ಕೇಂದ್ರ ಸರ್ಕಾರವು ರೈತರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಮುಂಗಾರು ಬೆಳೆಗಳ(MSP Kharif crops) ಬಿತ್ತನೆಗೂ ಮುನ್ನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 14 ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.
ಪ್ರತಿ ವರ್ಷವು ಸಹ ಬೆಂಬಲ ಬೆಲೆ ಯೋಜನೆಯಡಿ ಬರುವ ಬೆಳೆಗಳ ಬೆಲೆಯನ್ನು ಏರಿಕೆ(MSP Price Hike) ಮಾಡುವುದು ವಾಡಿಕೆಯಾಗಿದ್ದು ಇದೇ ಮಾದರಿಯಲ್ಲಿ 2025-26 ನೇ ಸಾಲಿಗೆ ರೈತರು ಬೆಳೆಯುವ ಪ್ರಮುಖ ಆಹಾರ ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ಅಧಿಕೃತ ಅನುಮೋದನೆಯನ್ನು ನೀಡಿದೆ.
ಇದನ್ನೂ ಓದಿ: Rain Forecast-ರಾಜ್ಯದಲ್ಲಿ ಈ ದಿನದಿಂದ ಮತ್ತೆ ಮುಂಗಾರು ಚುರುಕು ಸಾಧ್ಯತೆ!
ಈ ಲೇಖನದಲ್ಲಿ ಪ್ರಸ್ತುತ ಯಾವೆಲ್ಲ ಬೆಲೆಗಳ ಬೆಂಬಲ ಬೆಲೆಯನ್ನು(bembala bele) ಏರಿಕೆ ಮಾಡಲಾಗಿದೆ? ಬೆಳೆವಾರು ಎಷ್ಟು ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ? ರೈತರು ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇನ್ನಿತರೆ ಅಗತ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
- ಭತ್ತ
- ಭತ್ತ ಎ ಗೇಡ್
- ಜೋಳ(ಹೈಬ್ರಿಡ್)
- ಮಾಲ್ದಂಡಿ ಜೋಳ
- ಸಜ್ಜೆ
- ರಾಗಿ
- ಮೆಕ್ಕೆಜೋಳ
- ತೊಗರಿ
- ಹೆಸರುಕಾಳು
- ಉದ್ದು
- ನೆಲಗಡಲೆ
- ಸೂರ್ಯಕಾಂತಿ
- ಸೋಯಾಬೀನ್
- ಎಳ್ಳು
- ಹುಚ್ಚೆಳ್ಳು
- ಹತ್ತಿ(ಮಧ್ಯಮ ಎಳೆ)
- ಹತ್ತಿ(ಉದ್ದನೆಯ ಎಳೆ)

ಇದನ್ನೂ ಓದಿ: Scholorship Application-ಮಿರೇ ಅಸೆಟ್ ಫೌಂಡೇಶನ್ ನಿಂದ ₹50,000 ಸ್ಕಾಲರ್‌ಶಿಪ್ ಪಡೆಯಲು ಅರ್ಜಿ!
| ಬೆಳೆ | 2024-25 | 2025-26 | ಹೆಚ್ಚಳ |
| ಭತ್ತ | 2,300 | 2,369 | 69 |
| ಭತ್ತ ಎ ಗೇಡ್ | 2,320 | 2,389 | 69 |
| ಜೋಳ(ಹೈಬ್ರಿಡ್) | 3,371 | 3,699 | 328 |
| ಮಾಲ್ದಂಡಿ ಜೋಳ | 3,421 | 3,749 | 328 |
| ಸಜ್ಜೆ | 2,625 | 2,775 | 150 |
| ರಾಗಿ | 4,290 | 4,886 | 596 |
| ಮೆಕ್ಕೆಜೋಳ | 2,225 | 2,400 | 175 |
| ತೊಗರಿ | 7,550 | 8,000 | 450 |
| ಹೆಸರುಕಾಳು | 8,682 | 8,768 | 86 |
| ಉದ್ದು | 7,400 | 7,800 | 400 |
| ನೆಲಗಡಲೆ | 6,783 | 7,721 | 441 |
| ಸೂರ್ಯಕಾಂತಿ | 7,280 | 7,721 | 441 |
| ಸೋಯಾಬೀನ್ | 4,892 | 5,328 | 436 |
| ಎಳ್ಳು | 9,267 | 9,846 | 579 |
| ಹುಚ್ಚೆಳ್ಳು | 8,717 | 9,537 | 820 |
| ಹತ್ತಿ(ಮಧ್ಯಮ ಎಳೆ)- | 7,121 | 7,710 | 589 |
| ಹತ್ತಿ(ಉದ್ದನೆಯ ಎಳೆ)- | 7,121 | 8,110 | 589 |
ಇದನ್ನೂ ಓದಿ: Karnataka Dam Water Level-ಪ್ರಸ್ತುತ ರಾಜ್ಯದ ಡ್ಯಾಂ ಗಳಲ್ಲಿ ಎಷ್ಟು ನೀರು ಸಂಗ್ರಹವಾಗಿದೆ?
ಇದನ್ನೂ ಓದಿ: Gruha Arogya Yojane-ರಾಜ್ಯ ಸರ್ಕಾರದಿಂದ ಗೃಹ ಆರೋಗ್ಯ ಯೋಜನೆ ಜಾರಿ!

