Saturday, July 5, 2025
No menu items!
HomeAgricultureManipal Health Card- ನಿಮ್ಮ ಬಳಿ ಈ ಕಾರ್ಡ ಇದ್ದರೆ ವೈದ್ಯಕೀಯ ತಪಾಸಣೆಯ ಮೇಲೆ 50%...

Manipal Health Card- ನಿಮ್ಮ ಬಳಿ ಈ ಕಾರ್ಡ ಇದ್ದರೆ ವೈದ್ಯಕೀಯ ತಪಾಸಣೆಯ ಮೇಲೆ 50% ರಿಯಾಯಿತಿ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

ಮಣಿಪಾಲ್ ಆಸ್ಪತ್ರೆಗಳು ಭಾರತದ ಪ್ರಮುಖ ಬಹು ವಿಶೇಷತೆ ಆಸ್ಪತ್ರೆಗಳ ಜಾಲಗಳಲ್ಲಿ(Manipal Health Card) ಇದು ಒಂದಾಗಿದೆ. 1953 ರಲ್ಲಿ Dr.T M A Pai ಅವರು ಮಣಿಪಾಲ್ ದಲ್ಲಿ ಕಸ್ತೂರ ಬಾ ಮೆಡಿಕಲ್ ಕಾಲೇಜ್ ನೊಂದಿಗೆ ಆಸ್ಪತ್ರೆಗಳನ್ನು ಆರಂಬಿಸಲಾಗಿತ್ತು.

ಪ್ರಸ್ತುತ ಮಣಿಪಾಲ್ ಆಸ್ಪತ್ರೆಯಲ್ಲಿ 33 ವೈದ್ಯಕೀಯ ವಿಭಾಗಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು(Health card) ನೀಡುತ್ತಿದ್ದು 9500 ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಹೊಂದಿರುವ ಸುಸರ್ಜಿತ ಆಸ್ಪತ್ರೆ ಇದಾಗಿದ್ದು. ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡುವುದರಲ್ಲಿ ಮಣಿಪಾಲ್ ಆಸ್ಪತ್ರೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ: Kuri sakanike yojane- ಕುರಿ ಸಾಕಾಣಿಕೆ ಮಾಡಲು 1.75 ಲಕ್ಷ ನೆರವು! ಇಲ್ಲಿದೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ!

ಈ ಅಂಕಣದಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ ಅನ್ನು ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ, ಮಣಿಪಾಲ್ ಕಾರ್ಡ(Manipal Hospital) ಪಡೆಯುವುದರಿಂದ ಅಗುವ ಪ್ರಯೋಜನಗಳ ಮಾಹಿತಿ ಸೇರಿದಂತೆ ಈ ಕಾರ್ಡ ಕುರಿತು ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

Manipal health card-ಮಣಿಪಾಲ್ ಆರೋಗ್ಯ ಕಾರ್ಡ್:

ಮಣಿಪಾಲ್ ಆರೋಗ್ಯ ಕಾರ್ಡ್ ಅನ್ನು 1953 ರಲ್ಲಿ Dr. T M A Pai ಅವರು ಆರಂಭ ಮಾಡಿದ್ದು, ಸಾರ್ವಜನಿಕರಿಗೆ ಜನಸ್ನೇಹಿ ಮಾದರಿಯಲ್ಲಿ ಕೈ ಗೆಟಕುವ ದರದಲ್ಲಿ ಅತ್ಯಂತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಈ ಕಾರ್ಡ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Today Gold rate- ಇಳಿಕೆಯತ್ತ ಚಿನ್ನದ ದರ! ಇಲ್ಲಿದೆ ದೇಶದ ಪ್ರಮುಖ ನಗರಗಳ ಚಿನ್ನದ ದರ!

ಮಣಿಪಾಲ್ ಆರೋಗ್ಯ ಕಾರ್ಡ್ ಸೌಲಭ್ಯಗಳು:

ಈ ಆಸ್ಪತ್ರೆಯಲ್ಲಿ ಹೊರರೋಗಿ (out patient) ಮತ್ತು ಒಳರೋಗಿ (In patient) ವಿಭಾಗದಲ್ಲಿ ರಿಯಾಯಿತಿ ದರದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ವಿವಿಧ ರೀತಿಯ ಲ್ಯಾಬ್ ಟೆಸ್ಟ್ ಗಳ ಮೇಲೆ ಡಿಸ್ಕೌಂಟ್ ನೀಡಲಾಗುತ್ತದೆ

ಕೆಲವು ತುರ್ತು ವೈದ್ಯಕೀಯ ಚಿಕಿತ್ಸೆಗಳಿಗೂ ಸಹ ಡಿಸ್ಕೌಂಟ್ ಪಡೆಯಬಹುದು.

Manipal Card Benefits

ಮಣಿಪಾಲ್ ಆರೋಗ್ಯ ಕಾರ್ಡ್ ರಿಯಾಯಿತಿ ಮಾಹಿತಿ:

1) ರೋಗಿಗೆ ಹೊರ ರೋಗಿ ವಿಭಾಗದಲ್ಲಿ ವೈದ್ಯಕೀಯ ತಪಾಸಣೆಯ(Consultations) ವೆಚ್ಚದ ಮೇಲೆ: 50%

2) ಹೊರ ರೋಗಿ ವಿಭಾಗದಲ್ಲಿನ ಲ್ಯಾಬೋರೇಟರಿ(Lab Reports)) ಆರೋಗ್ಯ ತಪಾಸಣಾ ವೆಚ್ಚಕ್ಕೆ: 25%

3) CT, MRI, Ultrasound ಸೇರಿದಂತೆ ಎಲ್ಲಾ ಬಗ್ಗೆಯ Radiology ಗೆ ಸಂಬಂದಪಟ್ಟ ಸೇವೆಗಳಿಗೆ: 20%

4) ಡಯಾಲಿಸಿಸ್(Dialysis) ಚಿಕಿತ್ಸಾ ವೆಚ್ಚಕ್ಕೆ: 100 rs

5) ರೋಗಿಯು ಪಡೆಯುವ ಜನರಲ್ ವಾರ್ಡ(General ward) ಗೆ: 25%

6) ರೋಗಿಗೆ ನೀಡುವ ಔಷಧದ(Pharmacy) ಒಟ್ಟು ವೆಚ್ಚಕ್ಕೆ: 10%

ಇದನ್ನೂ ಓದಿ: Gruhalakshmi DBT amount-ಬಿಪಿಎಲ್ ಕಾರ್ಡ ರದ್ದಾದ್ರೆ ಗೃಹಲಕ್ಷ್ಮಿ ಹಣ ಜಮಾ ಆಗಲ್ಲವಾ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ!

Manipal Health Card

Manipal Card Application link-ಕಾರ್ಡ ಅನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಮಣಿಪಾಲ್ ಕಾರ್ಡ ಅನ್ನು ಪಡೆಯಲು ಅಂತರ್ಜಾಲದ ಮೂಲಕ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅಗತ್ಯ ದಾಖಲಾತಿಗಳ ಸಮೇತ ಅರ್ಜಿ ಸಲ್ಲಿಸಬಹುದು.

ವಿಧಾನ-1:

Step-1: Manipal Card Online Application ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಮಣಿಪಾಲ್ ಕಾರ್ಡಗೆ ಸಂಬಂಧಪಟ್ಟ ಜಾಲತಾಣವನ್ನು ಪ್ರವೇಶ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ I agree ಬಟನ್ ಮೇಲೆ ಕ್ಲಿಕ್ ಮಾಡಿ “Send OTP” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಬರುವ 4 ಅಂಕಿಯ OTP ಅನ್ನು ನಮೂದಿಸಿ “Next” ಬಟನ್ ಮೇಲೆ ಕ್ಲಿಕ್ ಮಾಡಿ.

Step-2: ಇಲ್ಲಿ ಕಾರ್ಡಗೆ ಸಂಬಂಧಪಟ್ಟ ಪ್ಲಾನ್ ಆಯ್ಕೆಗಳು ಗೋಚರಿಸುತ್ತವೆ ಇದರಲ್ಲಿ ನಿಮಗೆ ಇಷ್ಟವಾದ ಅಥವಾ ಅಗತ್ಯವಾದ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು “Member Details” ಕಾಲಂ ನಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಬೇಕು.

ಇದನ್ನೂ ಓದಿ: Aadhaar Card- ಆಧಾರ್ ಕಾರ್ಡ ಹೊಂದಿರುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!

Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ “Family Details” ಕಾಲಂ ನಲ್ಲಿ ನಿಮ್ಮ ಕುಟುಂಬ ಸದಸ್ಯರ ವಿವರವನ್ನು ಭರ್ತಿ ಮಾಡಿ ಈ ಪೇಜ್ ನ ಕೊನೆಯಲ್ಲಿ ಕಾಣುವ “Next” ಬಟನ್ ಮೇಲೆ ಕ್ಲಿಕ್ ಮಾಡಿ ಕಾರ್ಡ ಪಡೆಯಲು ಪಾವತಿಸಬೇಕಾದ ಶುಲ್ಕವನ್ನು ಪಾವತಿ ಮಾಡಿ ಮಣಿಪಾಲ್ ಕಾರ್ಡ ಅನ್ನು ಅನ್ಲೈನ್ ಮೂಲಕ ಪಡೆಯಬಹುದು.

ವಿಧಾನ-2:

ನಿಮ್ಮ ಹಳ್ಳಿಗೆ ಹತ್ತಿರದಲ್ಲಿರುವ ಮಣಿಪಾನ್ ಕಾರ್ಡ ಏಜೆಂಟ್ ಅವರನ್ನು ಸಂಪರ್ಕ ಮಾಡಿ ಅಗತ್ಯ ದಾಖಲೆ/ವಿವರವನ್ನು ನೀಡಿ ಅರ್ಜಿ ಸಲ್ಲಿಸಿ ಮಣಿಪಾಲ್ ಕಾರ್ಡ ಅನ್ನು ಪಡೆಯಬಹುದು.

ವಿಶೇಷ ಸೂಚನೆ: ಸಾರ್ವಜನಿಕರು ಒಮ್ಮೆ ನಿಗದಿತ ಶುಲ್ಕ ಪಾವತಿ ಮಾಡಿ ಕಾರ್ಡ ಅನ್ನು ಪಡೆದ ಬಳಿಕ ಒಂದು ವರ್ಷ ಪೂರ್ಣಗೊಳಿಸಿದ ಬಳಿಕ ಮತ್ತೆ ನಿಗದಿತ ಶುಲ್ಕವನ್ನು ಪಾವತಿ ಮಾಡಿ ಅಧಿಕೃತ ಮಣಿಪಾಲ್ ಕಾರ್ಡ ಜಾಲತಾಣವನ್ನು ಪ್ರವೇಶ ಮಾಡಿ ಕಾರ್ಡ ಅನ್ನು ಮರು ನೊಂದಣಿ(Renewal) ಮಾಡಿಕೊಳ್ಳಬೇಕು.

ಇದನ್ನೂ ಓದಿ: DBT Status- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

Manipal Card Benefits-ಆರೋಗ್ಯ ಕಾರ್ಡ್ ನ ಪ್ರಮುಖ ಉಪಯೋಗಗಳು:

ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಪಡೆಯಲು ಬಜೆಟ್ ನಿರ್ವಹಿಸಲು ಸಹಕಾರಿ.

ಆರೋಗ್ಯ ಸೇವೆಯ ಖರ್ಚು ಕಡಿಮೆ ಮಾಡುವಲ್ಲಿ ಈ ಕಾರ್ಡ್ ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿಗಳು:

0820-2923748 | 9980854700 | 6366091314

RELATED ARTICLES
- Advertisment -

Most Popular

Recent Comments