Wednesday, March 12, 2025
No menu items!
HomeSchemesAyushman Bharat- ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಆಹ್ವಾನ! ಯಾರೆಲ್ಲಾ ಅರ್ಜಿ ಸಲ್ಲಿಸಬಹುದು!

Ayushman Bharat- ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಆಹ್ವಾನ! ಯಾರೆಲ್ಲಾ ಅರ್ಜಿ ಸಲ್ಲಿಸಬಹುದು!

ಕೇಂದ್ರ ಸರ್ಕಾರದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆರೋಗ್ಯ ವಿಮೆ(Health Scheme) ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

“ಆಯುಷ್ಮಾನ್” ಎಂಬ ಹೆಸರು(Ayushman Bharat Scheme) ಭಾರತೀಯ ಸಂಪ್ರದಾಯದಲ್ಲಿ “ಆಯುಷ್ಯ” ಎಂಬ ಪದದಿಂದ ಬಂದಿದ್ದು, ಆಯುಷ್ಯ ಅಂದರೆ ಆರೋಗ್ಯ ಮತ್ತು ಸುಖಮಯ ಜೀವನ ಎಂಬರ್ಥ. ಈ ಯೋಜನೆಯ ಅಡಿಯಲ್ಲಿ ₹5 ಲಕ್ಷದವರೆಗೆ ನಗದು ರಹಿತ ಉಚಿತ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2018 ರಲ್ಲಿ ಆರಂಭಿಸಲಾಗಿರುವ ಮಹತ್ವಪೂರ್ಣ ಆರೋಗ್ಯ ಯೋಜನೆ ಇದಾಗಿದೆ.

ಇದನ್ನೂ ಓದಿ: Milk Rate- ಭರ್ಜರಿ ಗುಡ್ ನ್ಯೂಸ್! ಹಾಲಿನ ದರ ಹೆಚ್ಚಳ ಮಾಡಿದ KMF!

ಆಯುಷ್ಮಾನ್ ಭಾರತ್ ಯೋಜನೆವು ದೇಶದ ಬಡವರಿಗೆ ವೈದ್ಯಕೀಯ ಸೇವೆಗಳನ್ನು ಸುಲಭವಾಗಿಸುವಂತೆ ಮಾಡಿ, ಆರೋಗ್ಯವ್ಯವಸ್ಥೆ ತಲುಪಲು ಅನೇಕ ಹೊಸ ಅವಕಾಶಗಳನ್ನು ನೀಡುತ್ತದೆ.
ಯೋಜನೆಯು ದೇಶಾದ್ಯಾಂತ 5000 ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ವ್ಯಾಪಿಸಿರುವುದರ ಮೂಲಕ, ಇದು ದೇಶದ ದೀರ್ಘಕಾಲಿಕ ಆರೋಗ್ಯ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಲು ಸಹಾಯಕಾರಿಯಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ(PMJAY) ಈ ಯೋಜನೆಯಡಿ ಆಯುಷ್ಮಾನ್ ಕಾರ್ಡ್‌ ಪಡೆಯುವುದು ಹೇಗೆ? ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು? ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Ration shop- ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ!

ayushman yojana

Who can apply for Ayushman Bharat Yojana-ಆಯುಷ್ಮಾನ್ ಭಾರತ್ ಯೋಜನೆಗೆ ಯಾರು ಅರ್ಜಿಯನ್ನು ಸಲ್ಲಿಸಬಹುದು?

  • ಮಧ್ಯಮ ಮತ್ತು ಬಡ ವರ್ಗದ ಕುಟುಂಬದವರು ಅಂದರೆ ಆರ್ಥಿಕವಾಗಿ ಹಿಂದುಳಿದವರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  • ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಈ ಯೋಜನೆಯು ಲಾಭದಾಯಕವಾಗಿರುತ್ತದೆ.
  • ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಕಲ್ಯಾಣವನ್ನು ಉತ್ತೇಜಿಸುವವರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  • ಅಲ್ಪ ಸಂಖ್ಯಾತ ವರ್ಗದವರು ಸಹ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: LPG Gas- ಇಳಿಕೆಯತ್ತ LPG ಸಿಲಿಂಡರ್ ಬೆಲೆ! ಇಲ್ಲಿದೆ ಬೆಲೆ ವಿವರ!

What are the documents for Ayushman Bharat Yojana-ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳಾವುವು?

  • ಆಧಾರ್ ಕಾರ್ಡ್/Aadhar Card
  • ರೇಷನ್ ಕಾರ್ಡ/Ration Card
  • ಆದಾಯ ಪ್ರಮಾಣ ಪತ್ರ/Income certificate
  • ವಿಳಾಸ ಪ್ರಮಾಣಪತ್ರ/Address Certificate
  • ಬ್ಯಾಂಕ್ ಪಾಸ್ ಬುಕ್/Bank Passbook
  • ಪೋಟೋ/Photocopy
  • ಮೊಬೈಲ್ ನಂಬರ್/Mobile number

ಇದನ್ನೂ ಓದಿ: Gold Rate-ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ!

Where to submit application for Ayushman Bharat Yojana-ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಜಿದಾರರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧಿಸಿದ ಗ್ರಾಮ ಪಂಚಾಯತ್/ Municipal Office ಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿಯನ್ನು ಮಾಡಿಕೊಂಡು “ಆಯುಷ್ಮಾನ್ ಕಾರ್ಡ್‌” ಅನ್ನು ಪಡೆಯಬಹುದು.

How to apply for Ayushman Bharat Yojana-ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಕೇಂದ್ರ ಸರಕಾರದ ಆಯುಷ್ಮಾನ್ ಭಾರತದ(PMJAY )ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: e-shram card-ಇ-ಶ್ರಮ್ ಕಾರ್ಡ ಪಡೆಯುವುದು ಹೇಗೆ? ಇದರ ಪ್ರಯೋಜನಗಳೇನು?

Step-೧: ಮೊದಲು ಇಲ್ಲಿ ಕ್ಲಿಕ್ Apply for Ayushman card ಮಾಡಿದಾಗ ಅಧಿಕೃತ ಆಯುಷ್ಮಾನ್ ಭಾರತ್ ಯೋಜನೆಯ ತಂತ್ರಾಶವನ್ನು ಭೇಟಿ ಮಾಡಬೇಕು.

Step-೨: ನಂತರ ಪುಟದ ಬಲ ಬದಿಯಲ್ಲಿ ಕಾಣುವ “Am I Eligible” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-೩: ನಂತರ ಅರ್ಜಿ ಸಲ್ಲಿಸುವ ಪುಟ ತೆರೆದುಕೊಳ್ಳುತ್ತದೆ ಇಲ್ಲಿ “Captcha” ಕೋಡ್ ನ್ನು ಹಾಕಿ ಮತ್ತು ಅರ್ಜಿದಾರರ ಮೊಬೈಲ್ ನಂಬರ್ ಮತ್ತು OTP ಅನ್ನು ಆಯ್ಕೆ ಮಾಡಿಕೊಂಡು “Login” ಆಗಬೇಕು.

ಇದನ್ನೂ ಓದಿ: Yashaswini Card- ಯಶಸ್ವಿನಿ ಕಾರ್ಡಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಿದ ಸರ್ಕಾರ!

Step-೪: ನಂತರ “Login” ಅದ ಬಳಿಕ ಇಲ್ಲಿ ಕೇಳುವ ಅರ್ಜಿದಾರರ ಎಲ್ಲಾ ವಿವರವನ್ನು ನಮೂದಿಸಿ ಕೊನೆಯನ್ನು “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

RELATED ARTICLES
- Advertisment -

Most Popular

Recent Comments