ರೈತರು ತಮ್ಮ ಜಮೀನಿನ ಮೇಲೆ ಬ್ಯಾಂಕ್ ನಲ್ಲಿ ಎಷ್ಟು ಸಾಲ(Agriculture Loan) ಇದೆ ಎಂದು ತಮ್ಮ ಮೊಬೈಲ್ ನಲ್ಲಿ ತಿಳಿಯಬಹುದು. ರೈತರು ಬೆಳೆ ಸಾಲವನ್ನು ಸಹಕಾರಿ ಮತ್ತು ರಾಷ್ಟ್ರೀಯ ಬ್ಯಾಂಕ್ ಮೂಲಕ ಪ್ರತಿ ವರ್ಷ ತೆಗೆದುಕೊಳ್ಳುತ್ತಾರೆ ಯಾವ ಯಾವ ಬ್ಯಾಂಕ್ ನಲ್ಲಿ ಬೆಳೆ ಸಾಲವನ್ನು ತೆಗೆದುಕೊಳ್ಳಲಾಗಿದೆ ಎಷ್ಟು ಮೊತ್ತದ ಸಾಲವನ್ನು ಪಡೆಯಲಾಗಿದೆ ಎನ್ನುವ ಮಾಹಿತಿಯನ್ನು ತಿಳಿಯಬಹುದು.
ಪಹಣಿಯಲ್ಲಿ 11ನೇ ಕಾಲಂನಲ್ಲಿ ತೋರಿಸುತ್ತದೆ. ಕೆಲವೊಮ್ಮೆ ರೈತರು ಬ್ಯಾಂಕ್ ಮೂಲಕ ಸಾಲವನ್ನು(Crop loan) ಪಡೆದು ಮರುಪಾವತಿ ಮಾಡಿದ್ದರು ಸಹ ಪಹಣಿಯಲ್ಲಿ ಸಾಲದ ಮೊತ್ತ ತೆಗೆದು ಹಾಕುವುದಿಲ್ಲ ಇಂತಹ ಸನ್ನಿವೇಶದಲ್ಲಿ ಯಾವ ಕ್ರಮವನ್ನು ಅನುಸರಿಸಿ ಸಾಲದ ಮೊತ್ತವನ್ನು ತೆಗೆದು ಹಾಕಬೇಕು ಎನ್ನುವ ಮಾಹಿತಿಯನ್ನು ಸಹ ಅಂಕಣದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶ! ಇಲ್ಲಿದೆ ಅದೇಶದ ಪ್ರತಿ!
ಕಂದಾಯ ಇಲಾಖೆಯ ಭೂಮಿ ವೆಬ್ಸೈಟ್ ಅನ್ನು ಭೇಟಿ ಮಾಡಿ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ರೈತರು ಯಾವುದೇ ಸರಕಾರಿ ಕಚೇರಿಯನ್ನು ಭೇಟಿ ನೀಡದೆ ಬ್ಯಾಂಕ್ ಮೂಲಕ ಪಡೆದಿರುವ ಸಾಲದ ಮೊತ್ತ ಎಷ್ಟು ಎಂದು ತಿಳಿದುಕೊಳ್ಳಬಹುದು.
Crop loan details-ಸರ್ವೆ ನಂಬರ್ ಹಾಕಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯುವ ವಿಧಾನ:
ಮೊದಲಿಗೆ ಇಲ್ಲಿ ತಿಳಿಸಿರುವ ಎಲ್ಲಾ ವಿಧಾನವನ್ನು ಅನುಸರಿಸಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗೆ ಸಾಲವನ್ನು ಮರುಪಾವತಿ ಮಾಡಿದ ಮೇಲೆಯೂ ಇನ್ನು ನಿಮ್ಮ ಪಹಣಿಯಲ್ಲಿ ಸಾಲದ ವಿವರವನ್ನು ತೋರಿಸುತ್ತಿದ್ದರೆ ಆಗ ಸಾಲದ ವಿವರವನ್ನು ಪಹಣಿಯಿಂದ ತೆಗೆದು ಹಾಕಲು ಹೀಗೆ ಮಾಡಿ.
ಇದನ್ನೂ ಓದಿ: Power tiller subsidy- ಶೇ.90ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ!
Step-1: Crop loan details check ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.

Step-2: ಬಳಿಕ ನಿಮ್ಮ ಜಮೀನು ಇರುವ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು ಆ ಜಮೀನಿನ ಸರ್ವೆ ನಂಬರ್ ಅನ್ನು ನಮೂದಿಸಿ “GO” ಅಪ್ಶನ್ ಮೇಲೆ ಒತ್ತಿ ಸರ್ವೆ ನಂಬರ್ ಹಿಸ್ಸಾ ಮತ್ತು ವರ್ಷ ಸೆಲೆಕ್ಟ್ ಮಾಡಿಕೊಂಡು “Fetch Details” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ಇದೇ ಪೇಜ್ ನಲ್ಲಿ “View” ಬಟನ್ ತೋರಿಸುತ್ತದೆ ಇದರ ಮೇಲೆ ಒತ್ತಿದರೆ ನಿಮ್ಮ ಜಮೀನಿನ ಒರಿಜಿನಲ್ ಪ್ರಸ್ತುತ ಪಹಣಿ/ಊತಾರ್/RTC ಒಪನ್ ಅಗುತ್ತದೆ ಈ ಪಹಣಿಯ 11 ನೇ ಕಾಲಂನಲ್ಲಿ ಋಣಗಳು ವಿಭಾಗದಲ್ಲಿ ನೀವು ಯಾವೆಲ್ಲ ಬ್ಯಾಂಕ್ ನಲ್ಲಿ ಎಷ್ಟು ಮೊತ್ತದ ಸಾಲವನ್ನು ಪಡೆದಿರುವಿರಿ ಎನ್ನುವ ವಿವರ ತೋರಿಸುತ್ತದೆ.
ಇದನ್ನೂ ಓದಿ: Vidyasiri scholarship-ವಿದ್ಯಾಸಿರಿ ವಿದ್ಯಾರ್ಥಿವೇತನ ಪ್ರತಿ ತಿಂಗಳಿಗೆ ರೂ 2,000 ಕ್ಕೆ ಏರಿಕೆ!
Agriculture Loan-ಸಾಲ ಮರು ಪಾವತಿ ಮಾಡಿದ್ದರು ಪಹಣಿಯಲ್ಲಿ ಸಾಲದ ಮೊತ್ತ ತೋರಿಸಿದರೆ ಹೀಗಿ ಮಾಡಿ:
ಮೊದಲಿಗೆ ನೀವು ಸಾಲ ತೆಗೆದುಕೊಂಡ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಸಾಲ ಮರುಪಾವತಿ ಮಾಡಿರುವ ಬಗ್ಗೆ NOC ಪ್ರಮಾಣ ಪತ್ರವನ್ನು ಪಡೆದುಕೊಂಡು ನಂತರ ನಿಮ್ಮ ಹತ್ತಿರದ ನೆಮ್ಮದಿ ಕೇಂದ್ರ ಅಥವಾ ನಾಡಕಚೇರಿಗೆ ಹೋಗಿ ಪಹಣಿಯಲ್ಲಿ ನಮೂದಿಸಿರುವ ಸಾಲದ ಮೊತ್ತವನ್ನು ವಜಾ ಮಾಡಲು ಅರ್ಜಿ ಸಲ್ಲಿಸಿ ಸಾಲದ ವಿವರವನ್ನು ತೆಗೆದು ಹಾಕಬೇಕು.