Sunday, June 29, 2025
No menu items!
HomeNewsFree Computer Training-ಕೆನರಾ ಬ್ಯಾಂಕ್‍ನಿಂದ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ!

Free Computer Training-ಕೆನರಾ ಬ್ಯಾಂಕ್‍ನಿಂದ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ!

ಕೆನರಾ ಬ್ಯಾಂಕ್(Canara Bank) ನಿಂದ ಗ್ರಾಮೀಣ ಮತ್ತು ನಗರ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತವಾಗಿ ಯಾವುದೇ ಶುಲ್ಕವನ್ನು ಪಾವತಿ ಮಾಡದೇ ಒಟ್ಟು ಮೂರು ತಿಂಗಳ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ಈ ಲೇಖನದಲ್ಲಿ ಕೆನರಾ ಬ್ಯಾಂಕ್ ನಿಂದ ನೀಡಲಾಗುತ್ತಿರುವ ಉಚಿತ ಕಂಪ್ಯೂಟರ್ ಶಿಕ್ಷಣ(Free Computer Training) ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಇನ್ನಿತರೆ ಅಗತ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: BMTC Package Tour-ಬಿಎಂಟಿಸಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಟೂರ್ ಪ್ಯಾಕೇಜ್!

ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ(Free Computer Training Course)ಪಡೆದಿರುವುದು ಅತೀ ಮುಖ್ಯ ಮತ್ತು ಅವಶ್ಯಕವಾಗಿ ಶಿಕ್ಷಣವನ್ನು ಮುಗಿಸಿದ ಬಳಿಕ ಉತ್ತಮ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆಯಲು ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯವಾಗಿರುವುದರಿಂದ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣ ಕಲಿಕೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದಾರೆ.

Free Computer Training-ಈ ತರಬೇತಿಯಲ್ಲಿ ಯಾವೆಲ್ಲ ಕೌಶಲ್ಯವನ್ನು ಕಲಿಸಲಾಗುತ್ತದೆ?

ಕೆನರಾ ಬ್ಯಾಂಕ್ ಸಂಸ್ಥೆಯು ನಿರುದ್ಯೋಗಿ ಯುವಕ-ಯುವತಿಯರಿಗೆ ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಶನ್ ಹಾಗೂ ಹಾರ್ಡ್ ವೇರ್ ಮತ್ತು ನೆಟ್‍ವರ್ಕ್ ಅಡ್ಮಿನಿಸ್ಟ್ರೇಶನ್, ಮೈಕ್ರೋಸಾಫ್ಟ್ ಆಫೀಸ್, ಟ್ಯಾಲಿ, ಡಿಟಿಪಿ (ಕೋರೆಲ್ ಡ್ರಾ, ಪೋಟೀಶಾಪ್) ಸ್ಪೋಕನ್ ಇಂಗ್ಲೀಷ್, ವ್ಯಕ್ತಿತ್ವ ವಿಕಸನ, ಬ್ಯಾಂಕಿಂಗ್ ಉತ್ಪನ್ನಗಳ ಪರಿಚಯ ಸೇರಿದಂತೆ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಶಿಕ್ಷಣವನ್ನು ನೀಡಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Vokkaliga Nigama-ಒಕ್ಕಳಿಗ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಸೇರಿ ಒಟ್ಟು 7 ಯೋಜನೆಗೆ ಅರ್ಜಿ ಆಹ್ವಾನ!

Free Computer Training Date-ತರಬೇತಿ ಆರಂಭ ದಿನಾಂಕ:

ಕಂಪ್ಯೂಟರ್ ತರಬೇತಿಯು 2025 ಜುಲೈ 1 ರಂದು ಪ್ರಾರಂಭವಾಗಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Who Can Apply For This Free Computer Training-ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

  • ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.
  • ಪಿಯುಸಿ, ಡಿಗ್ರಿ, ಡಿಪ್ಲೋಮಾ ಹೊಂದಿದವವರಿಗೆ ಆದ್ಯತೆ ನೀಡಲಾಗುವುದು ಎಂದು
  • ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ / ವರ್ಗದವರಿಗೆ ಗರಿಷ್ಟ ವಯಸ್ಸು 35 ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Ration card-ರೇಷನ್ ಕಾರ್ಡದಾರರಿಗೆ ಅಕ್ಕಿ ಬದಲು ಆಹಾರ ಕಿಟ್! ಇಲ್ಲಿದೆ ಸಂಪೂರ್ಣ ವಿವರ!

training application

ಇದನ್ನೂ ಓದಿ: Navodaya Online Application-ನವೋದಯ ಶಾಲೆ ಪ್ರವೇಶಾತಿಗೆ ಅರ್ಜಿ ಆಹ್ವಾನ!

Free Computer Training Center-ತರಬೇತಿ ನಡೆಯುವ ಸಂಸ್ಥೆಯ ವಿಳಾಸ:

ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, ಚಿತ್ರಾಪುರ ಭವನ, 3 ನೇ ಮಹಡಿ, 15 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು

How To Apply-ತರಬೇತಿಯಲ್ಲಿ ಭಾಗವಹಿಸುವುದು ಹೇಗೆ?

ತರಬೇತಿಗೆ ಸೇರ ಬಯಸುವವರು ನೇರ ಸಂದರ್ಶನಕ್ಕೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನಗಳು ನಡೆಯಲ್ಲಿದ್ದು,

ಇದನ್ನೂ ಓದಿ: Ganga Kalyana-ಜಲಶಕ್ತಿ ಯೋಜನೆಯಡಿ ಬೋರ್ವೆಲ್ ಕೊರೆಸಲು ₹2.75 ಲಕ್ಷ ಸಹಾಯಧನಕ್ಕೆ ಅರ್ಜಿ!

ಅರ್ಜಿ ಫಾರಂಗಳನ್ನು ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಪಡೆಯಬಹುದಾಗಿದೆ. ತರಬೇತಿ ಅವಧಿಯು ಮೂರು ತಿಂಗಳಾಗಿದ್ದು, ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ನಡೆಯಲಿದೆ. ತರಬೇತಿ ಅವಧಿಯಲ್ಲಿ ಮಧ್ಯಾಹ್ನದ ಉಪಹಾರ ನೀಡಲಾಗವುದು.

Required Documents-ಅಗತ್ಯ ದಾಖಲಾತಿಗಳು:

ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗೆ ತಿಳಿಸಿರುವ ದಾಖಲಾತಿಗಳನ್ನು ಕಡ್ಡಾಯವಾಗಿ ಒದಗಿಸಬೇಕು.

  • ವಿದ್ಯಾರ್ಥಿಯ ಆಧಾರ್ ಕಾರ್ಡ
  • ಪೋಟೋ
  • ಬ್ಯಾಂಕ್ ಪಾಸ್ ಬುಕ್
  • ಅಂಕಪಟ್ಟಿ
  • ಮೊಬೈಲ್ ನಂಬರ್

ಇದನ್ನೂ ಓದಿ: Health Insurance-ಇನ್ಮುಂದೆ ಈ ಯೋಜನೆಯಡಿ ಸಿಗಲಿದೆ ₹5 ಲಕ್ಷ ಉಚಿತ ಚಿಕಿತ್ಸಾ ಸೌಲಭ್ಯ!

For More Information-ಇನ್ನು ಅಧಿಕ ಮಾಹಿತಿಯನ್ನು ಪಡೆಯಲು:

ಹೆಚ್ಚಿನ ವಿವರಗಳಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, ಚಿತ್ರಾಪುರ ಭವನ, 3 ನೇ ಮಹಡಿ, 15 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-560055 ಹಾಗೂ ದೂರವಾಣಿ ಸಂಖ್ಯೆ: 080-23440036 / 23463580 / 94485 38107 ಅಥವಾ ಇ-ಮೇಲ್ blorecbiit@gmail.com, cbiitblr@canarabank.com ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -

Most Popular

Recent Comments