Wednesday, March 12, 2025
No menu items!
HomeSchemesMSP Price- ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ! ನೋಂದಣಿ ಮಾಡಿಕೊಳ್ಳುವುದು ಹೇಗೆ!

MSP Price- ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ! ನೋಂದಣಿ ಮಾಡಿಕೊಳ್ಳುವುದು ಹೇಗೆ!

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ(Sorghum price)ರೈತರಿಂದ ನೇರವಾಗಿ ಬಿಳಿಜೋಳವನ್ನು ಖರೀದಿ ಮಾಡಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಇದರ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.

ಈಗಾಗಲೇ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ(minimum support price)ರಾಗಿ, ತೊಗರಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲು ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಈಗ ಬಿಳಿಜೋಳವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ರೈತರಿಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Vegetable Seed Kit- ಉಚಿತವಾಗಿ ₹2,000 ರೂ ಮೊತ್ತದ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ!

ರೈತರು ಬಿಳಿಜೋಳವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಬಿಳಿಜೋಳಕ್ಕೆ ಎಷ್ಟು ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ? ನೋಂದಣಿ ಮಾಡಿಕೊಳ್ಳಲು ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕು? ಇತ್ಯಾದಿ ಸಂಪೂರ್ಣ ವಿವರ ಈ ಕೆಳಗಿನಂತಿದೆ.

What is the support price – ಬಿಳಿಜೋಳ ಖರೀದಿಗೆ ಬೆಂಬಲ ಬೆಲೆ ಎಷ್ಟು?

  • ಹೈಬ್ರಿಡ್ ಜೋಳ ರೂ. 3,371/- (ಪ್ರತಿ ಕ್ವಿ)
  • ಮಾಲ್ದಂಡಿ ಜೋಳ ರೂ. 3,421/- (ಪ್ರತಿ ಕ್ವಿ)
  • ಪ್ರತಿ ಎಕರೆಗೆ ನಿಗದಿಪಡಿಸಿರುವ ಪ್ರಮಾಣ: 20 ಕ್ವಿ
  • ಪ್ರತಿ ರೈತರಿಂದ ಖರೀದಿ ಪ್ರಮಾಣ: 150 ಕ್ವಿ

ಇದನ್ನೂ ಓದಿ: Nabard Loan-ನಬಾರ್ಡ್ ನಿಂದ ರಾಜ್ಯಕ್ಕೆ 4.47 ಲಕ್ಷ ಕೋಟಿ ರೂ.ಗಳ ಆದ್ಯತಾ ವಲಯದ ಸಾಲ!

bilijola

In which districts purchase -ಯಾವ ಯಾವ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ?

ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಬಿಳಿಜೋಳವನ್ನು ಖರೀದಿ ಮಾಡಲು ಈ ಕೆಳಗಿನ ಪಟ್ಟಿಯಲ್ಲಿರುವ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆಯಲು ಅವಕಾಶ ನೀಡಲಾಗಿದೆ.

  • ವಿಜಯಪುರ
  • ಯಾದಗಿರಿ
  • ಕಲಬುರಗಿ
  • ಬಾಗಲಕೋಟೆ
  • ರಾಯಚೂರು
  • ವಿಜಯನಗರ
  • ಬೀದರ್
  • ಕೊಪ್ಪಳ
  • ಬಳ್ಳಾರಿ
  • ಹಾವೇರಿ
  • ಬೆಳಗಾವಿ
  • ಗದಗ
  • ಧಾರವಾಡ

ಇದನ್ನೂ ಓದಿ: Annabhagya Scheme- ಆಹಾರ ಇಲಾಖೆಯಿಂದ ಅಕ್ಕಿ ಹಣ ವಿತರಣೆ ಕುರಿತು ಮಹತ್ವ ಪ್ರಕಟಣೆ!

What are the Documents- ಒದಗಿಸ ಬೇಕಾದ ದಾಖಲಾತಿಗಳು:

A) ರೈತರ ಆಧಾರ್ ಕಾರ್ಡ/Aadhar Card
B) ಬಿಳಿಜೋಳ ಬೆಳೆದ ಜಮೀನಿನ ಪಹಣಿ/RTC
C) ಬ್ಯಾಂಕ್ ಪಾಸ್ ಬುಕ್ /Bank Passbook
D) ಮೊಬೈಲ್ ಸಂಖ್ಯೆ/Mobile Number

Bilijola Kharidi Kendra- ನೋಂದಣಿ ಮಾಡಿಕೊಳ್ಳುವ ವಿಧಾನ:

ಅರ್ಜಿದಾರ ರೈತರು ತಮ್ಮ Aadhar Card/ ID Proof ಸಹಾಯದೊಂದಿಗೆ Biometric ಅನ್ನು ನೀಡಿ ಬಿಳಿಜೋಳ ಖರೀದಿ ಕೇಂದ್ರದಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ನಂತರ ಆಧಾರ್ ಲಿಂಕ್ ಆಗಿರುವ N C P I ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಖಾತರಿಪಡಿಸಿಕೊಂಡು FAQ ಗುಣಮಟ್ಟದ ಬಗ್ಗೆ ಗ್ರೇಡರ್ ಪರಿಶೀಲಿಸಿ ದೃಢೀಕರಿಸಿದ ನಂತರ ತಮ್ಮ ಉತ್ಪನ್ನವನ್ನು ನಿಗದಿಪಡಿಸಿ ದಿನಾಂಕದಂದು ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು.

ಇದನ್ನೂ ಓದಿ: Widow Pension Scheme- ವಿಧವಾ ಪಿಂಚಣಿ 2200/- ರೂ ಏರಿಕೆ ಸಾಧ್ಯತೆ!

DBT Method-ರೈತರಿಗೆ ಹಣ ಪಾವತಿ ವಿಧಾನ:

DBT ಮೂಲಕ ರೈತರು ಮಾರಾಟ ಮಾಡಿದ ಉತ್ಪನ್ನದ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

Helpline- ಉಚಿತ ದೂರವಾಣಿ ಸಂಖ್ಯೆಗೆ 1800 425 1552 ಕರೆ ಮಾಡಿ ಈ ಕುರಿತು ವಿವರವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Sprinkler set subsidy- ಶೇ 90% ಸಬ್ಸಿಡಿಯಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

RELATED ARTICLES
- Advertisment -

Most Popular

Recent Comments