Wednesday, March 19, 2025
No menu items!
HomeSchemesLabour Card - ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು!

Labour Card – ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು!

ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಅರ್ಹ ಅಭ್ಯರ್ಥಿಗಳು ಕಾರ್ಮಿಕ ಕಾರ್ಡ್(Labour Card Application) ಅನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಕಾರ್ಮಿಕ ಇಲಾಖೆಯಡಿ ಬರುವ ಕಾರ್ಮಿಕ ಮಂಡಳಿಯ ವಿವಿಧ ಯೋಜನೆಗಳ ಪ್ರಯೋಜನವನ್ನು ಪಡೆಯಲು ಅರ್ಜಿದಾರರು ಕಡ್ಡಾಯವಾಗಿ ಕಾರ್ಮಿಕ ಕಾರ್ಡ್(Labour Card ) ಅನ್ನು ಹೊಂದುವುದು ಅತ್ಯಗತ್ಯ. ಆದ್ದರಿಂದ ಕಾರ್ಮಿಕ ಕಾರ್ಡ್ ಪಡೆಯುವುದು ಹೇಗೆ? ಕಾರ್ಡ್ ಪಡೆಯಲು ಒದಗಿಸ ಬೇಕಾದ ದಾಖಲಾತಿಗಳು ಇನ್ನಿತರ ಅವಶ್ಯಕ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: MSP Price- ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ! ನೋಂದಣಿ ಮಾಡಿಕೊಳ್ಳುವುದು ಹೇಗೆ!

ಕಾರ್ಮಿಕರಿಗೆ ಆರ್ಥಿಕವಾಗಿ ನೆರವು ನೀಡಲು(Labour Card Benefits) ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳು ಜಾರಿಯಲ್ಲಿದ್ದು, ಈ ಯೋಜನೆಗಳ ಪ್ರಯೋಜನವನ್ನು ಪಡೆಯಲು ಕಾರ್ಮಿಕ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ. ಕಾರ್ಮಿಕ ಕಾರ್ಡ್ ಬಳಕೆ ಮಾಡಿ ಯಾವೆಲ್ಲ ಯೋಜನೆಯಡಿ ಸೌಲಭ್ಯವನ್ನು ಪಡೆಯಬಹುದು? ಎನ್ನುವ ವಿವರವನ್ನು ಸಹ ಈ ಕೆಳಗೆ ತಿಳಿಸಲಾಗಿದೆ.

Labour Card Benefits-ಕಾರ್ಮಿಕ ಕಾರ್ಡ ಪಡೆಯುವುದರಿಂದ ಯಾವ ಪ್ರಯೋಜನಗಳನ್ನು ಪಡೆಯಬಹುದು?

  • ಪಿಂಚಣಿ ಸೌಲಭ್ಯ
  • ಅಪಘಾತ ಪರಿಹಾರ
  • ಕಾರ್ಮಿಕ ಆರೋಗ್ಯ ಭಾಗ್ಯ)
  • ತಾಯಿ ಮಗು ಸಹಾಯ ಹಸ್ತ
  • ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್)
  • ಮದುವೆ ಸಹಾಯ ಧನ (ಗೃಹ ಲಕ್ಷ್ಮೀ ಬಾಂಡ್)
  • ದುರ್ಬಲತೆ ಪಿಂಚಣಿ
  • ಅಂತ್ಯಕ್ರಿಯೆ ವೆಚ್ಚಕ್ಕೆ ಸಹಾಯಧನ
  • ಪ್ರಮುಖ ವೈಧ್ಯಕೀಯ ವೆಚ್ಚ ಸಹಾಯ ಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ)
  • ಶೈಕ್ಷಣಿಕ ಧನಸಹಾಯ
  • ಬಿ ಎಂ ಟಿ ಸಿ ಬಸ್ ಪಾಸ್ ಸೌಲಭ್ಯ

Labour cardapplication

ಇದನ್ನೂ ಓದಿ: Vegetable Seed Kit- ಉಚಿತವಾಗಿ ₹2,000 ರೂ ಮೊತ್ತದ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ!

ಮೇಲ್ಕಂಡ ಎಲ್ಲಾ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ- Read More

Who Can Apply- ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿಯನ್ನು ಯಾರು ಸಲ್ಲಿಸಬೇಕು?

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರ ವಯಸ್ಸು 18 ರಿಂದ 60 ವರ್ಷ ಮೀರಿರಬಾರದು.
  • ಅರ್ಜಿದಾರರು ಕನಿಷ್ಟ 90 ದಿನಗಳ ಕಾಲ ಯಾವುದೇ ಉದ್ಯೋಗದಲ್ಲಿ ಕಾರ್ಯನಿರ್ವಹಿಸಿರಬೇಕು.
  • ಅರ್ಜಿದಾರರು ಸರ್ಕಾರದಿಂದ ಮಾನ್ಯತೆ ಪಡೆದ ಕಾರ್ಮಿಕ ಸಂಘಗಳಿಗೆ ಸದಸ್ಯರಾಗಿರಬೇಕು.
  • ಅರ್ಜಿದಾರರು ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೋಂದಣಿಯನ್ನು ಮಾಡಿಕೊಂಡಿರಬೇಕು.

ಇದನ್ನೂ ಓದಿ: Nabard Loan-ನಬಾರ್ಡ್ ನಿಂದ ರಾಜ್ಯಕ್ಕೆ 4.47 ಲಕ್ಷ ಕೋಟಿ ರೂ.ಗಳ ಆದ್ಯತಾ ವಲಯದ ಸಾಲ!

What are the Documents -ಕಾರ್ಮಿಕ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ದಾಖಲೆಗಳು?

  1. ಅರ್ಜಿದಾರರ ಆಧಾರ್ ಕಾರ್ಡ
  2. ರೇಶನ್ ಕಾರ್ಡ್
  3. ಬ್ಯಾಂಕ್ ಪಾಸ್ ಬುಕ್
  4. ವಯಸ್ಸಿನ ದೃಡೀಕರಣ ಪತ್ರ
  5. ಮತದಾರ ಗುರುತಿನ ಚೀಟಿ
  6. ಉದ್ಯೋಗ ದೃಡೀಕರಣ ಪತ್ರ
  7. ಪೋಟೋ

ಇದನ್ನೂ ಓದಿ: Annabhagya Scheme- ಆಹಾರ ಇಲಾಖೆಯಿಂದ ಅಕ್ಕಿ ಹಣ ವಿತರಣೆ ಕುರಿತು ಮಹತ್ವ ಪ್ರಕಟಣೆ!

How to Apply – ಕಾರ್ಮಿಕ ಕಾರ್ಡ ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಜಿ ಸಲ್ಲಿಸಲು ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Labour Card Renewal-ಕಾರ್ಮಿಕ ಕಾರ್ಡ ನವೀಕರಣಕ್ಕೂ ಸಹ ಅವಕಾಶ:

ಈಗಾಗಲೇ ಕಾರ್ಮಿಕ ಕಾರ್ಡ್ ಹೊಂದಿರುವ ಅಭ್ಯರ್ಥಿಗಳು ಕಾರ್ಡ್ ಅನ್ನು ಪಡೆದುಕೊಂಡ ನಂತರ ಕಾರ್ಡ್ ನ ಅವಧಿ ಮುಗಿದಿದ್ದರೆ ಕಾರ್ಡನ್ನು ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ಮಾಡಿ ಅಪ್‌ಡೇಟ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Widow Pension Scheme- ವಿಧವಾ ಪಿಂಚಣಿ 2200/- ರೂ ಏರಿಕೆ ಸಾಧ್ಯತೆ!

 

RELATED ARTICLES
- Advertisment -

Most Popular

Recent Comments