ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ (KSFES)ಯಿಂದ 975 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ಕ್ರಮಕೈಗೊಳ್ಳಲಾಗುತ್ತಿದ್ದು ಶೀಘ್ರದಲ್ಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ.
ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ(KARNATAKA STATE FIRE AND EMERGENCY SERVICES JOB NOTIFICATION) ಖಾಲಿಯಿರುವ ಒಟ್ಟು 975 ಹುದ್ದೆಗಳಿಗೆ ಅಧಿಸೂಚನೆ ಪ್ರಕಟವಾಗಲಿದ್ದು ಅಗ್ನಿಶಾಮಕ, ಅಗ್ನಿಶಾಮಕ ಚಾಲಕ ಮತ್ತು ತಂತ್ರಜ್ಞ, ಅಗ್ನಿಶಾಮಕ ಠಾಣಾಧಿಕಾರಿ ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಲೇಖನದಲ್ಲಿ ಹುದ್ದೆವಾರು ನೇಮಕಾತಿ(KARNATAKA FIRE DEPARTMENT JOBS) ಮಾಡಿಕೊಳ್ಳುತ್ತಿರುವ ಹುದ್ದೆಗಳ ಸಂಖ್ಯೆ, ಮಾಸಿಕ ವೇತನ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸಲು ವಯೋಮಿತಿ, ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ:
ಇತರೆ ಸಂಪೂರ್ಣ ವಿವರವನ್ನು ತಿಳಿಸಲಾಗಿದೆ. ಸರಕಾರಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಕಾಯುತ್ತಿರುವವರಿಗೆ ತಪ್ಪದೇ ಈ ಪೋಸ್ಟ್ ಅನ್ನು ಶೇರ್ ಮಾಡಿ ಸಹಕರಿಸಿ.
ಇದನ್ನೂ ಓದಿ: Karnataka weather- ರಾಜ್ಯದ ಹವಾಮಾನ ಮುನ್ಸೂಚನೆ ಮಾಹಿತಿ! ಇಲ್ಲಿದೆ ವಾಯುಭಾರ ಕುಸಿತದ ಮುನ್ಸೂಚನೆ!
KARNATAKA STATE FIRE AND EMERGENCY SERVICES VACANCY-ಹುದ್ದೆವಾರು ನೇಮಕಾತಿ ವಿವರ:
ಅಗ್ನಿಶಾಮಕ : 731
ಅಗ್ನಿಶಾಮಕ ಚಾಲಕ : 153
ಅಗ್ನಿಶಾಮಕ ಠಾಣಾಧಿಕಾರಿ : 64
ಚಾಲಕ ತಂತ್ರಜ್ಞ : 27
ಒಟ್ಟು ಹುದ್ದೆಗಳು: 975
ನೇಮಕಾತಿ ಇಲಾಖೆ | ಕರ್ನಾಟಕ ಅಗ್ನಿಶಾಮಕ ಇಲಾಖೆ |
ಹುದ್ದೆಗಳ ಹೆಸರು | ಅಗ್ನಿಶಾಮಕ, ಅಗ್ನಿಶಾಮಕ ಚಾಲಕ, ಅಗ್ನಿಶಾಮಕ ಠಾಣಾಧಿಕಾರಿ |
ಉದ್ಯೋಗ ಸ್ಥಳ | ಕರ್ನಾಟಕ(Karnataka) |
ಅಧಿಸೂಚನೆ | DOWNLOAD NOW |
ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ | CLICK HERE |
ಅರ್ಜಿ ಸಲ್ಲಿಕೆ ಪ್ರಾರಂಭ | ಇನ್ನು ಪ್ರಕಟವಾಗಿರುವುದಿಲ್ಲ. |
MONTHLY SALARY-ಮಾಸಿಕ ವೇತನ:
ಆಯಾ ಹುದ್ದೆಗೆ ಅನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳು ₹33,450 ದಿಂದ ₹62,600/- ವರೆಗೆ ವೇತನ ಪಡೆಯಬಹುದಾಗಿದೆ.
ಇದನ್ನೂ ಓದಿ: Yashasvini Card-2024: ಯಶಸ್ವಿನಿ ಕಾರ್ಡ್ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ! ಹೊಸ ಅರ್ಜಿ ಸಲ್ಲಿಸಲು ಅವಕಾಶ!
AGE LIMIT-ಅರ್ಜಿ ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿದ ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ 18 ವರ್ಷದಿಂದ 28 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
OBC/2A/2B/3A/3B ಅಭ್ಯರ್ಥಿಗಳು- 3 ವರ್ಷಗಳು.
SC/ST ಅಭ್ಯರ್ಥಿಗಳು- 5 ವರ್ಷಗಳು.
PWD ಅಭ್ಯರ್ಥಿಗಳು- 10 ವರ್ಷಗಳು.
APPLICATION FEE-ಅರ್ಜಿ ಶುಲ್ಕ:
ಸಾಮಾನ್ಯ/2A/2B/3A/3B ಅಭ್ಯರ್ಥಿಗಳು : ರೂ.250/-
SC/ST ಅಭ್ಯರ್ಥಿಗಳು : ರೂ.100/-
ಇದನ್ನೂ ಓದಿ: Weather Forecast-2024: ಕರ್ನಾಟಕ ಮಳೆ ಮುನ್ಸೂಚನೆ! ದಿನಾಂಕ: 13-12-2024
EDUCATION QUALIFICATION-ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ:
ಆಯಾ ಹುದ್ದೆಗಳಿಗೆ ಅನುಗುಣವಾಗಿ ಎಸ್ ಎಸ್ ಎಲ್ ಸಿ, ಪಿಯುಸಿ, ರಸಾಯನಶಾಸ್ತ್ರದೊಂದಿಗೆ ವಿಜ್ಞಾನದಲ್ಲಿ ಪದವಿ ಹೊಂದಿರಬೇಕು.
SELECTION METHOD-ಹುದ್ದೆಗೆ ಆಯ್ಕೆ ವಿಧಾನ:
ಈ ಮೇಲೆ ತಿಳಿಸಿರುವ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ONLINE APPLICATION-ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭ:
ಅರ್ಹ ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಈ https://ksfes.karnataka.gov.in/ ವೆಬ್ಸೈಟ್ ಲಿಂಕ್ ಅನ್ನು ಬಳಕೆ ಮಾಡಿಕೊಳ್ಳಬಹುದು ಅದರೆ ಪ್ರಸ್ತುತ ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್ ಸಕ್ರಿಯಗೊಂಡಿರುವುದಿಲ್ಲ ಶೀಘ್ರದಲ್ಲೇ ಈ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ!