Sunday, December 22, 2024
No menu items!
HomeNewsDigital Ration Card-ಅಧಿಕೃತ ರೇಶನ್ ಕಾರ್ಡ ಡೌನ್ಲೋಡ್ ಮಾಡಿಕೊಳ್ಳಲು ಅಪ್ಲಿಕೇಶನ್ ಬಿಡುಗಡೆ!

Digital Ration Card-ಅಧಿಕೃತ ರೇಶನ್ ಕಾರ್ಡ ಡೌನ್ಲೋಡ್ ಮಾಡಿಕೊಳ್ಳಲು ಅಪ್ಲಿಕೇಶನ್ ಬಿಡುಗಡೆ!

ನಮ್ಮ ಭಾರತ ದೇಶದಲ್ಲಿ ರೇಷನ್ ಕಾರ್ಡ್(Ration card) ಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಇದು ಪ್ರಮುಖವಾಗಿ ಅಗತ್ಯವಿರುವ ವಸ್ತುಗಳನ್ನು ಸರ್ಕಾರದ ಸಹಾಯದೊಂದಿಗೆ ಜನರಿಗೆ ತಲುಪಿಸಲು ಪ್ರಮುಖ ಸಾಧನವಾಗಿದೆ. ಈಗ ಡಿಜಿಟಲ್‌ ತಂತ್ರಜ್ಞಾನವನ್ನು ಬಳಸಿಕೊಂಡು ರೇಷನ್ ಕಾರ್ಡ್ ವ್ಯವಸ್ಥೆಯನ್ನು ಸ್ಮಾರ್ಟ್ ಮತ್ತು ಸುಲಭವಾಗಿ ತಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಲು ಸರ್ಕಾರ ಡಿಜಿಟಲ್‌ ರೇಷನ್ ಕಾರ್ಡ್ ಪರಿಚಯಿಸಿದೆ.

ನಮ್ಮ ಭಾರತ ದೇಶದಲ್ಲಿ ಡಿಜಿಟಲ್(Digital) ಅಭಿಯಾನದ ಮೂಲಕ ಹಲವು ಸೇವೆಗಳನ್ನು ನೀಡುತ್ತಿದ್ದು ಇದರಲ್ಲಿ ಡಿಜಿಟಲ್ ರೇಷನ್ ಕಾರ್ಡ್ ಕೂಡ ಒಂದು. ಸಾರ್ವಜನಿಕರಿಗೆ ಹಾಗೂ ಜನಸಾಮಾನ್ಯರಿಗೆ ನೇರವಾಗಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಲ್ಲಾ ರೀತಿಯಾದಂತಹ ಡೇಟಾಗಳನ್ನು ಆನ್ಲೈನ್(online) ನಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ರೇಷನ್ ಕಾರ್ಡ್ ಸರ್ಕಾರದ ಸಹಾಯಕದೊಂದಿಗೆ ಆಹಾರ,ಇಂಧನ, ಮತ್ತು ಇತರ ಅಗತ್ಯ ವಸ್ತುಗಳನ್ನು ಜನರಿಗೆ ತಲುಪಿಸಲು ಬೇಕಾಗುವ ಪ್ರಮುಖ ಸಾಧನವಾಗಿದೆ.

ಇದನ್ನೂ ಓದಿ: New Recharge plan-2024: ನೀವು Airtel ಮತ್ತು Jio ಸಿಮ್ ಬಳಸುತ್ತಿದ್ದೀರಾ ಹಾಗಾದ್ರೆ ತಪ್ಪದೇ ಈ ಮಾಹಿತಿ ಓದಿ! ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಪಡಿತರ ಚೀಟಿಯನ್ನು ಡಿಜಿಟಲ್ ರೂಪದಲ್ಲಿ ಪಾರದರ್ಶಕಗೊಳಿಸಲು ಭಾರತ ಸರ್ಕಾರ ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಿದ್ದು “ಒಂದು ದೇಶ ಒಂದು ಪಡಿತರ ಚೀಟಿ”(One Country One Ration Card) ಯೋಜನೆಯ ಭಾಗವಾಗಿದೆ. ರೇಷನ್ ಕಾರ್ಡ್ ಅಭಿವೃದ್ಧಿಯ ಮೂಲಕ ದೇಶದಾದ್ಯಂತ ಸ್ಮಾರ್ಟ್ ತಂತ್ರಜ್ಞಾನ ಬಳಕೆಗೆ ಹೆಚ್ಚು ಆದ್ಯತೆ ನೀಡುತ್ತಿದೆ.

What is Digital Ration Card-ಡಿಜಿಟಲ್ ರೇಷನ್ ಕಾರ್ಡ್ ಎಂದರೇನು?

ಡಿಜಿಟಲ್ ರೇಷನ್ ಕಾರ್ಡ್ ಎಂದರೆ ಸ್ಮಾರ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು ರೇಷನ್ ಕಾರ್ಡ್ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಿಸಿ ಇಡುವುದಾಗಿದೆ. ಈ ಮೂಲಕ ಜನರು ತಮ್ಮ ರೇಷನ್ ಕಾರ್ಡ್ ಮಾಹಿತಿಯನ್ನು ಆನ್ಲೈನ್ ನಲ್ಲಿ ನೋಡಬಹುದು ಹಾಗೆ ಡೌನ್ಲೋಡ್ ಮಾಡಿಕೊಂಡು ಜೆರಾಕ್ಸ್ ಅನ್ನು ಮಾಡಿಸಿಕೊಳ್ಳಬಹುದು . ಈ ಒಂದು ಮೇರಾ ರೇಷನ್ 2.0 (mera ration 2.0) ಡಿಜಿಟಲ್ ಆಪ್ಲಿಕೇಶನ್ ಅನ್ನು ಬಳಸಿಕೊಂಡು ಯಾವುದೇ ರೀತಿಯ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Gold rate-ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಮತ್ತು ವಿದೇಶದಲ್ಲಿ ಇಂದಿನ ಚಿನ್ನದ ದರ ಹೀಗಿದೆ!

Purpose of Digital Ration Card-ಡಿಜಿಟಲ್ ರೇಷನ್ ಕಾರ್ಡ್ ಉದ್ದೇಶ?

ಈ ವ್ಯವಸ್ಥೆಯ ಮುಖ್ಯವಾದ ಉದ್ದೇಶ ನಕಲಿ ರೇಷನ್ ಕಾರ್ಡ್ ಗಳನ್ನು ತಡೆಯಲು ಇದು ಪರಿಣಾಮಕಾರಿಯಾಗಿದ್ದು. ಹಾಗೆ ಜನರು ಯಾವುದೇ ಸ್ಥಳದಿಂದ ತಮ್ಮ ಡಿಜಿಟಲ್ ರೇಷನ್ ಕಾರ್ಡ್ ಮಾಹಿತಿಯನ್ನು ಪಡೆಯಬಹುದು ಮತ್ತು ಡಿಜಿಟಲ್ ರೇಷನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವ ಮೂಲಕ ಇನ್ನಷ್ಟು ಸುರಕ್ಷಿತಗೊಳಿಸಲಾಗಿದೆ.

digital ration card

Benefits of Digital Ration Card-ಡಿಜಿಟಲ್ ರೇಷನ್ ಕಾರ್ಡ್ ನ ಪ್ರಯೋಜನಗಳು?

ಡಿಜಿಟಲ್ ಮಾದರಿಯ ರೇಷನ್ ಕಾರ್ಡನ್ನು ಮೊಬೈಲ್, ಲ್ಯಾಪ್ಟಾಪ್, ಡಿಜಿಟಲ್ ಪ್ಲಾಟ್ಫಾರ್ಮ್ ಗಳಲ್ಲಿ ಸುರಕ್ಷಿತವಾಗಿಡಬಹುದು. ಇದರಿಂದ ಕಾರ್ಡ್ ಕಳೆದುಹೋಗುವ ಸಾಧ್ಯತೆ ಇರುವುದಿಲ್ಲ ಮತ್ತು ನಿಮಗೆ ಬೇಕಾದ ಸಮಯದಲ್ಲಿ ಸುಲಭವಾಗಿ ಉಪಯೋಗಿಸಬಹುದು ಹಾಗೆ ಈ ಕಾರ್ಡ್ ನಲ್ಲಿ ಕ್ಯೂಆರ್ ಕೋಡ್ (QR code) ಇರುವ ಕಾರಣ ಇದನ್ನು ಸ್ಕ್ಯಾನ್ ಮಾಡುವ ಮೂಲಕ ಕಾರ್ಡ್ ಪ್ರಾಮಾಣಿಕತೆಯನ್ನು ತಿಳಿಯಬಹುದು.

ಇದನ್ನೂ ಓದಿ: Yashasvini Card-2024: ಯಶಸ್ವಿನಿ ಕಾರ್ಡ್ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ! ಹೊಸ ಅರ್ಜಿ ಸಲ್ಲಿಸಲು ಅವಕಾಶ!

ಹಾಗೂ ಈ ಡಿಜಿಟಲ್ ರೇಷನ್ ಕಾರ್ಡ್ ಅನ್ನು ಡಿಜಿ ಲಾಕರ್ ಅಪ್ಲಿಕೇಶನ್(Digi Locker App) ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು ಇದಕ್ಕೆ ಯಾವುದೇ ರೀತಿಯಾದಂತಹ ಶುಲ್ಕವನ್ನು ಪಾವತಿಸಬೇಕಿಲ್ಲ .

How to download digital reation card-ಡಿಜಿಟಲ್ ರೇಷನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?

ಡಿಜಿಟಲ್ ಪಡಿತರ ಚೀಟಿಯನ್ನು ಡಿಜಿಟಲ್ ಲಾಕರ್ (DigiLocker)ಎನ್ನುವ ಅಪ್ಲಿಕೇಶನ್ ಮೂಲಕ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ಭಾರತ ಸರ್ಕಾರದಿಂದ ಬಿಡುಗಡೆಯಾಗಿರುವ ಅಪ್ಲಿಕೇಶನ್ ಆಗಿದ್ದು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯುಲು ಫಲಾನುಭವಿಗಳಿಗೆ ಅನುಕೂಲವಾಗುವ ಎಲೆಕ್ಟ್ರಾನಿಕ್ ದಾಖಲೆಯಾಗಿದೆ.

ಇದನ್ನೂ ಓದಿ: Karnataka Government Jobs- ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಭರ್ಜರಿ ನೇಮಕಾರಿ! 975 ಹುದ್ದೆಗಳಿಗೆ ಅಧಿಸೂಚನೆ!

  1. ನೀವು ನಿಮ್ಮ ಮೊಬೈಲ್ ನಲ್ಲಿ ಇಲ್ಲಿ ಕ್ಲಿಕ್ ಮಾಡಿ DigiLocker Download ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಡಿಜಿಟಲ್ ಲಾಕರ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು.
  2. ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ ಆಧಾರ್ ಕಾರ್ಡ್ ನ ವಿವರಗಳನ್ನು ನಮೋದಿಸುವ ಮೂಲಕ ಲಾಗಿನ್ ಆಗಬೇಕು.
  3. ಲಾಗಿನ್ ಆದ ನಂತರ ಸರ್ಚ್ (search icon) ಐಕಾನ್ ಮೇಲೆ ಕ್ಲಿಕ್ ಮಾಡಿ ಸರ್ಚ್ ಬಾರ್ (serach bar)ನಲ್ಲಿ ರಾಜ್ಯದ ಹೆಸರನ್ನು ಹಾಕಿ . ಕರ್ನಾಟಕ ರಾಜ್ಯದ ಲೋಗೋ ಮೇಲೆ ಕ್ಲಿಕ್ ಮಾಡಬೇಕು.
  4. ನಂತರ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಮತ್ತೊಮ್ಮೆ ಸರ್ಚ್ ಬಾರ್ ನಲ್ಲಿ ರೇಷನ್ ಕಾರ್ಡ್ ಎಂದು ಟೈಪ್ ಮಾಡಿ ಆಗ ನಿಮ್ಮ ಆಧಾರ್ ಕಾರ್ಡ್ ವಿವರಗಳ ಪ್ರಕಾರ ನಿಮ್ಮ ಹೆಸರನ್ನು ತೋರಿಸುತ್ತದೆ ಆಗ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಗೆಟ್ ಡಾಕುಮೆಂಟ್ಸ್ (Get documents) ಬಟನ್ ಮೇಲೆ ಕ್ಲಿಕ್ ಮಾಡಬೇಕು.
  5. ನಂತರ ಇಶ್ಯೂಡ್ ಮೆನು ಆಪ್ಷನ್ ಅನ್ನು ಸರ್ಚ್ ಮಾಡಿ ಅದರ ಮೇಲೆ ಕ್ಲಿಕ್ ಮಾಡಬೇಕು ನಂತರ ನೀವು ನಿಮ್ಮ ರೇಷನ್ ಕಾರ್ಡ್ ಅನ್ನು My issued documents Tab ನಲ್ಲಿ ನೋಡಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳಬಹುದು.
  6. ಇದನ್ನೂ ಓದಿ: Karnataka weather- ರಾಜ್ಯದ ಹವಾಮಾನ ಮುನ್ಸೂಚನೆ ಮಾಹಿತಿ! ಇಲ್ಲಿದೆ ವಾಯುಭಾರ ಕುಸಿತದ ಮುನ್ಸೂಚನೆ!

ಬದಲಾವಣೆ ತಂದ ಡಿಜಿಟಲ್ ರೇಷನ್ ಕಾರ್ಡ್!

ಈ ಒಂದು ಡಿಜಿಟಲ್ ರೇಷನ್ ಕಾರ್ಡ್ ಪರಿಚಯದಿಂದಾಗಿ ಜನಸಾಮಾನ್ಯರ ಬದುಕಿನಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ತಂದಿದೆ ಗ್ರಾಮೀಣ ಪ್ರದೇಶದ ಜನರ ಸಹಾಯದಿಂದ ಪಡಿತರ ವಿತರಣೆಯಲ್ಲಿ ಸುಲಭತೆ ಹಾಗೂ ಪಾರದರ್ಶಕತೆಯನ್ನು ಅನುಭವಿಸುವಂಥಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸೌಲಭ್ಯಗಳು ಸಿಗಲು ಅನುಕೂಲಕರವಾದ ತಂತ್ರಜ್ಞಾನ ಬಳಕೆ ಸಹಕಾರಿಯಾಗಿದೆ ಹಾಗೆ ಸರ್ಕಾರದ ಈ ವರ್ಷ ತಂತ್ರಜ್ಞಾನದಿಂದ ಗ್ರಾಮೀಣ ಮತ್ತು ನಗರ ಭಾಗಗಳ ಜನರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದೆ.

RELATED ARTICLES
- Advertisment -

Most Popular

Recent Comments