596/- ಏರಿಕೆ ಮಾಡಿ ರೂ 4,886 ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Karnataka Dam Water Level-ಪ್ರಸ್ತುತ ರಾಜ್ಯದ ಡ್ಯಾಂ ಗಳಲ್ಲಿ ಎಷ್ಟು ನೀರು ಸಂಗ್ರಹವಾಗಿದೆ?

Bembala Bele Yojane- ರೈತರು ತಮ್ಮಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವುದು ಹೇಗೆ?
ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಮೊದಲ ಹಂತದಲ್ಲಿ ಬೆಳೆ ಸಮೀಕ್ಷೆ ಬೆಳೆ ಮಾಹಿತಿಯಲ್ಲಿ ಅಪ್ಲಿಕೇಶನ್ ಮೂಲಕ ತಮ್ಮ ಜಮೀನಿನ ಸಮೀಕ್ಷೆಯಲ್ಲಿ ಸರಿಯಾದ ಬೆಳೆಯನ್ನು ನಮೂದಿಸಿರಬೇಕು.
ನಂತರ ಸರ್ಕಾರದಿಂದ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನವನ್ನು ರೈತರಿಂದ ಖರೀದಿ ಮಾಡಲು ಖರೀದಿ ಕೇಂದ್ರವನ್ನು ತೆರೆದ ಬಳಿಕ ಅಗತ್ಯ ದಾಖಲಾತಿಗಳಾದ ಆಧಾರ್ ಕಾರ್ಡ,ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳಬೇಕು.

ಇದನ್ನೂ ಓದಿ: Gruha Arogya Yojane-ರಾಜ್ಯ ಸರ್ಕಾರದಿಂದ ಗೃಹ ಆರೋಗ್ಯ ಯೋಜನೆ ಜಾರಿ!

ಬಳಿಕ ಖರೀದಿ ಕೇಂದ್ರದಿಂದ ನಿಗದಿಪಡಿಸಿದ ದಿನಾಂಕದಂದು ತಮ್ಮ ಉತ್ಪನ್ನವನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು ರೈತರ ಉತ್ಪನ್ನದ ಮಾರಾಟದ ಹಣವನ್ನು 15-20 ದಿನಗಳ ಬಳಿಕ ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
RELATED ARTICLES
- Advertisment -

Most Popular

Recent Comments