ನೋಂದಣಿ ಮತ್ತು ಮುದ್ರಾಕ ಇಲಾಖೆಯ ಅಡಿಯಲ್ಲಿ ಹಿಂದೂ ವಿವಾಹ ನೋಂದಣಿ (Marriage registration)ಕಾಯ್ದೆಯ ಕಾವೇರಿ 2.0 ತಂತ್ರಾಂಶದ ಸಹಾಯದಿಂದ ವಿವಾಹ ನೋಂದಣಿಯನ್ನು ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹಿಂದೂ ವಿವಾಹ ನೋಂದಣಿಯು 1966 ರಲ್ಲಿ ಪ್ರಾರಂಭವಾಗಿದ್ದು, ಭಾರತದ ಕಾನೂನಾತ್ಮಕವಾಗಿ(Legal Marriage Certificate) ವಿವಾಹವನ್ನು ಅಂಗೀಕರಿಸುವ ಅಗತ್ಯ ಮಹತ್ವದ ಪ್ರಕ್ರಿಯೆ ಇದಾಗಿದ್ದು, ಅಧಿಕೃತವಾಗಿ ದಾಖಲೆ ಮಾಡಲು ಮತ್ತು ಕಾನೂನಾತ್ಮಕವಾದ ಆರ್ಥಿಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಅತ್ಯಂತ ಸಹಾಯಕಾರಿಯಾಗಿದೆ.
ಇದನ್ನೂ ಓದಿ: Horticulture Training- ತಿಂಗಳಿಗೆ ₹1750 ರೂ ಶಿಷ್ಯವೇತನದ ಜೊತೆಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ!
ಹಿಂದೂ ವಿವಾಹ ನೋಂದಣಿಯಡಿ ನೋಂದಣಿ ಮಾಡಿಕೊಳ್ಳಲು ಅರ್ಜಿ ಕರೆಯಲಾಗಿದ್ದು, ವಿವಾಹ ನೋಂದಣಿಯನ್ನು ಎಲ್ಲಿ ಮಾಡಿಸಬೇಕು? ನೋಂದಣಿ ಮಾಡಿಕೊಳ್ಳುವುದರಿಂದ ಅಗುವ ಪ್ರಯೋಜನಗಳೇನು? ಅಗತ್ಯ ದಾಖಲಾತಿಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Required Documents- ನೋಂದಣಿ ಮಾಡಿಕೊಳ್ಳಲು ಅಗತ್ಯ ದಾಖಲಾತಿಗಳು?
A) ವಧು ಮತ್ತು ವರರ ಆಧಾರ್ ಕಾರ್ಡ ಪತ್ರ/Aadhar Card
B) ಜನ್ಮ ಪ್ರಮಾಣಪತ್ರ/Birth Certificate
C) ವಧು ಮತ್ತು ವರರ ಎಸ್ ಎಸ್ ಎಲ್ ಸಿ ಅಂಕಪಟ್ಟಿ/marks Card
D) ವಿವಾಹ ಆಮಂತ್ರಣ ಪತ್ರ/marriage Invitation Card
E) ಕನಿಷ್ಟ ಮೂರು ಜನ ಸಾಕ್ಷಿಗಳ ಆಧಾರ್ ಪ್ರತಿ/signature proof
F) ಮದುವೆ ಪೋಟೋ/marriage Photo
ಇದನ್ನೂ ಓದಿ: Labour Card – ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು!

Why Marriage Registration?ವಿವಾಹ ನೋಂದಣಿ ಏಕೆ ಮಾಡಬೇಕು? ಮಾಡಿಸುವುದರಿಂದಾದ ಲಾಭಗಳೇನು?
ಮದುವೆ ಪ್ರಮಾಣ ಪತ್ರವು ಪ್ರಸ್ತುತ ದಿನಗಳಲ್ಲಿ ಮಹತ್ವದ ಪ್ರಕ್ರಿಯೆಯಾಗಿದ್ದು, ಮದುವೆಯಾದ ಪ್ರತಿಯೊಬ್ಬರು ಕೂಡ ತಪ್ಪದೇ ತಮ್ಮ ವಿವಾಹ ನೋಂದಣಿಯನ್ನು ಮಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.
- ಮದುವೆ ಪ್ರಮಾಣ ಪತ್ರವು ಮಹಿಳೆಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ.
- ವಿವಾಹ ನೋಂದಣಿಯು ಅಧಿಕೃತವಾಗಿ ಕಾನೂನಾತ್ಮಕವಾಗಿ ಸುರಕ್ಷಿತವಾಗಿ ದಾಖಲಿಸಲು ಅವಕಾಶ.
- ಪಿಂಚಣಿ, ಆರೋಗ್ಯ ವಿಮೆ, ಬ್ಯಾಂಕ್ ಸಾಲದ ಜೊತೆಗೆ ಇನ್ನೂ ಅನೇಕ ಉಪಯುಕ್ತಕಾರಿಯಾಗಿದೆ.
- ವಿವಾಹ ನೋಂದಣಿ ಮಾಡುವುದರಿಂದ ವಿದೇಶ ಪ್ರವಾಸ ಮಾಡುವಾಗ ಪಾಸ್‌ಪೋರ್ಟ್, ವೀಸಾ ಪಡೆಯಲು ಸಹಾಯಕಾರಿಯಾಗಿದೆ.
- ನೋಂದಣಿ ಮಾಡಿಸುವುದರಿಂದ ಆಸ್ತಿಯ ಮೇಲಿರುವ ಹಕ್ಕುಗಳನ್ನು ಕಾನೂನಾತ್ಮಕವಾಗಿ ಪಡೆದುಕೊಳ್ಳಲು ಉಪಯೋಗಕಾರಿ.
ಇದನ್ನೂ ಓದಿ: MSP Price- ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ! ನೋಂದಣಿ ಮಾಡಿಕೊಳ್ಳುವುದು ಹೇಗೆ!
Online Marriage Registration link- ವಿವಾಹ ನೋಂದಣಿ ಯನ್ನು ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿದಾರರು ತಮ್ಮ ಮೊಬೈಲ್ ನ ಸಹಾಯದಿಂದಲೆ ಈ ಕೆಳಗೆ ಕೊಟ್ಟಿರುವ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಅಧಿಕೃತ ಕಾವೇರಿ 2.0 ಜಾಲತಾಣವನ್ನು ಪ್ರವೇಶ ಮಾಡಿ ಇಲ್ಲಿ ತಿಳಿಸಿರುವ ವಿಧಾನವನ್ನು ಪಾಲನೆ ಮಾಡಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
Step-1: ಮೊದಲು ಈ ಲಿಂಕ್ ಮೇಲೆ Apply Now ಕ್ಲಿಕ್ ಮಾಡಿ ಅಧಿಕೃತ ಕಾವೇರಿ 2.0 ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಅಧಿಕೃತ ವೆಬ್ಸೈಟ್ ಭೇಟಿಯಾಡ ನಂತರ ಮೊದಲ ಬಾರಿಗೆ ಭೇಟಿ ಮಾಡುತ್ತಿರುವವರು ಮೊದಲು “Register” ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಕೊನೆಯಲ್ಲಿ ಕಾಣುವ “Register”ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Vegetable Seed Kit- ಉಚಿತವಾಗಿ ₹2,000 ರೂ ಮೊತ್ತದ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ!
Step-3: ಇದಾದ ನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಸಿದ್ದ ಮಾಡಿಕೊಂಡಿರುವ ಬಳಕೆದಾರ ID & Password ಅನ್ನು ಹಾಕಿ Login ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.
Step-4: ಲಾಗಿನ್ ಅಗಿ ಇಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಅಪ್ಲೋಡ್ ಮಾಡಿ ಕೊನೆಗೆ “Submit” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಪೂರ್ಣವಾಗುತ್ತದೆ.
Conditions for Marriage Registration- ವಿವಾಹ ನೋಂದಣಿಯ ಷರತ್ತುಗಳು:
1) ವರ ಮತ್ತು ವಧು ಇಬ್ಬರಿಗೂ 21 ವರ್ಷ ವಯಸ್ಸು ಪೂರ್ತಿಯಾಗಿರಬೇಕು.
2) ದಂಪತಿಗಳಿಬ್ಬರೂ ಒಟ್ಟಾಗಿ ಜೀವಿಸುತ್ತಿರಬೇಕು.
3) ಮದುವೆ ನೋಂದಣಿ ಸಂದರ್ಭದಲ್ಲಿ ಬುದ್ದಿಹೀನ ಹೊಂದಿದ್ದರೆ ನೋಂದಣಿ ಮಾಡಲು ಸಾಧ್ಯವಾಗುವುದಿಲ್ಲ.
4) ದಂಪತಿಗಳಿಬ್ಬರೂ ಮದುವೆ ನೋಂದಣಿ ಅರ್ಜಿ ಸಲ್ಲಿಸುವ ಪೂರ್ವದಲ್ಲಿ 3೦ ದಿನಗಳಿಗಿಂತ ಕಡಿಮೆ ಇಲ್ಲದಷ್ಟು ಅವಧಿ ನಿರಂತರವಾಗಿ ಮದುವೆ ಅಧಿಕಾರಿಯ ಕಛೇರಿಯ ಪ್ರದೇಶದ ವ್ಯಾಪ್ತಿಯೊಳಗೆ ವಾಸಿಸುತ್ತಿರಬೇಕು.
ಇದನ್ನೂ ಓದಿ: Nabard Loan-ನಬಾರ್ಡ್ ನಿಂದ ರಾಜ್ಯಕ್ಕೆ 4.47 ಲಕ್ಷ ಕೋಟಿ ರೂ.ಗಳ ಆದ್ಯತಾ ವಲಯದ ಸಾಲ!
ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ- Click here