Wednesday, December 11, 2024
HomeLife StyleToilet room- ಹುಷಾರ್..! 10 ನಿಮಿಷಕ್ಕಿಂತ ಅಧಿಕ ಸಮಯ ಟಾಯ್ಲೆಟ್​ನಲ್ಲಿ ಕುಳಿತರೆ ಈ ಕಾಯಿಲೆ ಬರುತ್ತೆ..!

Toilet room- ಹುಷಾರ್..! 10 ನಿಮಿಷಕ್ಕಿಂತ ಅಧಿಕ ಸಮಯ ಟಾಯ್ಲೆಟ್​ನಲ್ಲಿ ಕುಳಿತರೆ ಈ ಕಾಯಿಲೆ ಬರುತ್ತೆ..!

ಹೌದು ನೀವು 10 ನಿಮಿಷಕ್ಕಿಂತ ಅಧಿಕ ಸಮಯ ಶೌಚಾಲಯದಲ್ಲಿ ಸ್ಮಾರ್ಟ್ ಫೋನ್ ಬಳಸಿದರೆ ಈ ಕಾಯಿಲೆ ಬರುತ್ತದೆ.

ಟಾಯ್ಲೆಟ್ ನಲ್ಲಿ ಹೆಚ್ಚು ಹೊತ್ತು ಕುಳಿತರೆ ತೊಂದರೆ ಏನು?

ನೀವು ಅಥವಾ ನಿಮಗೆ ತಿಳಿದವರಲ್ಲಿ ಯಾರಾದರೂ ಶೌಚಾಲಯದಲ್ಲಿ ಸ್ಮಾರ್ಟ್ ಫೋನ್(Smart Phone) ಬಳಸುವ ಅಭ್ಯಾಸ ಹೊಂದಿದ್ದರೆ ಕೂಡಲೇ ನಿಲ್ಲಿಸಿಬಿಡಿ.

ಇದನ್ನೂ ಓದಿ : BPL Card guidelines- ರಾಜ್ಯ ಸರಕಾರದಿಂದ ಈ ವರ್ಗಕ್ಕೆ ಸೇರಿದವರ ಬಿಪಿಎಲ್ ಕಾರ್ಡ ರದ್ದುಗೊಳಿಸಲು ಸೂಚನೆ!

ಯಾಕೆಂದರೆ ನೀವು 10 ನಿಮಿಷಕ್ಕಿಂತ ಅಧಿಕ ಸಮಯ ಶೌಚಾಲಯದಲ್ಲಿ (Toilet) ಕುಳಿತುಕೊಳ್ಳುವುದರಿಂದ ಅಥವಾ ಫೋನ್ ಬಳಸಿದರೆ ಗಂಭೀರವಾದ ಕಾಯಿಲೆಗಳಿಗೆ ತುತ್ತಾಗುವುದಾಗಿ Texas South western Medical Centre ವೈದ್ಯರ ವರದಿಯೊಂದು ಮುಂದೆ ಬಂದಿದೆ.

toilet room

ಟಾಯ್ಲೆಟ್ ನಲ್ಲಿ ಕುಳಿತು ಮೊಬೈಲ್ಸ್ scroll ಮಾಡಬೇಡಿ!

ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಶೌಚಾಲಯದಲ್ಲಿ ಫೋನ್ ಬಳಸುವುದು ಇದಲ್ಲದೆ ನ್ಯೂಸ್ ಪೇಪರ್ ಓದುವುದು ರೀಲ್ಸ್ ನೋಡುವುದು ಮತ್ತು ಕೆಲವರಂತೂ ಗಂಟೆಗಟ್ಟಲೆ ಸೋಶಿಯಲ್ ಮೀಡಿಯಾದಲ್ಲಿ ತೊಡಗಿರುವುದು ಹಾಗೂ ಫೋನ್ calls ಗಳಲ್ಲಿ ನಿರತರಾಗುವುದು ಈ ರೀತಿಯಾದಂತಹ ಕೆಟ್ಟ ಅಭ್ಯಾಸಗಳನ್ನು ಹೊಂದಿರುವವರನ್ನು ನೀವು ನೋಡಿರಬಹುದು ಅಥವಾ ಅವರ ಬಗ್ಗೆ ಕೇಳಿರಬಹುದು.

ಇದನ್ನೂ ಓದಿ: Health Department- ಆರೋಗ್ಯ ಇಲಾಖೆಯಿಂದ ಮತ್ತೊಂದು ಜನಸ್ನೇಹಿ ಯೋಜನೆ ಜಾರಿ!

ಎಚ್ಚರ ಈ ಅಭ್ಯಾಸ್ ನಿಲ್ಲಿಸದಿದ್ದರೆ ಅಪಾಯ ಖಚಿತ!

Texas South western Medical Centre ನ ವೈದ್ಯರ ಪ್ರಕಾರ ಟಾಯ್ಲೆಟ್ ನಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಇದರಿಂದಾಗಿ ಹಲವಾರು ಆರಂಭ ಸಮಸ್ಯೆಗಳಿಗೆ ಕಾರಣವಾಗಬಹುದು ಆದ್ದರಿಂದ ಈ ಅಭ್ಯಾಸವನ್ನು ಬದಲಾಯಿಸುವುದು ಬಹಳ ಮುಖ್ಯ. ಆರೋಗ್ಯಕರವಾದ ಜೀವನಶೈಲಿ ಮತ್ತು ನಿಯಮಿತ ವೈದ್ಯಕೀಯ ಪರೀಕ್ಷೆಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದಾಗಿ ಗುಧನಾಳದ ಸುತ್ತಲಿನ ರಕ್ತನಾಳಗಳ ಮೇಲೆ ಒತ್ತಡ ಬೀರುತ್ತದೆ. ಇದರಿಂದ ರಕ್ತ ಸಂಚಾರ ಸರಿಯಾಗಿ ಆಗದೆ ಮೂಲವ್ಯಾಧಿ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೆ ಶ್ರೋಣಿಯ ಸ್ನಾಯುಗಳ ಮೇಲೆ ನಿರಂತರ ಒತ್ತಡ ಬೀರುವುದರೊಂದಿಗೆ ದೇಹದ ಸ್ನಾಯುಗಳು ದುರ್ಬಲಗೊಳ್ಳುತ್ತವೆ.

ಇದನ್ನೂ ಓದಿ: BPL Card- ರಾಜ್ಯ ಸರಕಾರದಿಂದ ಈ ವರ್ಗಕ್ಕೆ ಸೇರಿದವರ ಬಿಪಿಎಲ್ ಕಾರ್ಡ ರದ್ದುಗೊಳಿಸಲು ಮಾತ್ರ ಸೂಚನೆ ನೀಡಲಾಗಿದೆ:

ಗುದನಾಳದ ಸುತ್ತಲಿನ ರಕ್ತನಾಳಗಳು ಉರಿತದಿಂದ ಊದಿಕೊಳ್ಳುವುದನ್ನು ಹೆಮೊರೊಯಿಡ್ಸ್ (hemorrhoids) ಎನ್ನುತ್ತಾರೆ. ಟಾಯ್ಲೆಟ್ ನಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಈ ಭಾಗದಲ್ಲಿ ಒತ್ತಡ ಹೆಚ್ಚಾಗಿ ಮೂಲವ್ಯಾದಿ ಉಂಟಾಗುವ ಸಾಧ್ಯತೆ ಹೆಚ್ಚು, ಇದಲ್ಲದೆ ಅಧಿಕ ಸಮಯ ಕುಳಿತುಕೊಳ್ಳುವುದರಿಂದ ಕರುಳಿನ ಚಲನೆಗೆ ಅಡ್ಡಿ ಉಂಟಾಗಬಹುದು ಹಾಗೂ ಮಲಬದ್ಧತೆಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ಇದು ಗುದದ ಸಿರೆಯ ಉರಿಯೂತ (Piles) ಇತ್ಯಾದಿ ಸಮಸ್ಯೆಗಳಿಗೂ ಕಾರಣವಾಗಬಹುದು.

ಇದನ್ನೂ ಓದಿWHO Arecanut news- ರೈತರಲ್ಲಿ ಅತಂಕ ಮೂಡಿಸಿದ WHOದ ಅಡಿಕೆ ಕ್ಯಾನ್ಸರ್‌ಕಾರಕ ವರದಿ!

ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು?

ಟಾಯ್ಲೆಟ್‌ನಲ್ಲಿ ಕಡಿಮೆ ಸಮಯ ಕಳೆಯಿರಿ.

ಆರೋಗ್ಯಕರ ಆಹಾರ: ಹೆಚ್ಚು ನಾರಿನಂಶ ಇರುವ ಆಹಾರವನ್ನು ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ ಆಹಾರದಲ್ಲಿ ಮಿತವಾದ ಪ್ರಮಾಣದಲ್ಲಿ ತರಕಾರಿ ಹಣ್ಣುಗಳನ್ನು ಸೇವನೆ ಮಾಡಿ.

ವ್ಯಾಯಾಮ : ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಶ್ರೋಣಿಯ ಸ್ನಾಯುಗಳು ಬಲಗೊಳ್ಳುತ್ತವೆ.

ತೂಕ ನಿಯಂತ್ರಣ: ನಿಮ್ಮ ದೇಹದ ಅಧಿಕ ತೂಕವು ಮೂಲ್ಯವಾದಿಗೆ ಕಾರಣವಾಗಬಹುದು ಹಾಗೂ ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು ಇದಕ್ಕಾಗಿ ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಕಾಪಾಡಿಕೊಳ್ಳುವುದು ಉತ್ತಮ.

RELATED ARTICLES
- Advertisment -
Google search engine

Most Popular

Recent Comments